ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 5/8 ಪು. 31
  • ಸ್ವಾತಂತ್ರ್ಯ ವಿಷಯಸೂಚಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸ್ವಾತಂತ್ರ್ಯ ವಿಷಯಸೂಚಿ
  • ಎಚ್ಚರ!—1993
  • ಅನುರೂಪ ಮಾಹಿತಿ
  • ಒಂದು ಸ್ವತಂತ್ರ ಜನಾಂಗ ಆದರೆ ಲೆಕ್ಕತೆರಬೇಕಾದವರು
    ಕಾವಲಿನಬುರುಜು—1992
  • ದೇವ-ದತ್ತ ಸ್ವಾತಂತ್ರ್ಯದ ಉದ್ದೇಶವನ್ನು ವ್ಯರ್ಥಮಾಡಿಕೊಳ್ಳಬೇಡಿರಿ
    ಕಾವಲಿನಬುರುಜು—1992
  • ನಿಜ ಸ್ವಾತಂತ್ರ್ಯದ ದೇವರಾದ ಯೆಹೋವನ ಸೇವೆ ಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಸುಸ್ವಾಗತ “ಸ್ವಾತಂತ್ರ್ಯ ಪ್ರಿಯರು” ಜಿಲ್ಲಾ ಅಧಿವೇಶನಗಳಿಗೆ!
    ಕಾವಲಿನಬುರುಜು—1991
ಇನ್ನಷ್ಟು
ಎಚ್ಚರ!—1993
g93 5/8 ಪು. 31

ಸ್ವಾತಂತ್ರ್ಯ ವಿಷಯಸೂಚಿ

ಯುಎನ್‌ಡಿಪಿ (ವಿಶ್ವ ಸಂಸ್ಥೆಯ ವಿಕಾಸ ಕಾರ್ಯಕ್ರಮ) 88 ವಿಭಿನ್ನ ದೇಶಗಳಲ್ಲಿ ಜನರು ಎಷ್ಟು ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆಂಬುದನ್ನು ಸೂಚಿಸುವ ಒಂದು “ಮಾನವ ಸ್ವಾತಂತ್ರ್ಯ ವಿಷಯಸೂಚಿ”ಯನ್ನು ಪ್ರಕಟಿಸಿತು. ಸಾರ್ವತ್ರಿಕ ಮಾನವ ಹಕ್ಕುಗಳ ಮಸೂದೆಯಲ್ಲಿರುವ 40 ಹಕ್ಕು ಮತ್ತು ಸ್ವಾತಂತ್ರ್ಯಗಳ ಮೇಲೆ ಆಧಾರಿತವಾದ ಈ ಸೂಚಿ ಪ್ರತಿಯೊಂದು ಸ್ವಾತಂತ್ರ್ಯಕ್ಕೆ ಒಂದು ದೇಶಕ್ಕೆ ಒಂದು ಪಾಯಿಂಟನ್ನು ಕೊಡುತ್ತದೆ.

ಯೂರೋಪಿಯನ್‌ ಸಮುದಾಯ ಪ್ರಕಟಪಡಿಸುವ ದ ಕೂರಿಯರ್‌ ಪತ್ರಿಕೆಗನುಸಾರ, ಯುಎನ್‌ಡಿಪಿ ಅಳೆದಿರುವ ಕೆಲವು ಸ್ವಾತಂತ್ರ್ಯಗಳು ಇವೇ: ಶಾಂತತೆಯಿಂದ ಕೂಡಿಬಂದು ಒಡನಾಟ ಮಾಡುವ ಹಕ್ಕು; ಶಾಲೆಗಳಲ್ಲಿ ಧರ್ಮ ಯಾ ಸರಕಾರೀ ಭಾವನಾ ಶಾಸ್ತ್ರಗಳ ನಿರ್ಬಂಧಕ್ಕೊಳಗಾಗುವುದರಿಂದ ಸ್ವಾತಂತ್ರ್ಯ; ಸ್ವತಂತ್ರ ಪುಸ್ತಕ ಪ್ರಕಾಶನಗಳಿಗೆ ಸ್ವಾತಂತ್ರ್ಯ; ವ್ಯಕ್ತಿಪರ ಸೊತ್ತಿನ ನಿರಂಕುಶ ಸ್ವಾಧೀನತೆಯಿಂದ ಸ್ವಾತಂತ್ರ್ಯ; ಮತ್ತು ಯಾವುದೇ ಧರ್ಮವನ್ನು ಆಚರಿಸುವ ವೈಯಕ್ತಿಕ ಹಕ್ಕು. ದೇಶಗಳು ಈ ಅಳತೆಯನ್ನು ಎಷ್ಟರ ಮಟ್ಟಿಗೆ ಮುಟ್ಟಿದವು?

