ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g94 12/8 ಪು. 7-9
  • ಸಂತೋಷ—ಖಾತರಿ ಕೊಡಲ್ಪಟ್ಟಿದೆ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಂತೋಷ—ಖಾತರಿ ಕೊಡಲ್ಪಟ್ಟಿದೆ!
  • ಎಚ್ಚರ!—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅಸಮಾಧಾನದಿಂದ ವೈವಾಹಿಕ ಸಂತೋಷಕ್ಕೆ
  • ಜೀವಿತದಲ್ಲಿ ಒಂದು ಉದ್ದೇಶವನ್ನು ಅವಳು ಕಂಡುಕೊಂಡಳು
  • ನಿಮಗಾಗಿ ಸಂತೋಷವು ಕಾದಿದೆ
  • ಯೆಹೋವನನ್ನು ಸೇವಿಸುವುದರಲ್ಲಿ ನಿಜ ಸಂತೋಷ
    ಕಾವಲಿನಬುರುಜು—1992
  • ನಿಜ ಸಂತೋಷವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?
    ಕಾವಲಿನಬುರುಜು—1997
  • ಸಂತೋಷಕ್ಕಾಗಿ ಹುಡುಕಾಟ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ನಿಜವಾದ ಸಂತೋಷವನ್ನು ಹೇಗೆ ಕಂಡುಕೊಳ್ಳುವುದು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
ಇನ್ನಷ್ಟು
ಎಚ್ಚರ!—1994
g94 12/8 ಪು. 7-9

ಸಂತೋಷ—ಖಾತರಿ ಕೊಡಲ್ಪಟ್ಟಿದೆ!

“ತಮ್ಮ ಆತ್ಮಿಕ ಆವಶ್ಯಕತೆಯ ಅರಿವುಳ್ಳವರು ಸಂತೋಷಿತರು” ಎಂದು ಯೇಸು ಕ್ರಿಸ್ತನು ಹೇಳಿದನು. (ಮತ್ತಾಯ 5:3, NW) ಸಂಪ್ರದಾಯಬದ್ಧ ಬುದ್ಧಿವಂತಿಕೆಗೆ ವ್ಯತಿರಿಕ್ತವಾಗಿ, ಸಂತೋಷದ ಬೆನ್ನಟ್ಟುವಿಕೆಯಲ್ಲಿ ಯಶಸ್ಸನ್ನು ಗಳಿಸಲಿಕ್ಕಾಗಿ ಒಂದು ಅಗತ್ಯವಾದ ಅಂಶದೋಪಾದಿ ಪ್ರಾಪಂಚಿಕ ಅಭಿಲಾಷೆಗಳನ್ನು ತೃಪ್ತಿಪಡಿಸುವುದಕ್ಕೆ ಬದಲಾಗಿ, ಒಬ್ಬನ ಆತ್ಮಿಕ ಆವಶ್ಯಕತೆಯನ್ನು ನೆರವೇರಿಸುವುದರ ಕಡೆಗೆ ಯೇಸು ಗಮನಸೆಳೆದನು. ಯೇಸುವಿನ ಆ ಮಾತುಗಳು ಅನುಸರಿಸಲ್ಪಡುವಲ್ಲಿ, ಸಂತೋಷದ ಒಂದು ಖಾತರಿಗೆ ಸಮನಾಗಿದೆ.

