ಯುವ ಜನರು ಪ್ರಶ್ನಿಸುವುದು. . .
ಸಂಭಾಷಣೆ ಮಾಡುವುದರಲ್ಲಿ ನಾನು ಹೇಗೆ ಪ್ರಗತಿಮಾಡಬಲ್ಲೆನು?
ಎಳೇ ಶರೋನ್ ಸೂಕ್ಷ್ಮ ಸಂವೇದಿ ಮತ್ತು ಸ್ವಭಾವತ: ಲಜ್ಜೆಯವಳು. ಎವೇಕ್! ನೊಂದಿಗಿನ ಸಂದರ್ಶನವೊಂದರಲ್ಲಿ ಅವಳು ಒಪ್ಪಿದ್ದು: “ಯಾರಿಗಾದರೂ ನನ್ನನ್ನು ಪರಿಚಯಿಸಿದರೆ ಏನು ಹೇಳಬೇಕೆಂದು ನನಗೆ ಗೊತ್ತಾಗುವದಿಲ್ಲ. ನಾನು ತಪ್ಪಾದ ಸಂಗತಿಯನ್ನು ಹೇಳಿ, ಪ್ರಾಯಶ: ಆ ವ್ಯಕ್ತಿಗೆ ಬೇಸರವಾಗಬಹುದಾದರಿಂದ ನಾನೇನೂ ಹೇಳುವದಿಲ್ಲ.” ಶರೋನ್ ನಂತಹ ನಾಚುವ ಯುವಜನರಿಗೆ, ಸಂಭಾಷಿಸಲು ನಿಜ ಪ್ರಯತ್ನವು ಬೇಕಾಗಿದೆ.
ಬೇರೆಯವರಿಗೆ ಕುಲವರ್ಣೀಯ ಬಿನ್ನತೆಗಳು ಸಂಸರ್ಗಕ್ಕೆ ಅಡ್ಡಿಯಾಗಿರಬಹುದು. ಕಪ್ಪು ದಕ್ಷಿಣ ಆಫ್ರಿಕದ ಯುವಕನಾದ ಲೂಕಸ್ನ ವಿಚಾರ ಪರಿಗಣಿಸಿರಿ. ಆ ದೇಶದ ಸ್ಥಳೀಯ ಭಾಷೆಗಳಲ್ಲಿ ಈ ಪತ್ರಿಕೆಯನ್ನು ಪ್ರಕಟಿಸುವ ಅಂತರ್ ವರ್ಣೀಯ ಶಿಬ್ಬಂಧಿಗಳ ಒಬ್ಬ ಸದಸ್ಯನಾಗಿದ್ದಾನೆ. ಅವನು ವಿವರಿಸಿದ್ದು: “ಬಿಳಿಯವರೊಂದಿಗೆ ಕಪ್ಪು ಮನುಷ್ಯನು ಬಂದು, ಮೇಜಿನಲ್ಲಿ ಅವರೊಂದಿಗೆ ಉಣ್ಣುವುದು ಒಂದು ಸಾಂಸ್ಕೃತಿಕ ಅಘಾತವೇ ಸರಿ. ಇಲ್ಲಿಬಂದು ಬಿಳಿಯವರೊಡನೆ ಜೀವಿಸುವುದು ನನ್ನಲ್ಲಿ ನಡುಕವುಂಟುಮಾಡಿತು, ಯಾಕಂದರೆ ನಮಗೆ ಭಿನ್ನವಾದ ಹಿನ್ನೆಲೆಯಿತ್ತು. ನಾನೇನು ಹೇಳಲಿದ್ದೇನೋ ಸ್ವೀಕರಿಸಲ್ಪಡುವದೋ ಎಂದು ಅಚ್ಚರಿಗೊಂಡಿದೆ. ಆ ಭಾವನೆಯನ್ನು ಜಯಿಸಲು ಸಮಯ ತೆಗೆದುಕೊಂಡಿತು.”
