“ಸರಿಸಮ-ಅವಕಾಶದ ಒಂದು ದುರಂತ”
“ಹದಿವಯಸ್ಕ ಹುಡುಗಿಯರು ಅವರಿಗೆ ರವಾನಿಸಲ್ಪಡುವ ಸಂದೇಶವನ್ನು ಗ್ರಹಿಸುತ್ತಿಲ್ಲ” ಎಂದು ದ ಟೊರಾಂಟೊ ಸ್ಟಾರ್ ವರದಿಸುತ್ತದೆ. ಯಾವ ಸಂದೇಶ? ಧೂಮಪಾನವು ಒಂದು ಮಾರಕವಾದ ಚಾಳಿಯಾಗಿದೆ ಎಂಬುದೇ. ಅದೇ ವಯೋವರ್ಗದ 19 ಶೇಕಡ ಹುಡುಗರೊಂದಿಗೆ ಹೋಲಿಸಿದಾಗ, 15 ಮತ್ತು 19ರ ವಯಸ್ಸಿನ ನಡುವಿನ ಕೆನಡದ ಹುಡುಗಿಯರಲ್ಲಿ 25 ಶೇಕಡ ಧೂಮಪಾನಿಗಳಾಗಿದ್ದರೆಂದು 1991ರ ಒಂದು ಅಧ್ಯಯನವು ಪ್ರಕಟಪಡಿಸಿತು. ವಯಸ್ಕರ ನಡುವೆಯೂ, ಸ್ತ್ರೀ ಧೂಮಪಾನಿಗಳು ತಮ್ಮ ಪುರುಷರ ಪಡಿರೂಪಗಳಿಗಿಂತ ಹೆಚ್ಚಾಗಿದ್ದಾರೆ. “ಹೆಂಗಸರ ನಡುವೆ ತಂಬಾಕಿನ ಉಪಯೋಗವು, ಸರಿಸಮ-ಅವಕಾಶದ ಒಂದು ದುರಂತವಾಗಿದೆ” ಎಂದು ಸ್ಮೋಕ್-ಫ್ರೀ ಕೆನಡ ಸಂಘದ ತಜ್ಞರು ಗಮನಿಸಿದರು.
ಹದಿವಯಸ್ಕ ಹುಡುಗಿಯರು ಏಕೆ ಧೂಮಪಾನ ಮಾಡಲಾರಂಭಿಸುತ್ತಾರೆ? ಕುತೂಹಲ, ಸಮಾನಸ್ಥರ ಒತ್ತಡ, ಮತ್ತು ದಂಗೆ, ಒಂದು ಪಾತ್ರವನ್ನು ವಹಿಸುತ್ತವೆ. ಆದಾಗಲೂ, ಹೆಣ್ಣು ಧೂಮಪಾನಿಗಳನ್ನು ತೆಳ್ಳಗಿರುವವರಂತೆ ಚಿತ್ರಿಸುವ ಜಾಹೀರಾತು ಕೈಗಾರಿಕೆಯನ್ನು ಉಪೇಕ್ಷಿಸಲು ಸಾಧ್ಯವಿಲ್ಲ. ಹೌದು, ಅನೇಕರು ಅತಿಯಾಗಿ ತಿನ್ನುವುದನ್ನು ತಡೆಗಟ್ಟಲಿಕ್ಕಾಗಿ ಪ್ರಯತ್ನಿಸಲು ಧೂಮಪಾನ ಮಾಡುತ್ತಾರೆ, ಮತ್ತು ಅವರು ಅದನ್ನು ನಿಲ್ಲಿಸುವುದಾದರೆ ತೂಕವನ್ನು ಹೆಚ್ಚಿಸಿಕೊಳ್ಳುವರೆಂದು ಭಯಪಡುತ್ತಾರೆ. ದುರಂತಮಯವಾಗಿ, ಈ ಹೆಂಗಸರು ಕ್ಯಾನ್ಸರಿನ ಬೆದರಿಕೆಗಿಂತ, ತೂಕದ ಗಳಿಸುವಿಕೆಯ ಬೆದರಿಕೆಯ ಕುರಿತಾಗಿ ಹೆಚ್ಚು ಚಿಂತಿತರಾಗಿರಬಹುದು. ಟೊರಾಂಟೊ ವಿಶ್ವವಿದ್ಯಾನಿಲಯದಲ್ಲಿ ಒಬ್ಬ ಸಹಾಯಕ ಪ್ರೊಫೆಸರ್ ಆಗಿರುವ ರಾಬರ್ಟ್ ಕೊಆ್ಯಮ್ಸ್, ಅವರ ಮನೋಭಾವವನ್ನು ಸಾರಾಂಶಿಸಿದ್ದು: “ಶ್ವಾಸಕೋಶದ ಕ್ಯಾನ್ಸರ್ 20 ವರ್ಷ ದೂರದಲ್ಲಿದೆ. ತೂಕದ ಗಳಿಸುವಿಕೆಯು ತತ್ಕ್ಷಣವಾಗಿರುತ್ತದೆ.”
ಸಿಗರೇಟ್ ಸೇದುವಿಕೆಯನ್ನು ಸ್ವಾತಂತ್ರ್ಯದೊಂದಿಗೆ ಜೋಡಿಸುವುದರ ಮೂಲಕ, ತಂಬಾಕು ಕೈಗಾರಿಕೆಯು ಹೆಂಗಸರನ್ನು ಗುರಿಹಲಗೆಗಳನ್ನಾಗಿ ಮಾಡುತ್ತದೆ. ಆದರೂ, ಅಮೆರಿಕದ ಇಬ್ಬರು ಶಸ್ತ್ರಚಿಕಿತ್ಸಕ ಜೆನೆರಲ್ಗಳಿಗೆ ಮಾಜಿ ಸಲಹೆಗಾರರಾಗಿದ್ದ ಜೀನ್ ಕಿಲ್ಬಾರ್ನ್, ವಿವೇಕಯುತವಾಗಿ ತಿಳಿಸಿದ್ದು: “ಮರಣವನ್ನು ಕಟ್ಟಕಡೆಯ ಸ್ವಾತಂತ್ರ್ಯವೆಂದು ಒಬ್ಬನು ಪರಿಗಣಿಸುವಲ್ಲಿ ಮಾತ್ರವೇ, ಒಬ್ಬನು ಸಿಗರೇಟ್ ಸೇದುವಿಕೆಯನ್ನು ಬಿಡುಗಡೆಮಾಡುವಂತಹದ್ದಾಗಿ ಪರಿಗಣಿಸಸಾಧ್ಯವಿದೆ.”