ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನೆಹೆಮೀಯ 8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ನೆಹೆಮೀಯ ಮುಖ್ಯಾಂಶಗಳು

      • ನಿಯಮ ಪುಸ್ತಕದ ಓದುವಿಕೆ ಮತ್ತು ವಿವರಣೆ (1-12)

      • ಚಪ್ಪರಗಳ ಹಬ್ಬ ಆಚರಣೆ (13-18)

ನೆಹೆಮೀಯ 8:1

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

  • *

    ಅಥವಾ “ಬರಹಗಾರ.”

ಮಾರ್ಜಿನಲ್ ರೆಫರೆನ್ಸ್

  • +ನೆಹೆ 3:26; 12:37
  • +ಎಜ್ರ 7:6
  • +ಧರ್ಮೋ 31:9; ಯೆಹೋ 1:8
  • +ಯಾಜ 27:34

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    2/2016, ಪು. 3

ನೆಹೆಮೀಯ 8:2

ಮಾರ್ಜಿನಲ್ ರೆಫರೆನ್ಸ್

  • +ಯಾಜ 23:24; 1ಅರ 8:2
  • +ಧರ್ಮೋ 31:12; 2ಪೂರ್ವ 17:8, 9; ಮಲಾ 2:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/1998, ಪು. 20

ನೆಹೆಮೀಯ 8:3

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಅಕಾ 13:15; 15:21
  • +ಅಕಾ 16:14; 17:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2013, ಪು. 21

ನೆಹೆಮೀಯ 8:4

ಪಾದಟಿಪ್ಪಣಿ

  • *

    ಅಥವಾ “ಬರಹಗಾರ.”

ಮಾರ್ಜಿನಲ್ ರೆಫರೆನ್ಸ್

  • +ನೆಹೆ 12:40, 42

ನೆಹೆಮೀಯ 8:6

ಪಾದಟಿಪ್ಪಣಿ

  • *

    ಅಥವಾ “ಹಾಗೇ ಆಗ್ಲಿ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 27:26

ನೆಹೆಮೀಯ 8:7

ಮಾರ್ಜಿನಲ್ ರೆಫರೆನ್ಸ್

  • +ನೆಹೆ 9:4
  • +ಎಜ್ರ 8:33; ನೆಹೆ 11:16
  • +ಧರ್ಮೋ 33:8, 10

ನೆಹೆಮೀಯ 8:8

ಪಾದಟಿಪ್ಪಣಿ

  • *

    ಅಥವಾ “ಹೀಗೆ ಜನ್ರಿಗೆ ಅರ್ಥ ಆಗೋ ತರ ಓದಿದ್ರು.”

ಮಾರ್ಜಿನಲ್ ರೆಫರೆನ್ಸ್

  • +ಲೂಕ 24:27; ಅಕಾ 8:30, 31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 10

    ಕಾವಲಿನಬುರುಜು,

    2/1/2006, ಪು. 11

    5/15/1996, ಪು. 16

ನೆಹೆಮೀಯ 8:9

ಪಾದಟಿಪ್ಪಣಿ

  • *

    ಅಥವಾ “ತಿರ್ಷಾತಾ,” ಇದು ಪ್ರಾಂತ್ಯದ ರಾಜ್ಯಪಾಲನಿಗಿರೋ ಪರ್ಶಿಯದ ಬಿರುದು.

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 7:11
  • +ಯಾಜ 23:24

ನೆಹೆಮೀಯ 8:10

ಪಾದಟಿಪ್ಪಣಿ

  • *

    ಅಕ್ಷ. “ಕೊಬ್ಬಿದ.”

  • *

    ಅಥವಾ “ಆಶ್ರಯ.”

