ಕೀರ್ತನೆ
ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಈ ಗೀತೆಯನ್ನ ಶೆಮಿನಿತ್* ಸ್ವರಕ್ಕೆ ತಂತಿವಾದ್ಯನ ಹೊಂದಿಸ್ಕೊಂಡು ಹಾಡಬೇಕು.
12 ಯೆಹೋವನೇ, ನಿಷ್ಠಾವಂತರೇ ಇಲ್ಲ.
ನಂಬಿಗಸ್ತರು ಒಬ್ರೂ ಕಾಣಿಸ್ತಿಲ್ಲ. ಹಾಗಾಗಿ ನನ್ನನ್ನ ಕಾಪಾಡು.
3 ಒಳಗೊಂದು ಹೊರಗೊಂದು ಮಾತಾಡೋ ತುಟಿಗಳನ್ನ,
ದೊಡ್ಡದಾಗಿ ಕೊಚ್ಚಿಕೊಳ್ಳೋ ನಾಲಿಗೆನ ಯೆಹೋವ ಕತ್ತರಿಸಿ ಹಾಕ್ತಾನೆ.+
4 ಅವರು ಹೀಗಂತಾರೆ: “ನಮ್ಮ ನಾಲಿಗೆಯಿಂದ ನಾವು ಗೆಲ್ತೀವಿ.
ನಮಗೆ ಇಷ್ಟಬಂದಂಗೆ ಮಾತಾಡ್ತೀವಿ,
ನಮ್ಮ ಮೇಲೆ ಯಾರಿಗೂ ಅಧಿಕಾರ ಚಲಾಯಿಸೋಕೆ ಆಗಲ್ಲ.”+
5 ಯೆಹೋವ ಹೀಗಂತಾನೆ: “ಜನರ ಮೇಲೆ ದಬ್ಬಾಳಿಕೆ ಆಗ್ತಿದೆ,
ಬಡವರು ನರಳ್ತಿದ್ದಾರೆ,+
ನಾನು ಈಗ ಎದ್ದೇಳ್ತೀನಿ, ಅವರನ್ನ ಕೀಳಾಗಿ ನೋಡೋರ ಕೈಯಿಂದ ಅವರನ್ನ ಕಾಪಾಡ್ತೀನಿ.”
6 ಯೆಹೋವನ ಮಾತುಗಳು ಶುದ್ಧ.+
ಅವು ಮಣ್ಣಿನ ಕುಲುಮೆಯಲ್ಲಿ* ಬೆಂಕಿಗೆ ಹಾಕಿ ಏಳು ಸಲ ಶುದ್ಧಮಾಡಿದ ಬೆಳ್ಳಿ ತರ ಇವೆ.
7 ಯೆಹೋವನೇ, ದಬ್ಬಾಳಿಕೆ ಆದವರಿಗೆ, ಬಡವರಿಗೆ ನೀನು ಕಾವಲಾಗಿ ಇರ್ತಿಯ.+
ಅವರೆಲ್ಲರನ್ನೂ ಈ ಪೀಳಿಗೆಯಿಂದ ಶಾಶ್ವತವಾಗಿ ಕಾಪಾಡ್ತೀಯ.
8 ಜನರು ಕೆಟ್ಟತನಕ್ಕೆ ಸಹಕಾರ ಕೊಡ್ತಿದ್ದಾರೆ.
ಹಾಗಾಗಿ ದುಷ್ಟರು ಹತೋಟಿ ಇಲ್ಲದೆ ಎಲ್ಲ ಕಡೆ ತಿರುಗಾಡ್ತಿದ್ದಾರೆ.+