ಕೀರ್ತನೆ
ಯಾತ್ರೆ ಗೀತೆ.
123 ಸ್ವರ್ಗದಲ್ಲಿ ಕೂತಿರೋ ದೇವರೇ,
ನಾನು ನಿನ್ನ ಕಡೆ ಕಣ್ಣೆತ್ತಿ ನೋಡ್ತೀನಿ.+
2 ದಾಸನ ಕಣ್ಣು ಯಜಮಾನನ ಕೈಯನ್ನ ನೋಡೋ ಹಾಗೆ,
ದಾಸಿಯ ಕಣ್ಣು ಯಜಮಾನಿಯ ಕೈಯನ್ನ ನೋಡೋ ಹಾಗೆ,
ನಮ್ಮ ದೇವರಾದ ಯೆಹೋವ ನಮಗೆ ಕೃಪೆ ತೋರಿಸೋ ತನಕ+
ನಮ್ಮ ಕಣ್ಣು ಆತನನ್ನೇ ನೋಡುತ್ತೆ.+
3 ಕೃಪೆ ತೋರಿಸು ಯೆಹೋವನೇ, ಕೃಪೆ ತೋರಿಸು,
ಪಡಬೇಕಾದ ಅವಮಾನ ಈಗಾಗಲೇ ಪಟ್ಟಾಗಿದೆ.+
4 ಅಹಂಕಾರಿಗಳ ಅಣಕಿಸೋ ಮಾತನ್ನ,
ಜಂಬದವರ ಆರೋಪಗಳನ್ನ ಕೇಳಿ ಕೇಳಿ ಸಾಕಾಗಿದೆ.