“ಧೂಮಪಾನ ಅಸಹ್ಯವಾದ ಚಾಳಿ”
ಇತ್ತೀಚಿನ ವರ್ಷಗಳಲ್ಲಿ ಕ್ಯಾಲಿಫೋರ್ನಿಯಾದ ಆರೋಗ್ಯ ಸೇವೆಗಳ ಇಲಾಖೆಯು ಧೂಮಪಾನದ ವಿರುದ್ಧ ಒಂದು ಚಟುವಟಿಕೆಯುಳ್ಳ ಶೈಕ್ಷಣಿಕ ಚಳವಳಿಯನ್ನು ನಡೆಸಿದೆ. ಸುದ್ದಿ ಚಿಕ್ಕದೂ ಒರಟೂ ಆಗಿದೆ ಮತ್ತು ರಾಜ್ಯದೆಲ್ಲೆಡೆಯಲ್ಲಿ ಜಾಹಿರಾತು ಹಲಗೆಗಳ ಮೇಲೆ ಕಾಣಿಸಿಕೊಂಡಿದೆ. ಸುದ್ದಿಗಳಲ್ಲಿ ಕೆಲವು ಯಾವುವು? “ಧೂಮಪಾನಿಗಳು ವ್ಯಸನಿಗಳು. ತಂಬಾಕಿನ ಸಂಸ್ಥೆಗಳು ನ್ಯಾಯ ವಿರುದ್ಧ ವ್ಯಾಪಾರಿಗಳು. ಧೂಮಪಾನ ಅಸಹ್ಯವಾದ ಚಾಳಿ.” “ಉಪಯೋಗಿಸಿಬಿಟ್ಟ ಹೊಗೆ ಈ ವರ್ಷ 50,000 ಮಂದಿ ಧೂಮಪಾನಿಗಳಲ್ಲದವರನ್ನು ಕೊಲ್ಲುವುದು. ಧೂಮಪಾನ ಅಸಹ್ಯವಾದ ಚಾಳಿ.” ಮತ್ತೊಂದು ಜಾಹೀರಾತಿನ ಹಲಗೆ, ಸಿಗರೇಟ್ ಪ್ಯಾಕ್‌ನ ಚಿಹ್ನೆಯ ಕೆಳಗೆ ಹೇಳುವುದು, “ಈಗ ಕೊಳ್ಳಿ. ಅನಂತರ ಪಾವತಿ ಮಾಡಿ.” ನಿಮ್ಮ ಜೀವವನ್ನು ಕಳೆದುಕೊಳ್ಳುವುದರ ಮೂಲಕ ನೀವು ಪಾವತಿ ಮಾಡುವಿರಿ ನಿಶ್ಚಯ. ಸ್ಪ್ಯಾನಿಷ್‌ನಲ್ಲಿ ಒಂದು ಜಾಹೀರಾತು ನಮೂದಿಸುವುದು: “ಮೆ ಮ್ವೇರೋ ಪೋರ್ ಫೂಮಾರ್.” ಇದೊಂದು ಹದಿರುನುಡಿಯಾಗಿದೆ, “ನಾನು ಧೂಮಪಾನ ಮಾಡಲು ಕ್ಲೇಶಪಡುತ್ತಿದ್ದೇನೆ [ಸಾಯುತ್ತಿದ್ದೇನೆ]” ಅಥವಾ, “ನಾನು ಧೂಮಪಾನ ಮಾಡುವ ಕಾರಣ ಅಕ್ಷರಾರ್ಥಕವಾಗಿ ಸಾಯುತ್ತಿದ್ದೇನೆ.” ಅರ್ಧ—ಕಪಾಲದ—ಅರ್ಧ—ಮುಖದ ಛಾಯಾಚಿತ್ರವು ವಿಷಯವನ್ನು ಸ್ಫುಟಗೊಳಿಸುತ್ತದೆ.
