ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 11
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಸಮುವೇಲ ಮುಖ್ಯಾಂಶಗಳು

      • ಸೌಲ ಅಮ್ಮೋನಿಯರನ್ನ ಸೋಲಿಸಿದ (1-11)

      • ಸೌಲನೇ ರಾಜ ಅಂತ ಇನ್ನೊಮ್ಮೆ ದೃಢಪಡಿಸಲಾಯ್ತು (12-15)

1 ಸಮುವೇಲ 11:1

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 2:19
  • +ನ್ಯಾಯ 21:8; 1ಸಮು 31:11, 12

1 ಸಮುವೇಲ 11:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/1995, ಪು. 9-10

1 ಸಮುವೇಲ 11:4

ಮಾರ್ಜಿನಲ್ ರೆಫರೆನ್ಸ್

  • +1ಸಮು 10:26; 14:2

1 ಸಮುವೇಲ 11:6

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 3:9, 10; 6:34; 11:29; 14:5, 6; 1ಸಮು 10:10, 11; 16:13

1 ಸಮುವೇಲ 11:9

ಪಾದಟಿಪ್ಪಣಿ

  • *

    ಅಕ್ಷ. “ಸೂರ್ಯ ಬಿಸಿ ಆಗೋವಾಗ.”

1 ಸಮುವೇಲ 11:10

ಮಾರ್ಜಿನಲ್ ರೆಫರೆನ್ಸ್

  • +1ಸಮು 11:3

1 ಸಮುವೇಲ 11:11

ಪಾದಟಿಪ್ಪಣಿ

  • *

    ಅದು, ಸುಮಾರು 2 ಗಂಟೆಯಿಂದ 6 ಗಂಟೆ ತನಕ.

ಮಾರ್ಜಿನಲ್ ರೆಫರೆನ್ಸ್

  • +1ಸಮು 11:1

1 ಸಮುವೇಲ 11:12

ಮಾರ್ಜಿನಲ್ ರೆಫರೆನ್ಸ್

  • +1ಸಮು 10:26, 27

1 ಸಮುವೇಲ 11:13

ಮಾರ್ಜಿನಲ್ ರೆಫರೆನ್ಸ್

  • +2ಸಮು 19:22

1 ಸಮುವೇಲ 11:14

ಮಾರ್ಜಿನಲ್ ರೆಫರೆನ್ಸ್

  • +1ಸಮು 7:15, 16
  • +1ಸಮು 10:17, 24

1 ಸಮುವೇಲ 11:15

ಮಾರ್ಜಿನಲ್ ರೆಫರೆನ್ಸ್

  • +ಯಾಜ 7:11
  • +1ಅರ 1:39, 40; 2ಅರ 11:12, 14; 1ಪೂರ್ವ 12:39, 40

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಸಮು. 11:1ಧರ್ಮೋ 2:19
1 ಸಮು. 11:1ನ್ಯಾಯ 21:8; 1ಸಮು 31:11, 12
1 ಸಮು. 11:41ಸಮು 10:26; 14:2
1 ಸಮು. 11:6ನ್ಯಾಯ 3:9, 10; 6:34; 11:29; 14:5, 6; 1ಸಮು 10:10, 11; 16:13
1 ಸಮು. 11:101ಸಮು 11:3
1 ಸಮು. 11:111ಸಮು 11:1
1 ಸಮು. 11:121ಸಮು 10:26, 27
1 ಸಮು. 11:132ಸಮು 19:22
1 ಸಮು. 11:141ಸಮು 7:15, 16
1 ಸಮು. 11:141ಸಮು 10:17, 24
1 ಸಮು. 11:15ಯಾಜ 7:11
1 ಸಮು. 11:151ಅರ 1:39, 40; 2ಅರ 11:12, 14; 1ಪೂರ್ವ 12:39, 40
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಸಮುವೇಲ 11:1-15

