ಈ ಧರ್ಮಗಳಲ್ಲಿ ಉತ್ತರವಿದೆಯೋ?
ಗರ್ಭಪಾತ ಪ್ರಶ್ನೆಯ ನೈತಿಕ ಇಕ್ಕಟ್ಟಿನಲ್ಲಿ, ಅನೇಕರು ತಮ್ಮ ಅಧ್ಯಾತ್ಮಿಕ ನಾಯಕರ ಮಾರ್ಗದರ್ಶನವನ್ನು ಹುಡುಕುತ್ತಾರೆ. ಇವರು ಹೇಗೆ ಪ್ರತಿಕ್ರಿಯಿಸುತ್ತಾರೆ?
ಜೀವವು ಗರ್ಭಧಾರಣೆಯಲ್ಲಿ ಆರಂಭವಾಗುತ್ತದೆ ಎಂದು ಕಲಿಸುತ್ತಾ, ಕ್ಯಾತೊಲಿಕ್ ಚರ್ಚು ಗರ್ಭಪಾತದ ವಿರುದ್ಧ ಒಂದು ದೃಢ ಸ್ಥಾನವನ್ನು ತೆಗೆದುಕೊಳ್ಳುತ್ತದೆ. ಕೆಲವು ಪಾದ್ರಿಗಳು ರಾಜಕೀಯವಾಗಿ ಒಳಗೊಂಡಿದ್ದಾರೆ ಮತ್ತು ಗರ್ಭಪಾತದ ಪರವಾಗಿ ಮತವನ್ನು ನೀಡುವ ಕ್ಯಾತೊಲಿಕ್ ರಾಜಕಾರಣಿಗಳನ್ನು ಬಹಿಷ್ಕರಿಸುವಂತೆ ಪೋಪರಿಗೆ ಕರೆನೀಡುತ್ತಾರೆ. ಅಷ್ಟಾದರೂ, ಅನೇಕ ಕ್ಯಾತೊಲಿಕರು ಗರ್ಭಪಾತದ ಪರವಾಗಿ ಇದ್ದಾರೆ ಮತ್ತು ಉದಾರತೆಗಾಗಿ ತಗಾದೆಮಾಡುತ್ತಾರೆ.
ನಲ್ವತ್ತಾರು ಸೇಕಡ ಪಾದ್ರಿಗಳು “ಗರ್ಭಪಾತವು ತಪ್ಪಾಗಿದೆ ಎಂದು ಬೈಬಲು ಕಲಿಸುತ್ತದೆ ಎಂದು ನಂಬುವುದಿಲ್ಲ” ಎಂದು ದ ಪ್ರೆಜ್ಬಿಟಿಯರಿಯನ್ ಚರ್ಚ್ (ಯು. ಎಸ್. ಎ.) ವರದಿಸುತ್ತದೆ. ಚರ್ಚಿನ ಅಧಿಕೃತ ನಿಲುವು ಗರ್ಭಪಾತದ ಪರವಾಗಿದೆ.
ಅದು ‘ಒಂದು ಆಯ್ಕೆಯೋಪಾದಿ ಸುರಕ್ಷಿತ ಕಾನೂನುಬದ್ಧವಾದ ಗರ್ಭಪಾತವನ್ನು ಮತ್ತು ಯಥೋಚಿತ ಕುಟುಂಬ ಯೋಜನೆಯ ಸೇವೆಗಳನ್ನು ಪಡೆಯಲು ಪುರುಷ ಮತ್ತು ಸ್ತ್ರೀಯರ ಹಕ್ಕನ್ನು ಎತ್ತಿಹಿಡಿಯುತ್ತದೆ’ ಎಂದು ಹದಿನಾರನೆಯ ಜನರಲ್ ಸಿನಡ್ ಆಫ್ ದ ಯುನೈಟೆಡ್ ಚರ್ಚ್ ಆಫ್ ಕ್ರೈಸ್ಟ್ ತೀರ್ಮಾನಿಸಿತು.
ಗರ್ಭಪಾತವು “ಬೇರೆ ಎಲ್ಲವು ವಿಫಲಗೊಂಡಾಗ ತೆಗೆದುಕೊಳ್ಳುವಂತಹ ಕಾರ್ಯಪಥವಾಗಿರಬೇಕು” ಎಂದು ದ ಇವ್ಯಾಂಜೆಲಿಕಲ್ ಲುಥರನ್ ಚರ್ಚ್ ನೀತಿಯು ವರದಿಸುವದಾದರೂ; ಗರ್ಭಪಾತವನ್ನು ಒಂದು “ಪಾಪ”ವೆಂದು ಕರೆಯಲು ಯಾ “ಜೀವವು ಗರ್ಭಧಾರಣೆಯಲ್ಲಿ ಆರಂಭವಾಗುತ್ತದೆ” ಎಂದು ಹೇಳಲು ಅದು ನಿರಾಕರಿಸಿತು.
