ಕಳ್ಳರಿಗೆ ಶಿಕ್ಷೆ ವಿಧಿಸುವ ಮರಗಳು
ಕೆಲವು ದೇಶಗಳಲ್ಲಿ ಕ್ರಿಸ್ಮಸ್ ಆಚರಣೆಗೆ ಕ್ರಿಸ್ಮಸ್ ಮರ ಅತ್ಯಾವಶ್ಯಕವೆಂದು ಎಣಿಸಲ್ಪಟ್ಟರೂ ಮರವನ್ನು ಅಪೇಕ್ಷಿಸುವವರು ಅದಕ್ಕೆ ಹಣ ತೆರಲು ಸಿದ್ಧರಿಲ್ಲ. ಅಮೆರಿಕದ ಅನೇಕ ಹೆದ್ದಾರಿಗಳ ಪಕ್ಕದಲ್ಲಿರುವ ತೋಟ ಮತ್ತು ಭೂದೃಶ್ಯದ ಹಕ್ಕಿನ ದಾರಿಗಳು ಮರ ಕಳ್ಳರಿಂದ ಆಕ್ರಮಿಸಲ್ಪಟ್ಟಿವೆ. ಫರ್, ಸ್ಪೂಸ್ರ್, ಮತ್ತು ಪೈನ್ ಎಂಬ ಮಾದರಿಯ ಮರಗಳನ್ನು ಹುಡುಕುತ್ತಾ ಕಳ್ಳರು, ಯಾರ ಜಮೀನೇ ಆಗಿರಲಿ, ಅವುಗಳನ್ನು ಕಡಿದು ಕೊಂಡೊಯ್ಯುತ್ತಾರೆ.
ಕೆಲವು ರಾಜ್ಯಗಳು ಇದರ ವಿರುದ್ಧ ಹೋರಾಡತೊಡಗಿವೆ. ಕಳೆದ ವರ್ಷದ ಕ್ರಿಸ್ಮಸ್ ಸಮಯಾವಧಿಯಲ್ಲಿ, ಉತ್ತರದ ಅನೇಕ ಪ್ರದೇಶಗಳ ಅಧಿಕಾರಿಗಳು ಮರಗಳಿಗೆ ಒಂದು ವಿಶೇಷ ರಸಾಯನ ಪದಾರ್ಥವನ್ನು ತುಂತುರು ಯಂತ್ರವನ್ನು ಉಪಯೋಗಿಸಿ ಚಿಮುಕಿಸಿದರು. ಹೊರಗಿನ ಚಳಿಯಲ್ಲಿ ಇದನ್ನು ಗಮನಿಸಲಾಗುವುದಿಲ್ಲವಾದರೂ, ಅದು ಕಳ್ಳನ ಬೆಚ್ಚಗೆನ ಕೋಣೆಯೊಳಗೆ ಸುರಕ್ಷಿತವಾಗಿರುವಾಗ, ಆ ರಸಾಯನ ಪದಾರ್ಥ ತನ್ನ ಇರುವಿಕೆಯನ್ನು ತೋರಿಸಿಕೊಳ್ಳುತ್ತದೆ. ದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಗನುಸಾರ, ಅದು “ಗೊಬ್ಬರದ ಕಾರ್ಖಾನೆಯಂತೆ” ನಾರುತ್ತದೆ.
ಕನೆಟಿಕಟ್ ರಾಜ್ಯದ ಮೊನ್ರೊ ವಿಭಾಗದ ಪಾರ್ಕ್ಸ್ ಡೈರೆಕ್ಟರು, ಕಳೆದ ವರ್ಷಗಳಲ್ಲಿ ನೂರಾರು ಮರಗಳು ಕಳ್ಳರಿಂದಾಗಿ ನಷ್ಟವಾದವೆಂದು ಅಂದಾಜು ಮಾಡುತ್ತಾರೆ. ಆದರೆ ನಗರದ ಅಧಿಕಾರಿಗಳು ಸ್ಥಳೀಕ ವೃತ್ತಪತ್ರಕೆಗಳಲ್ಲಿ ನೋಟೀಸುಗಳ ಮೂಲಕ, ಈ ಆಕರ್ಷಕವಾದ ಮರಗಳು ನಿಜವಾಗಿಯೂ ವಾಸನೆಯ ಬಾಂಬುಗಳೆಂದು ಪ್ರಕಟಿಸಿದ ಬಳಿಕ, ಈ ಕಳ್ಳತನ ಕಡಮೆಯಾಗಿದೆ. (g90 12/22)