ಇಂದಿನ ಅಗತ್ಯಗಳನ್ನು ಪೂರೈಸುವ ಪತ್ರಿಕೆಗಳು
ಕಾವಲಿನಬುರುಜು ಮತ್ತು ಎಚ್ಚರ!—ಈ ಪತ್ರಿಕೆಗಳ 5 ಕೋಟಿ 80 ಲಕ್ಷ ಪ್ರತಿಗಳು ಪ್ರತಿ ತಿಂಗಳು ನೂರಕ್ಕಿಂತಲೂ ಅಧಿಕ ಭಾಷೆಗಳಲ್ಲಿ ಮುದ್ರಿಸಲ್ಪಡುತ್ತಿವೆ—ಅದನ್ನು ತಾನೇ ಮಾಡುತ್ತಿವೆ. ಗಣ್ಯ ಓದುಗನೊಬ್ಬನು ಬರೆದದ್ದು:
“ಅನೇಕರನ್ನು ಎದುರಿಸುತ್ತಿರುವ ನೈಜ ವಾದಾಂಶಗಳೊಂದಿಗೆ ವ್ಯವಹರಿಸುವ ಲೇಖನಗಳನ್ನು ಪ್ರಕಾಶಿಸುತ್ತಿರುವುದಕ್ಕಾಗಿ ನಿಮಗೆ ತುಂಬಾ ಉಪಕಾರ.” ಅವನು ಇನ್ನೂ ಹೇಳಿದ್ದು:
“ಈ ಲೋಕದ ಅಂತ್ಯವು ಸಮೀಪಿಸಿದಂತೆ, ಜನರಿಗೆ ತಮ್ಮ ಸಮಸ್ಯೆಗಳನ್ನು ನಿಭಾಯಿಸುವಂತೆ ಸಹಾಯ ಮಾಡಲಿಕ್ಕಾಗಿ, ಅವರಿಗೆ ಅನುಭೂತಿ, ತಿಳಿವಳಿಕೆ, ಮತ್ತು ಸೂಕ್ಷ್ಮ ಪರಿಜ್ಞಾನದ ಅಗತ್ಯವಿದೆ. ಹೆಚ್ಚೆಚ್ಚಾಗಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು, ಜನರು ತಮ್ಮ ಸಮಸ್ಯೆಗಳನ್ನು ನಿಭಾಯಿಸಲು ಏಕೆ ತಪ್ಪಿಹೋಗುತ್ತಾರೆ ಎಂಬುದರ ಕಾರಣಗಳನ್ನು ಸಾದರಪಡಿಸುತ್ತಿವೆ . . . .
“ಅಧಿಕಾಂಶ ಮಂದಿ ಯಾವುದು ಸರಿಯಾಗಿದೆಯೋ ಅದನ್ನು ಮಾಡಲು ಬಯಸುತ್ತಾರೆ, ಆದರೆ ಅವರು ಅನೇಕವೇಳೆ ಆಶಾಭಂಗಗಳು, ಅಪರಾಧ ಪ್ರಜ್ಞೆ, ನಕಾರಾತ್ಮಕವಾದ ಭಾವನೆಗಳು, ಭೀತಿಗಳು, ಕಡಿಮೆ ಆತ್ಮಾಭಿಮಾನ, ನ್ಯೂನವಾದ ಮಾನಸಿಕ ಹವ್ಯಾಸಗಳು, ಮತ್ತು ತಮ್ಮನ್ನು ಸಹಾಯಿಸಿಕೊಳ್ಳಲು ತಾವು ಶಕಿಹ್ತೀನರೆಂಬ ಭಾವನೆಯೊಂದಿಗೆ ಹೋರಾಡುತ್ತಾರೆ. ತಮ್ಮ ಜೀವಿತಗಳು ಮತ್ತು ಭಾವನೆಗಳ ಕುರಿತು ನಿಯಂತ್ರಣವನ್ನು ಪುನಃ ಪಡೆದುಕೊಳ್ಳುವಂತೆ ನಿಮ್ಮ ಲೇಖನಗಳು ಅನೇಕರಿಗೆ ಸಹಾಯಮಾಡುತ್ತಿವೆ. . .
“‘ವಿವಾಹದಲ್ಲಿ ಸಂಸರ್ಗ’ ಎಂಬ ಜನವರಿ 22, 1994ರ ಅವೇಕ್!ಗಾಗಿ ನಿಮಗೆ ವಿಶೇಷವಾಗಿ ಉಪಕಾರವನ್ನು ಹೇಳಲು ನಾನು ಬಯಸುತ್ತೇನೆ. ಸಂಸರ್ಗದ ಪ್ರಮುಖತೆಯ ಮೇಲೆ ಸಾಮಾನ್ಯ ಮಾತುಗಳನ್ನು ನೀಡುವುದಕ್ಕೆ ಬದಲಾಗಿ, ಪುರುಷರು ಮತ್ತು ಸ್ತ್ರೀಯರು ಯಾಕೆ ಒಬ್ಬರನ್ನೊಬ್ಬರು ಅರಿತುಕೊಳ್ಳಲು ತಪ್ಪಿಹೋಗುತ್ತಾರೆ ಎಂಬುದರ ಕಾರಣಗಳನ್ನು ನೀವು ಪರಿಶೋಧಿಸಿದ್ದೀರಿ. ಜನತೆಯ ಅರ್ಧಭಾಗವು ಇನ್ನರ್ಧ ಭಾಗವನ್ನು ಅರಿತುಕೊಳ್ಳುವಂತೆ ಸಹಾಯಮಾಡುವ ಮೂಲಕ, ಮಾನವೀಯತೆ ಮತ್ತು ವಿವಾಹದ ದೇವದತ್ತ ಸಂಘಟನೆಗೆ ಮಹತ್ವದ ಸೇವೆಯನ್ನು ನೀವು ಮಾಡಿದ್ದೀರಿ.”
ನಿಮ್ಮ ಮನೆಗೆ ಅಂಚೆಯ ಮೂಲಕ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಒಂದು ಪ್ರತಿಯು ರವಾನಿಸುವುದು ನಿಮಗೆ ಬೇಕಾಗುವಲ್ಲಿ, Praharidurg Prakashan Society, Plot A/35, Nr Industrial Estate, Nangargoan, Lonavla, 410 401 Mah., ಇವರಿಗೆ, ಅಥವಾ 5ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದಾದ ವಿಳಾಸಕ್ಕೆ ಬರೆಯಿರಿ.