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 9:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    7/2023, ಪು. 10

    ಕಾವಲಿನಬುರುಜು,

    10/15/2013, ಪು. 21-22

    12/15/2008, ಪು. 32

    10/15/1998, ಪು. 20

    1/15/1995, ಪು. 11

    9/1/1994, ಪು. 13-14

    6/15/1992, ಪು. 19

ನೆಹೆಮೀಯ 8:12

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 126:1-3
  • +ನೆಹೆ 8:8

ನೆಹೆಮೀಯ 8:13

ಪಾದಟಿಪ್ಪಣಿ

  • *

    ಅಕ್ಷ. “ಹೆಚ್ಚಿನ ಒಳನೋಟ ಪಡೆಯೋಕೆ.”

  • *

    ಅಥವಾ “ಬರಹಗಾರ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/1998, ಪು. 21

ನೆಹೆಮೀಯ 8:14

ಪಾದಟಿಪ್ಪಣಿ

  • *

    ಅಥವಾ “ತಾತ್ಕಾಲಿಕ ವಸತಿಗಳಲ್ಲಿ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 23:34, 42; ಧರ್ಮೋ 16:13, 16; ಯೋಹಾ 7:2

ನೆಹೆಮೀಯ 8:15

ಪಾದಟಿಪ್ಪಣಿ

  • *

    ಇದು, ಹೊಳಪಿನ ಎಲೆಗಳು ಮತ್ತು ಸುವಾಸನೆಯುಳ್ಳ ಬಿಳಿ ಹೂಗಳನ್ನ ಬಿಡೋ ಪೊದೆ.

ಮಾರ್ಜಿನಲ್ ರೆಫರೆನ್ಸ್

  • +ಯಾಜ 23:4

ನೆಹೆಮೀಯ 8:16

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +1ಅರ 6:36; 7:12; 2ಪೂರ್ವ 4:9; 20:5
  • +ನೆಹೆ 3:26; 8:1, 3
  • +2ಅರ 14:13; ನೆಹೆ 12:38, 39

ನೆಹೆಮೀಯ 8:17

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 1:1
  • +ಧರ್ಮೋ 16:14, 15

ನೆಹೆಮೀಯ 8:18

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 31:10-12
  • +ಯಾಜ 23:34, 36

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ನೆಹೆ. 8:1ನೆಹೆ 3:26; 12:37
ನೆಹೆ. 8:1ಎಜ್ರ 7:6
ನೆಹೆ. 8:1ಧರ್ಮೋ 31:9; ಯೆಹೋ 1:8
ನೆಹೆ. 8:1ಯಾಜ 27:34
ನೆಹೆ. 8:2ಯಾಜ 23:24; 1ಅರ 8:2
ನೆಹೆ. 8:2ಧರ್ಮೋ 31:12; 2ಪೂರ್ವ 17:8, 9; ಮಲಾ 2:7
ನೆಹೆ. 8:3ಅಕಾ 13:15; 15:21
ನೆಹೆ. 8:3ಅಕಾ 16:14; 17:11
ನೆಹೆ. 8:4ನೆಹೆ 12:40, 42
ನೆಹೆ. 8:6ಧರ್ಮೋ 27:26
ನೆಹೆ. 8:7ನೆಹೆ 9:4
ನೆಹೆ. 8:7ಎಜ್ರ 8:33; ನೆಹೆ 11:16
ನೆಹೆ. 8:7ಧರ್ಮೋ 33:8, 10
ನೆಹೆ. 8:8ಲೂಕ 24:27; ಅಕಾ 8:30, 31
ನೆಹೆ. 8:9ಎಜ್ರ 7:11
ನೆಹೆ. 8:9ಯಾಜ 23:24
ನೆಹೆ. 8:10ಎಸ್ತೇ 9:19
ನೆಹೆ. 8:12ಕೀರ್ತ 126:1-3
ನೆಹೆ. 8:12ನೆಹೆ 8:8
ನೆಹೆ. 8:14ಯಾಜ 23:34, 42; ಧರ್ಮೋ 16:13, 16; ಯೋಹಾ 7:2
ನೆಹೆ. 8:15ಯಾಜ 23:4
ನೆಹೆ. 8:161ಅರ 6:36; 7:12; 2ಪೂರ್ವ 4:9; 20:5
ನೆಹೆ. 8:16ನೆಹೆ 3:26; 8:1, 3
ನೆಹೆ. 8:162ಅರ 14:13; ನೆಹೆ 12:38, 39
ನೆಹೆ. 8:17ಯೆಹೋ 1:1
ನೆಹೆ. 8:17ಧರ್ಮೋ 16:14, 15
ನೆಹೆ. 8:18ಧರ್ಮೋ 31:10-12
ನೆಹೆ. 8:18ಯಾಜ 23:34, 36
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ನೆಹೆಮೀಯ 8:1-18