ಕೆಲವೊಮ್ಮೆ ಒಂದೇ ಕುಲಗುಂಪಿನಲ್ಲಿಯೇ ಸಂಸರ್ಗ ನಡಿಸಲು ಅಡ್ಡಿಗಳಿರುತ್ತವೆ. ದಕ್ಷಿಣ ಆಫ್ರಿಕದವನಾದ ಪಿಯಟರ್ ಎಂಬವನು ನೆನಪಿಸುವುದು: “ನಾನೊಂದು ಹೊಲದಲ್ಲಿ ಬೆಳೆಸಲ್ಪಟ್ಟಿದ್ದೆ, ಅನಂತರ ನಮ್ಮ ಕುಟುಂಬ ನಗರಕ್ಕೆ ಬಂತು. ಹೊಲಗದ್ದೆ ಜೀವಿತ ನಾನೇ ಮಾತಾಡಶಕ್ತನಾಗಿದ್ದರೂ, ನಗರದ ಜೀವಿತವು ಭಿನ್ನವಾಗಿತ್ತು. ನನ್ನ ಮಿತ್ರರ ಸಂಭಾಷಣೆಯನ್ನು ನಾನು ಬೆರಗಿನಿಂದ ಕೇಳುವದನ್ನು ಕಂಡುಕೊಂಡೆ, ಮತ್ತು ನಾನು ಸುಮ್ಮನೆ ಇರುತ್ತಿದ್ದೆ.”
ಈ ಮೇಲಿನಂತವುಗಳಲ್ಲಿ, ತದ್ರೀತಿಯ ಯಾವುದೇ ಒಂದು ಸಮಸ್ಯೆಯು ನಿಮಗಿರುವದಾದರೆ, ಇದರ ಕುರಿತು ನೀವೇನು ಮಾಡಬಹುದು?
ನಾಚಿಕೆಯನ್ನು ಜಯಿಸುವುದು
ಇತರರ ಜತೆಯಲ್ಲಿ ನೀವು ಪೂರ್ತಿ ಮುಳುಗಿಸಲ್ಪಡುತ್ತೀರಿ ಎಂಬ ಭಾವನೆ ನಿಮಗಾಗುತ್ತದೋ? ಹೃದಯಕ್ಕೆ ತಕ್ಕೊಳ್ಳಿರಿ, ಇದು ಬೆಳವಣಿಗೆಯ ಒಂದು ಸಾಮಾನ್ಯ ಲಕ್ಷಣ. ಹದಿವಯಸ್ಕ ವರ್ಷಗಳು ಸ್ವ-ಪ್ರಜ್ಞೆಯ ಸಮಯವಾಗಿರುತ್ತದೆ—ಬೇರೆಯವರು ಏನು ಎಣಿಸುತ್ತಾರೆಂದು ಯುವಕರು ತೀವ್ರವಾಗಿ ಪ್ರಜ್ಞೆಯುಳ್ಳವರಾಗುವ ಸಮಯವದು. ಗಮನದ ಕೇಂದ್ರವಾಗಿರಲು ಅವರು ಆಗಾಗ್ಯೆ ದೂರೀಕರಿಸುತ್ತಾರೆ ಮತ್ತು ಸಾಧ್ಯವಾದಷ್ಟು ಸ್ವಲ್ಪವೇ ಅವರು ಮಾತಾಡುತ್ತಾರೆ.
