ಲಂಪಟ ವರ್ಣನೆಯು ಕಾಲೇಜಿಗೆ ಹೋಗುತ್ತದೆ
ನವಂಬರ 1, 1993ರ ಸಾನ್ ಫ್ರಾನ್ಸಿಸ್ಕೋ ಕ್ರಾನಿಕಲ್ನಲ್ಲಿ “ಮಾಟ್ಯರ್ ಮತ್ತು ರಾಸ್ರ ವರದಿ”ಯು, ಸಾನ್ ಫ್ರಾನ್ಸಿಸ್ಕೋ ಸ್ಟೇಟ್ ಯೂನಿವರ್ಸಿಟಿಯಲ್ಲಿ ನಡೆಸಲ್ಪಟ್ಟ ಒಂದು ವಿವಾದಾತ್ಮಕ ಕ್ಲಾಸನ್ನು ಅತ್ಯುಜಲ್ವಪಡಿಸಿತು. ಅದು ಮಾನವ ಲೈಂಗಿಕತೆಯ ವಿಷಯದ ಕುರಿತು ಪ್ರೊಫೆಸರ್ ಜಾನ್ ಡಿಚೆಕೊರಿಂದ ನಡೆಸಲ್ಪಡುತ್ತದೆ. ಮಾಟ್ಯರ್ ಮತ್ತು ರಾಸ್ ಅದರ ಕುರಿತು ಹೀಗೆ ಹೇಳಿಕೆ ನೀಡುತ್ತಾರೆ:
“ಅದು ಎಂತಹ ಕ್ಲಾಸಾಗಿದೆ. SFSU [ಸಾನ್ ಫ್ರಾನ್ಸಿಸ್ಕೊ ಸ್ಟೇಟ್ ಯೂನಿವರ್ಸಿಟಿ]ನ ಪದವಿಯ ಪ್ರಮಾಣಪತ್ರಗಳಿಗಾಗಿ ನೀವು ಎದುರುನೋಡುತ್ತಿರುವುದಾದರೆ, ಕ್ಲಾಸಿನ ಪಾಠಸೂಚಿಕೆಯಲ್ಲಿ ಪಟ್ಟಿಮಾಡಲ್ಪಟ್ಟಿರುವ ಕಾಮ ಸಂಬಂಧವಾದ (ಮತ್ತು ಕೆಲವೊಮ್ಮೆ ರಾಜಕೀಯವಾಗಿ ಸರಿಯಾದ) ವಿಷಯಗಳನ್ನು ಪರಿಶೀಲಿಸಿ.”
ವರದಿಯು ಬಳಿಕ ಮುಷ್ಟಿಮೈಥುನ, ಬೇರೆ ಲಿಂಗಜಾತಿಯ ಉಡುಪುಗಳ ತೊಡುವಿಕೆ, ಪುರುಷ ಸಲಿಂಗೀಕಾಮ, ಸ್ತ್ರೀ ಸಲಿಂಗೀಕಾಮ, ಪಶು ಸಂಭೋಗ, ಶಾರೀರಿಕ ಅಥವಾ ಮಾನಸಿಕ ಹಿಂಸೆಯಿಂದ ಸುಖಾನುಭವಿಸುವುದು ಇತ್ಯಾದಿಗಳನ್ನು ಪಟ್ಟಿಮಾಡುತ್ತದೆ. ಈ ಕೆಲವು ಚಟುವಟಿಕೆಗಳ ಕುರಿತಾದ ಉಪನ್ಯಾಸಗಳು ವಿಡಿಯೋಟೇಪ್ಗಳನ್ನು ಒಳಗೊಂಡಿವೆ.
ಯಾಜಕಕಾಂಡ 18ನೇ ಅಧ್ಯಾಯದಲ್ಲಿ ಮೋಶೆಯ ನಿಯಮಾವಳಿಯಲ್ಲಿ ನಮೂದಿಸಲ್ಪಟ್ಟಿರುವಂತೆ, ಯೆಹೋವನು ದ್ವೇಷಿಸುವ “ಅಸಹ್ಯವಾದ ಸಂಪ್ರದಾಯ”ಗಳೊಂದಿಗೆ ಇಂತಹ ಚಟುವಟಿಕೆಗಳನ್ನು ಹೋಲಿಸಬಹುದು. ಅಗಮ್ಯ ಗಮನದ ಕೃತ್ಯಗಳು, ವ್ಯಭಿಚಾರ, ಮತ್ತು ಇತರ ಲೈಂಗಿಕ ಪ್ರತೀಪಗಳನ್ನು ಖಂಡಿಸಿದ ಬಳಿಕ, ವಚನಗಳು 22 ಮತ್ತು 23 ಹೇಳುವುದು: “ಸ್ತ್ರೀಯನ್ನು ಸಂಗಮಿಸುವಂತೆ ಪುರುಷನನ್ನು ಸಂಗಮಿಸಬಾರದು; ಅದು ಹೇಸಿಗೆಯಾದ ಕೆಲಸ. ಪಶುಸಂಗಮವನ್ನು ಮಾಡಿ ಅಶುದ್ಧರಾಗಬಾರದು. ಯಾವ ಸ್ತ್ರೀಯೂ ಸಂಗಮಕ್ಕಾಗಿ ಪಶುವಿನ ಮುಂದೆ ನಿಲ್ಲಬಾರದು; ಅದು ಸ್ವಭಾವಕ್ಕೆ ವಿರುದ್ಧವಾದದ್ದು.”