ಯಾವ ದೇಶವೂ 40 ಪಾಯಿಂಟುಗಳನ್ನು ಗೆಲ್ಲಲಿಲ್ಲವಾದರೂ, ಸ್ವೀಡನ್‌ ಮತ್ತು ಡೆನ್ಮಾರ್ಕ್‌ 38 ಪಾಯಿಂಟುಗಳಿಂದ ಅತಿ ಸಮೀಪಕ್ಕೆ ಬಂದವು. ಮತ್ತು ನೆದರ್ಲೆಂಡ್ಸ್‌ 37 ಪಾಯಿಂಟ್‌ಗಳುಳ್ಳದ್ದಾಗಿ ಮೂರನೆಯ ಸ್ಥಾನವನ್ನು ತಲುಪಿತು. ಪಟ್ಟಿಯ ತಳದಲ್ಲಿ ಒಂದು ಯಾ ಎರಡರಷ್ಟೂ ಕಡಮೆ ಪಾಯಿಂಟುಗಳಿದ್ದ ದೇಶಗಳಿದ್ದವು. ಅತಿ ಅಡಿಯಲ್ಲಿದ್ದ ಒಂದು ದೇಶಕ್ಕೆ ಯಾವ ಪಾಯಿಂಟೂ ಕೊಡಲ್ಪಡಲಿಲ್ಲ. ಆದರೆ ಯುಎನ್‌ಡಿಪಿ ವರದಿಯು, “ವಿಷಯಸೂಚಿ 1985ರ ಪರಿಸ್ಥಿತಿಗೆ ಅನ್ವಯಿಸುತ್ತದೆ,” ಎಂಬುದನ್ನು ಗಮನಿಸಬೇಕೆಂದೂ ಅಂದಿನಿಂದ ಲೋಕ ಎಷ್ಟೋ ಹೆಚ್ಚು ಸ್ವಾತಂತ್ರ್ಯವನ್ನು ಪಡೆದಿದೆ ಎಂದೂ ಹೇಳುತ್ತದೆ.

ಇಂಟರ್‌ನ್ಯಾಟ್ಸೊನಾಲ್‌ ಸಾಮೆನ್ವರ್‌ಕಿಂಗ್‌ ಎಂಬ ಡಚ್‌ ಪತ್ರಿಕೆ, “ವಿಕಾಸಶೀಲ ದೇಶಗಳಾದ ಕೋಸ್ಟ ರಿಕ (18ನೆಯ ಸ್ಥಾನ), ಪ್ಯಾಪುವ ನ್ಯೂ ಗಿನಿ (20ನೆಯ ಸ್ಥಾನ), ಮತ್ತು ವೆನೆಸ್ವೇಲ (22ನೆಯ ಸ್ಥಾನ) ಯೂರೋಪಿಯನ್‌ ದೇಶಗಳಾದ ಐರ್ಲೆಂಡ್‌ (23) ಮತ್ತು ಸ್ಪೆಯ್ನ್‌ (24) ಗಳಿಗಿಂತ ಪಟ್ಟಿಯಲ್ಲಿ ಮೇಲಿನ ಪಾಯಿಂಟ್‌ಗಳನ್ನು ಪಡೆದವು.”