ಆದರೂ, ಒಬ್ಬನ ಆತ್ಮಿಕ ಆವಶ್ಯಕತೆಯ ಅರಿವುಳ್ಳವರಾಗಿರುವುದು, ಅಂತಹದ್ದು ಅಸ್ತಿತ್ವದಲ್ಲಿದೆ ಎಂಬ ಪ್ರಜ್ಞೆಯುಳ್ಳವರಾಗಿರುವುದಕ್ಕಿಂತಲೂ ಹೆಚ್ಚಿನದನ್ನು ಅರ್ಥೈಸುತ್ತದೆ. ಅನೇಕಾನೇಕ ವೇಳೆ ನೆರವೇರಿಸಲ್ಪಡದ ಒಂದು ಆವಶ್ಯಕತೆಯು ಸಂತೋಷಕ್ಕೆ ಬದಲಾಗಿ ವ್ಯಾಕುಲತೆ ಮತ್ತು ಅಸಮಾಧಾನದ ಮೂಲವಾಗಿರುತ್ತದೆ. ಬೈಬಲಿನ ಜ್ಞಾನೋಕ್ತಿಯು ಇದನ್ನು ಈ ರೀತಿಯಲ್ಲಿ ವಿವರಿಸುತ್ತದೆ: “ಕೋರಿದ್ದಕ್ಕೆ ತಡವಾದರೆ ಮನಸ್ಸು [ಹೃದಯ, NW] ಬಳಲುವದು.” (ಜ್ಞಾನೋಕ್ತಿ 13:12) ಹೀಗೆ, ಒಬ್ಬನ ಆತ್ಮಿಕ ಆವಶ್ಯಕತೆಯನ್ನು ಗುರುತಿಸಲು ಮತ್ತು ಬಳಿಕ ಸಂತೃಪ್ತಿಪಡಿಸಲು ಒಬ್ಬನು ಹೆಜ್ಜೆಗಳನ್ನು ತೆಗೆದುಕೊಳ್ಳುವಾಗ ಸಂತೋಷವು ವಿಕಸಿಸುತ್ತದೆ. ಇದನ್ನು ಹೇಗೆ ಮಾಡಸಾಧ್ಯವಿದೆ?

ಬೈಬಲು ಇದಕ್ಕಾಗಿ ಅಗತ್ಯವಾಗಿರುವುದನ್ನು ಒದಗಿಸುತ್ತದೆ. ಏಕೆ? ಏಕೆಂದರೆ ಸಂತೃಪ್ತಿಕರವಾದ ಉತ್ತರಗಳನ್ನು ಕಂಡುಕೊಳ್ಳದೆ ಅನೇಕರು ಬಹಳ ದೀರ್ಘ ಸಮಯದಿಂದ ಆಲೋಚಿಸುತ್ತಿರುವ ಪ್ರಶ್ನೆಗಳಿಗೆ ಅದೊಂದೇ ಉತ್ತರಗಳನ್ನು ಒದಗಿಸಬಲ್ಲದು. ಉದಾಹರಣೆಗೆ, ‘ಜೀವಿತದ ಉದ್ದೇಶವೇನು? ಮನುಷ್ಯನು ಏಕೆ ಭೂಮಿಯಲ್ಲಿದ್ದಾನೆ? ಭವಿಷ್ಯತ್ತು ಏನನ್ನು ಕಾದಿರಿಸಿದೆ?’ ಎಂದು ನೀವೆಂದಾದರೂ ಕುತೂಹಲಗೊಂಡಿದ್ದೀರೊ? ಇವುಗಳಿಗೆ ಮತ್ತು ಇನ್ನಿತರ ಪ್ರಶ್ನೆಗಳಿಗೆ ಸಂತೃಪ್ತಿಕರವಾದ ಉತ್ತರಗಳನ್ನು ಒದಗಿಸುವುದಲ್ಲದೆ, ಸಂತೋಷಕ್ಕಾಗಿರುವ ನಮ್ಮ ಅನ್ವೇಷಣೆಯನ್ನು ಅನೇಕವೇಳೆ ಅಡಿಪ್ಡಡಿಸುವ ಹಾಗೂ ಇಂದು ನಮ್ಮೆಲ್ಲರನ್ನು ಎದುರಿಸುವ ಜಟಿಲ ಸಮಸ್ಯೆಗಳೊಂದಿಗೆ ನಿಭಾಯಿಸುವಂತೆ ಲಕ್ಷಾಂತರ ಜನರಿಗೆ ಸಹಾಯ ಮಾಡಿರುವ ಜೀವಿತಕ್ಕಾಗಿ ಮಾರ್ಗದರ್ಶನವನ್ನು ಸಹ ಬೈಬಲ್‌ ಒದಗಿಸುತ್ತದೆ. “[ದೇವರ] ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ” ಎಂದು ಕೀರ್ತನೆಗಾರನು ಹೇಳುತ್ತಾನೆ. (ಕೀರ್ತನೆ 119:105) ಹೌದು, ಸಂತೋಷದ ಬೆನ್ನಟ್ಟುವಿಕೆಯಲ್ಲಿ ನೀವು ಯಶಸ್ಸನ್ನು ಗಳಿಸುವಂತೆ ನಿಮಗೆ ಸಹಾಯ ಮಾಡಬಲ್ಲ ಒಂದು ನಿಶ್ಚಿತ ಮಾರ್ಗದರ್ಶಕವು ಬೈಬಲಾಗಿದೆ. ನೈಜ ಜೀವಿತದ ಈ ಎರಡು ಉದಾಹರಣೆಗಳನ್ನು ಪರಿಗಣಿಸಿ.

