ವಿಶೇಷವಾದ ಒಂದು ರೀತಿಯ ನಿಕ್ಷೇಪ ಹುಡುಕುವಿಕೆ
ಹಿಂದಿನ ದಿನಗಳಿಂದಲೂ, ಭೂಮಿಯಲ್ಲಿ ಒಮ್ಮೆ ಅಡಗಿದ್ದಂಥ, ಹೊರಗೆಡವಲ್ಪಟ್ಟ ಸೃಷ್ಟಿಯ ನಿಕ್ಷೇಪಗಳ ಸೌಂದರ್ಯವನ್ನು ಜನರು ಗಣ್ಯಮಾಡಿದ್ದಾರೆ. ಉದಾಹರಣೆಗೆ, ಪ್ರಾಚೀನ ಅರೇಬಿಯದೊಂದಿಗೆ ಸಂಬಂಧಿಸಿದ ಒಂದು ಪ್ರದೇಶವಾದ, ಹವೀಲ, ವರ್ಣರಂಜಿತ ಗೋಮೇಧಿಕ ರತ್ನಗಳಿಗೆ ಪ್ರಸಿದ್ಧವಾಗಿತ್ತು. (ಆದಿಕಾಂಡ 2:11, 12) ಗೋಮೇಧಿಕ ರತ್ನ, ಮಾಣಿಕ್ಯ, ಸ್ಫಟಿಕ, ಪುಷ್ಯರಾಗ, ಮತ್ತು ಇತರ ಅಮೂಲ್ಯವಾದ ಕಲ್ಲುಗಳು—ಒಟ್ಟು 12 ಕಲ್ಲುಗಳು—ಬಂಗಾರದಲ್ಲಿ ಸೇರಿಸಿರುವ ಒಂದು ಕವಚವನ್ನು ಧರಿಸಿದ ಪ್ರಾಚೀನ ಇಸ್ರಾಯೇಲಿನ ಒಬ್ಬ ಮಹಾ ಯಾಜಕನನ್ನು ನೋಡುವ ಒಂದು ದೃಶ್ಯವನ್ನು ಕಲ್ಪಿಸಿಕೊಳ್ಳಿ. ಅದು ಎಂಥ ಒಂದು ದಿಗ್ಭಮ್ರೆಗೊಳಿಸುವ ದೃಶ್ಯವಾಗಿದ್ದಿರಬಹುದು! (ವಿಮೋಚನಕಾಂಡ 28:15-20) ಯೆರೂಸಲೇಮ್ನಲ್ಲಿ ಯೆಹೋವನ ಆರಾಧನೆಗೆ ಸಮರ್ಪಿಸಲ್ಪಟ್ಟ ದೇವಾಲಯವನ್ನು ಕಟ್ಟುವುದರಲ್ಲಿಯೂ ಕೂಡ ಅಮೂಲ್ಯವಾದ ಕಲ್ಲುಗಳ ಮಹಾ ಪ್ರಮಾಣಗಳನ್ನು ಉಪಯೋಗಿಸಲಾಯಿತು. (1 ಪೂರ್ವಕಾಲವೃತ್ತಾಂತ 29:2) ಆ ಅಮೂಲ್ಯವಾದ ಕಲ್ಲುಗಳಲ್ಲಿ ಹೆಚ್ಚಿನವುಗಳನ್ನು ಮಹಾ ಉಜ್ವಲತೆಯನ್ನು ಪಡೆಯಲು ಉಜ್ಜಿದ್ದಿರಬಹುದು. ಸಾವಿರಾರು ವರ್ಷಗಳ ಹಿಂದೆ, ಬಂಡೆಗಳನ್ನು ಉಜ್ಜಲಿಕ್ಕಾಗಿ ಒಂದು ಬೀಸುವ ಕಲ್ಲನ್ನು ನಡೆಸಲು ಜನರು ಸರಳವಾದ ಒಂದು ಕಾಲೊತ್ತು ಯಂತ್ರವನ್ನು ಉಪಯೋಗಿಸುತ್ತಿದ್ದರೆಂದು ಇತ್ತೀಚೆಗಿನ ಭೂಸಂಶೋಧನ ಕಂಡುಹಿಡಿತಗಳು ತೋರಿಸುತ್ತವೆ. ಆದುದರಿಂದ ಬಂಡೆ ಶೇಖರಣೆಯ ನಮ್ಮ ಸದ್ಯದ ದಿನದ ಹವ್ಯಾಸವು ಹೊಸದೇನೂ ಅಲ್ಲ.