ದ ಸದರ್ನ್ ಬ್ಯಾಪ್ಟಿಸ್ಟ್ ಕನ್ವೆನ್ಷನ್ ಬಲವಾಗಿ ಗರ್ಭಪಾತವಿರೋಧಿಯಾಗಿದೆ. ಆದರೆ ದ ಅಮೆರಿಕನ್ ಬ್ಯಾಪ್ಟಿಸ್ಟ್ ಚರ್ಚ್ ಹೇಳುವುದು: “ಗರ್ಭಪಾತದ ಕುರಿತು ರಾಜ್ಯಕ್ಕೆ ಚರ್ಚಿನ ಸರಿಯಾದ ನೀತಿಯ ಹೇಳಿಕೆಯ ಬಗ್ಗೆ ನಾವು ವಿಭಾಜಿತರಾಗಿದ್ದೇವೆ. ಆದಕಾರಣ, ಗರ್ಭಪಾತದ ಮೇಲೆ ಅವನ ಯಾ ಅವಳ ನಂಬಿಕೆಗಳನ್ನು ಪ್ರತಿಬಿಂಬಿಸುವ ಒಂದು ಸಾರ್ವಜನಿಕ ನೀತಿಯನ್ನು ಪ್ರತಿಪಾದಿಸಲು ಪ್ರತಿಯೊಬ್ಬ ವ್ಯಕ್ತಿಯ ಸ್ವಾತಂತ್ರ್ಯವನ್ನು ನಾವು ಅಂಗೀಕರಿಸುತ್ತೇವೆ.”
ಯೆಹೂದ್ಯ ಮತವು ವಿಭಾಜಿತಗೊಂಡಿದೆ, ಆರ್ತೊಡಾಕ್ಸ್ ಶಾಖೆಯು ಹೆಚ್ಚಾಗಿ ಗರ್ಭಪಾತವಿರೋಧಿಯ ನಿಲುವನ್ನು ತೆಗೆದುಕೊಳ್ಳುತ್ತದೆ, ಆದರೆ ರೀಫಾರ್ಮ್ ಮತ್ತು ಕನ್ಸರ್ವಟಿವ್ ಯೆಹೂದ್ಯರು ಹೆಚ್ಚಾಗಿ ಗರ್ಭಪಾತದ ಪರವಾಗಿ ಪಕ್ಷವನ್ನು ವಹಿಸುತ್ತಾರೆ.
ಇಸ್ಲಾಮ್ ಧರ್ಮವು ಜೀವಿತದ ಪ್ರಥಮ 40 ದಿನಗಳಿಗೆ ಯಾವುದೇ ಕಾರಣಕ್ಕಾಗಿ ಗರ್ಭಪಾತವನ್ನು ಒಪ್ಪುತ್ತದೆ ಆದರೆ ತರುವಾಯ ತಾಯಿಯ ಜೀವಕ್ಕೆ ಒಂದು ಬೆದರಿಕೆಗಾಗಿ ಮಾತ್ರ. ಹ್ಯಾಡಿತ್ ಹೇಳುವದೇನೆಂದರೆ ಭ್ರೂಣವು “40 ದಿನಗಳ ಕಾಲ ಒಂದು ಬೀಜದ ರೂಪದಲ್ಲಿ ಇರುತ್ತದೆ, ಆಮೇಲೆ ಸುಮಾರು 40 ದಿನಗಳು ಅವನೊಂದು ರಕ್ತದ ಹೆಪ್ಪು ಆಗಿದ್ದಾನೆ, ಆಮೇಲೆ ಅದೇ ಸಮಾನ ಸಮಯಕ್ಕಾಗಿ ಮಾಂಸದ ಒಂದು ತುಣುಕಾಗಿರುತ್ತಾನೆ, ಆಮೇಲೆ . . . ಅವನೊಳಗೆ ಜೀವದ ಶ್ವಾಸವನ್ನು ಊದುವ ದೇವದೂತನನ್ನು ಅವನ ಬಳಿಗೆ ಕಳುಹಿಸಲಾಗುತ್ತದೆ.”
ಶಿಂಟೊ ಮತಕ್ಕೆ ಯಾವ ಅಧಿಕೃತ ಸ್ಥಾನವೂ ಇಲ್ಲದೆ ಇದ್ದು, ಅದು ಗರ್ಭಪಾತವನ್ನು ವೈಯಕ್ತಿಕ ಆಯ್ಕೆಗೆ ಬಿಟ್ಟುಬಿಡುತ್ತದೆ.
ಹಿಂದುಗಳು, ಬೌದ್ಧರು, ಮತ್ತು ಸೀಖ್ರು ಜೀವಕ್ಕೆ ಒಂದು ಸಾಮಾನ್ಯವಾದ ಗೌರವವನ್ನು ಕಲಿಸುತ್ತಾರೆ. ಆದರೆ ಅವರು ಪುನರ್ಜನ್ಮವನ್ನು ನಂಬುವದರಿಂದ, ಅವರು ಗರ್ಭಪಾತದ ವಿವಾದಾಂಶದ ಮೇಲೆ ವಾದದಲ್ಲಿ ತೊಡಕು ಮಾಡುವದಿಲ್ಲ; ಗರ್ಭಪಾತವು ಕೇವಲ ಹುಟ್ಟದೆ ಇರುವ ಮಗುವನ್ನು ಇನ್ನೊಂದು ಜೀವಕ್ಕೆ ಕಳುಹಿಸುತ್ತದೆ. (g93 5/22)