ಯುವ ಜನರು ಪ್ರಶ್ನಿಸುವುದು . . .
ನಾನು ಮಂತ್ರತಂತ್ರಗಳನ್ನು ವಿಕೆ ವಿಸರ್ಜಿಸಬೇಕು?
“ನಾನು ನನ್ನ ಅಜ್ಜನಿಗೆ ಬಲು ಮಮತೆಯವಳಾಗಿದ್ದೆ” ಅಂದಳು ಆ ಚಿಕ್ಕ ಹುಡುಗಿ, “ಮತ್ತು ಅಜ್ಜ ಸತ್ತಾಗ ನಾನು ಬಲು ಶೋಕಿತಳಾದೆ. ಅಜ್ಜನೊಂದಿಗೆ ಪುನಃ ಸಂಪರ್ಕ ಬೆಳೆಸುವುದು ಸಾಧ್ಯವೊ ಎಂದು ನಾನು ತಿಳಿಯ ಬಯಸಿದೆ.” ಹೀಗೆ, ಈ ಚಿಕ್ಕ ಹುಡುಗಿ ಮಂತ್ರತಂತ್ರಗಳಲ್ಲಿ ಕೈಹಾಕತೊಡಗಿದಳು.
“ಜರ್ಮನಿಯ ಫೆಡರಲ್ ರಿಪಬ್ಲಿಕಿನಲ್ಲಿ, ಕಡಮೆ ಪಕ್ಷ 2,00,000 ಮಕ್ಕಳು ಮತ್ತು ಯುವಜನರಿಗೆ ಅನೇಕ ವಿಧದ ಮಂತ್ರತಂತ್ರಗಳ ಅನುಭವವಿದೆ” ಎಂದು ಇತ್ತೀಚಿನ ವರದಿಯೊಂದು ವಾದಿಸಿತು. ಜಪಾನಿನ ಶಾಲೆಗಳಲ್ಲಿ ಪ್ರೇತವ್ಯವಹಾರ ಹವ್ಯಾಸಿಗಳ ಒಂದು ಬೆಳೆಯೆ ಇದೆ; ಇವರಲ್ಲಿ ಕೆಲವರು ದೂರ ಮನಸ್ಪರ್ಶನ, ಇನ್ನು ಕೆಲವರು ವಶೀಕರಣ ಸುಪ್ತ ಸ್ಥಿತಿ, ಮತ್ತು ಕೆಲವರು ದೆವ್ವ ಬಿಡಿಸುವಿಕೆಯಲ್ಲಿ ಪ್ರವೀಣತೆ ಪಡೆದಿರುತ್ತಾರೆ. ನೈಜೀರಿಯದಲ್ಲಿ, ಈ ದಿನಗಳಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳೂ ಮಾಟ ಮಾಡುವುದನ್ನು ಕೇಳುವುದು ಅಸಾಮಾನ್ಯವಲ್ಲ. ಮತ್ತು ದುಃಖಕರವಾಗಿ, ಕ್ರೈಸ್ತ ಹೆತ್ತವರು ಬೆಳೆಸಿರುವ ಕೆಲವು ಯುವಜನರೂ, ಪ್ರಾಯಶಃ ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ, ಈ ಅತಿಲೌಕಿಕ ವಿಷಯದೊಂದಿಗೆ ಆಡಿರುತ್ತಾರೆ.
ಈ ಮಂತ್ರತಂತ್ರಗಳು ಯುವಜನರಿಗೆ ಇಷ್ಟೊಂದು ಮೋಹಕವಾಗಿರುವುದೇಕೆ? ಮತ್ತು ಅದರೊಂದಿಗೆ ಬೆರೆಯುವುದು ಅಷ್ಟು ಅಪಾಯಕರವೇಕೆ?
