ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 18
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯಾಜಕಕಾಂಡ ಮುಖ್ಯಾಂಶಗಳು

      • ನಿಯಮಕ್ಕೆ ವಿರುದ್ಧವಾದ ಲೈಂಗಿಕ ಸಂಬಂಧಗಳು (1-30)

        • ಕಾನಾನ್ಯರ ಹಾಗೆ ನಡೀಬಾರದು (3)

        • ರಕ್ತಸಂಬಂಧಿಗಳ ಜೊತೆ ನಿಷಿದ್ಧ ಸಂಬಂಧ (6-18)

        • ಮುಟ್ಟಿನ ಸಮಯದಲ್ಲಿ (19)

        • ಸಲಿಂಗಕಾಮ (22)

        • ಪ್ರಾಣಿಗಳ ಜೊತೆ ಅಸ್ವಾಭಾವಿಕ ಲೈಂಗಿಕತೆ (23)

        • ಅಶುದ್ಧರಾದ್ರೆ ದೇಶದಿಂದ ಹೊರಗೆ ಹಾಕಲಾಗುತ್ತೆ (24-30)

ಯಾಜಕಕಾಂಡ 18:2

ಮಾರ್ಜಿನಲ್ ರೆಫರೆನ್ಸ್

  • +ಆದಿ 17:7; ವಿಮೋ 6:7

ಯಾಜಕಕಾಂಡ 18:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:24; ಯಾಜ 20:23

ಯಾಜಕಕಾಂಡ 18:4

ಮಾರ್ಜಿನಲ್ ರೆಫರೆನ್ಸ್

  • +ಯಾಜ 20:22; ಧರ್ಮೋ 4:1

ಯಾಜಕಕಾಂಡ 18:5

ಮಾರ್ಜಿನಲ್ ರೆಫರೆನ್ಸ್

  • +ಲೂಕ 10:27, 28; ರೋಮ 10:5; ಗಲಾ 3:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2009, ಪು. 6

ಯಾಜಕಕಾಂಡ 18:6

ಮಾರ್ಜಿನಲ್ ರೆಫರೆನ್ಸ್

  • +ಯಾಜ 20:17

ಯಾಜಕಕಾಂಡ 18:8

ಮಾರ್ಜಿನಲ್ ರೆಫರೆನ್ಸ್

  • +ಆದಿ 35:22; 49:4; ಯಾಜ 20:11; ಧರ್ಮೋ 27:20; 2ಸಮು 16:21; 1ಕೊರಿಂ 5:1

ಯಾಜಕಕಾಂಡ 18:9

ಮಾರ್ಜಿನಲ್ ರೆಫರೆನ್ಸ್

  • +ಯಾಜ 20:17; ಧರ್ಮೋ 27:22; 2ಸಮು 13:10-12

ಯಾಜಕಕಾಂಡ 18:12

ಪಾದಟಿಪ್ಪಣಿ

  • *

    ಅಂದ್ರೆ, ತಂದೆಯ ಅಕ್ಕ ಅಥವಾ ತಂಗಿ.

ಮಾರ್ಜಿನಲ್ ರೆಫರೆನ್ಸ್

  • +ಯಾಜ 20:19

ಯಾಜಕಕಾಂಡ 18:14

ಪಾದಟಿಪ್ಪಣಿ

  • *

    ಅಂದ್ರೆ, ದೊಡ್ಡಮ್ಮ ಅಥವಾ ಚಿಕ್ಕಮ್ಮ.

