ಬೈಬಲಿನ ದೃಷ್ಟಿಕೋನ
ಯೆಹೋವನು ಒಬ್ಬ ಯುದ್ಧ ದೇವರೋ?
ಕೆಲವು ಬೈಬಲ್ ವಾಚಕರು ಯೆಹೋವನು ಒಬ್ಬ ಯುದ್ಧ ದೇವರಾಗಿದ್ದಾನೆಂದು, ಮತ್ತು ಅದರಲ್ಲೂ ಒಬ್ಬ ರಕ್ತಪಿಪಾಸುವಾಗಿದ್ದಾನೆಂದು ಬಹುಕಾಲದಿಂದ ಆರೋಪಿಸಿದ್ದಾರೆ. ಉದಾಹರಣೆಗೆ, ಬೈಬಲಿನ ದೇವರಾದ ಯೆಹೋವನು, “ಸುಲಿಗೆಗಾರರ ದೇವರೂ, ಚಿತ್ರಹಿಂಸಕರ ದೇವರೂ, ಯುದ್ಧ ಯೋಧರ ದೇವರೂ, ವಿಜಯದ ದೇವರೂ, ಎಲ್ಲಾ ರೀತಿಯ ಘೋರ ಕೃತ್ಯಗಳ ದೇವರೂ ಆಗಿದ್ದಾನೆ,” ಎಂದು ಜಾರ್ಜ್ ಎ. ದೋರ್‌ಸಿ, ನಾಗರಿಕತೆಯ ಕಥೆ—ಮಾನವ ಕುಲದ ಸ್ವ ಸಾಧನೆಗಳು (ದ ಸ್ಟೋರಿ ಆಫ್ ಸಿವಿಲೈಜೇಷನ್—ಮ್ಯಾನ್ಸ್ ಓನ್ ಶೋ) ಎಂಬ ಅವನ ಪುಸ್ತಕದಲ್ಲಿ, ವಾದಿಸುತ್ತಾನೆ. ಬೈಬಲಿನ ವಿಮರ್ಶಕ ರೋಲೆಂಡ್ ಏಚ್. ಬೆನ್‌ಟನ್ ನಾಟುವಂತೆ ಅಂದದ್ದು: “ದೇವರು ಅದರಲ್ಲಿ ಭಾಗವಹಿಸದಿರುವಾಗ ಯುದ್ಧವು ಹೆಚ್ಚು ದಯಾಪರವಾಗಿರುತ್ತದೆ.”
ನಿಜವಾಗಿಯೂ ಯೆಹೋವನು ಒಬ್ಬ ಯುದ್ಧ ದೇವರಾಗಿದ್ದಾನೊ? ಕೆಲವರು ಸೂಚಿಸುವಂತೆ, ಆತನು ಮುಗ್ಧ ಜನರನ್ನು ಸಂಹಾರಮಾಡುವುದರಲ್ಲಿ ನಿಜಕ್ಕೂ ಆನಂದಿಸುತ್ತಾನೊ?
ಗತ ನ್ಯಾಯತೀರ್ಪುಗಳು
ಯೆಹೋವ ದೇವರ ಗತಕಾಲದ ಪ್ರತಿಕೂಲ ನ್ಯಾಯತೀರ್ಪುಗಳನ್ನು ಬೈಬಲು ಮುಚ್ಚುಮರೆಯಿಲ್ಲದೆ ವಿವರಿಸುತ್ತದೆ ನಿಜ. ಆದರೂ, ಅವುಗಳು ಯಾವಾಗಲೂ ದೈವಭಕ್ತಿಯಿಲ್ಲದ ಜನರ ವಿರುದ್ಧವಾದ ನ್ಯಾಯತೀರ್ಪುಗಳಾಗಿದ್ದವು. ಉದಾಹರಣೆಗೆ, ನೋಹನ ದಿನದ ಭೂಮಿಯು “ಅನ್ಯಾಯದಿಂದ ತುಂಬಿ”ಕೊಂಡಾಗಲೇ ಯೆಹೋವನು “ನಾನಂತೂ ಭೂಮಿಯ ಮೇಲೆ ಜಲಪ್ರಳಯವನ್ನು ಬರಮಾಡಿ ಆಕಾಶದ ಕೆಳಗಿರುವ ಸಕಲ ಪ್ರಾಣಿಗಳನ್ನೂ ಅಳಿಸಿಬಿಡುವೆನು; ಭೂಮಿಯಲ್ಲಿರುವ ಸಮಸ್ತವೂ ಲಯವಾಗುವುದು,” ಎಂದು ಹೇಳಿದನು. (ಆದಿಕಾಂಡ 6:11, 17) ಇನ್ನೊಂದು ನ್ಯಾಯತೀರ್ಪಿನ ಕುರಿತು, ಸೊದೋಮ್ ಮತ್ತು ಗೊಮೋರ ಪಟ್ಟಣಗಳವರು “ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು ಸ್ವಭಾವವಿರುದ್ಧವಾದ ಭೋಗವನ್ನು ಅನುಸರಿಸಿದರ್ದಿಂದ” “ಅಗ್ನಿಗಂಧಕಗಳನ್ನು ಸುರಿಸುವ” ಮೂಲಕ ದೇವರು ಆ ಪಟ್ಟಣಗಳು ಹಾಳಾಗುವಂತೆ ಮಾಡಿದನು.—ಯೂದ 7, ದ ನ್ಯೂ ಬರ್ಕ್‌ಲಿ ವರ್ಷನ್; ಆದಿಕಾಂಡ 19:24.