“ನಾಚಿಕೆ,” ಲೋನಿನ್ಲೆಸ್ ಎಂಬ ತನ್ನ ಪುಸ್ತಕದಲ್ಲಿ ಡಾ. ಟೋನಿ ಲೇಕ್ ವಿವರಿಸುವುದು: “ಒಂದು ವಿಧದ ಭದ್ರತೆ. ತಪ್ಪು ಮಾಡುವದರಿಂದ ಲಜ್ಜೆಗೊಳ್ಳುವ ವ್ಯಕ್ತಿಯು ರಕ್ಷಿಸಲ್ಪಡುವನು ಯಾಕೆಂದರೆ ಮೂರ್ಖನಾಗಿ ನೋಡಲ್ಪಡುವ ಯಾ ಕೇಳಲ್ಪಡುವ ಅಪಾಯವನ್ನು ತೆಗೆದುಕೊಳ್ಳಲು ನಾಚಿಕೆಯು ಅಂಥ ವ್ಯಕ್ತಿಯನ್ನು ತಡೆಯುತ್ತದೆ.” ಕೇವಲ ಒಂದು ಸಂಭಾಷಣೆಯಲ್ಲಿ ಒಳಗೂಡುವ ಯೋಚನೆಯೇ ನಾಚುವ ವ್ಯಕ್ತಿಗಳಿಗೆ ಬೆವರು ತರಿಸುತ್ತದೆ! ಮಾತಾಡಲು ಬೇಕಾದ ಧೈರ್ಯ ಅವರು ತಂದುಕೊಳ್ಳ ಶಕ್ತರಾಗುವದಿಲ್ಲ. ಇಲ್ಲವೇ, ಅವರು ಹಾಗೆ ಮಾಡುವುದಾದರೂ, ಬರುವಂಥ ಶಬ್ದಗಳು ಗಲಿಬಿಲಿಯದ್ದಾಗಿರುತ್ತವೆ. ಆಲಿಸುವವರು ಗೊಂದಲದಿಂದ ನೋಡಬಹುದು ಯಾ ನಗಾಡಲೂ ಬಹುದು. ಇದು ನಿಮಗೆ ಸಂಭವಿಸಿದರೆ ನೀವೇನು ಮಾಡಬಹುದು?
“ಉತ್ತರವು,” ಡಾ. ಲೇಕ್ ವಿವರಿಸುವದು: “ನಮಗೆ ನಾವೇ ಸಮಯ ಕೊಟ್ಟುಕೊಳ್ಳುವುದು. ನಮ್ಮಲ್ಲಿ ಮೂಲಭೂತವಾಗಿ ಏನೋ ತಪ್ಪಿದೆ ಎಂದು ಯೋಚಿಸುವ ತಪ್ಪನ್ನು ಮಾಡದಿರುವುದು. ಎಷ್ಟೇ ದೀರ್ಘಕಾಲ ಮಾತಾಡಲು ನಾವು ಸಿದ್ಧರಾಗಿದ್ದೇವೆಂದು ನಾವು ಭಾವಿಸುವ ತನಕ ಕೇಳುವುದರ ಮೇಲೆ ನಮ್ಮನ್ನು ಕೇಂದ್ರೀಕರಿಸಬೇಕು.” (ಯಾಕೋಬ 1:19 ಹೋಲಿಸಿರಿ.) ಈ ನಿಶ್ಚಯಾತ್ಮಕ ಹಾದಿಯು, ನಾಚಿಕೆಯ ಐರಿನ್ ನಂತವರಿಗೆ ಸಹಾಯ ಮಾಡಿದೆ. “ಇತರರ ಸಂಭಾಷಣೆಯನ್ನು ನಾನು ಜಾಗ್ರತೆಯಿಂದ ಆಲಿಸುತ್ತೇನೆ” ಅವಳು ವಿವರಿಸುವುದು. “ಇದರಿಂದ ನನಗೆ ಕಲಿತುಕೊಳ್ಳಲು ಸಾಧ್ಯವಾಗಿದೆ. ಅನಂತರ ಸಂಶೋಧನೆ ಮತ್ತು ಅಧ್ಯಯನದ ಮೂಲಕ ಹೆಚ್ಚು ವಿಷಯಗಳನ್ನು ಪಡೆಯುತ್ತಿದ್ದೆ. ಆ ವಿಷಯವು ಪುನ: ಬಂದಾಗ, ನಾನು ಅದರ ಕುರಿತು ಮಾತಾಡ ಶಕ್ತಳಾಗುತ್ತಿದ್ದೆ.”
ನಿಮ್ಮನ್ನು ತಪ್ಪರ್ಥ ಮಾಡಿಕೊಂಡರೆ ಏನು?
