ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅರಣ್ಯಕಾಂಡ ಮುಖ್ಯಾಂಶಗಳು

      • ಮಿರ್ಯಾಮ, ಆರೋನನಿಂದ ಮೋಶೆಗೆ ವಿರೋಧ (1-3)

        • ಮೋಶೆ ತುಂಬ ದೀನ ವ್ಯಕ್ತಿ (3)

      • ಯೆಹೋವ ಮೋಶೆಯ ಪರ ಮಾತಾಡಿದ್ದು (4-8)

      • ಮಿರ್ಯಾಮಗೆ ಕುಷ್ಠರೋಗ (9-16)

ಅರಣ್ಯಕಾಂಡ 12:1

ಮಾರ್ಜಿನಲ್ ರೆಫರೆನ್ಸ್

  • +ವಿಮೋ 2:16, 21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅವರ ನಂಬಿಕೆಯನ್ನು ಅನುಕರಿಸಿ,

    ಕಾವಲಿನಬುರುಜು,

    1/1/2010, ಪು. 32

    8/1/2004, ಪು. 26

    10/15/2002, ಪು. 28-29

ಅರಣ್ಯಕಾಂಡ 12:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 4:14-16, 30; 15:20; 28:30; ಮೀಕ 6:4
  • +ಅರ 11:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅವರ ನಂಬಿಕೆಯನ್ನು ಅನುಕರಿಸಿ,

    ಕಾವಲಿನಬುರುಜು,

    10/15/2002, ಪು. 28-29

ಅರಣ್ಯಕಾಂಡ 12:3

ಪಾದಟಿಪ್ಪಣಿ

  • *

    ಅಥವಾ “ಎಲ್ಲ ಜನ್ರಿಗಿಂತ ಹೆಚ್ಚು ಸೌಮ್ಯ (ಶಾಂತ).”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 11:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2019, ಪು. 8

    ಕಾವಲಿನಬುರುಜು,

    5/15/2005, ಪು. 20

    4/1/2003, ಪು. 17-19

ಅರಣ್ಯಕಾಂಡ 12:5

ಮಾರ್ಜಿನಲ್ ರೆಫರೆನ್ಸ್

  • +ವಿಮೋ 34:5; ಅರ 11:25

ಅರಣ್ಯಕಾಂಡ 12:6

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಆದಿ 15:1; 46:2; ವಿಮೋ 24:9-11
  • +ಆದಿ 31:10, 11

ಅರಣ್ಯಕಾಂಡ 12:7

ಪಾದಟಿಪ್ಪಣಿ

  • *

    ಅಕ್ಷ. “ನನ್ನ ಮನೆಯವರಲ್ಲೇ ಅವನು ನಂಬಿಗಸ್ತ.”

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 3:2, 5

ಅರಣ್ಯಕಾಂಡ 12:8

ಮಾರ್ಜಿನಲ್ ರೆಫರೆನ್ಸ್

  • +ವಿಮೋ 33:11; ಧರ್ಮೋ 34:10

ಅರಣ್ಯಕಾಂಡ 12:10

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 24:9
  • +2ಪೂರ್ವ 26:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅವರ ನಂಬಿಕೆಯನ್ನು ಅನುಕರಿಸಿ,

    ಕಾವಲಿನಬುರುಜು,

    8/1/2004, ಪು. 26

ಅರಣ್ಯಕಾಂಡ 12:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅವರ ನಂಬಿಕೆಯನ್ನು ಅನುಕರಿಸಿ,

ಅರಣ್ಯಕಾಂಡ 12:13

ಮಾರ್ಜಿನಲ್ ರೆಫರೆನ್ಸ್

  • +ವಿಮೋ 32:11; ಯಾಕೋ 5:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅವರ ನಂಬಿಕೆಯನ್ನು ಅನುಕರಿಸಿ,

ಅರಣ್ಯಕಾಂಡ 12:14

ಮಾರ್ಜಿನಲ್ ರೆಫರೆನ್ಸ್

  • +ಯಾಜ 13:45, 46; ಅರ 5:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅವರ ನಂಬಿಕೆಯನ್ನು ಅನುಕರಿಸಿ,

ಅರಣ್ಯಕಾಂಡ 12:15

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 24:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅವರ ನಂಬಿಕೆಯನ್ನು ಅನುಕರಿಸಿ,