ನೋಹನ ದಿನದಲ್ಲಿ ಸಕಲ ಪ್ರಾಣಿಗಳನ್ನು ಅಳಿಸಿಬಿಡುವದರಲ್ಲಿ ದೇವರು ಆನಂದಿಸಿದನೊ? ಅಥವಾ ಸೊದೋಮ್ ಮತ್ತು ಗೊಮೋರ ಪಟ್ಟಣಗಳ ನಿವಾಸಿಗಳನ್ನು ನಾಶಮಾಡುವುದರಿಂದ ಅಮಾನುಷ ಆನಂದವನ್ನು ಆತನು ಕಂಡುಕೊಂಡನೊ? ಇವುಗಳ ಉತ್ತರಕ್ಕಾಗಿ, ನೋಹನ ದಿನದ ಜಲಪ್ರಳಯವನ್ನು ಸುತ್ತುವರಿದ ಘಟನೆಗಳ ಕಡೆಗೆ ನಾವು ದೃಷ್ಟಿ ಹರಿಸೋಣ. ಬಲಾತ್ಕಾರದಿಂದ ತುಂಬಿದ್ದ ಭೂಮಿಯನ್ನು ಶುದ್ಧಮಾಡಲಿಕ್ಕಾಗಿ ಭೂಮಿಯಲ್ಲಿರುವ ದುಷ್ಟ ಮಾನವಕುಲವನ್ನು ದೇವರು ಅಳಿಸಿಬಿಡುವನೆಂದು ಹೇಳಿದ ಅನಂತರ, ಬೈಬಲ್ ಅನ್ನುವುದು: “ಯೆಹೋವನು . . . ತನ್ನ ಹೃದಯದಲ್ಲಿ ನೊಂದುಕೊಂಡನು.” ಹೌದು, “[ಮನುಷ್ಯರ] ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿರುವದು,” ದೇವರಿಗೆ ದುಃಖವನ್ನುಂಟುಮಾಡಿತ್ತು. ಆದುದರಿಂದ, ಸಂಭವಿಸಲಿಕ್ಕಿರುವ ಜಲಪ್ರಳಯದಿಂದ ಸಾಧ್ಯವಾದಷ್ಟು ಮಂದಿಯನ್ನು ರಕ್ಷಿಸಲಿಕ್ಕಾಗಿ, ಒಂದು ಎಚ್ಚರಿಕೆಯ ಸಂದೇಶವನ್ನು ಸಾರಲಿಕ್ಕಾಗಿ ಮತ್ತು ಸುರಕ್ಷೆಗಾಗಿ ನಾವೆಯೊಂದನ್ನು ಕಟಲ್ಟಿಕ್ಕಾಗಿ, ದೇವರು “ಸುನೀತಿಯನ್ನು ಸಾರುವವನಾಗಿದ್ದ,” ನೋಹನನ್ನು ಕಳುಹಿಸಿದನು.—ಆದಿಕಾಂಡ 6:3-18; 2 ಪೇತ್ರ 2:5.