ಅವರು ಸಿಕ್ಕಿಕೊಳ್ಳಲು ಕಾರಣ
ಮಂತ್ರತಂತ್ರಗಳಲ್ಲಿ ಪ್ರಕೃತ್ಯಾತೀತವಾದ ಅಂದರೆ, ಜ್ಯೋತಿಷ, ಕಣಿ, ಮಾಟ, ಮಾಯಾವಿದ್ಯೆ, ಇತ್ಯಾದಿ ವಿಷಯಗಳು ಸೇರಿವೆ. ಮತ್ತು ಇಷ್ಟೊಂದು ಯುವಜನರು ಇಂಥ ವಿಷಯಗಳನ್ನು ಪರೀಕ್ಷಿಸಲು ಆತುರರಾಗಿರುವುದೇಕೆ? ಡರ್ಕ್ ಎಂಬ ಹುಡುಗನಿಗೆ ತನ್ನ ಸತ್ತುಹೋಗಿದ್ದ ತಂದೆಯನ್ನು ಸಂಪರ್ಕಿಸಲು ಮನಸ್ಸಿತ್ತು. ತನ್ನ ಮಾನಸಿಕ ಶಕ್ತಿಯನ್ನು ವಿಕಸಿಸುವಲ್ಲಿ ಇದು ಸಾಧ್ಯವೆಂದು ನಂಬಿದ ಅವನು ಧ್ಯಾನವನ್ನು ಅಭ್ಯಸಿಸುತ್ತಾ ವಸ್ತುಗಳನ್ನು ಸ್ಪರ್ಶಿಸದೆ ಅವು ಚಲಿಸುವಂತೆ ಮಾಡಲು ಪ್ರಯತ್ನಿಸಿದನು. ಇಂಥ ಧ್ಯಾನ ಅವನನ್ನು ಆತ್ಮಲೋಕದ ಹೊಸ್ತಿಲಲ್ಲಿ ತಂದು ನಿಲ್ಲಿಸಿತು, ಅಂದನು ಡರ್ಕ್!
ಇತರ ಯುವ ಜನರು ಭವಿಷ್ಯತ್ತಿಗೆ ಹೆದರುತ್ತಾರೆ. ತಮ್ಮ ಶಾಲಾಶ್ರೇಣಿ ಯಾ ವಿವಾಹ ಪ್ರತೀಕ್ಷೆಯ ಕುರಿತು ಅವರಿಗೆ ಸಲಹೆ ಬೇಕಾಗಿದ್ದು ಪ್ರೇತಲೋಕ ಅವರಿಗೆ ಸಹಾಯ ಮಾಡಬಲ್ಲದೆಂದು ಅವರು ನಂಬುತ್ತಾರೆ. ಸೈತಾನನನ್ನೆ ಆರಾಧಿಸುವ ಪ್ರವೃತ್ತಿ ವಿಶೇಷ ರೀತಿಯಲ್ಲಿ ಮನಸ್ಸನ್ನು ಕಲಕಿಸುತ್ತದೆ! ಈ ಭಯಂಕರ ಧರ್ಮ ಅಷ್ಟು ಹಿಡಿಸುವುದೇಕೆ? ಸೈತಾನತ್ವವನ್ನು ಆಚರಿಸುವ ಒಬ್ಬ ಕೆನೇಡಿಯನ್ ಯುವ ವ್ಯಕ್ತಿ ಹೇಳುವುದು: “ನಾನು ದೊರೆಯುವ ಶಕಿಗ್ತಾಗಿ ಇದರಲ್ಲಿ ಕೈಹಾಕಿದ್ದೇನೆ. ಜನರನ್ನು ನೋಯಿಸಲು ಇದು ನನಗೆ ಶಕ್ತಿ ಕೊಡುತ್ತದೆ.”