ಕೆಲವೊಮ್ಮೆ ಸಂಭಾಷಿಸಲು ನೀವು ಮಾಡುವ ಯಥಾರ್ಥ ಪ್ರಯತ್ನವು ನಕಾರಾತ್ಮಕ ಪ್ರತಿಕ್ರಿಯೆಯನ್ನು ತರಬಹುದು; ನೀವೇನು ಹೇಳುವಿರೋ ಅದನ್ನು ತಪ್ಪಾದ ರೀತಿಯಲ್ಲಿ ತೆಗೆದುಕೊಂಡಿರಬಹುದು. ಪುನ: ಪುನ: ನಿಮ್ಮ ಚಿಪ್ಪಿನೊಳಗೆ ನೀವು ಮುದುಡುವಂತೆ ಕಾರಣವಾಗುವಂತೆ, ಅಂಥ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಡಿರಿ. “ನಿಮ್ಮ ಮನಸ್ಸು ಕೋಪಕ್ಕೆ ಆತುರಪಡದಿರಲಿ; ಕೋಪಕ್ಕೆ ಮೂಢರ ಎದೆಯೇ ನೆಲೆ” ಎನ್ನುತ್ತದೆ ಪ್ರಸಂಗಿ 7:9.
ಎಳೆಯ ದಾವೀದನ ಕುರಿತು ಬಹಳ ಹಿಂದೆ ತಪ್ಪರ್ಥ ಮಾಡಿಕೊಂಡ ವಿವರ ಬೈಬಲು ತಿಳಿಸುತ್ತದೆ. ಇಸ್ರಾಯೇಲ್ಯರ ಸೇನೆಯಲ್ಲಿ ಕೆಲಸಮಾಡುತ್ತಿದ್ದ ತನ್ನ ಹಿರೀ ಅಣ್ಣಂದಿರಿಗೆ ಉಡುಗೊರೆಗಳನ್ನು ಕೊಡುವಂತೆ ಅವನ ತಂದೆಯು ಕಳುಹಿಸುತ್ತಾನೆ. ಅಲ್ಲಿ ಬಂದಾಗ ಫಿಲಿಷ್ಟಿಯ ದೈತ್ಯನಾದ ಗೊಲ್ಯಾತನು ಹೀಯಾಳಿಸುವದನ್ನು ಕೇಳುವದರಿಂದ ಧಕ್ಕೆಗೊಳ್ಳುತ್ತಾನೆ. “ಜೀವಸ್ವರೂಪನಾದ ದೇವರ ಸೈನ್ಯವನ್ನು ಹೀಯಾಳಿಸುವದಕ್ಕೆ ಸುನ್ನತಿಯಿಲ್ಲದ ಫಿಲಿಷ್ಟಿಯನು ಎಷ್ಟರವನು” ಎಂದವನು ಸೈನಿಕರನ್ನು ವಿಚಾರಿಸುತ್ತಾನೆ. ದಾವೀದನ ಅಣ್ಣಂದಿರಲ್ಲಿ ಒಬ್ಬನಾದ ಎಲಿಯಾಬನು ಇದನ್ನು ಕೇಳಿ ಕೋಪಗೊಳ್ಳುತ್ತಾನೆ. ತನ್ನ ಎಳೇ ತಮ್ಮನು ಅಲ್ಲಿ ಬರುವುದರ ಹೇತುವನ್ನು ತಪ್ಪರ್ಥ ಮಾಡಿಕೊಂಡು, ಅವನಂದದ್ದು: “ನಿನ್ನ ಸೊಕ್ಕೂ ತುಂಟತನವೂ ನನಗೆ ಗೊತ್ತಿದೆ; ನೀನು ಯುದ್ಧವನ್ನು ನೋಡುವದಕ್ಕೆ ಬಂದಿದ್ದೀ.”—1 ಸಮುವೇಲ 17:26-28.
ತದ್ರೀತಿಯಲ್ಲಿಯೇ, ಇತರರು ನಿಮ್ಮನ್ನು ಕೂಡಾ ತಪ್ಪರ್ಥ ಮಾಡಿಕೊಳ್ಳಬಹುದು. ಹಾಗಿರುವದಾದರೆ, ಅದು ನಿಮ್ಮನ್ನು ಜಜ್ಜಲು ಬಿಡಬೇಡಿರಿ. ದಾವೀದನ ಒಳ್ಳೇ ಹೇತು ಬಲು ಬೇಗನೇ ಪ್ರಕಟಿತವಾದಂತೆ, ಉತ್ತಮ ಸಂಭಾಷಣೆಯನ್ನು ಮಾಡಲು ನೀವು ಮಾಡುವ ಯಥಾರ್ಥ ಪ್ರಯತ್ನಗಳು ಕೊನೆಗೆ ಫಲದಾಯಕವಾಗಬಲ್ಲದು. ಬೈಬಲಿನಲ್ಲಿ ನಮಗನ್ನುವದು: “ಸತ್ಕಾರ್ಯಗಳು ಪ್ರಸಿದ್ಧವಾಗುತ್ತವೆ.” (1 ತಿಮೋಥಿ 5:24, 25) ಆದ್ದರಿಂದ ಪ್ರಯತ್ನವನ್ನು ಮುಂದುವರಿಸಿರಿ.
