ಕೀರ್ತನೆ
ಮಸ್ಕಿಲ್. ಆಸಾಫನ+ ಕೀರ್ತನೆ
74 ದೇವರೇ, ಯಾಕೆ ನಮ್ಮನ್ನ ಶಾಶ್ವತವಾಗಿ ಬಿಟ್ಟುಬಿಟ್ಟಿದ್ದೀಯ?+
ನೀನು ಮೇಯಿಸೋ ನಿನ್ನ ಕುರಿಗಳ ಮೇಲೆ ಯಾಕೆ ನಿನ್ನ ರೋಷಾಗ್ನಿ ಹೊತ್ತಿ ಉರೀತಿದೆ?*+
2 ತುಂಬ ಕಾಲದ ಹಿಂದೆನೇ ನೀನು ಗಳಿಸಿದ ಆ ಜನ್ರನ್ನ ನೆನಪಿಸ್ಕೊ,+
ನಿನ್ನ ಆಸ್ತಿಯಾಗಿ ನೀನು ಬಿಡಿಸ್ಕೊಂಡ ಆ ಕುಲನ ಮರೀಬೇಡ.+
ನೀನಿದ್ದ ಆ ಚೀಯೋನ್ ಬೆಟ್ಟನ ಜ್ಞಾಪಿಸ್ಕೊ.+
3 ಪೂರ್ತಿ ಹಾಳು ಬಿದ್ದಿರೋ ಜಾಗಗಳಿಗೆ ಗಮನಕೊಡು.+
ಪವಿತ್ರ ಸ್ಥಳದಲ್ಲಿದ್ದ ಎಲ್ಲವನ್ನ ವೈರಿ ನಾಶಮಾಡಿದ್ದಾನೆ.+
4 ನಿನ್ನ ಆರಾಧನಾ ಸ್ಥಳದಲ್ಲಿ* ನಿನ್ನ ಶತ್ರುಗಳು ಜೋರಾಗಿ ಗರ್ಜಿಸಿದ್ದಾರೆ.+
ಅವರು ಅಲ್ಲಿ ತಮ್ಮ ಸ್ವಂತ ಧ್ವಜಗಳನ್ನ ಗುರುತಾಗಿ ನಿಲ್ಲಿಸಿದ್ದಾರೆ.
5 ದೊಡ್ಡ ಕಾಡಲ್ಲಿರೋ ಮರಗಳನ್ನ ಕೊಡಲಿಯಿಂದ ಕಡಿಯೋ ಜನ್ರ ತರ ಅವರಿದ್ದಾರೆ.
6 ಅವರು ತಮ್ಮ ಕೊಡಲಿಯಿಂದ, ಕಬ್ಬಿಣದ ಕಂಬಿಗಳಿಂದ ಎಲ್ಲ ಕೆತ್ತನೆಗಳನ್ನ+ ಹೊಡೆದುಹಾಕಿದ್ರು.
7 ಅವರು ನಿನ್ನ ಆರಾಧನಾ ಸ್ಥಳಕ್ಕೆ ಬೆಂಕಿ ಇಟ್ರು.+
ನಿನ್ನ ಹೆಸ್ರಿಗೆ ಗೌರವ ತರೋ ಪವಿತ್ರ ಡೇರೆನ ನೆಲಸಮ ಮಾಡಿ ಅದಕ್ಕೆ ಅವಮಾನ ಮಾಡಿದ್ರು.
8 ಅವರು ಮತ್ತು ಅವ್ರ ಸಂತತಿ ತಮ್ಮ ಹೃದಯದಲ್ಲಿ,
“ಈ ದೇಶದಲ್ಲಿರೋ ದೇವ್ರ ಎಲ್ಲ ಆಲಯಗಳನ್ನ* ಸುಟ್ಟು ಹಾಕಬೇಕು” ಅಂದ್ಕೊಂಡ್ರು.
9 ನಮಗೆ ಯಾವ ಗುರುತುಗಳೂ ಕಾಣಿಸ್ತಿಲ್ಲ,
ಒಬ್ಬ ಪ್ರವಾದಿನೂ ಇಲ್ಲ,
ಎಲ್ಲಿ ತನಕ ಹೀಗೇ ನಡಿಯುತ್ತೆ ಅಂತ ನಮಗೆ ಯಾರಿಗೂ ಗೊತ್ತಿಲ್ಲ.