ತದ್ರೀತಿಯಲ್ಲಿ, ಸೊದೋಮ್ ಮತ್ತು ಗೊಮೋರ ಪಟ್ಟಣಗಳನ್ನು ನಾಶಮಾಡಲಿಕ್ಕಾಗಿ ದೇವದೂತರನ್ನು ಕಳುಹಿಸುವುದಕ್ಕೆ ಮೊದಲು, ದೇವರು ಅಂದದ್ದು: “ನಾನು ಇಳಿದು ಹೋಗಿ ನನಗೆ ಮುಟ್ಟಿದ ಮೊರೆಯಂತೆಯೇ ಅವರು ಮಾಡಿದರೋ ಇಲ್ಲವೋ ಎಂದು ನೋಡಿ ತಿಳುಕೊಳ್ಳುತ್ತೇನೆ.” (ಆದಿಕಾಂಡ 18:20-32, ದ ಜೆರೂಸಲೇಮ್ ಬೈಬಲ್) ತನ್ನ ಹುಡುಕುವಿಕೆಯು ಕೇವಲ ಹತ್ತು ಮಂದಿ ನೀತಿವಂತರನ್ನು ಕಂಡುಕೊಳ್ಳುವುದಾದರೂ, ಆ ಪಟ್ಟಣಗಳು ಉಳಿಸಲ್ಪಡುವವೆಂದು ಯೆಹೋವನು ಅಬ್ರಹಾಮನಿಗೆ (ಅವನ ಸೋದರಳಿಯ ಲೋಟನು ಸೊದೋಮಿನಲ್ಲಿ ವಾಸಿಸುತ್ತಿದ್ದನು) ಭರವಸೆ ನೀಡಿದನು. ರಕ್ತಪಾತಮಾಡುವುದರಲ್ಲಿ ಆನಂದಿಸುವ ದೇವರೊಬ್ಬನಿಗೆ ಅಂತಹ ಕರುಣೆಯುಳ್ಳ ಆಸಕ್ತಿಯಿರುವುದೋ? ಅದಕ್ಕೆ ಪ್ರತಿಯಾಗಿ, ಯೆಹೋವನ ವ್ಯಕ್ತಿತ್ವದ ಪ್ರಧಾನ ವೈಶಿಷ್ಟ್ಯಗಳಲ್ಲಿ ಒಂದು ಕರುಣೆಯಾಗಿದೆ ಎಂದು ನಾವು ಹೇಳಲಾರೆವೊ? (ವಿಮೋಚನಕಾಂಡ 34:6) ಆತನು ತಾನೇ ಅಂದದ್ದು: “ದುಷ್ಟನ ಸಾವಿನಲ್ಲಿ ನನಗೆ ಲೇಶವಾದರೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವದೇ ನನಗೆ ಸಂತೋಷ.”—ಯೆಹೆಜ್ಕೇಲ 33:11.
ದುಷ್ಟ ಜನರು ದುರ್ಮಾರ್ಗವನ್ನು ತ್ಯಜಿಸಲು ದೃಢವಾಗಿ ನಿರಾಕರಿಸಿದ ಕಾರಣದಿಂದಾಗಿ ದೇವರಿಂದ ಪ್ರತಿಕೂಲ ನ್ಯಾಯತೀರ್ಪುಗಳು ಯಾವಾಗಲೂ ಕೊಡಲ್ಪಡುತ್ತಿದ್ದವೇ ವಿನಾ, ಯೆಹೋವನು ಜನರನ್ನು ಕೊಲ್ಲುವುದರಲ್ಲಿ ಆನಂದಿಸುತ್ತಾನೆಂಬ ಕಾರಣಕ್ಕಾಗಿ ಅಲ್ಲ. ಆದರೆ ‘ಇಸ್ರಾಯೇಲ್ಯರು ಕಾನಾನ್ಯರೊಂದಿಗೆ ಯುದ್ಧ ಮಾಡುವಂತೆ ಮತ್ತು ಅವರನ್ನು ಸಂಹರಿಸುವಂತೆ ಯೆಹೋವನು ಪ್ರೋತ್ಸಾಹಿಸಲಿಲ್ಲವೊ?’ ಎಂದು ನೀವು ಕುತೂಹಲಪಡಬಹುದು.