ಸಹಾನುಭೂತಿಯ ಅವಶ್ಯಕತೆ
ಆದರೆ, ನೀವು ಹೇಗೆ ಇದನ್ನು ಆರಂಭಿಸಬಹುದು? ಕಮ್ಯೂನಿಕೇಶನ್ ಎಂಬ ತನ್ನ ಪುಸ್ತಕದಲ್ಲಿ ಲಾರಿ ಎಲ್. ಬಾರ್ಕರ್ ಹೇಳುವುದು: “ಸಂಪರ್ಕದಲ್ಲಿ ಅತ್ಯಂತ ಫಲದಾಯಕ ವಿಧವು, ಸಾನುಭೂತಿಯ ಪರಸ್ಪರ ಕಾರ್ಯ. ಸಾನುಭೂತಿ ಎಂದರೆ ಇತರ ಜನರನ್ನು ಆಳವಾಗಿ ಅರ್ಥೈಸಿಕೊಳ್ಳುವುದು, ಅವರ ಯೋಚನೆಗಳನ್ನು ಗುರುತಿಸುವುದು, ಅವರ ಬೇನೆಗಳನ್ನು ಅನುಭವಿಸಿದ ಭಾವನೆ ಮತ್ತು ಅವರ ಸಂತೋಷದಲ್ಲಿ ಸಹಭಾಗಿಗಳಾಗುವುದು.” ಈ ಗುಣವನ್ನು ತೋರಿಸುವುದರಲ್ಲಿ ಅತ್ಯಂತ ಎದ್ದುಕಾಣುವ ಉದಾಹರಣೆ ಯೇಸು ಕ್ರಿಸ್ತನದ್ದು. ತನ್ನ ಮರಣಕ್ಕಾಗಿ ದು:ಖಿಸುತ್ತಿದ್ದ ಶಿಷ್ಯರೊಡನೆ ಅವನೊಮ್ಮೆ ಸಂಭಾಷಣೆಯನ್ನು ಆರಂಭಿಸಿದ್ದನು. ಅವನ ನಿಜ ಗುರುತನ್ನು ಮರೆಮಾಡಿ, ಪುನರುತ್ಥಿತ ಯೇಸು ಕೇಳಿದ್ದು: “ನೀವು ಮಾರ್ಗದಲ್ಲಿ ಹೋಗುತ್ತಾ ಚರ್ಚಿಸಿ ಮಾತಾಡಿಕೊಳ್ಳುವ ಈ ಸಂಗತಿಗಳೇನು?”—ಲೂಕ 24:17.