ಒಂದನೇ ಸಮುವೇಲ

11 ಆಮೇಲೆ ಅಮ್ಮೋನಿಯನಾದ+ ನಾಹಾಷ ಗಿಲ್ಯಾದಿಗೆ ಬಂದು ಯಾಬೇಷಿನ+ ವಿರುದ್ಧ ಸೈನ್ಯ ನಿಲ್ಲಿಸಿದ. ಯಾಬೇಷಿನ ಗಂಡಸ್ರೆಲ್ಲ ನಾಹಾಷನಿಗೆ “ನಮ್ಮ ಜೊತೆ ಒಂದು ಒಪ್ಪಂದ ಮಾಡ್ಕೊ. ನಾವು ನಿನ್ನ ಸೇವೆ ಮಾಡ್ತೀವಿ” ಅಂದ್ರು. 2 ಅಮ್ಮೋನಿಯನಾದ ನಾಹಾಷ ಅವ್ರಿಗೆ “ನಿಮ್ಮ ಜೊತೆ ಒಪ್ಪಂದ ಮಾಡ್ಕೊಳ್ತೀನಿ, ಆದ್ರೆ ನನ್ನದೊಂದು ಷರತ್ತು. ಇಸ್ರಾಯೇಲ್ಯರನ್ನ ಅವಮಾನ ಮಾಡೋಕೆ ನಿಮ್ಮಲ್ಲಿ ಪ್ರತಿಯೊಬ್ರ ಬಲಗಣ್ಣನ್ನ ಕಿತ್ತುಹಾಕ್ತೀನಿ, ಒಪ್ಕೊಳ್ತೀರಾ?” ಅಂದ. 3 ಅದಕ್ಕೆ ಯಾಬೇಷಿನ ಹಿರಿಯರು “ನಮಗೆ ಏಳು ದಿನ ಸಮಯ ಕೊಡು. ನಾವು ಸಂದೇಶವಾಹಕರನ್ನ ಇಸ್ರಾಯೇಲಿನ ಎಲ್ಲ ಪ್ರದೇಶಗಳಿಗೆ ಕಳಿಸ್ತೀವಿ. ನಮ್ಮನ್ನ ಯಾರೂ ಕಾಪಾಡದಿದ್ರೆ ನಾವೇ ನಿಂಗೆ ಶರಣಾಗ್ತೀವಿ” ಅಂದ್ರು. 4 ಸ್ವಲ್ಪ ಸಮಯ ಆದ್ಮೇಲೆ ಸಂದೇಶವಾಹಕರು ಸೌಲ ಇದ್ದ ಗಿಬೆಯಾಗೆ+ ಬಂದು ಜನ್ರಿಗೆ ಕೇಳೋ ಹಾಗೆ ಈ ವಿಷ್ಯನ ಹೇಳಿದ್ರು. ಆಗ ಜನ್ರೆಲ್ಲ ಜೋರಾಗಿ ಅತ್ರು.

5 ಅಷ್ಟರಲ್ಲಿ ಹೊಲದಿಂದ ದನಗಳ ಹಿಂಡಿನ ಹಿಂದೆ ಬರ್ತಿದ್ದ ಸೌಲ “ಈ ಜನ್ರಿಗೆ ಏನಾಯ್ತು? ಯಾಕೆ ಅಳ್ತಿದ್ದಾರೆ?” ಅಂತ ಕೇಳಿದ. ಆಗ ಅವರು ಯಾಬೇಷಿನ ಗಂಡಸ್ರು ಹೇಳಿದ ಮಾತುಗಳನ್ನ ಹೇಳಿದ್ರು. 6 ಸೌಲ ಅದನ್ನ ಕೇಳಿಸ್ಕೊಂಡಾಗ ದೇವರ ಪವಿತ್ರಶಕ್ತಿ ಅವನಿಗೆ ಶಕ್ತಿ ಕೊಡ್ತು.+ ಅವನಿಗೆ ತುಂಬ ಕೋಪ ಬಂತು. 7 ಅವನು ಒಂದು ಜೋಡಿ ಹೋರಿಗಳನ್ನ ತಗೊಂಡು ತುಂಡುತುಂಡಾಗಿ ಕತ್ತರಿಸಿ ಆ ತುಂಡುಗಳನ್ನ ಸಂದೇಶವಾಹಕರ ಮೂಲಕ ಇಸ್ರಾಯೇಲಿನ ಎಲ್ಲ ಪ್ರಾಂತ್ಯಗಳಿಗೆ ಕಳಿಸ್ಕೊಟ್ಟ. ಅವರು ಹೋಗಿ ಜನ್ರಿಗೆ “ಸೌಲ ಮತ್ತು ಸಮುವೇಲ ಹೇಳಿದ ಹಾಗೆ ಕೇಳದವ್ರ ದನ-ಕುರಿಗಳಿಗೂ ಇದೇ ಗತಿ ಆಗುತ್ತೆ!” ಅಂದ್ರು. ಆಗ ಎಲ್ಲ ಜನ್ರಿಗೆ ಯೆಹೋವನ ಮೇಲೆ ಭಯ ಬಂತು. ಹಾಗಾಗಿ ಅವರು ಒಟ್ಟಾಗಿ ಬಂದ್ರು. 8 ಅವ್ರನ್ನ ಸೌಲ ಬೆಜೆಕಿನಲ್ಲಿ ಲೆಕ್ಕ ಮಾಡಿದ. ಅವ್ರಲ್ಲಿ 3,00,000 ಇಸ್ರಾಯೇಲ್ಯರು, 30,000 ಯೆಹೂದದ ಗಂಡಸ್ರು ಇದ್ರು. 9 ಅವರು ಯಾಬೇಷಿಂದ ಬಂದಿದ್ದ ಸಂದೇಶವಾಹಕರಿಗೆ “‘ನಾಳೆ ಮಧ್ಯಾಹ್ನ ಅಷ್ಟಕ್ಕೆ* ನಿಮಗೆ ರಕ್ಷಣೆ ಸಿಗುತ್ತೆ’ ಅಂತ ಗಿಲ್ಯಾದಿನಲ್ಲಿರೋ ಯಾಬೇಷಿನ ಗಂಡಸ್ರಿಗೆ ಹೇಳಿ” ಅಂದ್ರು. ಸಂದೇಶವಾಹಕರು ಬಂದು ಯಾಬೇಷಿನ ಗಂಡಸ್ರಿಗೆ ಅದನ್ನ ಹೇಳಿದಾಗ ಅವ್ರಿಗೆ ತುಂಬ ಖುಷಿ ಆಯ್ತು. 10 ಯಾಬೇಷಿನ ಗಂಡಸ್ರು ಅಮ್ಮೋನಿಯರಿಗೆ “ನಾಳೆ ನಿಮಗೆ ಶರಣಾಗ್ತೀವಿ. ನಿಮಗೆ ಸರಿ ಅನಿಸಿದನ್ನೇ ಮಾಡಿ”+ ಅಂದ್ರು.