ಆದರೆ, ಯುವ ಜನರು ಮಂತ್ರತಂತ್ರಗಳಲ್ಲಿ ಕೈಹಾಕುವ ಮುಖ್ಯ ಕಾರಣ ಅವರ ಕುತೂಹಲವೇ ಎಂದು ಅಧಿಕಾಂಶ ಪರೀಕ್ಷಕರ ನಂಬಿಕೆ. “ನಾನು ತುಂಬ ಕುತೂಹಲವುಳ್ಳವಳಾಗಿದ್ದೆ” ಎಂದಳು, ಮಂತ್ರತಂತ್ರಗಳಲ್ಲಿ ಸಿಕ್ಕಿಕೊಂಡ ಒಬ್ಬ ಹುಡುಗಿ. ಇನ್ನೊಬ್ಬ ಹುಡುಗಿ ಹೀಗೆಂದಳು:“ಮೊದಲು ನನಗೆ ತುಂಬ ಸಂದೇಹವಿತ್ತು. ಆದರೆ, ‘ಅದು ನಿಜವಾಗಿ ಏನೆಂದು ಕಡಮೆ ಪಕ್ಷ ನೋಡಿಯಾದರೂ ಬಿಡುವ’ ಎಂದು ನಾನು ನೆನಸಿದೆ.” ಹೀಗೆ, ಮಂತ್ರತಂತ್ರದ ಒಂದು ಕಾರ್ಯಕ್ರಮಕ್ಕೆ ಹಾಜರಾಗಲು ಒಬ್ಬ ಮಿತ್ರಳಿಂದ ಬಂದ ಕರೆಗೆ ಅವಳು ಒಪ್ಪಿದಳು.
ಕುತೂಹಲದಿಂದ ಪ್ರೇರಿಸಲ್ಪಟ್ಟು, ಕೆಲವು ಯುವ ಜನರು ವೀಜ ಬೋರ್ಡಿಗೆ ಕೈ ಹಾಕುತ್ತಾರೆ ಯಾ ಮೇಲೆ ತಿರುಗಿಸಿದ ಗ್ಲಾಸಿನ ಚಲನೆಯನ್ನು ಅಧ್ಯಯನ ಮಾಡುತ್ತಾರೆ. ಇಲ್ಲಿಂದ ಪ್ರೇತವ್ಯವಹಾರದಲ್ಲಿ ಆಳವಾಗಿ ಮುಳುಗಲು ಅಂದರೆ, ಮಣಿ ವೀಕ್ಷಣ, ಟ್ಯಾರೊ ಇಸ್ಪೀಟೆಲೆ, ಲೋಲಕ, ಚಹಾ ಎಲೆ, ಮತ್ತು ಜಾತಕದ ಪುಸ್ತಕಗಳನ್ನು ಉಪಯೋಗಿಸಲು ಒಂದು ಚಿಕ್ಕ ಹೆಜ್ಜೆಯೆ ಸಾಕು. ಕೆಲವರು ಭವಿಷ್ಯ ಹೇಳುವ ಕಸಬುಳ್ಳವರನ್ನು ಯಾ ಮಂತ್ರ ಚಿಕಿತ್ಸಕರನ್ನೂ ವಿಚಾರಿಸಲು ಆರಂಭಿಸುವುದುಂಟು. ಆದರೆ, ಇಂಥ ಅನೇಕ ಕಸಬುದಾರರು ಮೋಸಗಾರರಾಗಿ ಕಂಡುಬರುತ್ತಾರೆ. ದೃಷ್ಟಾಂತಕ್ಕೆ, ತನ್ನ ಅಂಕಗಳ ಶ್ರೇಣಿಯನ್ನು ಉತ್ತಮಗೊಳಿಸಲು, ಅಲೆಗ್ಸಾಂಡರ್ ಎಂಬವನು ಒಬ್ಬ ಮಂತ್ರ ಚಿಕಿತ್ಸಕನನ್ನು ವಿಚಾರಿಸಿದನು. ಅವನ ಶ್ರೇಣಿ ಉತ್ತಮಗೊಳ್ಳದೆ ಇದ್ದದ್ದು ಮಾತ್ರವಲ್ಲ, ಅವನು ಹಣವನ್ನೂ ಕಳೆದುಕೊಂಡನು. ಅವನ ಹಣವನ್ನು ಆ ಕೃತೃಮಿ ಮಂತ್ರ ಚಿಕಿತ್ಸಕ ಮತ್ತು ಅವನನ್ನು ಶಿಫಾರಸು ಮಾಡಿದ ಮಿತ್ರನೆನಿಸಿಕೊಂಡಿದ್ದವನು ಹಂಚಿಕೊಂಡರು.