ಸಾಧನಸಲಕರಣೆಗಳು ಮತ್ತು ಸ್ಥಳ
‘ಬಂಡೆ ಶೇಖರಣೆಗಾಗಿ ನನಗೆ ಯಾವ ಸಾಧನಸಲಕರಣೆಗಳು ಬೇಕಾಗುವುವು?’ ನೀವು ಕೇಳಬಹುದು. ಒಂದು ತುದಿಯಲ್ಲಿ ಚೌಕವಾಗಿಯೂ ಚಪ್ಪಟೆಯಾಗಿಯೂ ಮತ್ತು ಇನ್ನೊಂದು ತುದಿಯಲ್ಲಿ ಚೂಪಾಗಿರುವ ಕಲ್ಲಿನ ಸುತ್ತಿಗೆಯು ಅಗತ್ಯವಾಗಿದೆ. ನಮೂನೆಗಳನ್ನು ಸುತ್ತಿಡಲು ಕಾಗದ ಮತ್ತು ಅವುಗಳನ್ನು ಹೊರಲು ಒಂದು ಚೀಲವು ಸಾಕಾಗಿರುವುದು. ಗಮನಿಸಿದಿರಾ? ಸಾಧನಸಲಕರಣೆಗಳು ಬೆಲೆಯುಳ್ಳದ್ದಾಗಿಯೇ ಇಲ್ಲ.
‘ಬಂಡೆಗಳಿಗಾಗಿ ನಾನು ಎಲ್ಲಿ ಹುಡುಕಲು ಆರಂಭಿಸಬೇಕು?’ ಎಂದು ನೀವು ಬೆರಗುಗೊಳ್ಳಬಹುದು. ನಿಮ್ಮ ಅನ್ವೇಷಣೆಯನ್ನು ಆರಂಭಿಸಲು ಕಣಿವೆಗಳು ಮತ್ತು ನದೀತಳಗಳು ಉತ್ತಮ ಸ್ಥಳಗಳಾಗಿವೆ. ಯಾಕೆ ಅಲ್ಲಿ? ಯಾಕಂದರೆ ಎತ್ತರವಾದ ಮಟ್ಟಗಳಲ್ಲಿರುವ ದೊಡ್ಡ ಬಂಡೆಗಳಿಂದ ಚೂರು ಚೂರಾದ ಬಂಡೆಗಳ ಅಸಾಮಾನ್ಯವಾದ ತುಂಡುಗಳು, ಬೆಟ್ಟ ಯಾ ಹಳ್ಳದಿಂದ ಉರುಳಿ, ಮಾರ್ಗದಲ್ಲಿ ನಯವಾಗಬಹುದು ಮತ್ತು ಉಜ್ಜಿಸಲ್ಪಡಬಹುದು. ನದಿಗಳು ಸಮುದ್ರವನ್ನು ಸೇರುವ ಸ್ಥಳದಲ್ಲಿ, ನದಿಯ ಉಗಮಕ್ಕೆ ಒಯ್ಯಲ್ಪಟ್ಟ ಬಂಡೆಗಳನ್ನು ಮತ್ತು ಕೆಳಸಮುದ್ರದ ಮರುಳು ದಿಬ್ಬದಿಂದ ಸಮುದ್ರತೀರಕ್ಕೆ ಪ್ರವಾಹ ತಂದು ಹಾಕಿದ ಸಣ್ಣ ಉರುಟು ಕಲ್ಲುಗಳನ್ನು ನೀವು ಕಾಣಸಾಧ್ಯವಿದೆ. ಬಂಡೆ ಶೇಖರಿಸುವವರಿಗೆ ಉತ್ತೇಜಕ ಸಾಧ್ಯತೆಗಳನ್ನು ನೀಡುವ ಇತರ ಸಂಭವನೀಯ ಸ್ಥಳಗಳು, ರಸ್ತೆಗಳನ್ನು ಮಾಡುವುದರಲ್ಲಿ ನೆಲವನ್ನು ತೋಡುವ ಸ್ಥಳಗಳು ಮತ್ತು ಕಲ್ಲು ಗಣಿಗಳ ಹತ್ತಿರವಿರುವ ತೊರೆಯಲ್ಪಟ್ಟ ಪ್ರದೇಶಗಳಾಗಿವೆ. ಆದರೆ ಅಲ್ಲಿ ಜಾಗರೂಕತೆಯಿಂದ ಇರ್ರಿ. ಸಡಿಲವಾದ ಬಂಡೆಯು ಬೀಳಬಹುದೆಂಬ ಗಂಡಾಂತರವು ಯಾವಾಗಲೂ ಇರುತ್ತದೆ. ಕೆಲವೊಂದು ಸ್ಥಳಗಳಲ್ಲಿ, ನಿಮ್ಮ ಅನ್ವೇಷಣೆಯಲ್ಲಿ ತೊಡಗುವ ಮೊದಲು ನಿಮಗೆ ಅನುಮತಿಯನ್ನು ಪಡೆಯುವ ಅಗತ್ಯವಿರಬಹುದು.