ನೆಹೆಮೀಯ

8 ‘ನೀರು ಬಾಗಿಲಿನ’+ ಮುಂದೆ ಇದ್ದ ಪಟ್ಟಣದ ಮುಖ್ಯಸ್ಥಳದಲ್ಲಿ* ಜನ್ರೆಲ್ಲ ಒಂದೇ ಮನಸ್ಸಿಂದ ಸೇರಿಬಂದ್ರು. ನಕಲುಗಾರ* ಎಜ್ರನಿಗೆ+ ಮೋಶೆಯ ನಿಯಮ ಪುಸ್ತಕ+ ತಗೊಂಡು ಬರೋಕೆ ಹೇಳಿದ್ರು. ಯೆಹೋವ ಇಸ್ರಾಯೇಲ್ಯರಿಗೆ ಹೇಳಿದ್ದ ವಿಷ್ಯಗಳು ಅದ್ರಲ್ಲಿತ್ತು.+ 2 ಹಾಗಾಗಿ ಪುರೋಹಿತ ಎಜ್ರ ಏಳನೇ ತಿಂಗಳ ಮೊದಲ್ನೇ ದಿನ+ ಸಭೆಯ ಮುಂದೆ ನಿಯಮ ಪುಸ್ತಕ ತಗೊಂಡು ಬಂದ.+ ಅಲ್ಲಿ ಗಂಡಸ್ರು, ಹೆಂಗಸ್ರು ಮತ್ತು ವಿಷ್ಯಗಳನ್ನ ಕೇಳಿ ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯ ಇದ್ದವ್ರೆಲ್ಲ ಇದ್ರು. 3 ಆಮೇಲೆ ಅವನು ‘ನೀರು ಬಾಗಿಲಿನ’ ಮುಂದೆ ಇದ್ದ ಪಟ್ಟಣದ ಮುಖ್ಯಸ್ಥಳದಲ್ಲಿ* ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಗಂಡಸ್ರ, ಹೆಂಗಸ್ರ, ವಿಷ್ಯಗಳನ್ನ ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯ ಇದ್ದ ಎಲ್ರ ಮುಂದೆ ಅದನ್ನ ಗಟ್ಟಿಯಾಗಿ ಓದಿದ.+ ನಿಯಮ ಪುಸ್ತಕದಲ್ಲಿದ್ದ ವಿಷ್ಯಗಳನ್ನ ಓದುವಾಗ ಜನ ಗಮನಕೊಟ್ಟು ಕೇಳಿದ್ರು.+ 4 ಆಗ ನಕಲುಗಾರ* ಎಜ್ರ ಮರದ ವೇದಿಕೆ ಮೇಲೆ ನಿಂತ್ಕೊಂಡಿದ್ದ. ಅದನ್ನ ಈ ಸಮಾರಂಭಕ್ಕೆ ಅಂತಾನೆ ಮಾಡಿದ್ರು. ಎಜ್ರನ ಬಲಗಡೆ ಮತ್ತಿತ್ಯ, ಶೆಮ, ಅನಾಯ, ಊರೀಯ, ಹಿಲ್ಕೀಯ, ಮಾಸೇಯ ನಿಂತಿದ್ರು. ಅವನ ಎಡಗಡೆ ಪೆದಾಯ, ಮೀಷಾಯೇಲ್‌, ಮಲ್ಕೀಯ,+ ಹಾಷುಮ್‌, ಹಷ್ಬದ್ದಾನ, ಜೆಕರ್ಯ, ಮೆಷುಲ್ಲಾಮ್‌ ನಿಂತಿದ್ರು.