ಅಸಮಾಧಾನದಿಂದ ವೈವಾಹಿಕ ಸಂತೋಷಕ್ಕೆ

ವಿವಾಹವು ಸಂತೋಷದ ಅಥವಾ ವ್ಯಥೆಯ ಒಂದು ಮೂಲವಾಗಿರಸಾಧ್ಯವಿದೆ. ಅನೇಕರಿಗೆ ಅದು ಎರಡನೆಯದಾಗಿದೆ ಎಂಬುದು ದುಃಖಕರ. ಆದಾಗ್ಯೂ, ಬೈಬಲಿನ ಸಲಹೆಯು ಅನ್ವಯಿಸಲ್ಪಟ್ಟಾಗ, ಈ ಹಿಂದೆ ಅಸಂತೋಷಕರವಾಗಿದ್ದ ಒಂದು ವಿವಾಹದಲ್ಲಿ ಸಂತೋಷವನ್ನು ಕಂಡುಕೊಳ್ಳುವಂತೆ ಅನೇಕರಿಗೆ ಸಹಾಯಮಾಡಿದೆ.

ಯುಂಕೂನ್‌ ಮತ್ತು ಮೇಶೋ ಎಂಬವರಿಗೆ ಅಂತಹ ಅನುಭವವಾಯ್ತು. “ನಮ್ಮ ವಿವಾಹದ ಮೊದಲ ಏಳು ವರ್ಷಗಳಲ್ಲಿ ನಾವು ಸಂತೋಷಿತರಾಗಿರಲಿಲ್ಲ” ಎಂದು ಯುಂಕೂನ್‌ ಹೇಳುತ್ತಾನೆ. “ನನ್ನ ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ತೀರ ಸ್ವಲ್ಪ ಸಮಯವನ್ನು ನಾನು ಕಳೆದೆ. ವಾಸ್ತವವಾಗಿ, ನಾನು ಅನೇಕವೇಳೆ ನನ್ನ ಕೆಲಸದ ಸ್ಥಳದಲ್ಲೇ ಮಲಗಿದೆ.” ಪ್ರಾಪಂಚಿಕವಾಗಿ ಅವರಿಗೆ ಅಗತ್ಯವಾಗಿದ್ದದ್ದೆಲ್ಲವನ್ನು ಅವರು ಹೊಂದಿರುವಾಗಲೂ, ಅವರು ಸಂತೋಷವುಳ್ಳವರಾಗಿರಲಿಲ್ಲ. ಅವನ ಹೆಂಡತಿಯಾದ ಮೇಶೋ ಕೂಡಿಸುವುದು: “ನಮಗೆ ಪ್ರಾಪಂಚಿಕವಾಗಿ ಒದಗಿಸುತ್ತಿದ್ದದ್ದಲ್ಲದೆ, ನನ್ನ ಗಂಡನು ಕುಟುಂಬದ ಎಲ್ಲಾ ವಿಷಯಗಳನ್ನು ನನ್ನ ಮೇಲ್ವಿಚಾರಣೆಯ ಕೆಳಗೆ ಬಿಟ್ಟನು. ನಾನು ನಿಜವಾಗಿಯೂ ಅದಕ್ಕಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದೆ.” ಒಟ್ಟಿಗೆ ಜೀವಿಸುವುದನ್ನು ನಿಲ್ಲಿಸಲು ಸಹ ಅವರು ಆಲೋಚಿಸಿದರು.