ನೀವು ದಕ್ಷಿಣ ಆಫ್ರಿಕ ಅಥವಾ ಬ್ರೆಸೀಲ್ನಲ್ಲಿ ಜೀವಿಸುತ್ತಿರುವುದಾದರೆ, ವಜ್ರದ ಸ್ಫಟಿಕಗಳನ್ನು ಕಂಡುಹಿಡಿಯುವುದರಲ್ಲಿ ನೀವು ಸಫಲರಾಗಬಹುದು. ಮಾಣಿಕ್ಯಗಳು ಮತ್ತು ನೀಲಮಣಿಗಳನ್ನು ಭಾರತ, ಮ್ಯಾನ್ಮಾರ್, ಮತ್ತು ಥೈಲ್ಯಾಂಡ್ಗಳ ನದೀತಳಗಳ ಮತ್ತು ಪಚ್ಚೆಗಳನ್ನು ಕೊಲಂಬಿಯ, ಭಾರತ, ದಕ್ಷಿಣ ಆಫ್ರಿಕ, ಮತ್ತು ಸಿಂಬಾಬೆಯ್ವಲ್ಲಿ ಕಾಣಬಹುದು. ಚೀನಾ ಮತ್ತು ಜಪಾನ್ನಲ್ಲಿ, ರತ್ನಾಭರಣ, ಭೂಷಣ, ಮತ್ತು ಧೂಪಾರತಿಗಳಿಗಾಗಿ ಹಸಿರು ಬಣ್ಣದ ಹರಳು ಮತ್ತು ಸೋಡಿಯಂ ಆಲ್ಯುಮಿನಿಯಂಗಳ ಸಿಲಿಕೇಟ್ ಬಳಹ ಜನಪ್ರಿಯವಾಗಿವೆ. ಹಸಿರು ಬಣ್ಣದ ಹರಳು ಮ್ಯಾನ್ಮಾರ್, ನ್ಯೂ ಸೀಲೆಂಡ್, ಮತ್ತು ಅಲಾಸ್ಕ, ಅಷ್ಟೇ ಅಲ್ಲದೆ ಜಪಾನ್ನಲ್ಲಿಯೂ ಕೂಡ ಸಿಗುತ್ತದೆ.
ಅತ್ಯಂತ ಸುಂದರವಾದ ಅಮೂಲ್ಯಕಲ್ಲುಗಳಲ್ಲಿ ಅಸ್ಫಟಿಕ ಸಿಲಿಕಾದ ಒಂದು ರೂಪವಾದ ಕ್ಷೀರ ಸ್ಫಟಿಕ ಒಂದಾಗಿದೆ. ಆಸ್ಟ್ರೇಲಿಯ ಮತ್ತು ಮೆಕ್ಸಿಕೊಗಳಲ್ಲಿ ಸಿಗುವ ಕ್ಷೀರ ಸ್ಫಟಿಕಗಳಿಗೆ ದಿಗ್ಭಮ್ರೆಗೊಳಿಸುವ ಬಣ್ಣಗಳ ವಿವಿಧತೆ—ಜ್ವಲಿಸುವ ಕೆಂಪು, ಹಳದಿ, ಹಸಿರು, ಮತ್ತು ನೀಲಿ ಬಣ್ಣಗಳು ಇರುತ್ತವೆ. ಕ್ಷೀರ ಸ್ಫಟಿಕಗಳು ಸಂಬಂಧಸೂಚಕವಾಗಿ ಮೃದುವಾಗಿವೆ ಮತ್ತು ಉಜ್ಜಲ್ಪಟ್ಟಾಗ, ಪರಚುವಿಕೆಯನ್ನು ತಡೆಯಲು ಸಿಲಿಕಾನ್ ಡಯಾಕ್ಸೈಡ್ ರಚನೆಯ ಕ್ವಾರ್ಟ್ಸ್ನ ಒಂದು ತೆಳು ಪದರಿನಿಂದ ಅವುಗಳನ್ನು ಅನೇಕ ವೇಳೆ ಮುಚ್ಚಲಾಗುತ್ತದೆ.