ಶಾಂತಿಗಾಗಿ ದೇವರ ಯುದ್ಧಗಳು ಆವಶ್ಯಕವಾಗಿದ್ದವು
ಇತಿಹಾಸವು ಕಾನಾನ್ಯರ ಜೀವನದ ಕುರಿತಾದ ಒಂದು ತುಚ್ಛ ಚಿತ್ರಣವನ್ನು ವರ್ಣಿಸುತ್ತದೆ—ಅವರು ವಿಪರೀತವಾಗಿ ದುಷ್ಟರಾಗಿದ್ದರು. ಪ್ರೇತಾರಾಧನೆ, ಮಕ್ಕಳ ಬಲಿ, ಕಾಮವಿಕಾರವಾದ ಹಿಂಸಾಚಾರ, ಮತ್ತು ವಿವಿಧ ರೀತಿಯ ವಕ್ರ ಲಿಂಗಾರಾಧನೆಗಳು ಚಾಲ್ತಿಯಲಿದ್ಲವ್ದು. ನ್ಯಾಯವಂತನಾದ ಒಬ್ಬ ದೇವರೋಪಾದಿ ಸಂಪೂರ್ಣ ಭಕ್ತಿಯನ್ನು ಒತ್ತಾಯ ಪಡಿಸುವ ಯೆಹೋವನು ಇಂತಹ ಅಸಹ್ಯಕರ ಆಚರಣೆಗಳು ಮುಗ್ಧ ಜನರ, ವಿಶೇಷವಾಗಿ ಇಸ್ರಾಯೇಲಿನ ಶಾಂತಿ ಮತ್ತು ಭದ್ರತೆಯನ್ನು ಭಂಗಗೊಳಿಸುವಂತೆ ಬಿಡಸಾಧ್ಯವಿರಲಿಲ್ಲ. (ಧರ್ಮೋಪದೇಶಕಾಂಡ 5:9) ಉದಾಹರಣೆಗೆ, ನೀವು ವಾಸಿಸುತ್ತಿರುವ ಸಮಾಜದಲ್ಲಿ ದೇಶದ ಕಟ್ಟಳೆಗಳನ್ನು ಪಾಲಿಸುವಂತೆ ಒತ್ತಾಯ ಪಡಿಸುವ ಒಂದು ಗೌರವಾರ್ಹವಾದ ಪೊಲೀಸ್ ಪಡೆ ಅಥವಾ ಪ್ರಜಾಸೈನ್ಯವು ಇರದಿದ್ದರೆ ಊಹಿಸಿರಿ, ಅದು ತುಚ್ಛ ರೀತಿಯ ಅರಾಜಕತೆ ಮತ್ತು ಬಲಾತ್ಕಾರಗಳಿಗೆ ಮುನ್ನಡಿಸಲಾರದೊ? ತದ್ರೀತಿಯಲ್ಲಿ, ಅವರ ಲಂಪಟತನ ಮತ್ತು ಶುದ್ಧ ಆರಾಧನೆಗೆ ಅವರು ಒಡ್ಡಿದ ವಾಸ್ತವವಾದ ಅಪಾಯದ ಕಾರಣದಿಂದಾಗಿ ಕಾನಾನ್ಯರ ವಿರುದ್ಧ ಕ್ರಿಯೆಗೈಯುವಂತೆ ಯೆಹೋವನು ಒತ್ತಾಯಿಸಲ್ಪಟ್ಟನು. ಆದುದರಿಂದಲೆ, “ದೇಶವು ಅಶುದ್ಧವಾಗಿ ಹೋಗಿದೆ, ಮತ್ತು ಅದರ ಪಾಪಕೃತ್ಯಗಳಿಗಾಗಿ ಶಿಕ್ಷೆಯನ್ನು ನಾನು ಬರಮಾಡುವೆನು,” ಎಂದು ಆತನು ಆಜ್ಞಾಪಿಸಿದನು.—ಯಾಜಕಕಾಂಡ 18:25, NW.