ಮಾರ್ಜಿನಲ್ ರೆಫರೆನ್ಸ್

  • +ಯಾಜ 20:20

ಯಾಜಕಕಾಂಡ 18:15

ಮಾರ್ಜಿನಲ್ ರೆಫರೆನ್ಸ್

  • +ಯಾಜ 20:12

ಯಾಜಕಕಾಂಡ 18:16

ಮಾರ್ಜಿನಲ್ ರೆಫರೆನ್ಸ್

  • +ಯಾಜ 20:21; ಧರ್ಮೋ 25:5; ಮಾರ್ಕ 6:17, 18

ಯಾಜಕಕಾಂಡ 18:17

ಪಾದಟಿಪ್ಪಣಿ

  • *

    ಅಥವಾ “ನಾಚಿಕೆಗೆಟ್ಟ ನಡತೆ; ಕಾಮುಕತೆ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 20:14; ಧರ್ಮೋ 27:23

ಯಾಜಕಕಾಂಡ 18:18

ಮಾರ್ಜಿನಲ್ ರೆಫರೆನ್ಸ್

  • +ಆದಿ 30:15

ಯಾಜಕಕಾಂಡ 18:19

ಮಾರ್ಜಿನಲ್ ರೆಫರೆನ್ಸ್

  • +ಯಾಜ 15:19, 24; 20:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1991, ಪು. 24-25

ಯಾಜಕಕಾಂಡ 18:20

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:14; ಯಾಜ 20:10; ಧರ್ಮೋ 22:22; ಜ್ಞಾನೋ 6:29; ಮತ್ತಾ 5:27, 28; 1ಕೊರಿಂ 6:9, 10; ಇಬ್ರಿ 13:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    2/8/1994, ಪು. 30

ಯಾಜಕಕಾಂಡ 18:21

ಪಾದಟಿಪ್ಪಣಿ

  • *

    ಅಥವಾ “ಮೋಲೆಕನ ಸೇವೆಗೆ ಅರ್ಪಿಸಬಾರದು, ಬೆಂಕಿಯಲ್ಲಿ ಅರ್ಪಿಸಬಾರದು.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 20:2; ಧರ್ಮೋ 18:10; 1ಅರ 11:7; 2ಅರ 23:10
  • +ಯಾಜ 20:3

ಯಾಜಕಕಾಂಡ 18:22

ಮಾರ್ಜಿನಲ್ ರೆಫರೆನ್ಸ್

  • +ಆದಿ 19:5; ಯಾಜ 20:13; ನ್ಯಾಯ 19:22; ರೋಮ 1:26, 27; 1ಕೊರಿಂ 6:9, 10; ಯೂದ 7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    4/2012, ಪು. 28

ಯಾಜಕಕಾಂಡ 18:23

ಮಾರ್ಜಿನಲ್ ರೆಫರೆನ್ಸ್

  • +ವಿಮೋ 22:19; ಯಾಜ 20:15, 16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2003, ಪು. 27

ಯಾಜಕಕಾಂಡ 18:24

ಮಾರ್ಜಿನಲ್ ರೆಫರೆನ್ಸ್

  • +ಯಾಜ 20:23; ಧರ್ಮೋ 18:12

ಯಾಜಕಕಾಂಡ 18:25

ಮಾರ್ಜಿನಲ್ ರೆಫರೆನ್ಸ್

  • +ಆದಿ 15:16

ಯಾಜಕಕಾಂಡ 18:26

ಮಾರ್ಜಿನಲ್ ರೆಫರೆನ್ಸ್

  • +ಯಾಜ 20:22; ಧರ್ಮೋ 4:1, 40
  • +ವಿಮೋ 12:49

ಯಾಜಕಕಾಂಡ 18:27

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 20:17, 18; 2ಅರ 16:2, 3; 21:1, 2