ಅಕುಶಲಿಗಳಿಗಾಗಿ ಸಾಮಾಗ್ರಿ
ಈ ತರದ ಕಲ್ಲುಗಳು ಪರಿಣಿತರಿಗಾಗಿ ಸಾಮಾಗ್ರಿಯಾಗಿವೆ ಮತ್ತು ಅಕುಶಲಿಗಳಿಗಾಗಿ ಅಸಂಭವ ಕಂಡುಹಿಡಿತಗಳಾಗಿವೆ. ಕ್ವಾರ್ಟ್ಸ್ ಆದರೊ, ಬಹಳ ಪ್ರಮಾಣದಲ್ಲಿರುತ್ತದೆ ಮತ್ತು ಕಂಡುಹಿಡಿಯಲು ಸುಲಭವಾಗಿರುತ್ತದೆ. ಬಂಡೆಗಳನ್ನು ನಿರ್ಮಿಸುವ ಎಲ್ಲಾ ಖನಿಜಗಳಲ್ಲಿ ಅದು ಬಹಳ ಸಾಮಾನ್ಯವಾಗಿದೆ ಮತ್ತು ಮೂರು ಮುಖ್ಯವಾದ ಬಂಡೆಯ ಬಗೆಗಳಲ್ಲಿ ಸಿಗುತ್ತದೆ. ನೀವು ಒಂದು ನಮೂನೆಯ ಕ್ವಾರ್ಟ್ಸ್ನ್ನು ಪಾರದರ್ಶಕವಾಗಿ ಕಾಣಬಹುದು, ಬೇರೆಯವುಗಳಾದರೊ ಪ್ರಕಾಶಭೇದ್ಯವಾಗಿ ಅಥವಾ ಅಪಾರದರ್ಶಕವಾಗಿಯೂ ಕೂಡ ಇರಬಹುದು. ಕೆಂಪು, ಹಳದಿ, ಕೆನ್ನೀಲಿ, ಹಸಿರು, ಯಾ ಕಂದು ಬಣ್ಣದ ಗುರುತುಗಳಿಂದ ಕೆಲವು ಬಣ್ಣಿಸಲ್ಪಟ್ಟಿವೆ. ನಿಸ್ಸಂದೇಹವಾಗಿ, ಕ್ವಾರ್ಟ್ಸ್ಗಾಗಿ ಹುಡುಕುವುದರ ಜೊತೆಗೆ, ಆಸಕ್ತಿಕರವಾದ ಬಣ್ಣ ಯಾ ಗುರುತುಗಳಿರುವ ಯಾವುದೇ ಬಂಡೆಯ ಚೂರನ್ನು ನೀವು ಶೇಖರಿಸಬಹುದು. ಮತ್ತು ಕಲ್ಲನ್ನು ಉಜ್ಜಿಯಾದ ಮೇಲೆ, ಅದರ ಸೌಂದರ್ಯದಿಂದ ನೀವು ಸಂತೋಷಕರವಾಗಿ ಆಶ್ಚರ್ಯಗೊಳ್ಳಬಹುದು ಮತ್ತು ಅದನ್ನು ಅಲಂಕಾರಿಕ ರತ್ನಾಭರಣವಾಗಿ, ಕಪಾಟಿನ ಮೇಲೆ ಪ್ರದರ್ಶಿಸಲಿಕ್ಕಾಗಿರುವ ಒಂದು ಮಾದರಿ ವಸ್ತುವಾಗಿ, ಅಥವಾ ನಿಮ್ಮ ತೋಟದಲ್ಲಿರುವ ಚಿಕ್ಕ ಬಂಡೆಯ ಪರ್ವತದ ಒಂದು ಭಾಗವಾಗಿ ಉಪಯೋಗಿಸಲು ನೀವು ಬಯಸಬಹುದು.