ಯುಂಕೂನ್‌ನಿಗೆ ಕುಟುಂಬದ ಇತರ ಸಂಬಂಧಿಕರೊಂದಿಗೆ ಸಹ ಸಮಸ್ಯೆಗಳಿದ್ದವು. ಕುಟುಂಬದ ಹಿಂದಿನ ತೊಂದರೆಗಳ ಕಾರಣದಿಂದ ಅವನು ಏಳು ವರ್ಷಗಳ ವರೆಗೆ ತನ್ನ ಅಕ್ಕನೊಂದಿಗೆ ಮಾತಾಡಿರಲಿಲ್ಲ. ಅವರು ಒಬ್ಬರಿಗೊಬ್ಬರು ನೂರು ಮೀಟರ್‌ಗಳಿಗಿಂತಲೂ ಕಡಿಮೆ ದೂರದಲ್ಲಿ ವಾಸಿಸುತ್ತಿದ್ದರೂ ಹೀಗಾಗಿತ್ತು. ಆದಾಗ್ಯೂ, ಈಗ ಅವನು ಒಂದು ಸಂತೋಷಿತ ವಿವಾಹವನ್ನು ಮತ್ತು ತನ್ನ ಅಕ್ಕನೊಂದಿಗೆ ಅತ್ಯುತ್ತಮವಾದ ಸಂಬಂಧವನ್ನು ಅನುಭವಿಸುತ್ತಾನೆ. ಈ ದೊಡ್ಡ ಪರಿವರ್ತನೆಯು ಏಕೆ ಸಂಭವಿಸಿತು?

“ನನ್ನ ಹೆಂಡತಿ ಮತ್ತು ನಾನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಸಿಸಲು ಮತ್ತು ಅವರ ವಾರದ ಬೈಬಲ್‌ ಕೂಟಗಳಿಗೆ ಹಾಜರಾಗಲು ಆರಂಭಿಸಿದೆವು” ಎಂದು ಯುಂಕೂನ್‌ ವಿವರಿಸುತ್ತಾನೆ. ಅವನ ಅಕ್ಕ ಕೂಡ ಅದನ್ನೇ ಮಾಡಿದಳು. ತಾವು ಕಲಿಯುತ್ತಿದ್ದ ವಿಷಯಗಳನ್ನು ಅವರು ಅನ್ವಯಿಸಲಾರಂಭಿಸಿದರು ಮತ್ತು ಅದರ ಫಲಿತಾಂಶಗಳನ್ನು ಕಂಡು ಆಶ್ಚರ್ಯಗೊಂಡರು. ತನ್ನ ಕುಟುಂಬದ ಕೇವಲ ಪ್ರಾಪಂಚಿಕ ಆವಶ್ಯಕತೆಗಳನ್ನು ಮಾತ್ರವಲ್ಲ ಅವರ ಆತ್ಮಿಕ ಮತ್ತು ಭಾವೂದ್ರೇಕದ ಆವಶ್ಯಕತೆಗಳನ್ನು ಕೂಡ ಅವನು ನೋಡಿಕೊಳ್ಳುವಂತೆ ಅವನನ್ನು ಅನುಮತಿಸಿದ ಒಂದು ಉದ್ಯೋಗವನ್ನು ಯುಂಕೂನ್‌ ಸಂಪಾದಿಸಿಕೊಂಡನು. ಈಗ ಅವರು ಒಂದು ಸಂತೋಷಿತ, ಐಕ್ಯ ಕುಟುಂಬ ಜೀವನವನ್ನು ಅನುಭವಿಸುತ್ತಾರೆ.