ಯಾಜಕಕಾಂಡ 18:30

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:3; 20:23; ಧರ್ಮೋ 18:9

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯಾಜ. 18:2ಆದಿ 17:7; ವಿಮೋ 6:7
ಯಾಜ. 18:3ವಿಮೋ 23:24; ಯಾಜ 20:23
ಯಾಜ. 18:4ಯಾಜ 20:22; ಧರ್ಮೋ 4:1
ಯಾಜ. 18:5ಲೂಕ 10:27, 28; ರೋಮ 10:5; ಗಲಾ 3:12
ಯಾಜ. 18:6ಯಾಜ 20:17
ಯಾಜ. 18:8ಆದಿ 35:22; 49:4; ಯಾಜ 20:11; ಧರ್ಮೋ 27:20; 2ಸಮು 16:21; 1ಕೊರಿಂ 5:1
ಯಾಜ. 18:9ಯಾಜ 20:17; ಧರ್ಮೋ 27:22; 2ಸಮು 13:10-12
ಯಾಜ. 18:12ಯಾಜ 20:19
ಯಾಜ. 18:14ಯಾಜ 20:20
ಯಾಜ. 18:15ಯಾಜ 20:12
ಯಾಜ. 18:16ಯಾಜ 20:21; ಧರ್ಮೋ 25:5; ಮಾರ್ಕ 6:17, 18
ಯಾಜ. 18:17ಯಾಜ 20:14; ಧರ್ಮೋ 27:23
ಯಾಜ. 18:18ಆದಿ 30:15
ಯಾಜ. 18:19ಯಾಜ 15:19, 24; 20:18
ಯಾಜ. 18:20ವಿಮೋ 20:14; ಯಾಜ 20:10; ಧರ್ಮೋ 22:22; ಜ್ಞಾನೋ 6:29; ಮತ್ತಾ 5:27, 28; 1ಕೊರಿಂ 6:9, 10; ಇಬ್ರಿ 13:4
ಯಾಜ. 18:21ಯಾಜ 20:2; ಧರ್ಮೋ 18:10; 1ಅರ 11:7; 2ಅರ 23:10
ಯಾಜ. 18:21ಯಾಜ 20:3
ಯಾಜ. 18:22ಆದಿ 19:5; ಯಾಜ 20:13; ನ್ಯಾಯ 19:22; ರೋಮ 1:26, 27; 1ಕೊರಿಂ 6:9, 10; ಯೂದ 7
ಯಾಜ. 18:23ವಿಮೋ 22:19; ಯಾಜ 20:15, 16
ಯಾಜ. 18:24ಯಾಜ 20:23; ಧರ್ಮೋ 18:12
ಯಾಜ. 18:25ಆದಿ 15:16
ಯಾಜ. 18:26ಯಾಜ 20:22; ಧರ್ಮೋ 4:1, 40
ಯಾಜ. 18:26ವಿಮೋ 12:49
ಯಾಜ. 18:27ಧರ್ಮೋ 20:17, 18; 2ಅರ 16:2, 3; 21:1, 2
ಯಾಜ. 18:30ಯಾಜ 18:3; 20:23; ಧರ್ಮೋ 18:9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯಾಜಕಕಾಂಡ 18:1-30

ಯಾಜಕಕಾಂಡ

18 ಯೆಹೋವ ಮೋಶೆಗೆ ಹೇಳೋದು ಏನಂದ್ರೆ 2 “ನಾನು ಹೇಳೋ ಮಾತನ್ನ ಇಸ್ರಾಯೇಲ್ಯರಿಗೆ ಹೇಳು: ‘ನಾನು ನಿಮ್ಮ ದೇವರಾದ ಯೆಹೋವ.+ 3 ಈ ಮುಂಚೆ ನೀವು ವಾಸ ಮಾಡ್ತಿದ್ದ ಈಜಿಪ್ಟಿನ ಜನ್ರ ತರ ಆಗ್ಲಿ, ಮುಂದೆ ನಾನು ನಿಮ್ಮನ್ನ ಕರ್ಕೊಂಡು ಹೋಗೋ ಕಾನಾನ್‌ ದೇಶದ ಜನ್ರ ತರ ಆಗ್ಲಿ ನೀವು ನಡ್ಕೊಬಾರದು.+ ಅವ್ರ ಪದ್ಧತಿಗಳನ್ನ ಆಚರಿಸಬಾರದು. 4 ನೀವು ನನ್ನ ತೀರ್ಪುಗಳನ್ನ ಒಪ್ಕೊಳ್ಳಬೇಕು, ನನ್ನ ನಿಯಮಗಳನ್ನ ಪಾಲಿಸಬೇಕು, ಅದ್ರಲ್ಲಿ ಇರೋ ತರ ಮಾಡಬೇಕು.+ ನಾನು ನಿಮ್ಮ ದೇವರಾದ ಯೆಹೋವ. 5 ನೀವು ನನ್ನ ನಿಯಮಗಳ ಪ್ರಕಾರ, ತೀರ್ಪುಗಳ ಪ್ರಕಾರ ನಡೀಬೇಕು. ಹಾಗೆ ಮಾಡಿದ್ರೆ ನೀವು ಬದುಕ್ತೀರ.+ ನಾನು ಯೆಹೋವ.