ಆದರೆ ಅನೇಕ ಯುವ ಜನರಿಗೆ ಪ್ರೇತ ವ್ಯವಹಾರದಿಂದ ಹಣನಷ್ಟಕ್ಕಿಂತ ಹೆಚ್ಚಿನ ಹಾನಿ ಬಂದೊದಗುತ್ತದೆ.
‘ನಂಬಲಾಗದ ಯಾತನೆ’
“ನನಗೆ ಇದು ಮೊದಲೇ ಗೊತ್ತಿರುತ್ತಿದ್ದರೆ” ಎಂಬ ಪದಸರಣಿ ಅತಿಲೌಕಿಕದೊಂದಿಗೆ ಆಡಿ ವಿಷಾದ ಪಟ್ಟವರ ಮಧ್ಯೆ ಸಾಮಾನ್ಯವಾಗಿ ಕೇಳಿಬರುವ ಮಾತಾಗಿದೆ. ದಕ್ಷಿಣ ಆಫ್ರಿಕದ ಪರ್ಸನಾಲಿಟಿ ಎಂಬ ಪತ್ರಿಕೆ ಹಾಗೆ ಗಮನಿಸಿತು. ಪ್ರತಿನಿಧಿರೂಪದ ಪ್ರಲಾಪ ಹೀಗಿದೆ: “ನಾನು ಅಷ್ಟು ನಿಷ್ಕಾಪಟ್ಯವನ್ನು ತೋರಿಸದೆ ಇರುತ್ತಿದ್ದರೆ. . . . ನಾನು ನಂಬಲಾಗದ ಯಾತನೆ, ಸರ್ವಗಳು, ಭಯಂಕರ ಸ್ವಪ್ನ, ಮತ್ತು ಬೆದರಿಕೆಗಳನ್ನು ಅನುಭವಿಸಿರುವುದು ಮಾತ್ರವಲ್ಲ, ನಾನು ಅದರಿಂದ ಹೊರಬರಲು ಪ್ರಯತ್ನಿಸಿದಾಗ ಇತರ ಸೈತಾನಾರಾಧಕರಿಂದ ಮಾನಸಿಕ ಹಾಗೂ ಶಾರೀರಿಕ ಯಾತನೆಯನ್ನೂ ಅನುಭವಿಸಿದೆ.”
ಜರ್ಮನಿಯಲ್ಲಿ ನಡೆಸಿದ ಅಧ್ಯಾಪಕರ ಸರ್ವೆಯಲ್ಲಿ ಪೂರ್ತಿ 24 ಪ್ರತಿಶತ, ಮಂತ್ರತಂತ್ರಗಳು ವಿದ್ಯಾರ್ಥಿಗಳ ಮೇಲೆ ಬೀರುವ ಕಲಕಿಸುವ ಪ್ರಭಾವವನ್ನು ಗಮನಿಸಿದರು. ಕೆಲವು ವಿದ್ಯಾರ್ಥಿಗಳು ಹಿಂಜರಿಯುವ ಪ್ರವೃತ್ತಿ ಮತ್ತು ಕಲಿಯುವ ಸಮಸ್ಯೆಯುಳ್ಳವರಾಗಿದ್ದು, ಭಯದಿಂದ ಜೀವಿಸಿ, ವ್ಯಾಕುಲ ರೋಗವುಳ್ಳವರೂ, ತಮಗೆ ಮತ್ತು ಇತರರಿಗೆ ಹಾನಿ ಮಾಡುವ ಪ್ರವೃತ್ತಿಯುಳ್ಳವರೂ ಆಗಿದ್ದರು. ಡರ್ಕ್ ಅನೇಕ ವೇಳೆ ನಿದ್ದೆ ಮಾಡುತ್ತಿರಲಿಲ್ಲ. ಅವನು ಜ್ಞಾಪಿಸಿಕೊಳ್ಳುವುದು: “ದೆವ್ವ ಹಿಡಿದವನಾಗುವ ಭಯದಿಂದ ನನಗೆ ಕಣ್ಣು ಮುಚ್ಚಲಿಕ್ಕಾಗುತ್ತಿರಲಿಲ್ಲ. ಪ್ರತಿಯೊಂದು ಸದಿಗ್ದೂ ಬೆಚ್ಚಿಬೀಳುತ್ತಿದ್ದೆ.” ಮೈಕಲ್ ಎಂಬ ಹುಡುಗನೂ ಹಾಗೆಯೆ ತನಗೆ ಕೊಡಲ್ಪಟ್ಟ ಔಷಧವನ್ನು ಕುಡಿದ ನಂತರ “ನಿದ್ರಾರಹಿತ ರಾತ್ರಿ ಮತ್ತು ದೆವ್ವಗಳಿಂದ ಉಪದ್ರವ”ಗಳನ್ನು ಅನುಭವಿಸಿದನು. ಇತರ ವರದಿಗಳು, ಹೀಗೆ ಮಂತ್ರತಂತ್ರಗಳನ್ನು ಆಚರಿಸುವವರಲ್ಲಿ ಅಶುಭಸೂಚಕ ವ್ಯಕ್ತಿತ್ವ ಬದಲಾವಣೆಗಳನ್ನು ವರ್ಣಿಸುತ್ತವೆ. ಒಬ್ಬ ಹುಡುಗಿ, ತಾನು ಇನ್ನು ಮೇಲೆ ಕಪ್ಪು ಉಡುಪನ್ನು ಧರಿಸುತ್ತೇನೆಂದೂ (ತನ್ನ ಕೋಣೆಗೂ ಕಪ್ಪು ಬಣ್ಣ ಬಳೆಯ ಬೇಕೆಂದೂ) ಮತ್ತು ತೆರೆದ ಶವ ಪೆಟ್ಟಿಗೆಯಲ್ಲಿ ಮಲಗುತ್ತೇನೆಂದೂ ಹೇಳಿ ತಾಯಿಯನ್ನು ಗಾಬರಿಗೊಳಿಸಿದಳು!
ಆತ್ಮಲೋಕದ ನಿಜ ನಿವಾಸಿಗಳು
“ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ” ಎಂದು ಶಾಸ್ತ್ರಗಳು ಸ್ಪಷ್ಟಪಡಿಸುತ್ತವೆ. (ಪ್ರಸಂಗಿ 9:5) ಆದುದರಿಂದ, ಆತ್ಮಲೋಕದಲ್ಲಿ ಅಗಲಿದ ಪ್ರಿಯರ ಆತ್ಮಗಳು ವಾಸಿಸುವುದಿಲ್ಲ. ಹಾಗಾದರೆ ಇಂಥ ಭೀತಿ ಹುಟ್ಟಿಸುವ ಅನುಭವಗಳಿಗೆ ಕಾರಣವೇನು? ದುಷ್ಟ ದೆವ್ವಗಳೆ! ಬೈಬಲಿಗನುಸಾರ, ಇವರು ಪಿಶಾಚನಾದ ಸೈತಾನನ ಹಿಂಬಾಲಕರಾದ ದಂಗೆಕೋರ ದೇವದೂತರು. (1 ಪೇತ್ರ 3:19, 20; ಪ್ರಕಟನೆ 12:9) ಅವರಿಗೆ ತಂಟೆಮಾಡುವ ಮತ್ತು ಮಾನವರಿಗೆ ದೇಹಪೆಟ್ಟು ಮಾಡುವ ಇತಿಹಾಸವಿದೆ.
