“ನೀವು ನಿಜವಾಗಿಯೂ ಮಾನವರ ಕುರಿತು ಚಿಂತಿಸುತ್ತೀರಿ”
ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ವಾಚ್ಟವರ್ ಸೊಸೈಟಿಯ ಪ್ರಕಾಶನಗಳ ವಾಚನದಲ್ಲಿ ಆನಂದಿಸುವ ಒಬ್ಬನು ಮಾಡಿದ ತೀರ್ಮಾನವದು. ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕದ ಬಗೆಗೆ ಅವನು ಬರೆಯುವುದು:
“ಈಗ ನಾನು ಅದನ್ನು ಎರಡನೆಯ ಬಾರಿ ಓದುತ್ತಿದ್ದೇನೆ, ಮತ್ತು ಅದು ಎಂದಿಗೂ ಬೇಸರ ಹಿಡಿಸುವ ವಾಚನವೇ ಅಲ್ಲ. ಆ ಪುಸ್ತಕ ಅತಿ ಬೋಧಪ್ರದ ಮಾತ್ರವಲ್ಲ, ವರ್ಣಚಿತ್ರಗಳು ಸಜೀವಸದೃಶವಾಗಿವೆ. ಪ್ರತಿಯೊಂದು ಚಿತ್ರವು ನಾನು ಯೇಸುವಿನ ಸಮಯಗಳಲ್ಲಿ ಜೀವಿಸುತ್ತೇನೆ ಎಂದನಿಸುವಂತೆ ಮಾಡುತ್ತದೆ.
“ದೃಷ್ಟಾಂತಕ್ಕೆ, 45ನೆಯ ಅಧ್ಯಾಯದ ಚಿತ್ರದಲ್ಲಿರುವ ದೆವ್ವ ಹಿಡಿದ ಮನುಷ್ಯನು ಉನ್ಮತ್ತನಂತೆಯೂ ಅಪಾಯಕಾರಿಯಾಗಿಯೂ ತೋರಿಬರುತ್ತಾನೆ. ಆದರೂ ಯೇಸು ಭಯರಹಿತನಾಗಿ ದಡಕ್ಕೆ ಬಂದು ದುಷ್ಟಾತ್ಮಗಳನ್ನು ಬಿಡಿಸುವುದನ್ನು ತೋರಿಸಲಾಗಿದೆ . . .
“ಅಸಹ್ಯತೆಯನ್ನುಂಟು ಮಾಡುವ ಯೆಹೂದಿ ಮುಖಂಡರ ಎಲ್ಲ ಚಿತ್ರಗಳು ಕೌಶಲದ ಕಲೆಗಳು. ಯೇಸುವಿನೊಂದಿಗೆ ವ್ಯವಹರಿಸುವಾಗ ಒಬ್ಬ ವ್ಯಕ್ತಿ ಎಷ್ಟು ಸಿಟ್ಟಿನವನಾಗಿ ತೋರಿಬರಬಲ್ಲನೆಂದೂ, ಆದರೂ ತನ್ನ ಪಾಪಕರ ಮಾರ್ಗಗಳನ್ನು ಬಿಡನೆಂದೂ ಅವು ತೋರಿಸುತ್ತವೆ. ನಾನು ಇನ್ನೂ ಮಾತಾಡುತ್ತಾ ಹೋಗಸಾಧ್ಯವಿದೆ. . . . ನೀವು ನಿಜವಾಗಿಯೂ ಮಾನವರ ಕುರಿತು ಚಿಂತಿಸುತ್ತೀರಿ . . .
“ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಲ್ಲವಾದರೂ ಕಾವಲಿನ ಬುರುಜು ಮತ್ತು ಎಚ್ಚರ!ಗಳನ್ನು ಪಡೆಯುವುದು ನನಗಿಷ್ಟ. ನಾನು ಪ್ರತಿಯೊಂದು ಸಂಚಿಕೆಗೂ ಆತುರದಿಂದ ಕಾಯುತ್ತಿರುತ್ತೇನೆ, ಮತ್ತು ಅದು ಬಂದಾಗ ನನ್ನ ದಿನದ ಟಪ್ಪಾಲಿನಲ್ಲಿ ಅದು ಅತ್ಯುತ್ತಮ ಭಾಗ. ಜೂನ್ 22ರ ಎಚ್ಚರ! ಬಹುಮಾನ ವಿಜೇತವೇ ಸರಿ! ‘ಅನೈತಿಕ ಲೋಕದಲ್ಲಿ ಮಕ್ಕಳನ್ನು ಬೆಳೆಸುವುದು’ ಎಂಬ ಲೇಖನ ಅದಕ್ಕಿಂತ ಹೆಚ್ಚು ಸಮಯೋಚಿತವಾಗಿದ್ದಿರಸಾಧ್ಯವಿಲ್ಲ. . . .
“ನನಗೆ 35 ವರ್ಷ ವಯಸ್ಸು ಮತ್ತು ಈ ಜಗತ್ತು ದೊಡ್ಡ ಉಪದ್ರವಕ್ಕೊಳಗಾಗಿದೆ ಎಂಬುದನ್ನು ನಾನು ಗ್ರಹಿಸಿದ್ದೇನೆ. ನೀವು ಇದ್ದದ್ದನ್ನು ಇದ್ದ ಹಾಗೆಯೂ ದೇವರು ಇದರ ವಿಷಯ ಏನು ಅಭಿಪ್ರಯಿಸುತ್ತಾನೆಂದೂ ಹೇಳುವುದು ನನಗೆ ಸಂತೋಷವನ್ನುಂಟುಮಾಡುತ್ತದೆ.”
ಯೆಹೋವನ ಸಾಕ್ಷಿಗಳು ನಲವತ್ತು ಲಕ್ಷಕ್ಕೂ ಹೆಚ್ಚಿರುವ, ಜನರು ದೇವರ ಉದ್ದೇಶಗಳ ಕುರಿತು ಹೆಚ್ಚು ತಿಳಿಯುವಂತೆ ಸಹಾಯಮಾಡಲಿಕ್ಕಾಗಿ ತಮ್ಮನ್ನು ಮೀಸಲಾಗಿಟ್ಟಿರುವ ಒಂದು ಅಂತಾರಾಷ್ಟ್ರೀಯ ಸಂಘಟನೆಯಾಗಿದ್ದಾರೆ. ನಿಮಗೆ ಹೆಚ್ಚಿನ ಮಾಹಿತಿ ಯಾ ಒಂದು ಉಚಿತ ಬೈಬಲ್ ಅಧ್ಯಯನ ಇಷ್ಟವಿರುವಲ್ಲಿ, Watchtower, H-58, Old Khandala Road, Lonavla, 410 401 Mah., ಅಥವಾ ಪುಟ 5ರಲ್ಲಿ ಕೊಟ್ಟಿರುವ ತಕ್ಕ ವಿಳಾಸಕ್ಕೆ ದಯೆಯಿಟ್ಟು ಬರೆಯಿರಿ.
[ಪುಟ 32 ರಲ್ಲಿರುವ ಚಿತ್ರ]
ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