6 ನಿಮ್ಮಲ್ಲಿ ಯಾರೂ ಹತ್ರದ ಸಂಬಂಧಿಕರಲ್ಲಿ ಯಾರ ಜೊತೆನೂ ಲೈಂಗಿಕ ಸಂಬಂಧ ಇಟ್ಕೊಬಾರದು.+ ನಾನು ಯೆಹೋವ. 7 ನಿಮ್ಮ ತಂದೆ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು. ತಾಯಿ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು. ಅವಳು ನಿನಗೆ ಜನ್ಮ ಕೊಟ್ಟವಳಲ್ವಾ? ಹಾಗಾಗಿ ಅವಳ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು.

8 ನಿಮ್ಮ ತಂದೆಯ ಹೆಂಡತಿ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು.+ ಇಟ್ಕೊಂಡ್ರೆ ಅದು ನಿಮ್ಮ ತಂದೆಗೆ ಅವಮಾನ.

9 ನಿಮ್ಮ ಅಕ್ಕ-ತಂಗಿ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು. ಅವಳು ನಿಮ್ಮ ತಂದೆಯ ಮಗಳಾಗಿರಲಿ ತಾಯಿಯ ಮಗಳಾಗಿರಲಿ, ನಿಮ್ಮ ಕುಟುಂಬದಲ್ಲಿ ಹುಟ್ಟಿ ಬೆಳೆದವಳಾಗಿರಲಿ ಬೇರೆ ಕುಟುಂಬದಲ್ಲಿ ಹುಟ್ಟಿ ಬೆಳೆದವಳಾಗಿರಲಿ ಅವಳ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು.+

10 ನಿಮ್ಮ ಮೊಮ್ಮಗಳ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು. ಅವಳು ನಿಮ್ಮ ಮಗನಿಗೇ ಹುಟ್ಟಿರಲಿ ಮಗಳಿಗೇ ಹುಟ್ಟಿರಲಿ ಹಾಗೆ ಮಾಡಬಾರದು. ಅವಳು ನಿಮ್ಮ ರಕ್ತಸಂಬಂಧಿ ಆಗಿರೋದ್ರಿಂದ ಹಾಗೆ ಮಾಡಿದ್ರೆ ಅದು ನಿಮಗೇ ಅವಮಾನ.

11 ನಿಮ್ಮ ತಂದೆಯ ಹೆಂಡತಿಯ ಮಗಳ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು. ಯಾಕಂದ್ರೆ ಅವಳು ನಿಮ್ಮ ಸಹೋದರಿ, ನಿಮ್ಮ ತಂದೆಗೆ ಹುಟ್ಟಿದವಳು.

12 ನಿಮ್ಮ ಸೋದರತ್ತೆ ಜೊತೆ* ಲೈಂಗಿಕ ಸಂಬಂಧ ಇಟ್ಕೊಬಾರದು. ಯಾಕಂದ್ರೆ ಅವಳು ನಿಮ್ಮ ತಂದೆಯ ರಕ್ತಸಂಬಂಧಿ.+

13 ನಿಮ್ಮ ತಾಯಿಯ ಅಕ್ಕ-ತಂಗಿ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು. ಯಾಕಂದ್ರೆ ಅವಳು ನಿಮ್ಮ ತಾಯಿಯ ರಕ್ತಸಂಬಂಧಿ.

