ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಧರ್ಮೋಪದೇಶಕಾಂಡ ಮುಖ್ಯಾಂಶಗಳು

      • ಬಾಷಾನಿನ ರಾಜನಾದ ಓಗನ ಸೋಲು (1-7)

      • ಯೋರ್ದನಿನ ಪೂರ್ವಕ್ಕಿದ್ದ ಪ್ರದೇಶವನ್ನ ಹಂಚಿದ್ದು (8-20)

      • ಯೆಹೋಶುವನಲ್ಲಿ ಧೈರ್ಯ ತುಂಬಿದ್ದು (21, 22)

      • ಮೋಶೆ ಕಾನಾನಿಗೆ ಹೋಗಬಾರದು (23-29)

ಧರ್ಮೋಪದೇಶಕಾಂಡ 3:1

ಮಾರ್ಜಿನಲ್ ರೆಫರೆನ್ಸ್

  • +ಅರ 21:33-35

ಧರ್ಮೋಪದೇಶಕಾಂಡ 3:4

ಮಾರ್ಜಿನಲ್ ರೆಫರೆನ್ಸ್

  • +ಅರ 32:33; ಧರ್ಮೋ 29:7, 8; ಯೆಹೋ 13:29, 30

ಧರ್ಮೋಪದೇಶಕಾಂಡ 3:6

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:25; 27:29

ಧರ್ಮೋಪದೇಶಕಾಂಡ 3:8

ಮಾರ್ಜಿನಲ್ ರೆಫರೆನ್ಸ್

  • +ಅರ 32:33
  • +ಯೆಹೋ 12:1, 2

ಧರ್ಮೋಪದೇಶಕಾಂಡ 3:10

ಪಾದಟಿಪ್ಪಣಿ

  • *

    ಅಂದ್ರೆ, ಸುತ್ತಮುತ್ತ ಇರೋ ಭೂಭಾಗಕ್ಕಿಂತ ಎತ್ರದಲ್ಲಿರೋ ವಿಸ್ತಾರವಾದ ಚಪ್ಪಟೆಭೂಮಿ.

ಮಾರ್ಜಿನಲ್ ರೆಫರೆನ್ಸ್

  • +ಅರ 21:33

ಧರ್ಮೋಪದೇಶಕಾಂಡ 3:11

ಪಾದಟಿಪ್ಪಣಿ

  • *

    ಬಹುಶಃ, “ಅಗ್ನಿಶಿಲೆಯಿಂದ.”

  • *

    ಅಥವಾ “ಶವಪೆಟ್ಟಿಗೆ.”

  • *

    ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು). ಪರಿಶಿಷ್ಟ ಬಿ14 ನೋಡಿ.

ಧರ್ಮೋಪದೇಶಕಾಂಡ 3:12

ಮಾರ್ಜಿನಲ್ ರೆಫರೆನ್ಸ್

  • +ಅರ 32:34
  • +ಅರ 32:33

ಧರ್ಮೋಪದೇಶಕಾಂಡ 3:13

ಮಾರ್ಜಿನಲ್ ರೆಫರೆನ್ಸ್

  • +ಅರ 32:39; ಯೆಹೋ 13:29-31; 1ಪೂರ್ವ 5:23

ಧರ್ಮೋಪದೇಶಕಾಂಡ 3:14

ಪಾದಟಿಪ್ಪಣಿ

  • *

    ಅರ್ಥ “ಡೇರೆಗಳಿರೋ ಯಾಯೀರನ ಹಳ್ಳಿಗಳು.”

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 2:22
  • +ಯೆಹೋ 13:13
  • +ಧರ್ಮೋ 3:4
  • +ಅರ 32:40, 41

ಧರ್ಮೋಪದೇಶಕಾಂಡ 3:15

ಮಾರ್ಜಿನಲ್ ರೆಫರೆನ್ಸ್

  • +ಅರ 32:39; ಯೆಹೋ 17:1

ಧರ್ಮೋಪದೇಶಕಾಂಡ 3:16

ಮಾರ್ಜಿನಲ್ ರೆಫರೆನ್ಸ್

  • +ಅರ 32:33; ಯೆಹೋ 22:9

ಧರ್ಮೋಪದೇಶಕಾಂಡ 3:17

ಪಾದಟಿಪ್ಪಣಿ

  • *

    ಅಂದ್ರೆ, ಮೃತ ಸಮುದ್ರ.