5 ಎಜ್ರ ಎಲ್ರಿಗಿಂತ ಎತ್ರದಲ್ಲಿ ನಿಂತಿದ್ರಿಂದ ಅವನು ಪುಸ್ತಕ ತೆರೆದಿದ್ದು ಎಲ್ರಿಗೂ ಕಾಣಿಸ್ತು. ಅವನು ಪುಸ್ತಕ ತೆರೆದ ಕೂಡ್ಲೇ ಜನ್ರೆಲ್ಲ ಎದ್ದು ನಿಂತ್ರು. 6 ಆಮೇಲೆ ಎಜ್ರ ಮಹಾನ್‌ ದೇವರೂ ಸತ್ಯ ದೇವರೂ ಆಗಿರೋ ಯೆಹೋವನನ್ನ ಹೊಗಳಿದ. ಆಗ ಎಲ್ಲ ಜನ ತಮ್ಮ ಕೈಗಳನ್ನ ಮೇಲಕ್ಕೆತ್ತಿ “ಆಮೆನ್‌!* ಆಮೆನ್‌!”+ ಅಂದ್ರು. ನೆಲದ ತನಕ ಬಗ್ಗಿ ಯೆಹೋವನಿಗೆ ಅಡ್ಡಬಿದ್ದು ನಮಸ್ಕಾರ ಮಾಡಿದ್ರು. 7 ಲೇವಿಯರಾದ ಯೆಷೂವ, ಬಾನಿ, ಶೇರೇಬ್ಯ,+ ಯಾಮೀನ್‌, ಅಕ್ಕೂಬ್‌, ಶಬ್ಬೆತೈ, ಹೋದೀಯ, ಮಾಸೇಯ, ಕೆಲೀಟ, ಅಜರ್ಯ, ಯೋಜಾಬಾದ್‌,+ ಹಾನಾನ್‌, ಪೆಲಾಯ ಅನ್ನೋರು ನಿಯಮ ಪುಸ್ತಕವನ್ನ ಜನ್ರಿಗೆ ವಿವರಿಸ್ತಿದ್ರು.+ ಆಗ ಜನ ನಿಂತೇ ಇದ್ರು. 8 ಲೇವಿಯರು ಸತ್ಯ ದೇವರ ನಿಯಮ ಪುಸ್ತಕವನ್ನ ಗಟ್ಟಿಯಾಗಿ ಓದ್ತಾ, ಸ್ಪಷ್ಟವಾಗಿ ವಿವರಿಸ್ತಾ ಅದ್ರ ಅರ್ಥ ಏನಂತ ಹೇಳ್ತಾ ಹೋದ್ರು. ಹೀಗೆ ಓದಿದ ವಿಷ್ಯಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಜನ್ರಿಗೆ ಸಹಾಯ ಮಾಡಿದ್ರು.*+