14 ನಿಮ್ಮ ತಂದೆಯ ಅಣ್ಣನ ಅಥವಾ ತಮ್ಮನ ಹೆಂಡತಿ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು. ಅವಳು ನಿಮ್ಮ ಸಂಬಂಧಿಕಳು.* ಅವಳ ಜೊತೆ ಸಂಬಂಧ ಇಟ್ಕೊಂಡ್ರೆ ನಿಮ್ಮ ಆ ದೊಡ್ಡಪ್ಪ ಅಥವಾ ಚಿಕ್ಕಪ್ಪನನ್ನ ಅವಮಾನ ಪಡಿಸ್ತೀರ.+

15 ನಿಮ್ಮ ಸೊಸೆ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು.+ ಅವಳು ನಿಮ್ಮ ಮಗನ ಹೆಂಡತಿ. ಹಾಗಾಗಿ ಅವಳ ಜೊತೆ ಸಂಬಂಧ ಇಟ್ಕೊಬಾರದು.

16 ನಿಮ್ಮ ಅಣ್ಣನ ಅಥವಾ ತಮ್ಮನ ಹೆಂಡತಿ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು.+ ಹಾಗೆ ಇಟ್ಕೊಂಡ್ರೆ ನಿಮ್ಮ ಅಣ್ಣ ಅಥವಾ ತಮ್ಮನಿಗೆ ಅವಮಾನ.

17 ಒಬ್ಬ ಸ್ತ್ರೀಯನ್ನ ಮದುವೆ ಮಾಡ್ಕೊಂಡ್ರೆ ಅವಳ ಮಗಳ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು.+ ಮೊಮ್ಮಗಳ ಜೊತೆಗೂ ಲೈಂಗಿಕ ಸಂಬಂಧ ಇಟ್ಕೊಬಾರದು. ಅವಳು ಮಗನಿಗೇ ಹುಟ್ಟಿರಲಿ ಮಗಳಿಗೇ ಹುಟ್ಟಿರಲಿ ನೀವು ಹಾಗೆ ಮಾಡಬಾರದು. ಅದು ಅಶ್ಲೀಲ ವಿಷ್ಯ.* ಯಾಕಂದ್ರೆ ಅವರು ಆ ಸ್ತ್ರೀಯ ರಕ್ತಸಂಬಂಧಿಕರು.

18 ನಿಮ್ಮ ಹೆಂಡತಿ ಬದುಕಿರುವಾಗ್ಲೇ ಅವಳ ಅಕ್ಕ ಅಥವಾ ತಂಗಿ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳೋ ಉದ್ದೇಶದಿಂದ ಅವಳನ್ನ ಮದುವೆ ಮಾಡ್ಕೊಳ್ಳಬಾರದು.+

19 ನಿಮ್ಮ ಹೆಂಡತಿ ಮುಟ್ಟಿಂದ ಅಶುದ್ಧ ಆಗಿರುವಾಗ ಅವಳ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು.+

20 ಇನ್ನೊಬ್ಬನ ಹೆಂಡತಿ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳೋ ಮೂಲಕ ನೀವು ಅಶುದ್ಧ ಆಗಬಾರದು.+

21 ನಿಮ್ಮ ಮಕ್ಕಳಲ್ಲಿ ಯಾರನ್ನೂ ಮೋಲೆಕನಿಗೆ ಅರ್ಪಿಸಬಾರದು.*+ ಹಾಗೆ ಮಾಡಿ ನಿಮ್ಮ ದೇವರ ಹೆಸರನ್ನ ಅಪವಿತ್ರ ಮಾಡಬಾರದು.+ ನಾನು ಯೆಹೋವ.

22 ನಿಮ್ಮಲ್ಲಿ ಒಬ್ಬ ಗಂಡಸು ಸ್ತ್ರೀ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳೋ ತರ ಇನ್ನೊಬ್ಬ ಗಂಡಸಿನ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು.+ ಇದು ಹೇಸಿಗೆ ಕೆಲಸ.