ಜನರನ್ನು ತಂಬಾಕು ಮತ್ತು ನಿಕೊಟೀನ್‌ನಿಂದ ತಿರುಗಿಸಿ, ಸಲಹೆ ಕೊಡಲು ಉಪಯೋಗಿಸುವ ಇನ್ನೊಂದು ಉಪಾಯವು, “ಡೆತ್” (ಮೃತ್ಯು) ಎಂದಿರುವ ಸಿಗರೇಟ್‌ನ ಬ್ರ್ಯಾಂಡ್ ಆಗಿದೆ. ಆ ಕಪ್ಪು ಕಂತೆ, ತಲೆಬುರುಡೆ ಮತ್ತು ಅಡ್ಡೆಲುಬುಗಳ ಒಂದು ಚಿಹ್ನೆಯನ್ನೂ ಹೀಗೆ ಹೇಳುವ ಹೇಳಿಕೆಯನ್ನೂ ಹೊತ್ತಿದೆ: “ಸಿಗರೇಟ್‌ಗಳು ಚಟಹಿಡಿಸುತ್ತವೆ ಮತ್ತು ದುರ್ಬಲಗೊಳಿಸುತ್ತವೆ. ನೀವು ಸೇದದಿರುವುದಾದರೆ, ಪ್ರಾರಂಭಿಸಬೇಡಿ. ನೀವು ಸೇದುತ್ತಿರುವುದಾದರೆ, ಬಿಟ್ಟುಬಿಡಿ.”
ಜಾಹೀರಾತು ಹಲಗೆಗಳ ಮೇಲೆ ಉಪಯೋಗಿಸುತ್ತಿರುವ ತಲ್ಲಣಿಸುವ ಸುದ್ದಿಗಳ ವಿಧಾನವು ಈಗಾಗಲೇ ಸೇದುತ್ತಿರುವವರ ಮೇಲೆ ಏನಾದರೂ ಪರಿಣಾಮವನ್ನು ಬೀರಿದೆಯೋ ಎಂದು ತಿಳಿಯುವುದು ಕ್ಲಿಷ್ಟಕರ. ಆದರೂ, ಕಳೆದ ಆರು ವರ್ಷಗಳಲ್ಲಿ, “ಕ್ಯಾಲಿಫೋರ್ನಿಯಾದಲ್ಲಿ ಹೊಗೆಸೊಪ್ಪಿನ ಉಪಯೋಗವು ರಾಷ್ಟ್ರೀಯ ಸರಾಸರಿಗೆ ಸುಮಾರು ಮುಮ್ಮಡಿಯಾಗಿ, ಶೇಕಡ 27ರಷ್ಟು ಇಳಿತವನ್ನು ಹೊಂದಿದೆ.” (ದ ವಾಷಿಂಗ್‌ಟನ್ ಪೋಸ್ಟ್ ನ್ಯಾಷನಲ್ ವೀಕ್ಲೀ ಎಡಿಷನ್) ಜಾಹೀರಾತು ಚಳವಳಿ ಭಾವೀ ಧೂಮಪಾನಿಗಳನ್ನೂ ಈ ಅಪಾಯಕಾರಿಯಾದ ಚಟದಿಂದ ದೂರಕ್ಕೆ ತಿರುಗಿಸಬಹುದು. ನಿಸ್ಸಂಶಯವಾಗಿ, ಕ್ರೈಸ್ತರೆಂದು ಹೇಳಿಕೊಳ್ಳುವವರು ಈ ಅಶುದ್ಧವಾದ, ಸ್ವಾರ್ಥ ದುರ್ಗುಣವನ್ನು ತ್ಯಜಿಸಬೇಕು. ಅಪೊಸ್ತಲ ಪೌಲನು ಬರೆದದ್ದು: “ಪ್ರಿಯರೇ, ಈ ವಾಗ್ದಾನಗಳು ನಮಗಿರುವದರಿಂದ ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತವ್ವನ್ನು ಸಿದ್ಧಿಗೆ ತರುವದಕ್ಕೆ ಪ್ರಯತ್ನಿಸೋಣ.”—2 ಕೊರಿಂಥ 7:1.