9 ಆ ಸಮಯದಲ್ಲಿ ರಾಜ್ಯಪಾಲನಾಗಿದ್ದ* ನೆಹೆಮೀಯ, ಪುರೋಹಿತನೂ ನಕಲುಗಾರನೂ ಆಗಿದ್ದ ಎಜ್ರ+ ಮತ್ತು ಜನ್ರಿಗೆ ಕಲಿಸ್ತಿದ್ದ ಲೇವಿಯರು ಎಲ್ಲ ಜನ್ರಿಗೆ “ಈ ದಿನ ನಿಮ್ಮ ದೇವರಾದ ಯೆಹೋವನಿಗೆ ಪವಿತ್ರವಾದ ದಿನ.+ ಹಾಗಾಗಿ ಗೋಳಾಡಬೇಡಿ, ಅಳಬೇಡಿ” ಅಂದ್ರು. ಯಾಕಂದ್ರೆ ನಿಯಮ ಪುಸ್ತಕದ ಮಾತುಗಳನ್ನ ಕೇಳಿ ಜನ್ರೆಲ್ಲ ಅಳ್ತಿದ್ರು. 10 ನೆಹೆಮೀಯ ಅವ್ರಿಗೆ “ನೀವು ಹೋಗಿ ರುಚಿರುಚಿಯಾದ* ಅಡುಗೆ ಮಾಡಿ ಊಟ ಮಾಡಿ. ಸಿಹಿಯಾದ ಪಾನೀಯ ಕುಡಿರಿ. ತಿನ್ನೋಕೆ ಏನೂ ಇಲ್ಲದವ್ರಿಗೆ ಊಟ ಕಳಿಸ್ಕೊಡಿ.+ ಯಾಕಂದ್ರೆ ಈ ದಿನ ನಮ್ಮ ಒಡೆಯನಿಗೆ ಪವಿತ್ರ ದಿನ. ಯೆಹೋವ ಕೊಡೋ ಆನಂದನೇ ನಿಮ್ಮ ಬಲ.* ಹಾಗಾಗಿ ದುಃಖಪಡಬೇಡಿ” ಅಂದ. 11 ಲೇವಿಯರು ಎಲ್ಲ ಜನ್ರನ್ನ ಸಮಾಧಾನ ಮಾಡ್ತಾ “ಇದು ಪವಿತ್ರ ದಿನ. ಅಳಬೇಡಿ, ದುಃಖಪಡಬೇಡಿ!” ಅಂತಿದ್ರು. 12 ಹಾಗಾಗಿ ಎಲ್ಲ ಜನ ಊಟ ಮಾಡೋಕೆ, ಪಾನೀಯ ಕುಡಿಯೋಕೆ, ಬೇರೆಯವ್ರಿಗೆ ಊಟ ಕಳಿಸ್ಕೊಡೋಕೆ, ಖುಷಿಯಿಂದ ಇರೋಕೆ ಅಲ್ಲಿಂದ ಹೋದ್ರು.+ ಯಾಕಂದ್ರೆ ಅವ್ರಿಗೆ ವಿವರಿಸಿದ ವಿಷ್ಯಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಂಡಿದ್ರು.+

13 ಎರಡನೇ ದಿನ ಎಲ್ಲ ಜನ್ರ ಕುಲಗಳ ಮುಖ್ಯಸ್ಥರು, ಪುರೋಹಿತರು, ಲೇವಿಯರು ನಿಯಮ ಪುಸ್ತಕದ ಮಾತುಗಳನ್ನ ಇನ್ನೂ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ* ನಕಲುಗಾರ* ಎಜ್ರನ ಸುತ್ತ ಬಂದು ನಿಂತ್ರು. 14 ಮೋಶೆ ಮೂಲಕ ಬರೆಸಿದ್ದ ನಿಯಮ ಪುಸ್ತಕದಲ್ಲಿ ಯೆಹೋವ ಇಸ್ರಾಯೇಲ್ಯರಿಗೆ ಒಂದು ಆಜ್ಞೆ ಕೊಟ್ಟಿದ್ದ. ಏಳನೇ ತಿಂಗಳ ಹಬ್ಬ ಆಚರಿಸುವಾಗ ನೀವು ಚಪ್ಪರಗಳಲ್ಲಿ* ವಾಸ ಮಾಡಬೇಕು+ ಅನ್ನೋ ಆಜ್ಞೆ ಇತ್ತು. ಈ ವಿಷ್ಯ ಇವ್ರಿಗೆ ನಿಯಮ ಪುಸ್ತಕದಲ್ಲಿ ಸಿಕ್ತು. 15 ಅಷ್ಟೇ ಅಲ್ಲ ಎಲ್ಲ ಪಟ್ಟಣಗಳಲ್ಲಿ, ಇಡೀ ಯೆರೂಸಲೇಮಲ್ಲಿ “ನಿಯಮ ಪುಸ್ತಕದಲ್ಲಿ ಬರೆದಿರೋ ಪ್ರಕಾರ ಚಪ್ಪರಗಳನ್ನ ಕಟ್ಟೋಕೆ ಬೆಟ್ಟ ಪ್ರದೇಶಕ್ಕೆ ಹೋಗಿ ಆಲಿವ್‌ ಮರ, ಪೈನ್‌ ಮರ, ಮರ್ಟಲ್‌ ಮರ,* ಖರ್ಜೂರ ಮರಗಳ ಗರಿಗಳನ್ನ, ತುಂಬ ಎಲೆ ಇರೋ ಬೇರೆ ಮರಗಳ ಕೊಂಬೆಗಳನ್ನ ತಗೊಂಡು ಬರಬೇಕು” ಅಂತ ಎಲ್ರಿಗೂ ಹೇಳಬೇಕಂತ ಅವ್ರಿಗೆ+ ಗೊತ್ತಾಯ್ತು.