ದೇವರ ಕಾರ್ಯನಿರ್ವಾಹಕ ಸೇನಾಬಲಗಳು—ಇಸ್ರಾಯೇಲ್ಯರ ಸೇನೆಗಳು—ಕಾನಾನ್ಯರನ್ನು ಸಂಹರಿಸಿದಾಗ ದೈವಿಕ ನ್ಯಾಯತೀರ್ಪು ಕಾರ್ಯರೂಪಕ್ಕೆ ತರಲ್ಪಟ್ಟಿತು. ಈ ನ್ಯಾಯತೀರ್ಪನ್ನು ಕಾರ್ಯರೂಪಕ್ಕೆ ತರಲು, ಬೆಂಕಿ ಅಥವಾ ಜಲಪ್ರಳಯಕ್ಕೆ ಬದಲಾಗಿ, ದೇವರು ಮಾನವರನ್ನು ಆರಿಸಿಕೊಂಡನೆಂಬ ಸಂಗತಿಯು ಶಿಕ್ಷೆಯನ್ನು ಕಡಿಮೆಗೊಳಿಸಲಿಲ್ಲ. ಹೀಗೆ, ಕಾನಾನ್ ದೇಶದ ಏಳು ಜನಾಂಗಗಳೊಂದಿಗೆ ಯುದ್ಧ ಮಾಡುತ್ತಿರುವಾಗ, “ಉಸುರುಬಿಡುವ ಒಬ್ಬರನ್ನಾದರೂ ನೀವು ಉಳಿಸಬಾರದು,” ಎಂದು ಇಸ್ರಾಯೇಲ್ ಸೈನ್ಯದವರಿಗೆ ಆಜ್ಞೆಯು ಕೊಡಲ್ಪಟ್ಟಿತ್ತು.—ಧರ್ಮೋಪದೇಶಕಾಂಡ 20:16.
ಆದರೂ, ಜೀವವನ್ನು ಗೌರವಿಸುವವನೋಪಾದಿ ದೇವರು ಗೊತ್ತುಗುರಿಯಿಲ್ಲದ ಕೊಲ್ಲುವಿಕೆಯನ್ನು ವಿಧಿಸಲಿಲ್ಲ. ಉದಾಹರಣೆಗೆ, ಒಂದು ಕಾನಾನ್ಯ ಪಟ್ಟಣವಾದ, ಗಿಬ್ಯೋನಿನ ನಿವಾಸಿಗಳು ಕರುಣೆಗಾಗಿ ಕೇಳಿಕೊಂಡಾಗ, ಯೆಹೋವನು ಅದನ್ನು ದಯಪಾಲಿಸಿದನು. (ಯೆಹೋಶುವ 9:3-27) ದುಷ್ಟನಾದ ಒಬ್ಬ ಯುದ್ಧ ದೇವರು ಇದನ್ನು ಮಾಡುತ್ತಿದ್ದನೊ? ಇಲ್ಲ, ಆದರೆ ಶಾಂತಿ ಮತ್ತು ನ್ಯಾಯವನ್ನು ಪ್ರೀತಿಸುವ ಒಬ್ಬ ದೇವರು ಇದನ್ನು ಮಾಡುವನು.—ಕೀರ್ತನೆ 33:5; 37:28.
ಯೆಹೋವನ ಮಟ್ಟಗಳು ಶಾಂತಿಯನ್ನು ಉತ್ತೇಜಿಸುತ್ತವೆ
ಬೈಬಲ್ ಪದೇ ಪದೇ ದೇವರ ಆಶೀರ್ವಾದವನ್ನು ಶಾಂತಿಯೊಂದಿಗೆ ಜತೆಗೂಡಿಸುತ್ತದೆ. ಅದು ಯಾಕಂದರೆ ಯೆಹೋವನು ಯುದ್ಧಪ್ರಿಯನಲ್ಲ, ಶಾಂತಿಪ್ರಿಯನಾಗಿದ್ದಾನೆ. (ಅರಣ್ಯಕಾಂಡ 6:24-26; ಕೀರ್ತನೆ 29:11; 147:12-14) ಆದುದರಿಂದ, ಅರಸನಾದ ದಾವೀದನು ಯೆಹೋವನಿಗಾಗಿ ಒಂದು ಆರಾಧನಾಲಯವನ್ನು ಕಟ್ಟಲು ಅಪೇಕ್ಷಿಸುವಾಗ, ಆತನಿಗೆ ದೇವರು ಅಂದದ್ದು: “ನೀನು ಬಹಳ ರಕ್ತವನ್ನು ಸುರಿಸಿದವನೂ ಮಹಾ ಯುದ್ಧಗಳನ್ನು ನಡಿಸಿದವನೂ ಆಗಿರುತ್ತೀ. ನೀನು ನನ್ನೆದುರಿನಲ್ಲಿ ಬಹಳ ರಕ್ತವನ್ನು ಸುರಿಸಿದ್ದರಿಂದ ನನ್ನ ಹೆಸರಿಗಾಗಿ ಆಲಯವನ್ನು ಕಟ್ಟಬಾರದು.”—1 ಪೂರ್ವಕಾಲವೃತ್ತಾಂತ 22:8; ಅ. ಕೃತ್ಯಗಳು 13:22.