ಅವರಿಬ್ಬರೂ, ಯೆರೂಸಲೇಮಿನಲ್ಲಿ ಈಗೀಗಲೇ ನಡೆದ ದು:ಖಕರ ಸಂಗತಿಗಳ ಬೆಳವಣಿಗೆಯನ್ನು ಈ “ಪರದೇಶಸ್ಥನಿಗೆ” ತಿಳಿಯದಿರುವದನ್ನು ನೋಡಿ ಆಶ್ಚರ್ಯಪಟ್ಟರು. ಪುನ: ಯೇಸು ಕೇಳುತ್ತಾನೆ: “ಯಾವ ಸಂಗತಿಗಳು?” ಒಂದು ಉತ್ಸಾಹಭರಿತ ಸಂಭಾಷಣೆ ನಡೆಯಿತು ಮತ್ತು ಶಿಷ್ಯರಲ್ಲೊಬ್ಬನು ಅನಂತರ ಅಂದದ್ದು: “ಆತನು ದಾರಿಯಲ್ಲಿ ನಮ್ಮ ಸಂಗಡ ಮಾತಾಡಿದಾಗಲೂ ಗ್ರಂಥಗಳ ಅರ್ಥವನ್ನು ನಮಗೆ ಬಿಚ್ಚಿ ಹೇಳಿದಾಗಲೂ ನಮ್ಮ ಹೃದಯವು ನಮ್ಮಲ್ಲಿ ಕುದಿಯಿತಲ್ಲವೇ? (ಲೂಕ 24:13-32) ಹೌದು, ಉತ್ತಮ ಸಂಭಾಷಣೆಯಲ್ಲಿ ಯೇಸು ಸಂತೋಷಿಸಿದನು, ಯಾಕಂದರೆ ಆತನು ಇತರರಿಗೆ ಆಲಿಸುತ್ತಿದ್ದನು ಮತ್ತು ಅನುಕಂಪವನ್ನು ತೋರಿಸಿದನು.—ಯೋಹಾನ 4:7-26.
ಸಂಭಾಷಣೆ ಆರಂಭಿಸುವಂತೆ ಮಾಡುವದು
ಮೇಲಿನ ಸಂಭಾಷಣೆಯು ಸರಳವಾದ ಒಂದು ಪ್ರಶ್ನೆಯಿಂದ ಆರಂಭಿಸಿದ್ದನ್ನು ಗಮನಿಸಿರಿ. ಸಂಭಾಷಣೆ ಆರಂಭಿಸುವುದಕ್ಕೆ ಪ್ರಶ್ನೆಗಳು ಉತ್ತಮವಾಗಿವೆ. ನಿಮಗೆ ಬಹಳ ಆಸಕ್ತಿ ಇರುವ ಒಂದು ವಿಷಯದ ಮೇಲೆ ಪ್ರಶ್ನೆಯೊಂದನ್ನು ಯೋಚಿಸುವುದು ನಿಮಗೆ ಸಂತೋಷ, ಆದರೆ ಇದು ಯಾವಾಗಲೂ ಒಂದು ಉತ್ತಮ ಸಂಭಾಷಣೆಗೆ ನಡಿಸಲ್ಪಡಲಿಕ್ಕಿಲ್ಲ. ನೆನಪಿನಲ್ಲಿಡಿರಿ, ಬೈಬಲ್ ನಮಗೆ ಎಚ್ಚರಿಸುವದು: “ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹಾ ನೋಡಲಿ.” (ಫಿಲಿಪ್ಪಿ 2:4) ನಿಮ್ಮ ಸಂಗಾತಿಯು ಉತ್ತರಿಸಲು ಸಂತೋಷಿಸುವ ಪ್ರಶ್ನೆಯೊಂದನ್ನು ಯೋಚಿಸುವದೇ, ನಿಮ್ಮಿಂದ ಕೇಳಲ್ಪಟ್ಟಿದೆ. ಹಾಗಂದರೆ ಸಹಾನುಭೂತಿ ಬೇಕು. ನಿಮಗೆ ಆಸಕ್ತಿ ಇಲ್ಲದ ವಿಷಯವೊಂದನ್ನು ನೀವು ಆರಿಸಬಹುದು, ಆದರೆ ಉತ್ಸುಕತೆ ಪ್ರತಿಕ್ರಿಯಿಸುವದರಿಂದ ಮತ್ತು ಕೆಲವೊಂದು ಪ್ರಯೋಜನದಾಯಕ ಸಮಾಚಾರಗಳಿಂದ ನೀವು ಬಹುಮಾನಿಸಲ್ಪಡುವಿರಿ.