ಅರಣ್ಯಕಾಂಡ 12:16

ಮಾರ್ಜಿನಲ್ ರೆಫರೆನ್ಸ್

  • +ಅರ 11:35; 33:18
  • +ಅರ 10:12

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅರ. 12:1ವಿಮೋ 2:16, 21
ಅರ. 12:2ವಿಮೋ 4:14-16, 30; 15:20; 28:30; ಮೀಕ 6:4
ಅರ. 12:2ಅರ 11:1
ಅರ. 12:3ಮತ್ತಾ 11:29
ಅರ. 12:5ವಿಮೋ 34:5; ಅರ 11:25
ಅರ. 12:6ಆದಿ 15:1; 46:2; ವಿಮೋ 24:9-11
ಅರ. 12:6ಆದಿ 31:10, 11
ಅರ. 12:7ಇಬ್ರಿ 3:2, 5
ಅರ. 12:8ವಿಮೋ 33:11; ಧರ್ಮೋ 34:10
ಅರ. 12:10ಧರ್ಮೋ 24:9
ಅರ. 12:102ಪೂರ್ವ 26:19
ಅರ. 12:13ವಿಮೋ 32:11; ಯಾಕೋ 5:16
ಅರ. 12:14ಯಾಜ 13:45, 46; ಅರ 5:2
ಅರ. 12:15ಧರ್ಮೋ 24:9
ಅರ. 12:16ಅರ 11:35; 33:18
ಅರ. 12:16ಅರ 10:12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅರಣ್ಯಕಾಂಡ 12:1-16

ಅರಣ್ಯಕಾಂಡ

12 ಮೋಶೆ ಕೂಷ್‌ ದೇಶದ ಸ್ತ್ರೀಯನ್ನ ಮದುವೆ ಆಗಿದ್ರಿಂದ+ ಮಿರ್ಯಾಮ ಮತ್ತೆ ಆರೋನ ಮೋಶೆ ವಿರುದ್ಧ ದೂರೋಕೆ ಶುರು ಮಾಡಿದ್ರು. 2 “ಯೆಹೋವ ಮೋಶೆ ಮೂಲಕ ಮಾತ್ರ ಮಾತಾಡಿದ್ದಾನಾ? ನಮ್ಮ ಮೂಲಕನೂ ಮಾತಾಡಿದ್ದಾನಲ್ವಾ?”+ ಅಂದ್ರು. ಯೆಹೋವ ಅವರ ಮಾತನ್ನ ಕೇಳಿಸ್ಕೊಳ್ತಾ ಇದ್ದನು.+ 3 ಮೋಶೆ ಭೂಮಿಯಲ್ಲಿದ್ದ ಎಲ್ಲ ಜನ್ರಿಗಿಂತ ತುಂಬ ದೀನ* ವ್ಯಕ್ತಿಯಾಗಿದ್ದ.+

4 ಯೆಹೋವನು ತಕ್ಷಣ ಮೋಶೆ, ಆರೋನ, ಮಿರ್ಯಾಮಗೆ “ನೀವು ಮೂವರು ದೇವದರ್ಶನ ಡೇರೆ ಹತ್ರ ಹೋಗಿ” ಅಂದನು. ಅವರು ಹೋದ್ರು. 5 ಯೆಹೋವ ಮೋಡದಲ್ಲಿ ಇಳಿದು ಬಂದು+ ದೇವದರ್ಶನ ಡೇರೆ ಬಾಗಲಲ್ಲಿ ನಿಂತು ಆರೋನನನ್ನ ಮಿರ್ಯಾಮಳನ್ನ ಕರೆದನು. ಅವರಿಬ್ರು ಮುಂದೆ ಹೋಗಿ ನಿಂತ್ರು. 6 ಆಗ ಆತನು “ದಯವಿಟ್ಟು ನಾನು ಹೇಳೋದನ್ನ ಕೇಳಿ. ನಿಮ್ಮ ಮಧ್ಯ ಯೆಹೋವನ ಪ್ರವಾದಿ ಇರ್ತಿದ್ರೆ ಅವನಿಗೆ ನನ್ನ ಬಗ್ಗೆ ದರ್ಶನದಲ್ಲಿ*+ ತಿಳಿಸ್ತಿದ್ದೆ. ಅವನ ಜೊತೆ ಕನಸಲ್ಲಿ ಮಾತಾಡ್ತಿದ್ದೆ.+ 7 ನನ್ನ ಸೇವಕನಾದ ಮೋಶೆ ಜೊತೆ ಹೀಗೆ ಮಾತಾಡಲ್ಲ. ನನ್ನ ಜನ್ರನ್ನೆಲ್ಲ ಅವನ ಕೈಗೆ ಒಪ್ಪಿಸಿದ್ದೀನಿ.*+ 8 ಅವನ ಜೊತೆ ಮುಖಾಮುಖಿಯಾಗಿ, ಮುಚ್ಚುಮರೆ ಇಲ್ಲದೆ ಮಾತಾಡ್ತೀನಿ,+ ಒಗಟೊಗಟಾಗಿ ಮಾತಾಡಲ್ಲ. ಯೆಹೋವನಾದ ನನ್ನ ರೂಪವನ್ನ ಅವನು ನೋಡ್ತಾನೆ. ಹೀಗಿರುವಾಗ ನೀವು ಮೋಶೆ ವಿರುದ್ಧ ಮಾತಾಡಿದ್ದೀರ. ಹಾಗೆ ಮಾತಾಡೋಕೆ ನಿಮಗೆ ಹೇಗೆ ಧೈರ್ಯ ಬಂತು?” ಅಂದನು.