ಮಾರ್ಜಿನಲ್ ರೆಫರೆನ್ಸ್

  • +ಅರ 34:11, 12

ಧರ್ಮೋಪದೇಶಕಾಂಡ 3:18

ಮಾರ್ಜಿನಲ್ ರೆಫರೆನ್ಸ್

  • +ಅರ 32:20-22

ಧರ್ಮೋಪದೇಶಕಾಂಡ 3:20

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 1:14, 15; 22:4, 8

ಧರ್ಮೋಪದೇಶಕಾಂಡ 3:21

ಮಾರ್ಜಿನಲ್ ರೆಫರೆನ್ಸ್

  • +ಅರ 11:28; 14:30; 27:18
  • +ಯೆಹೋ 10:25

ಧರ್ಮೋಪದೇಶಕಾಂಡ 3:22

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:14; 15:3; ಧರ್ಮೋ 1:30; 20:4; ಯೆಹೋ 10:42

ಧರ್ಮೋಪದೇಶಕಾಂಡ 3:24

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:16; ಧರ್ಮೋ 11:2
  • +ವಿಮೋ 15:11; 2ಸಮು 7:22; 1ಅರ 8:23; ಕೀರ್ತ 86:8; ಯೆರೆ 10:6, 7

ಧರ್ಮೋಪದೇಶಕಾಂಡ 3:25

ಮಾರ್ಜಿನಲ್ ರೆಫರೆನ್ಸ್

  • +ವಿಮೋ 3:8; ಧರ್ಮೋ 1:7; 11:11, 12

ಧರ್ಮೋಪದೇಶಕಾಂಡ 3:26

ಮಾರ್ಜಿನಲ್ ರೆಫರೆನ್ಸ್

  • +ಅರ 20:12; 27:13, 14; ಧರ್ಮೋ 4:21; ಕೀರ್ತ 106:32

ಧರ್ಮೋಪದೇಶಕಾಂಡ 3:27

ಮಾರ್ಜಿನಲ್ ರೆಫರೆನ್ಸ್

  • +ಅರ 27:12
  • +ಧರ್ಮೋ 34:1, 4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 2/2020, ಪು. 1-2

ಧರ್ಮೋಪದೇಶಕಾಂಡ 3:28

ಮಾರ್ಜಿನಲ್ ರೆಫರೆನ್ಸ್

  • +ಅರ 27:18-20; ಧರ್ಮೋ 1:38; 31:7
  • +ಯೆಹೋ 1:1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 2/2020, ಪು. 1-2