ಒಂದು ಸಾಧಾರಣ ನಿಯಮವಾಗಿ, ಸ್ವಾತಂತ್ರ್ಯ ಮತ್ತು ವಿಕಾಸದ ಮಧ್ಯೆ ಸಂಬಂಧವಿದೆ ಎಂದು ವರದಿ ತೀರ್ಮಾನಿಸುತ್ತದೆ. ಹೆಚ್ಚು ಮಟ್ಟದ ಸ್ವಾತಂತ್ರ್ಯವಿರುವ ಬಹುತೇಕ ದೇಶಗಳು ಮಾನವ ವಿಕಾಸದ ಉತ್ತಮ ಮಟ್ಟವನ್ನು ಅನುಭವಿಸುತ್ತವೆಂದು ತೋರಿಬರುವಾಗ, ಕಡಮೆ ಸ್ವಾತಂತ್ರ್ಯವಿರುವ ದೇಶಗಳು ಅನೇಕ ವೇಳೆ ಅಲ್ಪ ವಿಕಾಸದ ಹೊರೆಯನ್ನೂ ಹೊತ್ತುಕೊಂಡಿರುತ್ತವೆ. ಯುಎನ್‌ಡಿಪಿ ವರದಿ ಗಮನಿಸುವುದು: “ಸ್ವಾತಂತ್ರ್ಯವು ಜನರ ಸೃಜನಶೀಲ ಶಕ್ತಿಯನ್ನು ಬಿಡುಗಡೆಮಾಡಿ ಅವರು ತಮಗೂ ತಮ್ಮ ಸಮಾಜಗಳಿಗೂ ಆರ್ಥಿಕ ಸಂದರ್ಭಗಳನ್ನು ವಶಮಾಡಿಕೊಳ್ಳುವಂತೆ ಮಾಡುತ್ತದೆ.”

ಮಾನವ ಸಮಾಜದಲ್ಲಿ ಅಪೇಕ್ಷಣೀಯವಾದ ಗುರಿಗಳೆಂದು ಯುಎನ್‌ಡಿಪಿ ಪಟ್ಟಿ ಮಾಡಿದ 40 ಸ್ವಾತಂತ್ರ್ಯಗಳಲ್ಲಿ ರೋಗ, ವೃದ್ಧಾಪ್ಯ ಮತ್ತು ಮರಣದ ಭ್ರಷ್ಟಗೊಳಿಸುವ ಪರಿಣಾಮದಿಂದ ಸ್ವಾತಂತ್ರ್ಯವು ಸೇರಿರಲಿಲ್ಲವೆಂಬುದು ನಿಶ್ಚಯ. ಇಂಥ ಸ್ವಾತಂತ್ರ್ಯಗಳನ್ನು ದೇವಪುತ್ರನಾದ ಯೇಸು ಕ್ರಿಸ್ತನ ಕೈಗಳಲ್ಲಿರುವ ದೇವರ ರಾಜ್ಯವು ಮಾತ್ರ ಕೊಡಬಲ್ಲದು. “ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಿಂದ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆ”ಯನ್ನು ಪಡೆಯುವುದೆಂದು ಬೈಬಲು ವಾಗ್ದಾನಿಸುತ್ತದೆ.—ರೋಮಾಪುರ 8:21. (g93 2/8)

[ಪುಟ 31 ರಲ್ಲಿರುವ ಚಿತ್ರ]

ಬರ್ಲಿನ್‌ ಗೋಡೆಯ ಮುರಿಯುವಿಕೆ ಪೂರ್ವ ಯೂರೋಪಿನಲ್ಲಿ ಹೆಚ್ಚು ಸ್ವಾತಂತ್ರ್ಯವನ್ನು ಗುರುತಿಸಿತು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