9 ಯೆಹೋವನಿಗೆ ಅವ್ರ ಮೇಲೆ ತುಂಬ ಕೋಪ ಬಂದು ಅಲ್ಲಿಂದ ಹೋದನು. 10 ದೇವದರ್ಶನ ಡೇರೆ ಮೇಲಿದ್ದ ಮೋಡ ದೂರ ಹೋಯ್ತು. ತಕ್ಷಣ ಮಿರ್ಯಾಮಗೆ ಕುಷ್ಠರೋಗ ಬಂತು! ಅವಳು ಹಿಮದ ತರ ಬೆಳ್ಳಗಾದಳು.+ ಆರೋನ ಮಿರ್ಯಾಮಳನ್ನ ನೋಡಿದಾಗ ಕುಷ್ಠ ಬಂದಿರೋದು ಕಾಣಿಸ್ತು.+ 11 ಕೂಡ್ಲೇ ಆರೋನ ಮೋಶೆ ಹತ್ರ ಹೋಗಿ “ಸ್ವಾಮಿ, ನಾವು ಬುದ್ಧಿ ಇಲ್ಲದ ಕೆಲಸ ಮಾಡಿಬಿಟ್ವಿ. ನಿನ್ನ ಹತ್ರ ಬೇಡ್ಕೊಳ್ತೀನಿ, ದಯವಿಟ್ಟು ಈ ಪಾಪಕ್ಕೆ ನಮಗೆ ಶಿಕ್ಷೆ ಆಗೋಕೆ ಬಿಡಬೇಡ. 12 ಅವಳನ್ನ ಹೀಗೇ ಬಿಟ್ರೆ, ಗರ್ಭದಲ್ಲೇ ಸತ್ತು ಅರ್ಧ ಕೊಳೆತುಹೋಗಿ ಹುಟ್ಟಿದ ಮಗು ತರ ಆಗ್ತಾಳೆ. ದಯವಿಟ್ಟು ಹಾಗಾಗೋಕೆ ಬಿಡಬೇಡ” ಅಂದ. 13 ಆಗ ಮೋಶೆ “ದೇವರೇ, ದಯವಿಟ್ಟು, ದಯವಿಟ್ಟು ಅವಳನ್ನ ವಾಸಿಮಾಡು” ಅಂತ ಯೆಹೋವನನ್ನ ಬೇಡ್ಕೊಂಡ.+

14 ಆಗ ಯೆಹೋವ ಮೋಶೆಗೆ “ಅವಳ ಮುಖದ ಮೇಲೆ ಅಪ್ಪ ಉಗುಳಿದ್ರೆ ಅವಳು ಏಳು ದಿನ ಅವಮಾನವನ್ನ ಸಹಿಸ್ಕೊಳ್ಳಲ್ವಾ? ಹಾಗೇ ಅವಳು ಈಗ ಪಾಳೆಯದ ಹೊರಗೆ ಏಳು ದಿನ ಪ್ರತ್ಯೇಕವಾಗಿ ಇರಲಿ.+ ಆಮೇಲೆ ಕರ್ಕೊಂಡು ಬರಬಹುದು” ಅಂದನು. 15 ಹಾಗಾಗಿ ಮಿರ್ಯಾಮ ಏಳು ದಿನ ಪಾಳೆಯದ ಹೊರಗೆ ಇದ್ದಳು.+ ಅವಳನ್ನ ಪಾಳೆಯದ ಒಳಗೆ ಸೇರಿಸ್ಕೊಳ್ಳೋ ತನಕ ಜನ ಮುಂದೆ ಪ್ರಯಾಣ ಮಾಡಲಿಲ್ಲ. 16 ಆಮೇಲೆ ಜನ ಹಚೇರೋತಿನಿಂದ+ ಪಾರಾನ್‌ ಕಾಡಿಗೆ+ ಬಂದು ಅಲ್ಲಿ ಡೇರೆ ಹಾಕೊಂಡ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