ಎಚ್ಚರ!ಕ್ಕಾಗಿ ಕೃತಜ್ಞತೆ
ಈ ಪತ್ರಿಕೆಯ ಹೆಚ್ಚೆಚ್ಚು ಓದುಗರು, ಅನೇಕ ವಿಷಯಗಳಲ್ಲಿ ಅವರಿಗೆ ದೊರೆಯುವ ಜ್ಞಾನೋದಯದ ಕಾರಣ ಕೃತಜ್ಞರಾಗಿರುತ್ತಾರೆ. ಫ್ರಾನ್ಸಿನ ದಕ್ಷಿಣ ಭಾಗದಲ್ಲಿ, ಯೆಹೋವನ ಸಾಕ್ಷಿಗಳಾಗಿರುವ ಒಬ್ಬ ದಂಪತಿಗಳು, ಎಚ್ಚರ!ದ ಒಂದು ಪ್ರತಿ ಕೊಡಲ್ಪಟ್ಟಿದ್ದ ಪುರುಷನೊಬ್ಬನಿಂದ ಈ ಕೆಳಗಿನ ಪತ್ರವನ್ನು ಪಡೆದರು.
“ಪ್ರಿಯ ಸರ್ ಮತ್ತು ಮ್ಯಾಡಮ್:
“ಸಾಧ್ಯತೆಯಿರುವ ಪ್ರತಿಯೊಂದು ಸಂದರ್ಭದಲ್ಲಿ ದೇವರ ಕೈಹಾಕುವಿಕೆಯನ್ನು ನೋಡಬೇಕೆಂಬ ನಮ್ಮ ವಿನೋದದ ಕ್ಷುಲ್ಲಕ ವಿಧಗಳನ್ನು ತೃಪ್ತಿಪಡಿಸುವುದಕ್ಕಿಂತ ಹೆಚ್ಚಿನ ಇತರ ವಿಷಯಗಳನ್ನು ದೇವರಿಗೆ ಮಾಡಲಿಕ್ಕಿದೆ ಎಂಬುದನ್ನು ನಾನು ಚೆನ್ನಾಗಿ ಬಲ್ಲೆ. ನಾನೇ ಈ ರೀತಿಯ ಯೋಚನೆಯನ್ನು ಸಮರ್ಥಿಸುವುದಿಲ್ಲವಾದರೂ, ನಾನು ಮನೆ ಬಿಟ್ಟು ಹೋಗುತ್ತಿದ್ದಾಗಲೇ ನಿಮ್ಮ ಬರೋಣವು ಕೇವಲ ಸಹಘಟನೆಗಿಂತ ಹೆಚ್ಚಿನ ಅರ್ಥವುಳ್ಳದ್ದೆಂದು ನನಗೆ ದೃಢತೆಯಿದೆ. ಆಗಸ್ಟ್ 8, 1990ರ ಎಚ್ಚರ!ವನ್ನು ಸ್ವೀಕರಿಸಲು ಮಾತ್ರ ನನಗೆ ಸಮಯವಿತ್ತು. ಇದು ತಪ್ಪುತ್ತಿದ್ದಲ್ಲಿ ಎಷ್ಟು ನಿರಾಶೆಯಾಗುತ್ತಿತ್ತು!
“‘ಮಾನವ ಆಳಿಕೆಯನ್ನು ತಕ್ಕಡಿಗಳಲ್ಲಿ ತೂಗಿ ನೋಡುವುದು’ ಎಂಬ ಲೇಖನಮಾಲೆಯಲ್ಲಿದ್ದ ವಿವೇಕಾತ್ಮಕ ವಿಶೇಷ್ಲಣೆಯು ನನ್ನ ಆಸಕ್ತಿಯನ್ನು ಹಿಡಿದಿಟ್ಟು ನನ್ನನ್ನು ಆಶ್ಚರ್ಯಗೊಳಿಸಿತು. ಈ ಲೇಖನಮಾಲೆ ಪರಿಚಯಿಸಲ್ಪಟ್ಟ ವಿಧವನ್ನು ನಾನು ಬಲವಾಗಿ ಸಮರ್ಥಿಸುತ್ತೇನೆ. . . . ಆದುದರಿಂದ, ನಾನು ಮುಂದಿನ ಎಚ್ಚರ!ದ ಪ್ರತಿಗಳನ್ನು ಪಡೆಯುವಂತೆ ಏರ್ಪಡಿಸಿರೆಂದು ನಿಮ್ಮೊಡನೆ ಕೇಳಿಕೊಳ್ಳಬಹುದೊ? ಈ ಲೇಖನಮಾಲೆಯಲ್ಲಿ ಯಾವುದೂ ತಪ್ಪಿಹೋಗಲು ನನಗೆ ಮನಸ್ಸಿಲ್ಲ.”
ಯೆಹೋವನ ಸಾಕ್ಷಿಗಳು 40 ಲಕ್ಷಕ್ಕೂ ಹೆಚ್ಚಿರುವ ಬೈಬಲ್ ವಿದ್ಯಾರ್ಥಿಗಳ ಒಂದು ಅಂತಾರಾಷ್ಟ್ರೀಯ ಸಂಘಟನೆ. ಜನರು ತಮ್ಮ ಸುತ್ತಲಿನ ಜಗತ್ತಿನ ವಿಷಯ ಮತ್ತು ದೇವರ ವಾಕ್ಯ ಮತ್ತು ಅದರ ನೆರವೇರಿಕೆಯ ವಿಧದ ವಿಷಯ ಹೆಚ್ಚು ಕಲಿಯುವಂತೆ ಸಹಾಯಮಾಡಲು ಅವರು ತಮ್ಮನ್ನು ಮೀಸಲಾಗಿಟ್ಟುಕೊಂಡವರು. ನಿಮಗೆ ಹೆಚ್ಚಿನ ಮಾಹಿತಿ ಯಾ ಉಚಿತ ಮನೆಯ ಬೈಬಲ್ ಅಧ್ಯಯನ ಬೇಕಿರುವಲ್ಲಿ, Watchtower H-58, Old Khandala Road, 410401 Mah., ಯಾ ಪುಟ 5ರಲ್ಲಿ ಕೊಟ್ಟಿರುವ ತಕ್ಕ ವಿಳಾಸಕ್ಕೆ ಬರೆಯಿರಿ. (g92 12/8)