ಜೀವಿತದಲ್ಲಿ ಒಂದು ಉದ್ದೇಶವನ್ನು ಅವಳು ಕಂಡುಕೊಂಡಳು

ಸಂತೋಷದಿಂದಿರಲು ನಮಗೆ ಜೀವಿಸುವುದಕ್ಕಾಗಿ ಒಂದು ಕಾರಣ—ಜೀವಿತದಲ್ಲಿ ಒಂದು ಉದ್ದೇಶ—ದ ಆವಶ್ಯಕತೆಯಿದೆ ಎಂದು ಮಾನವ ಸ್ವಭಾವವನ್ನು ಅಭ್ಯಸಿಸುವವರು ಹೇಳಿದ್ದಾರೆ. ಪ್ರಾಪಂಚಿಕ ವಿಷಯಗಳ ಬೆನ್ನಟ್ಟುವಿಕೆಯ ಸ್ವಾರ್ಥದ ಮೇಲೆ ಕೇಂದ್ರೀಕರಿಸಲ್ಪಟ್ಟಿರುವ ಒಂದು ಜೀವಿತವು ಈ ಅಗತ್ಯವನ್ನು ತೃಪ್ತಿಪಡಿಸುವುದಿಲ್ಲ. ಇಪ್ಪತ್ತಾರು ವರ್ಷ ಪ್ರಾಯದ ಲೀನಿ ಇದನ್ನು ಸತ್ಯವಾದದ್ದಾಗಿ ಕಂಡುಕೊಂಡಳು.

“ಒಂದು ವಾರಕ್ಕೆ ಏಳು ದಿನಗಳು, ದಿನವೊಂದಕ್ಕೆ 12 ತಾಸುಗಳ ಕಾಲ ನಾನು ಕೆಲಸ ಮಾಡುತ್ತಿದ್ದೆ” ಎಂದು ಅವಳು ಹೇಳುತ್ತಾಳೆ. “ಒಂದು ದೊಡ್ಡ ಶೃಂಗಾರಗೃಹ (ಬ್ಯೂಟಿ ಸಲೂನ್‌)ವನ್ನು ತೆರೆಯುವುದು ನನ್ನ ಗುರಿಯಾಗಿತ್ತು.” ಅವಳ ಕನಸನ್ನು ಸಾಧಿಸುವುದಕ್ಕೆ ಅವಳು ಸಮೀಪವಾಗಿದ್ದಾಗಲೂ, ತನ್ನ ಜೀವಿತದಿಂದ ಏನೋ ಕಳೆದುಹೋದಂತೆ ಅವಳಿಗನಿಸಿತು. “ಜೀವಿತದ ಉದ್ದೇಶದ ಕುರಿತು ನಾನು ಕುತೂಹಲಿಯಾಗುತ್ತಿದ್ದೆ. ಕೇವಲ ಕೆಲಸಮಾಡುವುದು ಮತ್ತು ಹಣವನ್ನು ಮಾಡುವುದು ಮಾತ್ರವೇ ಅದರ ಉದ್ದೇಶವಾಗಿತ್ತೊ?”