ಧರ್ಮೋಪದೇಶಕಾಂಡ 3:29

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:45, 46; 34:5, 6

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಧರ್ಮೋ. 3:1ಅರ 21:33-35
ಧರ್ಮೋ. 3:4ಅರ 32:33; ಧರ್ಮೋ 29:7, 8; ಯೆಹೋ 13:29, 30
ಧರ್ಮೋ. 3:6ಯಾಜ 18:25; 27:29
ಧರ್ಮೋ. 3:8ಅರ 32:33
ಧರ್ಮೋ. 3:8ಯೆಹೋ 12:1, 2
ಧರ್ಮೋ. 3:10ಅರ 21:33
ಧರ್ಮೋ. 3:12ಅರ 32:34
ಧರ್ಮೋ. 3:12ಅರ 32:33
ಧರ್ಮೋ. 3:13ಅರ 32:39; ಯೆಹೋ 13:29-31; 1ಪೂರ್ವ 5:23
ಧರ್ಮೋ. 3:141ಪೂರ್ವ 2:22
ಧರ್ಮೋ. 3:14ಯೆಹೋ 13:13
ಧರ್ಮೋ. 3:14ಧರ್ಮೋ 3:4
ಧರ್ಮೋ. 3:14ಅರ 32:40, 41
ಧರ್ಮೋ. 3:15ಅರ 32:39; ಯೆಹೋ 17:1
ಧರ್ಮೋ. 3:16ಅರ 32:33; ಯೆಹೋ 22:9
ಧರ್ಮೋ. 3:17ಅರ 34:11, 12
ಧರ್ಮೋ. 3:18ಅರ 32:20-22
ಧರ್ಮೋ. 3:20ಯೆಹೋ 1:14, 15; 22:4, 8
ಧರ್ಮೋ. 3:21ಅರ 11:28; 14:30; 27:18
ಧರ್ಮೋ. 3:21ಯೆಹೋ 10:25
ಧರ್ಮೋ. 3:22ವಿಮೋ 14:14; 15:3; ಧರ್ಮೋ 1:30; 20:4; ಯೆಹೋ 10:42
ಧರ್ಮೋ. 3:24ವಿಮೋ 15:16; ಧರ್ಮೋ 11:2
ಧರ್ಮೋ. 3:24ವಿಮೋ 15:11; 2ಸಮು 7:22; 1ಅರ 8:23; ಕೀರ್ತ 86:8; ಯೆರೆ 10:6, 7
ಧರ್ಮೋ. 3:25ವಿಮೋ 3:8; ಧರ್ಮೋ 1:7; 11:11, 12
ಧರ್ಮೋ. 3:26ಅರ 20:12; 27:13, 14; ಧರ್ಮೋ 4:21; ಕೀರ್ತ 106:32
ಧರ್ಮೋ. 3:27ಅರ 27:12
ಧರ್ಮೋ. 3:27ಧರ್ಮೋ 34:1, 4
ಧರ್ಮೋ. 3:28ಅರ 27:18-20; ಧರ್ಮೋ 1:38; 31:7
ಧರ್ಮೋ. 3:28ಯೆಹೋ 1:1, 2
ಧರ್ಮೋ. 3:29ಧರ್ಮೋ 4:45, 46; 34:5, 6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಧರ್ಮೋಪದೇಶಕಾಂಡ 3:1-29

ಧರ್ಮೋಪದೇಶಕಾಂಡ

3 ಆಮೇಲೆ ನಾವು ಅಲ್ಲಿಂದ ತಿರುಗಿ ಬಾಷಾನಿನ ದಾರಿ ಹಿಡಿದ್ವಿ. ಬಾಷಾನಿನ ರಾಜ ಓಗ ಇಡೀ ಸೈನ್ಯದ ಜೊತೆ ನಮ್ಮ ಮೇಲೆ ಯುದ್ಧ ಮಾಡೋಕೆ ಎದ್ರೈ+ ಅನ್ನೋ ಜಾಗಕ್ಕೆ ಬಂದ. 2 ಆಗ ಯೆಹೋವ ‘ಇವನಿಗೆ ಹೆದರಬೇಡ. ಇವನನ್ನ ಇವನ ಸೈನ್ಯವನ್ನ ಇವನ ದೇಶವನ್ನ ನಿನ್ನ ಕೈಗೆ ಕೊಡ್ತೀನಿ. ಹೆಷ್ಬೋನಲ್ಲಿ ವಾಸವಾಗಿದ್ದ ಅಮೋರಿಯರ ರಾಜ ಸೀಹೋನನಿಗೆ ಒಂದು ಗತಿ ಕಾಣಿಸಿದ ತರ ನೀನು ಇವನಿಗೂ ಗತಿ ಕಾಣಿಸ್ತೀಯ’ ಅಂದನು. 3 ನಮ್ಮ ದೇವರಾದ ಯೆಹೋವ ಬಾಷಾನಿನ ರಾಜ ಓಗನನ್ನ ಎಲ್ಲಾ ಸೈನಿಕರನ್ನ ನಮ್ಮ ಕೈಗೆ ಕೊಟ್ಟನು. ಅವ್ರನ್ನ ಕೊಲ್ತಾ ಹೋದ್ವಿ, ಒಬ್ರನ್ನೂ ಉಳಿಸಲಿಲ್ಲ. 4 ಆಮೇಲೆ ಅವನ ಎಲ್ಲ ಪಟ್ಟಣಗಳನ್ನ ವಶ ಮಾಡ್ಕೊಂಡ್ವಿ. ಇಡೀ ಅರ್ಗೋಬ್‌ ಪ್ರದೇಶ ಅಂದ್ರೆ ಬಾಷಾನಿನ ರಾಜ ಓಗನ ರಾಜ್ಯದ 60 ಪಟ್ಟಣಗಳನ್ನ ವಶ ಮಾಡ್ಕೊಂಡ್ವಿ. ಅಲ್ಲಿ ನಾವು ಸೋಲಿಸದ ಪಟ್ಟಣ ಒಂದೂ ಇರಲಿಲ್ಲ.+ 5 ಈ ಎಲ್ಲ ಪಟ್ಟಣಗಳಿಗೆ ಎತ್ರವಾದ ಭದ್ರ ಕೋಟೆಗಳು, ಬಾಗಿಲುಗಳು, ಬಾಗಿಲಿಗೆ ಕಂಬಿಗಳು ಇದ್ವು. ತುಂಬ ಚಿಕ್ಕಚಿಕ್ಕ ಊರುಗಳನ್ನ ಸಹ ವಶ ಮಾಡ್ಕೊಂಡ್ವಿ. 6 ನಾವು ಹೆಷ್ಬೋನಿನ ರಾಜ ಸೀಹೋನನಿಗೂ ಅವನ ರಾಜ್ಯಕ್ಕೂ ಮಾಡಿದ ಹಾಗೇ ಬಾಷಾನಿನ ರಾಜ ಓಗನಿಗೂ ಮಾಡಿದ್ವಿ. ಅವನಿಗೆ ಸೇರಿದ ಈ ಎಲ್ಲ ಪಟ್ಟಣಗಳನ್ನ, ಅವುಗಳಲ್ಲಿದ್ದ ಸ್ತ್ರೀಪುರುಷರನ್ನ, ಮಕ್ಕಳನ್ನ ಪೂರ್ತಿ ನಾಶಮಾಡಿದ್ವಿ.+ 7 ಅಲ್ಲಿನ ಎಲ್ಲ ಪ್ರಾಣಿಗಳನ್ನ, ಕೊಳ್ಳೆಯನ್ನ ತಗೊಂಡ್ವಿ.