ಲೂಕ 9:42, ದೃಷ್ಟಾಂತಕ್ಕೆ, “ದೆವ್ವವು . . .ನೆಲಕ್ಕೆ ಅಪ್ಪಳಿಸಿ ಬಹಳವಾಗಿ ಒದ್ದಾಡಿಸಿ”ದ ದೆವ್ವ ಹಿಡಿದವನೊಬ್ಬನ ಕುರಿತು ತಿಳಿಸುತ್ತದೆ. ಎಂಥ ಒಂದು ಕ್ರೌರ್ಯಪ್ರಿಯ ಮನೋಭಾವ! ಅಪೊಸ್ತಲರ ಕೃತ್ಯ 19:16ರಲ್ಲಿ, ದೆವ್ವ ಹಿಡಿದವನೊಬ್ಬನು ಏಳು ಮಂದಿ ದೆವ್ವ ಬಿಡಿಸುವವರ ಮೇಲೆ ಮಾಡಿದ ಹಿಂಸಾತ್ಮಕ ಆಕ್ರಮಣದ ಕುರಿತು ಹೇಳುತ್ತದೆ. ಆಧುನಿಕ ದಿನಗಳ ಅನುಭವಗಳು, ದೆವ್ವಗಳು ತಮ್ಮ ಕೆಡುಕಿನ ಮಾರ್ಗಗಳನ್ನು ಲೇಶವೂ ಬದಲಾಯಿಸಿರುವುದಿಲ್ಲ ಎಂದು ಸ್ಪಷ್ಟವಾಗಿಗಿ ತೋರಿಸುತ್ತವೆ.
ಸಂವೇದನಾತೀತ ಗ್ರಹಣಶಕ್ತಿ (ESP), ಜ್ಯೋತಿಷ, ಟ್ಯಾರೊ ಇಸ್ಪೀಟೆಲೆ, ಯಾ ಇನ್ನಾವುದೇ ಮಂತ್ರತಂತ್ರಗಳೊಂದಿಗೆ ಆಡುವವನು ಹೀಗೆ ಭಯಂಕರ ಅನುಭವಗಳಿಗೆ ಬಾಗಿಲು ತೆರೆಯುವವನಾಗಬಹುದು. ಪರ್ಸನಾಲಿಟಿ ಪತ್ರಿಕೆ ಹೇಳಿದ್ದು: “ನಾವು ಮಾತಾಡಿದ [ಮಂತ್ರತಂತ್ರಗಳಲ್ಲಿ ಸಿಕ್ಕಿಕೊಂಡ] ಅನುಭವಸ್ಥರೆಲ್ಲರಲ್ಲಿ ಇದ್ದ ಸಂಬಂಧವಾಹಕವೇನೆಂದರೆ ಅವರು ಗೌರವದ ತೆಳು ಹೊದಿಕೆಯೆಂಬ ಕಾಲುವೆಗಳ ಮೂಲಕ ಸೈತಾನನ ಸುಳಿಗೆ ಹೆಚ್ಚು ಹೆಚ್ಚು ಆಳವಾಗಿ ಸೆಳೆಯಲ್ಪಟ್ಟರು.” ಹೌದು, ಮಂತ್ರತಂತ್ರವು ಸೈತಾನ ಮತ್ತು ದೆವ್ವಗಳನ್ನು ಸಂಪರ್ಕಿಸುವ ಕಲ್ಲಮೆಟ್ಟಲ್ಲಲದೆ ಇನ್ನೇನೂ ಅಲ್ಲ!
‘ಹರಿತವಾದ ಚೂರಿಯ ಮೇಲಿನ ಜೇನು’
ಆದುದರಿಂದ, ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ದೇವರ ನಿಯಮವು ಸಕಲ ವಿಧದ ಪ್ರೇತವ್ಯವಹಾರವನ್ನು ನಿಷೇಧಿಸಿತು. ಅದು ಹೇಳಿದ್ದು: “. . .ಕಣಿ ಹೇಳುವವರು, ಶಕುನ ನೋಡುವವರು, ಯಂತ್ರಮಂತ್ರಗಳನ್ನು ಮಾಡುವವರು, ಮಾಟಗಾರರು, ತಂತ್ರಗಾರರು, ಸತ್ತವರನ್ನು ವಿಚಾರಿಸುವವರು, . . . ಇಂಥವರು ಯಾರೂ ನಿಮ್ಮಲ್ಲಿ ಇರಬಾರದು.”—ಧರ್ಮೋಪದೇಶಕಾಂಡ 18:10, 11.