ಗ್ರಂಥಕರ್ತ ಲಿಸ್ ಡೊನಾಲ್ಡ್ಸನ್ “ಸಂಭಾಷಣೆಯೊಂದನ್ನು ಆರಂಭಿಸಲು ಹತ್ತು ಸುಲಭ ದಾರಿಗಳನ್ನು” ಪಟ್ಟಿಮಾಡುತ್ತಾನೆ. ಅವನ ಸಲಹೆಗಳಲ್ಲಿ ಏಳು ಪ್ರಶ್ನೆಗಳು ಒಳಗೂಡಿವೆ. ಒಬ್ಬ ವ್ಯಕ್ತಿಯ ಹಿನ್ನೆಲೆಯನ್ನು ವಿಚಾರಿಸುವದು, ಅವನ ಸಲಹೆಗಾಗಿ ಕೇಳುವದು, ಅವನ ಸಹಾಯ, ಅವನ ಅಭಿಪ್ರಾಯ, ಅವನು ಬೆಲೆಕಟ್ಟಿ ಹೇಳುವಂತೆ ಕೇಳುವದು, ಸ್ಥಳೀಯ ಸಂಪ್ರದಾಯಗಳ ಯಾ ಸ್ಥಳೀಯ ಉಪಹಾರಗೃಹಗಳ ಕುರಿತು ಕೇಳುವುದಾಗಿದೆ. ಪ್ರಶ್ನೆ ಏನೇ ಆಗಿರಲಿ, ಅದನ್ನು ಯಥಾರ್ಥತೆಯಿಂದ ಕೇಳತಕ್ಕದ್ದು. ನೀವು ಹೇಗೆ ಆಲಿಸುತ್ತಿದ್ದೀರಿ ಎನ್ನುವುದರ ಕಡೆಗೂ ನೀವು ಗಮನವೀಯತಕ್ಕದ್ದು. (ಲೂಕ 8:18ನ್ನು ಹೋಲಿಸಿರಿ.) ನಿಮ್ಮ ಮನಸ್ಸು ಮತ್ತು ಕಣ್ಣುಗಳನ್ನು ಸಂಚರಿಸಲು ಬೇರೆಡೆಗೆ ಬಿಟ್ಟಿರುವದಾದರೆ, ಉತ್ತರಕೊಡುವವನು ಅವನೇನನ್ನು ಹೇಳಲಿಕ್ಕಿದ್ದಾನೋ ಅದರಲ್ಲಿ ನೀವು ನಿಜವಾಗಿ ಆಸಕ್ತಿ ಉಳ್ಳವರೋ ಎನ್ನುವುದರ ಕುರಿತು ಸಂದೇಹಪಡುವನು.
ಸಂಭಾಷಣೆಯನ್ನು ಆರಂಭಿಸಲು ಡೊನಾಲ್ಸ್ಡನ್ನ ಇನ್ನು ಮೂರು ಸಲಹೆಗಳು: ಸ್ಥಳೀಕ ಘಟನೆಯ ಮೇಲೆ ಹೇಳಿಕೆ ನೀಡುವುದು; ದೃಶ್ಯ ಮುಂತಾದ ನೀವು ಕಂಡ ಹೊಗಳಲು ಯೋಗ್ಯವಾದುದರ ಮೇಲೆ ಮಾತಾಡುವುದು; ಇಲ್ಲವೇ ಅಭಿನಂದಿಸುವುದು. “ಜನರನ್ನು ಅಭಿನಂದಿಸಲು ನೀವು ಸಂಗತಿಗಳನ್ನು ನೋಡುತ್ತಿರುವುದಾದರೆ, ನೀವು ಬಹಳಷ್ಟನ್ನು ಕಂಡುಕೊಳ್ಳುವಿರಿ,” ಎಂದು ಗ್ರಂಥಕರ್ತನು ತನ್ನ ಕನ್ವರ್ಸೇಶನಲ್ ಮ್ಯಾಜಿಕ್ ಪುಸ್ತಕದಲ್ಲಿ ಹೇಳುತ್ತಾನೆ. ಆದರೆ ಒಂದು ಎಚ್ಚರಿಕೆಯನ್ನು ನೀಡುತ್ತಾನೆ: “ನಿಮ್ಮ ಕಪಟದ ಅಭಿನಂದನೆಯನ್ನು ಜನರು ಕಾಣಶಕ್ತರು ಮತ್ತು ಯಥಾರ್ಥನಲ್ಲದ ವ್ಯಕ್ತಿಯೊಡನೆ ಹೆಚ್ಚು ಕಾಲ ಸಂಭಾಷಿಸಲು ಅವರು ಇಚ್ಛೈಸದಿರಬಹುದು.”
