‘ನನ್ನ ಮಗನ ಜೀವವನ್ನು ರಕ್ಷಿಸಿದ ವಿಷಯ’
ಕಾವಲಿನಬುರುಜು ಮತ್ತು ಅದರ ಸಂಗಾತಿ ಪತ್ರಿಕೆಯಾದ, ಎಚ್ಚರ!ದಲ್ಲಿ ತಾನು ಏನನ್ನು ಓದಿದ್ದಳೋ ಆ ವಿಷಯವು ತನ್ನ ಮಗನ ಜೀವವನ್ನು ರಕ್ಷಿಸಿತು ಎಂದು ಅಮೆರಿಕದ ಕ್ಯಾಲಿಫೋರ್ನಿಯದಲ್ಲಿನ ಒಬ್ಬ ತಾಯಿ ವಿವರಿಸಿದಳು. ಅವಳು ಬರೆದದ್ದು:
“ನನ್ನ ಚಿಕ್ಕ ಮಗ (ನಾಲ್ಕು ವರ್ಷದವನು) ಮತ್ತು ನಾನು ಬಂದೂಕಿನಿಂದ ಕೊಲ್ಲಲ್ಪಡುವ ಒಂದು ಬೆದರಿಕೆಯಿಂದ ಅಪಹರಿಸಲ್ಪಟ್ಟೆವು ಹಾಗೂ ನನ್ನ ಬ್ಯಾಂಕಿಗೆ ಹೋಗುವಂತೆ ಒತ್ತಾಯಿಸಲ್ಪಟ್ಟೆವು. ಆಕ್ರಮಣಕಾರನು ನನ್ನನ್ನು ಸುಲಿಗೆ ಮಾಡಿದನು, ಆದರೆ ನಾನು ನನ್ನ ಮಗನನ್ನು ಸೆಳೆದುಕೊಂಡು, ತಪ್ಪಿಸಿಕೊಳ್ಳಲು ಶಕ್ತಳಾದೆ. ಈ ಅತ್ಯಂತ ಅಮೂಲ್ಯ ಪತ್ರಿಕೆಗಳಲ್ಲಿ ಮುದ್ರಿಸಲ್ಪಟ್ಟ ಬೈಬಲಿನ ಪ್ರಾಯೋಗಿಕ ಸಲಹೆಗಳು, ನನ್ನ ಮಗನ ಹಾಗೂ ನನ್ನ ಸ್ವಂತ ಜೀವವನ್ನು ನಿಜವಾಗಿಯೂ ರಕ್ಷಿಸಿದವು ಎಂದು ನಾನು ಭಾವಿಸುತ್ತೇನೆ.”
ಇನ್ನೂ ಹೆಚ್ಚಿನ ವಿವರಣೆಯನ್ನು ತಾಯಿ ಕೂಡಿಸಿದಳು: “ಇಂತಹ ಒಂದು ಅಪಾಯಕರ ಸನ್ನಿವೇಶದಿಂದ ಎದುರಿಸಲ್ಪಡುವಾಗ, ಹೇಗೆ ಶಾಂತರಾಗಿ ಇರಬೇಕೆಂದು ಈ ಮುಂಚೆ ಎಚ್ಚರ! ಪತ್ರಿಕೆಗಳಲ್ಲೊಂದರಲ್ಲಿ ನಾನು ಓದಿದ್ದೆ. ತತ್ಕ್ಷಣವೇ ನಾನು ಶಾಂತಳಾಗಿರುವಂತೆ ನನಗೆ ಸಹಾಯ ಮಾಡಲಿಕ್ಕಾಗಿ ಯೆಹೋವ ದೇವರಿಗೆ ಪ್ರಾರ್ಥಿಸಿದೆ. ಬೈಬಲ್ ವಚನಗಳನ್ನು ಆಕ್ರಮಣಕಾರನಿಗೆ ಎತ್ತಿ ಹೇಳುವ ಮೂಲಕ ಅವನನ್ನು ಶಾಂತವಾಗಿರಿಸಲೂ ನಾನು ಶಕ್ತಳಾದೆ.”
ನಮ್ಮ ತೊಂದರೆಯುಕ್ತ ಸಮಯಗಳು ಬೈಬಲಿನಲ್ಲಿ ಮುಂತಿಳಿಸಲ್ಪಟ್ಟಿದ್ದವು ಎಂದು ತೋರಿಸುವುದು ಕಾವಲಿನಬುರುಜು ಮತ್ತು ಎಚ್ಚರ!ದ ಉದ್ದೇಶವಾಗಿದೆ. ಇಂದಿನ ಪ್ರಯಾಸಕರ ಪರಿಸ್ಥಿತಿಗಳನ್ನು ನಿಭಾಯಿಸುವಂತೆ ಜನರಿಗೆ ಸಹಾಯವನ್ನು ಸಹ ಅವು ಒದಗಿಸುತ್ತವೆ. ಆದರೆ ಈ ಪತ್ರಿಕೆಗಳು ಇನ್ನೂ ಅತ್ಯಧಿಕವಾದುದನ್ನು ಮಾಡುತ್ತವೆ. ಅವು ಒಂದೇ ಒಂದು ಶಾಶ್ವತ ಪರಿಹಾರ—ತನ್ನ ಹಿಂಬಾಲಕರು ಯಾವುದಕ್ಕಾಗಿ ಪ್ರಾರ್ಥಿಸುವಂತೆ ಯೇಸು ಕ್ರಿಸ್ತನು ಕಲಿಸಿದನೋ ಆ ದೇವರ ರಾಜ್ಯ ಸರಕಾರ—ವನ್ನು ಎತ್ತಿತೋರಿಸುತ್ತವೆ. (ಮತ್ತಾಯ 6:9, 10) ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಕ್ರಮವಾಗಿ ಓದುವ ಮೂಲಕ ನೀವು ನಿಶ್ಚಯವಾಗಿ ಪ್ರಯೋಜನವನ್ನು ಪಡೆಯಬಲ್ಲಿರಿ.
ನಿಮ್ಮ ಮನೆಗೆ ಅಂಚೆಯ ಮೂಲಕ ಕಾವಲಿನಬುರುಜು ಮತ್ತು ಎಚ್ಚರ!ದ ಪ್ರತಿಗಳು ಕಳುಹಿಸಲ್ಪಡಬೇಕೆಂದು ನೀವು ಬಯಸುವಲ್ಲಿ, Praharidurg Prakashan Society, Plot A/35, Nr Industrial Estate, Nangargaon, Lonavla, 410 401 Mah., ಇವರಿಗೆ, ಅಥವಾ ಪುಟ 5ರಲ್ಲಿ ಕೊಟ್ಟಿರುವ ತಕ್ಕ ವಿಳಾಸಕ್ಕೆ ಬರೆಯಿರಿ.