ಒಂದನೆಯ ಶತಮಾನದ ಕ್ರೈಸ್ತರು ಸಕಲ ದೆವ್ವಸಂಬಂಧವಾದ ಸಾಮಾನು ಸರಂಜಾಮುಗಳನ್ನು ನಾಶಮಾಡಿ ತಮ್ಮನ್ನು ಯಾವುದೇ ಪ್ರೇತವ್ಯವಹಾರ ಸಂಬಂಧದಿಂದ ಶುದ್ಧೀಕರಿಸಿಕೊಂಡರು. (ಅಪೊಸ್ತಲರ ಕೃತ್ಯಗಳು 19:19) ಯೆಹೋವನ ಮಿತ್ರತ್ವವನ್ನು ಬಯಸುವ ಇಂದಿನ ಯುವ ಜನರು ಅಂತೆಯೆ ಮಂತ್ರತಂತ್ರಗಳೊಂದಿಗೆ ಸೇರಿರುವ ಯಾವುದರಿಂದಲೂ ದೂರವಿರುವರು. ಪ್ರೇತವ್ಯವಹಾರದ ವಾಸನೆಯಿರುವ ಎಲ್ಲ ಚಲನ ಚಿತ್ರಗಳು, ಪುಸ್ತಕ, ಕಾಮಿಕ್ ಪುಸ್ತಕಗಳು, ಮತ್ತು ಪ್ರಕಟನೆಯ ಚೀಟಿಗಳು ಇದರಲ್ಲಿ ಸೇರಿರುವುದು. ಒಬ್ಬನ ಸಂಗೀತದ ಆಯ್ಕೆಯೂ ಪರೀಕ್ಷಿಸಲ್ಪಡಬೇಕು. ದೃಷ್ಟಾಂತಕ್ಕೆ, ಹೆವಿ ಮೆಟಲ್ ಮ್ಯೂಸಿಕ್ ಸಂಗೀತವನ್ನು ಪದೇ ಪದೇ ಸೈತಾನಾರಾಧನೆಗೆ ಸಂಬಂಧಕವಾಗಿ ತೋರಿಸಲಾಗಿದೆ.
ಟಿಬೆಟಿನ ಜನರಲ್ಲಿ ಒಂದು ನಾಣ್ಣುಡಿಯಿದೆ: ‘ಹರಿತವಾದ ಚೂರಿಯ ಮೇಲೆ ಕೊಡಲ್ಪಡುವ ಜೇನನ್ನು ಎರಡು ಬಾರಿ ಯೋಚಿಸಿ ಅಂಗೀಕರಿಸಿ.’ ಚೂರಿಯ ಮೇಲಿಂದ ಜೇನನ್ನು ನೆಕ್ಕಲು ಪ್ರಯತ್ನಿಸುವಾಗ ನಿಮ್ಮ ನಾಲಗೆ ನಷ್ಟವಾದೀತು! ಹಾಗೆಯೆ, ಅತಿಲೌಕಿಕ ವಿಷಯಗಳು ನಿಮ್ಮ ಕುತೂಹಲಕ್ಕೆ ಎಷ್ಟೇ ಹಿಡಿಸಲಿ, ಅದು ಮಾರಕ. ಆದುದರಿಂದ, ಮಂತ್ರತಂತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಥವಾ ಅದನ್ನು ಪ್ರೇಕ್ಷಿಸಲು ಸಹ ದೊರೆಯುವ ಆಮಂತ್ರಣವನ್ನು ನಿರಾಕರಿಸಿರಿ. ಹಾನಿಕರವಲ್ಲವೆಂದು ತೋರಬಹುದಾದ ಗ್ಲಾಸ್-ಚಲನೆಯಂಥ ವಿಷಯವೂ ಪ್ರೇತವ್ಯವಹಾರದಲ್ಲಿ ನೀವು ಅಪಾಯಕರವಾಗಿ ಸಿಕ್ಕಿಕೊಳ್ಳುವಂತೆ ನಡೆಸಬಹುದು. ನಿಮಗೆ ಕುತೂಹಲವಿರಬಹುದೆಂಬುದು ನಿಜ. ಕೆಟ್ಟಿರುವ ಆಹಾರವನ್ನು ಸೇವಿಸಿದರೆ ಏನಾಗುತ್ತದೆಂದು ಕೇವಲ ನೋಡುವ ಕಾರಣದಿಂದ ನೀವು ಕೊಳೆತ ಮಾಂಸವನ್ನು ತಿನ್ನುವಿರೊ?