8 ಹೀಗೆ ನಾವು ಯೋರ್ದನ್‌ ಪ್ರದೇಶದಲ್ಲಿದ್ದ ಅಮೋರಿಯರ ಇಬ್ರು ರಾಜರ+ ಪ್ರದೇಶವನ್ನ ವಶ ಮಾಡ್ಕೊಂಡ್ವಿ. ಅವರ ಪ್ರದೇಶ ಅರ್ನೋನ್‌ ಕಣಿವೆಯಿಂದ ಹೆರ್ಮೋನ್‌ ಬೆಟ್ಟ+ ತನಕ ಇತ್ತು. 9 (ಸೀದೋನ್ಯರು ಹೆರ್ಮೋನ್‌ ಬೆಟ್ಟನ ಸಿರ್ಯೋನ್‌ ಅಂತ ಕರೀತಿದ್ರು. ಅಮೋರಿಯರು ಅದನ್ನ ಸೆನೀರ್‌ ಅಂತ ಕರೀತಿದ್ರು.) 10 ಹಾಗಾಗಿ ಪ್ರಸ್ಥಭೂಮಿಯ* ಎಲ್ಲ ಪಟ್ಟಣಗಳು, ಇಡೀ ಗಿಲ್ಯಾದ್‌, ಸಲ್ಕಾ ಮತ್ತೆ ಎದ್ರೈ+ ಪಟ್ಟಣಗಳ ತನಕ ಇಡೀ ಬಾಷಾನ್‌ ನಮ್ಮ ವಶ ಆಯ್ತು. ಸಲ್ಕಾ ಮತ್ತೆ ಎದ್ರೈ ಪಟ್ಟಣಗಳು ಬಾಷಾನಿನಲ್ಲಿದ್ದ ರಾಜ ಓಗನ ರಾಜ್ಯಕ್ಕೆ ಸೇರಿತ್ತು. 11 ಬಾಷಾನಿನ ರಾಜ ಓಗ ರೆಫಾಯರಲ್ಲಿ ಕೊನೆಯವನು. ಅವನಿಗೆ ಮಾಡಿದ ಕಬ್ಬಿಣದ* ಚಟ್ಟ* ಇನ್ನೂ ಅಮ್ಮೋನಿಯರ ರಬ್ಬಾ ಪಟ್ಟಣದಲ್ಲಿದೆ. ಅದು ಒಂಬತ್ತು ಮೊಳ* ಉದ್ದ, ನಾಲ್ಕು ಮೊಳ ಅಗಲ ಇತ್ತು. 12 ನಾವು ಇನ್ನೊಂದು ಪ್ರದೇಶವನ್ನ ಕೂಡ ವಶ ಮಾಡ್ಕೊಂಡ್ವಿ. ಅದ್ರ ಗಡಿ ಅರ್ನೋನ್‌ ಕಣಿವೆಯ ಪಕ್ಕದಲ್ಲಿರೋ ಅರೋಯೇರ್‌+ ಪಟ್ಟಣದಿಂದ ಶುರು ಆಗಿ ಗಿಲ್ಯಾದಿನ ಬೆಟ್ಟ ಪ್ರದೇಶದಲ್ಲಿ ಅರ್ಧ ಭಾಗ ತನಕ ಇದೆ. ನಾನು ಅಲ್ಲಿನ ಪಟ್ಟಣಗಳನ್ನ ರೂಬೇನ್ಯರಿಗೆ ಗಾದ್ಯರಿಗೆ ಕೊಟ್ಟೆ.+ 13 ಗಿಲ್ಯಾದಿನ ಉಳಿದ ಪ್ರದೇಶವನ್ನ ಓಗನ ರಾಜ್ಯವಾಗಿದ್ದ ಇಡೀ ಬಾಷಾನನ್ನ ಮನಸ್ಸೆ ಕುಲದ ಅರ್ಧ ಜನ್ರಿಗೆ ಕೊಟ್ಟೆ.+ ಬಾಷಾನಿಗೆ ಸೇರಿದ ಇಡೀ ಅರ್ಗೋಬ್‌ ಪ್ರದೇಶಕ್ಕೆ ರೆಫಾಯರ ದೇಶ ಅನ್ನೋ ಹೆಸ್ರಿತ್ತು.