23 ಒಬ್ಬ ಗಂಡಸು ಪ್ರಾಣಿ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡು ಅಶುದ್ಧ ಆಗಬಾರದು. ಪ್ರಾಣಿ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳೋ ಉದ್ದೇಶದಿಂದ ಒಬ್ಬ ಹೆಂಗಸು ಅದ್ರ ಮುಂದೆ ಹೋಗಬಾರದು.+ ಇದು ದೇವರ ಏರ್ಪಾಡಿಗೆ ವಿರುದ್ಧ.

24 ಇದ್ಯಾವುದನ್ನೂ ಮಾಡಿ ಅಶುದ್ಧ ಆಗಬೇಡಿ. ನಾನು ನಿಮ್ಮ ಎದುರಿಂದ ಓಡಿಸಿಬಿಡೋ ದೇಶಗಳ ಜನ್ರು ಈ ಎಲ್ಲ ಕೆಲಸ ಮಾಡಿ ಅಶುದ್ಧ ಆಗಿದ್ದಾರೆ.+ 25 ಹಾಗಾಗಿ ಅವರಿರೋ ದೇಶ ಅಶುದ್ಧ. ಅವರ ಪಾಪಗಳಿಗಾಗಿ ಅವರಿಗೆ ಶಿಕ್ಷೆ ಕೊಡ್ತೀನಿ. ಆ ದೇಶದಿಂದ ಅವರನ್ನ ಓಡಿಸಿಬಿಡ್ತೀನಿ.+ 26 ಆದ್ರೆ ನೀವು ನನ್ನ ನಿಯಮಗಳಿಗೆ, ತೀರ್ಪುಗಳಿಗೆ ವಿಧೇಯರಾಗಬೇಕು.+ ನೀವಾಗ್ಲಿ ನಿಮ್ಮ ಮಧ್ಯ ವಾಸ ಮಾಡೋ ವಿದೇಶಿಯರಾಗ್ಲಿ ಆ ಕೆಟ್ಟ ಕೆಲಸಗಳಲ್ಲಿ ಯಾವುದನ್ನೂ ಮಾಡಬಾರದು.+ 27 ನಿಮಗಿಂತ ಮುಂಚೆ ಆ ದೇಶದಲ್ಲಿದ್ದ ಜನ್ರು ಈ ಎಲ್ಲ ಕೆಟ್ಟ ಕೆಲಸಗಳನ್ನ ಮಾಡ್ತಿದ್ರು.+ ಹಾಗಾಗಿ ಆ ದೇಶ ಈಗ ಅಶುದ್ಧ. 28 ನೀವು ಅವ್ರ ತರ ಮಾಡದೆ ಆ ದೇಶವನ್ನ ಅಶುದ್ಧ ಮಾಡದಿದ್ರೆ ಅಲ್ಲೇ ಇರ್ತೀರ. ನಿಮಗಿಂತ ಮುಂಚೆ ಅಲ್ಲಿದ್ದ ಜನ್ರನ್ನ ನಾನು ಓಡಿಸಿಬಿಡೋ ಹಾಗೆ ನಿಮ್ಮನ್ನ ಓಡಿಸಿಬಿಡಲ್ಲ. 29 ಯಾರಾದ್ರೂ ಈ ಕೆಟ್ಟ ಕೆಲಸಗಳನ್ನ ಮಾಡಿದ್ರೆ ಅವರನ್ನ ಸಾಯಿಸಬೇಕು. 30 ನಿಮ್ಮ ಕಣ್ಮುಂದೆ ನಡಿತಿದ್ದ ಕೆಟ್ಟ ಪದ್ಧತಿಗಳಲ್ಲಿ ಯಾವುದನ್ನೂ ನೀವು ಮಾಡಿ ಅಶುದ್ಧ ಆಗಬಾರದು.+ ಇಂಥ ವಿಷ್ಯಗಳಿಂದ ದೂರ ಇದ್ದು ನಿಮ್ಮ ಕರ್ತವ್ಯ ಮಾಡಿ. ನಾನು ನಿಮ್ಮ ದೇವರಾದ ಯೆಹೋವ.’”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