ಯಾವುದೇ ಸಂಭಾಷಣಾ “ಕೊಂಡಿ” ಯನ್ನು ನೀವು ಆರಿಸಿದರೂ, ಪಟ್ಟು ಹಿಡಿದ ಪ್ರಯತ್ನ ಸಾಮಾನ್ಯವಾಗಿ ಫಲಿತಾಂಶವನ್ನು ತರುವುದು. ಆರಂಭದಲ್ಲಿ ತಿಳಿಸಿದ ಶರೋನ್ ವಿಷಯ ಗಮನಿಸಿರಿ. ಅವಳೀಗ 22 ವರ್ಷ ವಯಸ್ಸಿನವಳು ಮತ್ತು ಅವಳ ನಾಚುವ ಸ್ವಭಾವದ ಮೇಲೆ ಅವಳು ಗಮನಾರ್ಹವಾದ ಪ್ರಗತಿಯನ್ನು ಮಾಡಿದಳು. ಅವಳ ಭೇಟಿಯಾದ ಎರಡು ವರ್ಷಗಳ ನಂತರ ಅವಳು ಯೆಹೋವನ ಸಾಕ್ಷಿಗಳಲ್ಲಿ ಒಬ್ಬ ಪೂರ್ಣ ಸಮಯದ ಸೇವಕಳಾಗಿದ್ದು, ಅಪರಿಚಿತರನ್ನು ಭೇಟಿಮಾಡಿ ಬೈಬಲ್ ಸಂಭಾಷಣೆಗಳನ್ನು ಆರಂಭಿಸುತ್ತಾ ಒಂದು ವರ್ಷ ಸಾವಿರಕ್ಕಿಂತಲೂ ಹೆಚ್ಚು ತಾಸು ಕಳೆದಳು. ಲೂಕಸ್ ಮತ್ತು ಪಿಯಟರ್ ಕುರಿತಾದರೆ, ವಾಚ್ಟವರ್ ಸೊಸೈಟಿಯ ದಕ್ಷಿಣ ಆಫ್ರಿಕದ ಶಾಖೆಯಲ್ಲಿ ಬೈಬಲ್ ಸಾಹಿತ್ಯ ಉತ್ಪಾದಿಸುವುದರಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಾ ಇದ್ದಾರೆ. ಆದರೆ ಸಂಭಾಷಣೆ ಮಾಡಲು ಒಮ್ಮೆ ಅವರಿಗೆ ಕಷ್ಟವಿತ್ತು ಎಂದು ಈಗ ನಂಬಲು ನಿಮಗೆ ಕಷ್ಟವಾಗಬಹುದು.
ಆದುದರಿಂದ, ಸಂಭಾಷಣೆ ಮಾಡಲು ನಿಮಗೆ ಕಷ್ಟವೆಂದು ನಂಬಲು ಕಾರಣವಿರುವದಾದರೆ, ಬಿಟ್ಟುಬಿಡಬೇಡಿರಿ, ನೀವು ಸ್ವತ: ಸಮಯ ನೀಡಿಕೊಳ್ಳಿರಿ. ಇತರರಿಗೆ ಆಲಿಸಿರಿ. ಪ್ರಚಲಿತ ವಿಷಯಗಳನ್ನು ಅಭ್ಯಾಸಿಸಿ, ಓದಿ, ಕಾಲೋಚಿತ ಸಂಗತಿ ತಿಳಿದವರಾಗಿರಿ. ಸಂಭಾಷಣೆಯ ಕಲೆಯನ್ನು ಬೆಳೆಸುವುದರಿಂದ ನಿಮ್ಮ ಜೀವನವು ಸಮೃದ್ಧಿಯಾಗಿ ಮಾಡುವದು ಮತ್ತು ಇತರರ ಸಂತೋಷಕ್ಕೆ ನಡಿಸುವದು. (g89 5/22)
[ಪುಟ 25 ರಲ್ಲಿರುವಚಿತ್ರ]
ಸಂಭಾಷಣೆಯಲ್ಲಿ ಜತೆಗೂಡಲು ಬುದ್ಧಿಪೂರ್ವಕ ಪ್ರಯತ್ನಮಾಡಿರಿ