14 ಮನಸ್ಸೆಯ ಕುಲದವನಾದ ಯಾಯೀರ+ ಗೆಷೂರ್ಯರ, ಮಾಕಾತ್ಯರ+ ಗಡಿ ತನಕ ಇದ್ದ ಇಡೀ ಅರ್ಗೋಬ್‌+ ಪ್ರದೇಶನ ವಶ ಮಾಡ್ಕೊಂಡ. ಬಾಷಾನಿನ ಆ ಹಳ್ಳಿಗಳಿಗೆ ತನ್ನ ಹೆಸ್ರನ್ನೇ ಇಟ್ಟು ಹವತ್‌-ಯಾಯೀರ್‌*+ ಅಂತ ಕರೆದ. ಇವತ್ತಿನ ತನಕ ಆ ಹಳ್ಳಿಗಳಿಗೆ ಅದೇ ಹೆಸ್ರಿದೆ. 15 ನಾನು ಮಾಕೀರನಿಗೆ ಗಿಲ್ಯಾದನ್ನ ಕೊಟ್ಟೆ.+ 16 ಅಷ್ಟೇ ಅಲ್ಲ ನಾನು ರೂಬೇನ್ಯರಿಗೆ ಗಾದ್ಯರಿಗೆ+ ಕೊಟ್ಟಿರೋ ಪ್ರದೇಶ ಗಿಲ್ಯಾದಿಂದ ಹಿಡಿದು ಅರ್ನೋನ್‌ ಕಣಿವೆ ತನಕ, (ಕಣಿವೆಯ ಮಧ್ಯಭಾಗ ತನಕ ಅದ್ರ ಗಡಿ ಇದೆ) ಯಬ್ಬೋಕ್‌ ಕಣಿವೆ ತನಕ, (ಇದು ಅಮ್ಮೋನಿಯರ ದೇಶದ ಗಡಿ) 17 ಅರಾಬಾ, ಯೋರ್ದನ್‌ ನದಿ, ಅದ್ರ ತೀರದ ತನಕ ಅಂದ್ರೆ ಕಿನ್ನೆರೆತಿಂದ ಅರಾಬಾ ಸಮುದ್ರದ ತನಕ ಇದೆ. ಅರಾಬಾ ಸಮುದ್ರ ಅಂದ್ರೆ ಲವಣ ಸಮುದ್ರ* ಪೂರ್ವದಲ್ಲಿರೋ ಪಿಸ್ಗಾ ಬೆಟ್ಟದ ಇಳಿಜಾರುಗಳ ಕೆಳಗಿದೆ.+