ತದನಂತರ ಒಂದು ದಿನ ಯಾರೋ ಒಬ್ಬರು ಅವಳ ಅಂಗಡಿಗೆ ಬಂದರು ಮತ್ತು ಅವಳು ಕುತೂಹಲಗೊಂಡಿದ್ದಂತಹದ್ದೇ ಪ್ರಶ್ನೆಯನ್ನು ಅವಳಿಗೆ ಕೇಳಿದರು. ಆ ಪ್ರಶ್ನೆಗೆ ಬೈಬಲು ಉತ್ತರವನ್ನು ಕೊಡಸಾಧ್ಯವಿದೆಯೆಂದು ಅವಳಿಗೆ ಹೇಳಲಾಯಿತು. ಈ ಹಿಂದೆ ಅವಳು ಬೈಬಲನ್ನು ಎಂದೂ ಓದಿರದಿದ್ದಾಗ್ಯೂ, ಅದನ್ನು ಪರೀಕ್ಷಿಸಲಿಕ್ಕಾಗಿ ಪ್ರತಿ ವಾರ ಒಂದು ತಾಸನ್ನು ಬದಿಗಿರಿಸಲು ಅವಳು ಒಪ್ಪಿಕೊಂಡಳು.

ಅವಳ ವಾರದ ಅಧ್ಯಯನದಿಂದ, ತಾನು ಪ್ರತಿ ದಿನ ನೋಡುತ್ತಿದ್ದ ಅನೇಕ ವಿಷಯಗಳನ್ನು ಬೈಬಲು ಮುಂತಿಳಿಸಿತ್ತು ಎಂಬುದನ್ನು ಲೀನಿ ಕಲಿತಳು. ಉದಾಹರಣೆಗೆ, ಮನುಷ್ಯರು “ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರು ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ” ಆಗಿರುವರು ಎಂದು ಮುಂತಿಳಿಸುತ್ತಾ, ಅವಳ ಸುತ್ತಲೂ ಅಸ್ತಿತ್ವದಲ್ಲಿದ್ದ ಮನೋಭಾವಗಳನ್ನು ಕಾಲಕ್ಕೆ ಮುಂಚೆಯೇ ಬೈಬಲ್‌ ಎಷ್ಟು ನಿಷ್ಕೃಷ್ಟವಾಗಿ ವಿವರಿಸಿದೆ ಎಂಬುದನ್ನು ಕಂಡು ಅವಳು ಆಶ್ಚರ್ಯಗೊಂಡಳು. ಲೋಕವ್ಯಾಪಕವಾಗಿ ಕಂಡುಬರುವ ಯುದ್ಧಗಳು, ಬರಗಾಲಗಳು, ಮತ್ತು ನೈಸರ್ಗಿಕ ವಿಪತ್ತುಗಳಿಂದ ಉಂಟುಮಾಡಲ್ಪಡುವ ಅಭೂತಪೂರ್ವ ಕಷ್ಟಾನುಭವಗಳಿಗೆ ನಿರ್ದೇಶಿಸುವ ಇತರ ಪ್ರವಾದನೆಗಳನ್ನು ಅವಳು ಅಭ್ಯಸಿಸಿದಳು.—2 ತಿಮೊಥೆಯ 3:1-5; ಮತ್ತಾಯ 24:7, 12.