ಬೇಕಾದಷ್ಟು ಬಂಡೆಗಳ ಚೂರುಗಳನ್ನು ಶೇಖರಿಸಿಯಾದ ಮೇಲೆ, ನಿಮಗೆ ಉಜ್ಜುವ ವಿಧಾನಗಳ ಕುರಿತು ಸ್ವಲ್ಪ ತಿಳಿದುಕೊಳ್ಳುವ ಅಗತ್ಯವಿದೆ. ಅಪಘರ್ಷಕ ಕಲ್ಲಿನ ಕಣಗಳು ಮತ್ತು ವಿದ್ಯುತ್ತಿನ ಮೋಟಾರಿನ ಮೂಲಕ ಚಲಿಸುವ ಪೊಳ್ಳಾದ ಸುತ್ತುವ ಡ್ರಮ್ಮಿನೊಳಗೆ ನೀರಿನಲ್ಲಿ, ಕಲ್ಲುಗಳನ್ನು ಬೀಳಿಸುವುದನ್ನು ಕೆಲವು ಬಂಡೆ ಶೇಖರಿಸುವವರ ಕ್ಲಬ್ಗಳು ಸೂಚಿಸುತ್ತವೆ. ಮೊದಲು ಒರಟಾದ ಕಲ್ಲಿನ ಕಣಗಳಿಂದ, ಆಮೇಲೆ ನಯವಾದ ಅಪಘರ್ಷಕಗಳಿಂದ, ಮತ್ತು ಕೊನೆಗೆ ಉಜ್ಜುವ ಪೌಡರ್ನಿಂದ ಉಜ್ಜುವದರಿಂದ ಇದು ಅನೇಕ ವೇಳೆ ತಾಳ್ಮೆಯನ್ನು ಮತ್ತು ಸಮಯವನ್ನು, ಪ್ರಾಯಶಃ ವಾರಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಪರಿಣಾಮಗಳು ಪ್ರಯತ್ನಕ್ಕೆ ಅರ್ಹವಾಗಿ ಇವೆ.
ಬೇರೆ ರೀತಿಯ ಕಲ್ಲುಗಳು
ಬಂಡೆ ಶೇಖರಣೆಯು ಸಣ್ಣ ಚೂರುಗಳಿಗೆ ಮಾತ್ರ ಸೀಮಿತವಾಗಿಲ್ಲ. ಜಪಾನ್ನಲ್ಲಿ ದೊಡ್ಡ ಬಂಡೆಗಳನ್ನು ಚಿತ್ರತೋಟಗಾರಿಕೆಯಲ್ಲಿ ವಿಸ್ತಾರವಾಗಿ ಉಪಯೋಗಿಸಲಾಗಿದೆ. ಇವು ವಿಸ್ಮಯಕರವಾಗಿ ಬೆಲೆಯುಳ್ಳದ್ದಾಗಿರಬಲ್ಲವು. ಉದಾಹರಣೆಗೆ, 700 ಕಿಲೋಗ್ರಾಮ ತೂಕವಿದ್ದ ಕೆಂಪು ಬಣ್ಣದ ಒಂದು ಕಲ್ಲಿನ ಚೂರಿಗಾಗಿ 2,300 ಡಾಲರುಗಳಿಗಿಂತಲೂ ಹೆಚ್ಚಾಗಿ ಬೆಲೆಕಟ್ಟಲಾಗಿತ್ತು. ಇಷ್ಟು ದುಬಾರಿ ಯಾಕೆ? ಮೌಲ್ಯವು ಅದರ ಆಕೃತಿಯ ಸ್ವಾಭಾವಿಕವಾದ ಸೌಂದರ್ಯದಲ್ಲಿದೆ. ಈ ಕಲ್ಲಿನ ಮೇಲ್ಭಾಗದ ಹತ್ತಿರ ಬಟ್ಟಲು ಆಕಾರದ ರಚನೆಯಿಂದ ನೀರಿನ ಒಂದು ಹೊಳೆ ಹರಿದು, ಬುಡಕ್ಕೆ ಸಣ್ಣ ಆಕಾರದ ಜಲಪಾತಗಳ ಒಂದು ಶ್ರೇಣಿಯಲ್ಲಿ ಬೀಳುವಂತೆ ನೀವು ಏರ್ಪಡಿಸಬಹುದು.
ಬಂಡೆ ಹುಡುಕುವಿಕೆಗೆ ಈಗ ಹೋಗಲು ನೀವು ಉತ್ತೇಜಿತರಾಗಿದ್ದೀರೊ? ಹಾಗಿರುವುದಾದರೆ, ಆಶಾಜನಕವಾಗಿ ನೀವು ವಿಶೇಷವಾದ ಒಂದು ನಿಕ್ಷೇಪವನ್ನು ಕಂಡುಕೊಳ್ಳುವಿರಿ—ದತ್ತಲೇಖನ. (g93 7/8)