18 ಆಮೇಲೆ ನಾನು ‘ನಿಮ್ಮ ದೇವರಾದ ಯೆಹೋವ ಈ ದೇಶವನ್ನ ನಿಮಗೆ ಕೊಟ್ಟಿದ್ದಾನೆ, ಅದನ್ನ ವಶ ಮಾಡ್ಕೊಳ್ಳಿ. ನಿಮ್ಮಲ್ಲಿ ಶೂರರಾದ ಗಂಡಸರೆಲ್ಲ ಆಯುಧಗಳನ್ನ ತಗೊಂಡು ನಿಮ್ಮ ಸಹೋದರರಾದ ಇಸ್ರಾಯೇಲ್ಯರ ಮುಂದೆ ಹೋಗಿ ಯೋರ್ದನ್‌ ನದಿ ದಾಟಿ.+ 19 ನಿಮ್ಮ ಹೆಂಡತಿ ಮಕ್ಕಳು, ಪ್ರಾಣಿಗಳು ನಾನು ಕೊಟ್ಟಿರೋ ಪಟ್ಟಣಗಳಲ್ಲೇ ಇರಲಿ. ನಿಮ್ಮ ಹತ್ರ ದೊಡ್ಡದೊಡ್ಡ ಪ್ರಾಣಿ ಹಿಂಡು ಇದೆ ಅಂತ ನಂಗೊತ್ತು. 20 ನಿಮ್ಮ ತರ ನಿಮ್ಮ ಸಹೋದರರಿಗೆ ಯೆಹೋವ ವಿಶ್ರಾಂತಿ ಕೊಟ್ಟ ಮೇಲೆ, ನಿಮ್ಮ ದೇವರಾದ ಯೆಹೋವ ಯೋರ್ದನಿನ ಆಚೆ ಅವ್ರಿಗೆ ಕೊಡೋ ದೇಶವನ್ನ ವಶ ಮಾಡ್ಕೊಂಡ ಮೇಲೆ ನಿಮ್ಮಲ್ಲಿ ಪ್ರತಿಯೊಬ್ಬ ತನಗೆ ಆಸ್ತಿಯಾಗಿ ಸಿಕ್ಕಿರೋ ಪ್ರದೇಶಕ್ಕೆ ಹೋಗ್ಲಿ’+ ಅಂತ ಆಜ್ಞೆ ಕೊಟ್ಟೆ.

21 ಆಗ ನಾನು ಯೆಹೋಶುವನಿಗೆ+ ‘ನಿಮ್ಮ ದೇವರಾದ ಯೆಹೋವ ಆ ಇಬ್ರು ರಾಜರನ್ನ ಹೇಗೆ ನಾಶ ಮಾಡಿದ ಅಂತ ನೀನು ಕಣ್ಣಾರೆ ನೋಡಿದ್ಯಲ್ಲಾ. ಯೋರ್ದನಿನ ಆಕಡೆ ಇರೋ ಅಂದ್ರೆ ನೀನು ಹೋಗೋ ಎಲ್ಲ ರಾಜ್ಯಗಳನ್ನ ಯೆಹೋವ ಹಾಗೇ ನಾಶ ಮಾಡ್ತಾನೆ.+ 22 ನಿಮಗೋಸ್ಕರ ನಿಮ್ಮ ದೇವರಾದ ಯೆಹೋವನೇ ಯುದ್ಧ ಮಾಡ್ತಾನೆ.+ ಹಾಗಾಗಿ ಅವ್ರಿಗೆ ಹೆದರಬೇಡಿ’ ಅಂದೆ.