10 ದೇವರೇ, ವೈರಿ ನಿನ್ನನ್ನ ಹೀಗೆ ಎಷ್ಟರ ತನಕ ಹಂಗಿಸ್ತಾ ಇರ್ತಾನೆ?+
ಎಷ್ಟರ ತನಕ ನಿನ್ನ ಶತ್ರು ನಿನ್ನ ಹೆಸ್ರಿಗೆ ಅವಮಾನ ಮಾಡ್ತಾನೆ?+
11 ನೀನು ಯಾಕೆ ನಿನ್ನ ಕೈಯನ್ನ, ನಿನ್ನ ಬಲಗೈಯನ್ನ ಹಿಂದೆ ತಗೊಂಡೆ?+
ಕಟ್ಕೊಂಡಿರೋ* ನಿನ್ನ ಕೈಯನ್ನ ಹೊರಗೆ ತೆಗೆದು ಅವ್ರಿಗೆ ಅಂತ್ಯ ಹಾಡು.
12 ನನ್ನ ದೇವರೇ, ಎಷ್ಟೋ ವರ್ಷಗಳಿಂದ ನೀನೇ ನನ್ನ ರಾಜ,
ಭೂಮಿ ಮೇಲೆ ನೀನೇ ನಮ್ಮನ್ನ ಕಾಪಾಡೋನು.+
16 ಹಗಲೂ ನಿಂದೇ, ರಾತ್ರಿನೂ ನಿಂದೇ.
ಬೆಳಕನ್ನ ಮಾಡಿದವನು ನೀನೇ, ಸೂರ್ಯನನ್ನ ಮಾಡಿದವನೂ ನೀನೇ.+
18 ಯೆಹೋವನೇ, ಶತ್ರು ಹಂಗಿಸೋದನ್ನ ನೆನಪಿಸ್ಕೊ,
ಮುರ್ಖರು ನಿನ್ನ ಹೆಸ್ರಿಗೆ ಹೇಗೆ ಅವಮಾನ ಮಾಡಿದ್ದಾರೆ ಅಂತ ನೋಡು.+
19 ನಿನ್ನ ಪಾರಿವಾಳದ ಜೀವ ಕಾಡುಪ್ರಾಣಿಗಳ ಬಾಯಿಗೆ ತುತ್ತಾಗೋಕೆ ಬಿಡಬೇಡ.
ಕಷ್ಟದಲ್ಲಿರೋ ನಿನ್ನ ಜನ್ರ ಜೀವವನ್ನ ಶಾಶ್ವತವಾಗಿ ಮರೆತು ಹೋಗಬೇಡ.
20 ನಮ್ಮ ಜೊತೆ ಮಾಡ್ಕೊಂಡಿರೋ ಒಪ್ಪಂದನ ನೆನಪಿಸ್ಕೊ,
ಯಾಕಂದ್ರೆ ಭೂಮಿ ಮೇಲೆ ಕತ್ತಲು ತುಂಬಿರೋ ಜಾಗಗಳು ಬಲಾತ್ಕಾರಿಗಳ ನೆಲೆ ಆಗಿಬಿಟ್ಟಿದೆ.
22 ದೇವರೇ ಎದ್ದೇಳು, ನಿನ್ನ ಮೊಕದ್ದಮೆಯನ್ನ ವಾದಿಸು.
ಬುದ್ಧಿಯಿಲ್ಲದವರು ಇಡೀ ದಿನ ನಿನ್ನನ್ನ ಹೇಗೆ ಹಂಗಿಸ್ತಾ ಇದ್ದಾರೆ ಅಂತ ನೆನಪಿಸ್ಕೊ.+
23 ನಿನ್ನ ಎದುರಾಳಿಗಳು ಹೇಳ್ತಿರೋ ಮಾತುಗಳನ್ನ ಮರೀಬೇಡ.
ನಿನ್ನ ವಿರುದ್ಧ ಎದ್ದಿರೋರ ಕೂಗಾಟ ಮುಗಿಲು ಮುಟ್ತಾ ಇದೆ.