16 ಹಾಗಾಗಿ ಜನ ಹೋಗಿ ತಮಗೋಸ್ಕರ ಚಪ್ಪರ ಕಟ್ಟೋಕೆ ತುಂಬಾ ಎಲೆಗಳಿರೋ ಕೊಂಬೆಗಳನ್ನ ತಂದ್ರು. ಪ್ರತಿಯೊಬ್ರೂ ತಮ್ಮತಮ್ಮ ಮನೆ ಚಾವಣಿ ಮೇಲೆ, ಅಂಗಳಗಳಲ್ಲಿ, ಸತ್ಯ ದೇವರ ಆಲಯದ ಅಂಗಳಗಳಲ್ಲಿ,+ ‘ನೀರು ಬಾಗಿಲಿನ’+ ಮತ್ತು ‘ಎಫ್ರಾಯೀಮ್‌ ಬಾಗಿಲಿನ’+ ಪಟ್ಟಣದ ಮುಖ್ಯಸ್ಥಳದಲ್ಲಿ* ಚಪ್ಪರಗಳನ್ನ ಕಟ್ಕೊಂಡ್ರು. 17 ಹೀಗೆ ಕೈದಿಗಳಾಗಿದ್ದು ವಾಪಸ್‌ ಬಂದಿದ್ದ ಜನ್ರೆಲ್ಲ ಚಪ್ಪರಗಳನ್ನ ಕಟ್ಟಿ ಅದ್ರಲ್ಲಿ ವಾಸಿಸೋಕೆ ಶುರು ಮಾಡಿದ್ರು. ನೂನನ ಮಗ ಯೆಹೋಶುವನ+ ಕಾಲದಿಂದ ಇಲ್ಲಿ ತನಕ ಇಸ್ರಾಯೇಲ್ಯರು ಈ ರೀತಿ ಚಪ್ಪರಗಳ ಹಬ್ಬ ಮಾಡಿರಲೇ ಇಲ್ಲ. ಹಾಗಾಗಿ ಅವರು ತುಂಬ ಸಂಭ್ರಮದಿಂದ ಆ ಹಬ್ಬ ಆಚರಿಸಿದ್ರು.+ 18 ಹಬ್ಬದ ಮೊದಲ್ನೇ ದಿನದಿಂದ ಕೊನೇ ದಿನ ತನಕ ಪ್ರತಿ ದಿನ ಸತ್ಯ ದೇವರ ನಿಯಮ ಪುಸ್ತಕ ಓದಲಾಯ್ತು.+ ಅವರು ಆ ಹಬ್ಬವನ್ನ ಏಳು ದಿನ ಆಚರಿಸಿದ್ರು. ನಿಯಮ ಪುಸ್ತಕದಲ್ಲಿ ಹೇಳಿದ ಹಾಗೆ ಎಂಟನೇ ದಿನ ದೇವರ ಆರಾಧನೆಗೆ ಸೇರಿಬರಬೇಕು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