ಅವಳನ್ನು ಬಹಳ ಸಂತೋಷಿತಳನ್ನಾಗಿ ಮಾಡಿದ ಏನನ್ನೋ ಲೀನಿ ಬಳಿಕ ಕಲಿತಳು—ಅನೇಕವೇಳೆ ಜನರ ಸಂತೋಷವನ್ನು ಕಸಿಯುವ ಲೋಕದ ಈ ಪರಿಸ್ಥಿತಿಗಳು, ಮಾನವ ಇತಿಹಾಸದಲ್ಲಿ ಒಂದು ಹೊಸ ಯುಗವು ಸಮೀಪದಲ್ಲಿದೆ ಎಂಬುದನ್ನು ಸೂಚಿಸುತ್ತವೆ ಎಂಬುದೇ. (ಮತ್ತಾಯ 24:3-14) ಅಪರಿಪೂರ್ಣ ಮಾನವನು ಎಂದೂ ತಿಳಿದಿರದ ಅಭೂತಪೂರ್ವ ಮಟ್ಟದ ಪ್ರಾಪಂಚಿಕ ಸಮೃದ್ಧಯು ಲೋಕವ್ಯಾಪಕವಾಗಿ ಬಳಕೆಯಲ್ಲಿರುವಂತಹ ಒಂದು ಹೊಸ ಲೋಕವನ್ನು ಭೂಮಿಯ ಮೇಲೆ ಸ್ಥಾಪಿಸುವಂತೆ ಮಾನವಕುಲದ ಸೃಷ್ಟಿಕರ್ತನು ಉದ್ದೇಶಿಸುತ್ತಾನೆಂಬುದನ್ನು ಸಹ ಅವಳು ಬೈಬಲಿನಲ್ಲಿ ಓದಿದಳು. (ಕೀರ್ತನೆ 72:16; ಯೆಶಾಯ 65:17, 18, 21, 22) ಭವಿಷ್ಯತ್ತಿನ ಈ ಸಮೃದ್ಧ ಸಮಾಜವು, ಲೋಭ, ಸ್ವಾರ್ಥ, ಮತ್ತು ಪ್ರಾಪಂಚಿಕತೆಗಳು ಮತ್ತು ಅವುಗಳ ಸಕಲ ದುಷ್ಪರಿಣಾಮಗಳ ಇರುವಿಕೆಯಿಂದ ಕೆಟ್ಟುಹೋಗದು. (ಕೀರ್ತನೆ 37:9-11, 29; 1 ಕೊರಿಂಥ 6:9, 10) “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು” ಎಂಬ ಈ ಮಾತುಗಳನ್ನು ಬೈಬಲಿನಲ್ಲಿ ಓದಿದಾಗ ಅವಳು ರೋಮಾಂಚನಗೊಂಡಳು.—2 ಪೇತ್ರ 3:13.

ನಿಮಗಾಗಿ ಸಂತೋಷವು ಕಾದಿದೆ

ಪ್ರಾಪಂಚಿಕ ಗುರಿಗಳ ಬೆನ್ನಟ್ಟುವಿಕೆಯಲ್ಲಿ ತನ್ನ ಎಲ್ಲಾ ಸಮಯವನ್ನು ಕಳೆಯುವುದಕ್ಕೆ ಬದಲಾಗಿ, ಲೀನಿ ಈಗ ತಾನು ಕಲಿತ ವಿಷಯಗಳ ಕುರಿತು ಇತರರಿಗೆ ಹೇಳುತ್ತಾ ತನ್ನ ಅಧಿಕಾಂಶ ಸಮಯವನ್ನು ಕಳೆಯುತ್ತಾಳೆ. ಆಶ್ಚರ್ಯಕರವಾದ ಈ ವಾಗ್ದಾನಗಳ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಅಪೇಕ್ಷಿಸುವಿರೊ? ಲೀನಿ, ಯುಂಕೂನ್‌, ಮೇಶೋ, ಮತ್ತು ಇತರ ಲಕ್ಷಾಂತರ ಮಂದಿ ಕಂಡುಕೊಂಡಿರುವ ಸಂತೋಷವನ್ನು ಕಂಡುಕೊಳ್ಳಲು ಬೈಬಲು ಹೇಗೆ ನಿಮಗೆ ಸಹಾಯ ಮಾಡುತ್ತದೆಂಬುದನ್ನು ಕಂಡುಹಿಡಿಯಲು ನೀವು ಇಷ್ಟಪಡುವಿರೊ? ನಿಮಗೆ ಸಹಾಯ ಮಾಡಲು ಯೆಹೋವನ ಸಾಕ್ಷಿಗಳು ಅತಿ ಹೆಚ್ಚು ಮನಸ್ಸುಳ್ಳವರಾಗಿದ್ದಾರೆ.

[ಪುಟ 8,9 ರಲ್ಲಿರುವಚಿತ್ರಗಳು]

ಭೂಪ್ರಮೋದವನವನ್ನು ಸ್ಥಾಪಿಸಲು ನಮ್ಮ ಸೃಷ್ಟಿಕರ್ತನು ಉದ್ದೇಶಿಸುತ್ತಾನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