ಪರಮಗೀತ
7 “ಗುಣಸಂಪನ್ನಳೇ! ಪಾದರಕ್ಷೆಯೊಳಗಿರೋ ನಿನ್ನ ಪಾದಗಳು ಬಲು ಅಂದ.
ನಿನ್ನ ತೊಡೆಗಳು ಕುಶಲಕರ್ಮಿಯ ಕೈಯಲ್ಲಿ ಅರಳಿದ ಒಡವೆಗಳೇ.
2 ನಿನ್ನ ಹೊಕ್ಕಳು ದುಂಡಗಿನ ಬಟ್ಟಲು.
ಮಿಶ್ರಿತ ದ್ರಾಕ್ಷಾಮದ್ಯ ಅದರಲ್ಲಿ ಯಾವಾಗ್ಲೂ ತುಂಬಿರಲಿ.
ನಿನ್ನ ಹೊಟ್ಟೆ ಸುತ್ತ ಲಿಲಿ ಹೂಗಳಿಂದ ಅಲಂಕೃತವಾದ ಗೋದಿಯ ರಾಶಿ.
3 ನಿನ್ನ ಎರಡು ಸ್ತನಗಳು ಜಿಂಕೆಯ ಎರಡು ಮರಿಗಳ ಹಾಗೆ,
ಜಿಂಕೆಯ ಅವಳಿ ಮರಿಗಳ ಹಾಗೆ.+
4 ನಿನ್ನ ಕೊರಳು+ ದಂತದ ಬುರುಜಿನ ಹಾಗೆ.+
ನಿನ್ನ ಕಣ್ಗಳು+ ಬತ್-ರಬ್ಬೀಮ್ ದ್ವಾರದ ಹತ್ರ ಇರೋ ಹೆಷ್ಬೋನಿನ+ ಕೊಳಗಳ ತರ.
ನಿನ್ನ ಮೂಗು ದಮಸ್ಕದ ಕಡೆ ನೋಡ್ತಿರೋ ಲೆಬನೋನಿನ ಬುರುಜಿನ ತರ.
ಇಳಿಬಿಟ್ಟಿರೋ ನಿನ್ನ ನೀಳಗೂದಲು ರಾಜನ ಹೃದಯವ ಸೆರೆಹಿಡಿದಿದೆ.
6 ನಾ ಮೆಚ್ಚಿದ ಹುಡುಗಿಯೇ,
ನೀನೇ ಅಂದಗಾತಿ, ನೀನೇ ಚಂದಗಾತಿ,
ನಿನ್ನ ಮುಂದೆ ಯಾವ ಪರಮಾನಂದವೂ ಇಲ್ಲ,
ನನ್ನೆಲ್ಲ ಆನಂದ ನೀನೇ!
8 ‘ನಾನು ಖರ್ಜೂರ ಮರವೇರಿ ಹಣ್ಣು ಗೊಂಚಲಿನ ದಂಟನ್ನ ಹಿಡಿತೀನಿ’ ಅಂದ್ಕೊಂಡೆ.
ನಿನ್ನ ಸ್ತನಗಳು ದ್ರಾಕ್ಷಿ ಗೊಂಚಲುಗಳ ತರ ಇರಲಿ,
ನಿನ್ನ ಉಸಿರಿನ ಪರಿಮಳ ಸೇಬಿನ ಸುವಾಸನೆ ತರ ಇರಲಿ,
9 ನಿನ್ನ ಬಾಯಿ ಶ್ರೇಷ್ಠ ದ್ರಾಕ್ಷಾಮದ್ಯದ ಹಾಗೆ ಇರಲಿ.”
“ಅದು, ನಿದ್ರಿಸುವವರ ತುಟಿಗಳ ಮೇಲೆ ಸರಾಗವಾಗಿ ಹರಿಯೋ ದ್ರಾಕ್ಷಾಮದ್ಯದ ಹಾಗೆ
ನನ್ನ ಪ್ರಿಯಕರನ ಗಂಟಲಲ್ಲಿ ಹಿತವಾಗಿ ಇಳಿಯಲಿ.
10 ನಾನು ನನ್ನ ನಲ್ಲನಿಗೆ ಸೇರಿದವಳು,+
ಅವನು ನನಗಾಗಿ ಹಂಬಲಿಸ್ತಿದ್ದಾನೆ.
12 ಮುಂಜಾನೆ ಎದ್ದು ದ್ರಾಕ್ಷಿತೋಟಗಳಿಗೆ ಹೋಗೋಣ,
ದ್ರಾಕ್ಷಿಬಳ್ಳಿಗಳು ಚಿಗುರಿವೆಯಾ,*
ಹೂಗಳು ಅರಳಿವೆಯಾ,+
ದಾಳಿಂಬೆ ಮರಗಳು ಹೂಬಿಟ್ಟಿವೆಯಾ ಅಂತ ನೋಡೋಣ.+
ಅಲ್ಲಿ ನಾನು ನಿನ್ನ ಮೇಲೆ ಪ್ರೀತಿಯ ಮಳೆ ಸುರಿಸ್ತೀನಿ.+
13 ಹಣ್ಣುಗಳ+ ಪರಿಮಳ ಗಮಗಮ ಅಂತಿದೆ.
ಬಗೆಬಗೆಯ ಒಳ್ಳೊಳ್ಳೆ ಹಣ್ಣುಗಳು ನಮ್ಮ ಬಾಗಿಲ ಹತ್ರ ಇವೆ.+
ನನ್ನ ಪ್ರಿಯನೇ, ನಿನಗೋಸ್ಕರ ಹಣ್ಣುಗಳನ್ನ ತಂದಿಟ್ಟಿದ್ದೀನಿ,
ತಾಜಾ ಹಣ್ಣುಗಳನ್ನ ಕಿತ್ತಿಟ್ಟಿದ್ದೀನಿ.