ಯೆಹೋವನು ಅಸಹ್ಯಪಡುವ ಈ ವಿಷಯಗಳನ್ನು ಅಭ್ಯಸಿಸುವುದು ಆತನ ಖಂಡನೆಯಲ್ಲಿ ಫಲಿಸುತ್ತದೆ: “ಈ ದುರಾಚಾರಗಳಲ್ಲಿ ಯಾವದರಿಂದಲೂ ನೀವು ಅಶುದ್ಧರಾಗಬಾರದು. ನಾನು ನಿಮ್ಮ ಎದುರಿನಿಂದ ಹೊರಡಿಸುವ ಜನಾಂಗಗಳವರು ಇಂಥ ದುರಾಚಾರಗಳಿಂದ ಅಶುದ್ಧರಾದರು. ಅವರ ದೇಶವು ಅಶುದ್ಧವಾಗಿ ಹೋದದರಿಂದ ಅವರ ಪಾಪಕೃತ್ಯಗಳಿಗಾಗಿ ಅವರನ್ನು ಶಿಕ್ಷಿಸಿದ್ದೇನೆ; ಆ ದೇಶವು ತನ್ನಲ್ಲಿ ವಾಸಿಸಿದವರನ್ನು ಕಾರಿಬಿಟ್ಟಿತು. ಯಾವನಾದರೂ ಈ ಹೇಸಿಗೆಯಾದ ಕೆಲಸಗಳಲ್ಲಿ ಒಂದನ್ನಾದರೂ ಮಾಡಿದರೆ ಅವನು ಕುಲದಿಂದ ತೆಗೆದುಹಾಕಲ್ಪಡಬೇಕು.”—ಯಾಜಕಕಾಂಡ 18:24, 25, 29.
ಎಸ್ಎಫ್ಎಸ್ಯೂನ ಕೋರ್ಸನ್ನು ಪಡೆಯುತ್ತಿರುವ ಒಬ್ಬ ವಿದ್ಯಾರ್ಥಿಯು “ಅನೈತಿಕ ಜನರ ಕುರಿತಾದ ಪ್ರಸಿದ್ಧ ಅಭಿಪ್ರಾಯಗಳನ್ನು ನಿರ್ಮೂಲಮಾಡಿದ್ದಕ್ಕಾಗಿ ಮತ್ತು ಈ ಜನರು ಇತರರಂತೆಯೇ ಇದ್ದಾರೆ ಎಂದು ತೋರಿಸಿದ್ದಕ್ಕಾಗಿ” ಡಿಚೆಕೊರನ್ನು ಹೊಗಳಿದನು. ಈ ಜನರು ಇತರ ಎಲ್ಲರಂತೆ ಇದ್ದಾರೊ? ಸರ್ವಸಾಮಾನ್ಯವಾಗಿ ಜನರು ಪುರುಷ ಸಲಿಂಗೀಕಾಮ, ಸ್ತ್ರೀ ಸಲಿಂಗೀಕಾಮ, ಮತ್ತು ಶಾರೀರಿಕ ಅಥವಾ ಮಾನಸಿಕ ಹಿಂಸೆಯ ಲೈಂಗಿಕ ಪ್ರತೀಪಗಳಲ್ಲಿ ಒಳಗೂಡುವುದಿಲ್ಲ, ಅಥವಾ ಪಶುಗಳೊಂದಿಗೆ ಲೈಂಗಿಕ ಸಂಭೋಗವನ್ನು ಅವರು ಮಾಡುವುದಿಲ್ಲವೆಂಬುದು ನಿಶ್ಚಯ. ಸರ್ವಸಮ್ಮತವಾಗಿ, ಇಂದು ಸಮಾಜದಲ್ಲಿ ಅಪಾಯವನ್ನುಂಟುಮಾಡುವ ಪ್ರಮಾಣಗಳಲ್ಲಿ ನೈತಿಕ ಕುಸಿತವು ಇದೆ, ಆದರೆ ಈ ವಿಶ್ವವಿದ್ಯಾನಿಲಯದ ಕ್ಲಾಸಿನಲ್ಲಿ ವರ್ಣಿಸಲ್ಪಟ್ಟಿರುವ ಈ ಚಟುವಟಿಕೆಗಳು, ಪಾಂಡಿತ್ಯಪೂರ್ಣ ಅಧ್ಯಯನ ಮತ್ತು ಸಂಶೋಧನೆಯ ವೇಷದ ಕೆಳಗೆ ಪ್ರದರ್ಶಿಸಲ್ಪಟ್ಟ ನಿರ್ಲಜ್ಜ ಲಂಪಟ ವರ್ಣನೆಯಾಗಿದೆ.