23 ಆ ಸಮಯದಲ್ಲಿ ನಾನು ಯೆಹೋವನ ಹತ್ರ ಬೇಡ್ಕೊಳ್ತಾ 24 ‘ವಿಶ್ವದ ರಾಜ ಯೆಹೋವನೇ, ನಿನ್ನ ಸೇವಕನಾದ ನನಗೆ ನಿನ್ನ ಶ್ರೇಷ್ಠತೆಯನ್ನ, ನಿನ್ನ ಕೈಗಳಿಗಿರೋ+ ಶಕ್ತಿನ ತೋರಿಸೋಕೆ ಶುರು ಮಾಡಿದ್ದೀಯ. ನಿನ್ನ ಹಾಗೆ ದೊಡ್ಡ ದೊಡ್ಡ ಅದ್ಭುತಗಳನ್ನ ಮಾಡೋಕೆ ಆಕಾಶದಲ್ಲಾಗ್ಲಿ ಭೂಮಿಯಲ್ಲಾಗ್ಲಿ ಬೇರೆ ಯಾವ ದೇವರಿಗಾದ್ರೂ ಆಗುತ್ತಾ?+ 25 ದೇವರೇ, ಈ ಯೋರ್ದನ್‌ ನದಿ ದಾಟಿ ಆ ಒಳ್ಳೇ ದೇಶಕ್ಕೆ ಹೋಗೋಕೆ ನನಗೆ ದಯವಿಟ್ಟು ಅನುಮತಿ ಕೊಡು. ಆ ಸುಂದರ ಬೆಟ್ಟ ಪ್ರದೇಶವನ್ನ ಲೆಬನೋನನ್ನ ನೋಡೋಕೆ ನನಗೆ ಒಂದು ಅವಕಾಶ ಕೊಡು’ + ಅಂತ ಬೇಡ್ಕೊಂಡೆ. 26 ಆದ್ರೆ ನಿಮ್ಮಿಂದಾಗಿ ಯೆಹೋವನಿಗೆ ಇನ್ನೂ ನನ್ನ ಮೇಲೆ ತುಂಬ ಕೋಪ ಇತ್ತು.+ ಹಾಗಾಗಿ ಆತನು ಒಪ್ಪಲಿಲ್ಲ. ಯೆಹೋವ ನನಗೆ ‘ಸಾಕು! ಈ ವಿಷ್ಯದ ಬಗ್ಗೆ ಇನ್ನು ಯಾವತ್ತೂ ನನ್ನ ಹತ್ರ ಮಾತಾಡಬೇಡ. 27 ನೀನು ಯೋರ್ದನನ್ನ ದಾಟಬಾರದು. ಆದ್ರೆ ಪಿಸ್ಗಾ ಬೆಟ್ಟದ+ ತುದಿಗೆ ಹೋಗಿ ಅಲ್ಲಿಂದ ಪಶ್ಚಿಮ, ಉತ್ತರ, ದಕ್ಷಿಣ, ಪೂರ್ವದಲ್ಲಿರೋ ಆ ದೇಶವನ್ನ ಕಣ್ತುಂಬ ನೋಡು.+ 28 ಯೆಹೋಶುವನಿಗೆ ಮುಂದಾಳತ್ವ ವಹಿಸೋ ಜವಾಬ್ದಾರಿ ಕೊಡು.+ ಅವನು ಜನ್ರನ್ನ ಕರ್ಕೊಂಡು ಯೋರ್ದನನ್ನ ದಾಟ್ತಾನೆ.+ ನೀನು ನೋಡೋ ಆ ದೇಶನ ಅವರು ಆಸ್ತಿಯಾಗಿ ಪಡಿಯೋಕೆ ಅವನು ಸಹಾಯ ಮಾಡ್ತಾನೆ. ಹಾಗಾಗಿ ಅವನನ್ನ ಪ್ರೋತ್ಸಾಹಿಸು, ಧೈರ್ಯ ತುಂಬು’ ಅಂದನು. 29 ನಾವು ಬೇತ್‌-ಪೆಗೋರಿಗೆ ಎದುರಲ್ಲಿರೋ ಕಣಿವೆಯಲ್ಲಿ ಇದ್ದಾಗ ಇಷ್ಟೆಲ್ಲ ಆಯ್ತು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