ಡರ್ಕ್, (ಈ ಮೊದಲು ಹೇಳಿರುವವನು) ಮಂತ್ರತಂತ್ರಗಳಿಂದ ತನ್ನನ್ನು ಬಿಡಿಸಿಕೊಳ್ಳಶಕ್ತನಾದನು. ವಾಚ್ ಟವರ್ ಸೊಸೈಟಿಯ ಪ್ರಕಾಶನಗಳ ಸಹಾಯದಿಂದ ಬೈಬಲ್ ಅಧ್ಯಯನ ಮಾಡಿದ ಅವನು ತನ್ನ ಸತ್ತಿದ್ದ ತಂದೆಯ ಕುರಿತ ಸತ್ಯವನ್ನು ತಿಳಿದು, ಪುನರುತ್ಥಾನದ ನಿರೀಕ್ಷೆಯನ್ನು ಕಲಿತನು. (ಕೀರ್ತನೆ 146:4; ಯೋಹಾನ 5:28, 29) ಈ ಸತ್ಯವು ಆತ್ಮಲೋಕದೊಂದಿಗೆ ಸಂಪರ್ಕ ಬೆಳೆಸಲು ಅವನಿಗಿದ್ದ ಸಕಲ ಅಪೇಕ್ಷೆಯಿಂದ ಅವನನ್ನು ವಿಮೋಚಿಸಿತು. (ಯೋಹಾನ 8:32 ಹೋಲಿಸಿ.) ಈಗ ಈ ಡರ್ಕ್ ಎಲ್ಲಿದ್ದಾನೆ? ಅವನು ಯೆಹೋವನ ಸಾಕ್ಷಿಯಾಗಿ, ವಾಚ್ ಟವರ್ ಸೊಸೈಟಿಯ ಮುದ್ರಣಾಲಯಗಳಲ್ಲಿ ಪೂರ್ಣ ಸಮಯದ ಶುಶ್ರೂಷಕನಾಗಿ ಕೆಲಸ ಮಾಡುತ್ತಾನೆ.
ಹೌದು, ಬೈಬಲು ನಮ್ಮ ‘ಆತ್ಮಿಕ ಆವಶ್ಯಕತೆಗಳನ್ನು’ ತೃಪ್ತಿ ಪಡಿಸುತ್ತದೆ. (ಮತ್ತಾಯ 5:3) ಮತ್ತು ದೀರ್ಘಕಾಲದ ದೃಷ್ಟಿಯಲ್ಲಿ ನೋಡುವಾಗ, ಇದು ಒಬ್ಬನು ಅಪಾಯಕರವೂ ಮಾರಕವೂ ಆದ ಮಂತ್ರತಂತ್ರಗಳಲ್ಲಿ ಅನಾರೋಗ್ಯಕರವಾದ ಕುತೂಹಲವನ್ನು ತೃಪ್ತಿಗೊಳಿಸುವುದಕ್ಕಿಂತ ಹೆಚ್ಚು ಪ್ರಯೋಜನಕರವಾಗಿದೆ. (g90 3/8)
[ಪುಟ 21 ರಲ್ಲಿರುವಚಿತ್ರ]
ಮಂತ್ರತಂತ್ರಗಳಲ್ಲಿ ಸಿಕ್ಕಿಕೊಳ್ಳುವಿಕೆಯು ವೀಜ ಬೋರ್ಡ್ ಯಾ ಮೇಲೆ ತಿರುಗಿಸಿದ ಗ್ಲಾಸಿನ ಉಪಯೋಗದಂಥ ಹಾನಿರಹಿತವೆಂದು ತೋರುವ ಆಟದ ಮೂಲಕ ಆರಂಭಗೊಳ್ಳಬಹುದು