ಮಹಾ ದಾವೀದನಾದ ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ, ನಾವು ನೋಡುತ್ತಿರುವ ಪ್ರಚಲಿತ ದಿನದ ದುಷ್ಟತನವನ್ನು ಆತನು ಸಹಿಸುವಂತೆ ನ್ಯಾಯದ ಕುರಿತಾದ ದೇವರ ಪ್ರೀತಿಯು ಇನ್ನು ಮೇಲೆ ಸಮ್ಮತಿಸದಂತಹ ಒಂದು ಸಮಯದ ಕುರಿತು ಮಾತಾಡಿದ್ದನು. (ಮತ್ತಾಯ 24:3, 36-39) ನೋಹನ ದಿನದ ಜಲಪ್ರಳಯದಲ್ಲಿ ಮತ್ತು ಸೊದೋಮ್ ಮತ್ತು ಗೊಮೋರ ಪಟ್ಟಣಗಳ ನಾಶನದಲ್ಲಿ ಆತನು ಮಾಡಿದಂತೆ, ಸ್ವಾರ್ಥ, ದುಷ್ಟ ಜನರಿಂದ ಈ ಭೂಮಿಯನ್ನು ಬಿಡುಗಡೆಮಾಡಲು ಅತಿಬೇಗನೆ ದೈವದಂಡನೆಯ ಕಾರ್ಯವನ್ನು ಕೈಗೊಳ್ಳುವನು, ಹೀಗೆ ಆತನ ಸ್ವರ್ಗೀಯ ರಾಜ್ಯ ಆಳಿಕ್ವೆಯ ಕೆಳಗೆ ಶಾಂತಿಭರಿತ ಪರಿಸ್ಥಿತಿಗಳು ಅಸ್ತಿತ್ವದಲ್ಲಿರಲಿಕ್ಕಾಗಿ ಮಾರ್ಗವು ಸರಿಮಾಡಲ್ಪಡುವುದು.—ಕೀರ್ತನೆ 37:10, 11, 29; ದಾನಿಯೇಲ 2:44.
ನಿಸ್ಸಂದೇಹವಾಗಿ, ಯೆಹೋವನು ರಕ್ತಕ್ಕಾಗಿ ಅತ್ಯಾಶೆಪಡುವ ಒಬ್ಬ ಯುದ್ಧ ದೇವರಾಗಿರುವುದಿಲ್ಲ. ಅದೇ ಸಮಯದಲ್ಲಿ, ನ್ಯಾಯತೀರ್ಪನ್ನು ವಿಧಿಸಬೇಕಾದಾಗ ನ್ಯಾಯತೀರ್ಪಿನ ದಂಡನೆಯನ್ನು ಆವಶ್ಯಪಡಿಸುವುದರಿಂದ ಆತನು ಹಿಂಜರಿಯುವುದಿಲ್ಲ. ಒಳ್ಳೇತನಕ್ಕೆ ದೇವರಿಗಿರುವ ಪ್ರೀತಿಯು, ಆತನನ್ನು ಪ್ರೀತಿಸುವವರ ಪರವಾಗಿ ಆತನನ್ನು ಹಿಂಸಿಸುವವರನ್ನು ನಾಶಮಾಡುವ ಮೂಲಕ ಆತನು ಕಾರ್ಯನಡಿಸಬೇಕೆಂದು ಕೇಳಿಕೊಳ್ಳುತ್ತದೆ. ಆತನು ಹಾಗೆ ಮಾಡುವಾಗ, ನಿಜವಾಗಿ ದೀನರಾದ ಜನರು ಐಕ್ಯದಿಂದ “ಶಾಂತಿದಾಯಕನಾದ ದೇವರ”ನ್ನು ಆರಾಧಿಸುವಾಗ, ಭೂಮಿಯಾದ್ಯಂತ ನಿಜ ಶಾಂತಿಯು ಪ್ರವರ್ಧಮಾನಕ್ಕೆ ಬರುವುದು.—ಫಿಲಿಪ್ಪಿ 4:9. (g93 11/08)
[ಪುಟ 18 ರಲ್ಲಿರುವ ಚಿತ್ರ ಕೃಪೆ]
David and Goliath/The Doré Bible Illustrations/Dover Publications, Inc.