11 ಸೌಲ ಮಾರನೇ ದಿನ ಜನ್ರನ್ನ ಮೂರು ಗುಂಪು ಮಾಡಿದ. ಅವರು ತಡರಾತ್ರಿಯಲ್ಲಿ* ಅಮ್ಮೋನಿಯರ+ ಪಾಳೆಯದ ಮಧ್ಯ ಹೋದ್ರು. ಮಧ್ಯಾಹ್ನದ ತನಕ ಅವ್ರನ್ನ ಸಾಯಿಸಿದ್ರು. ಪಾರಾಗಿ ಉಳಿದವರು ಒಬ್ಬೊಬ್ರು ಒಂದೊಂದು ದಿಕ್ಕಿಗೆ ಓಡಿಹೋದ್ರು. 12 ಆಮೇಲೆ ಜನ ಸಮುವೇಲನಿಗೆ “‘ಸೌಲ ನಮ್ಮ ರಾಜನಾಗೋಕೆ ಯೋಗ್ಯನಲ್ಲ’+ ಅಂತ ಹೇಳಿದವರು ಎಲ್ಲಿ? ಅವ್ರನ್ನ ನಮಗೆ ಒಪ್ಪಿಸಿ, ಅವ್ರನ್ನ ಕೊಂದುಹಾಕ್ತೀವಿ” ಅಂದ್ರು. 13 ಆದ್ರೆ ಸೌಲ “ಇವತ್ತು ಯಾರನ್ನೂ ಕೊಲ್ಲಬೇಡಿ.+ ಯಾಕಂದ್ರೆ ಯೆಹೋವ ಇವತ್ತು ಇಸ್ರಾಯೇಲ್ಯರನ್ನ ಕಾಪಾಡಿದ್ದಾನೆ” ಅಂದ.

14 ಸಮುವೇಲ ಜನ್ರಿಗೆ “ಬನ್ನಿ ಗಿಲ್ಗಾಲಿಗೆ+ ಹೋಗೋಣ. ಸೌಲನೇ ರಾಜ ಅಂತ ಇನ್ನೊಂದು ಸಲ ಎಲ್ರಿಗೂ ಹೇಳೋಣ”+ ಅಂದ. 15 ಹಾಗಾಗಿ ಜನ್ರೆಲ್ಲ ಗಿಲ್ಗಾಲಿಗೆ ಹೋದ್ರು. ಅಲ್ಲಿ ಅವರು ಸೌಲನನ್ನ ಯೆಹೋವನ ಮುಂದೆ ರಾಜನಾಗಿ ಮಾಡಿದ್ರು. ಯೆಹೋವನ ಮುಂದೆ ಸಮಾಧಾನ ಬಲಿಗಳನ್ನ ಅರ್ಪಿಸಿದ್ರು.+ ಸೌಲ ಮತ್ತು ಇಸ್ರಾಯೇಲಿನ ಎಲ್ಲ ಗಂಡಸ್ರು ತುಂಬ ಖುಷಿಯಿಂದ ಕುಣಿದಾಡಿದ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