ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g95 9/8 ಪು. 28-29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅಪಾಯಕ್ಕೊಳಗಾದ ದೈತ್ಯ ಆಮೆಗಳು
  • ಅಮಲೌಷಧದ ವ್ಯಾಪಾರ ಭಾರಿ ವ್ಯಾಪಾರ
  • ಹೆಂಗಸರ ವಿರುದ್ಧ ಅಧಿಕ ಹಿಂಸಾಚಾರ
  • “ಭೌಗೋಲಿಕ ತುರ್ತು”
  • ನಾಲ್ಕು ಚಕ್ರದ ವಾಹನವನ್ನು ಓಡಿಸುವುದು ಹೆಚ್ಚು ಸುರಕ್ಷಿತವೊ?
  • ನವೀನ ಸಾಧನವು ಹೃದಯಾಘಾತದ ಅಪಾಯದ ಕುರಿತು ಎಚ್ಚರಿಸುತ್ತದೆ
  • ದೊಡ್ಡ ನಗರದಲ್ಲಿ ಜೀವನ
  • “ನಿಮ್ಮ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ತಿನ್ನಿರಿ”
  • ಹಿಂಸೆಯನ್ನು ಪ್ರೇರಿಸುವ ಆಟಿಕೆಗಳು
  • ವಿಷವುಳ್ಳ ಆವಿ
  • ಮಾಟದ ಕುರಿತು ನಿಮಗೇನು ಗೊತ್ತು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ನಿರಾಶ್ರಿತರ ಬೆಳೆಯುತ್ತಿರುವ ಸಂಖ್ಯೆಗಳು
    ಎಚ್ಚರ!—1996
  • ‘ಸಂತೋಷದಿಂದ ಯೆಹೋವನ ಸೇವೆಮಾಡಲು’ ‘ಪರದೇಶದವರಿಗೆ’ ಸಹಾಯಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಧರ್ಮವು ಪಕ್ಷ ವಹಿಸುತ್ತದೆ
    ಎಚ್ಚರ!—1994
ಇನ್ನಷ್ಟು
ಎಚ್ಚರ!—1995
g95 9/8 ಪು. 28-29

ಜಗತ್ತನ್ನು ಗಮನಿಸುವುದು

ಅಪಾಯಕ್ಕೊಳಗಾದ ದೈತ್ಯ ಆಮೆಗಳು

ಗಲಾಪಗಸ್‌ ದ್ವೀಪಗಳ ದೈತ್ಯ ಆಮೆಯು, ಅಪಾಯಕ್ಕೊಳಗಾದ ಒಂದು ಜಾತಿಯಂತೆ ಅಂತಾರಾಷ್ಟ್ರೀಯವಾಗಿ ಪ್ರಸಿದ್ಧಿ ಪಡೆದಿದೆ ಮತ್ತು ಸಂರಕ್ಷಿಸಲ್ಪಟ್ಟಿದೆ. ಆದರೆ ಇತ್ತೀಚೆಗೆ, ಈ ಸ್ಥೂಲವಾದ ಸರೀಸೃಪಗಳು ಒಂದು ಹೊಸ ಗಂಡಾಂತರವನ್ನು ಎದುರಿಸುತ್ತಿವೆ ಎಂಬುದು ವ್ಯಕ್ತವಾಗಿದೆ. ಒಂದು ತಿಂಗಳಿನ ವರೆಗೆ ಗಲಾಪಗಸ್‌ ದ್ವೀಪಸ್ತೋಮದ ಇಸೆಬೆಲಾ ದ್ವೀಪದ ಉದ್ದಕ್ಕೂ ಬೆಂಕಿಯು ಹೊತ್ತಿಕೊಂಡು ಉರಿಯಿತು. ಪರಿಹಾರ ಕಾರ್ಮಿಕರು ದ್ವೀಪದ ಬಹುಬೆಲೆಯುಳ್ಳ 6,000 ಆಮೆಗಳನ್ನು ರಕ್ಷಿಸಲು ಕಂದಕಗಳನ್ನು ತೋಡಿದರು ಮತ್ತು ಅವುಗಳಲ್ಲಿ 400ನ್ನು, ವಿಶೇಷವಾದ ಸುರಕ್ಷಿತ ಸ್ಥಳಕ್ಕೂ ಸ್ಥಳಾಂತರಿಸಿದರು. ಈ ಎರಡನೆಯ ಕ್ರಮವನ್ನು ತೆಗೆದುಕೊಂಡದ್ದು, ಆಮೆಗಳನ್ನು ಮುಖ್ಯವಾಗಿ ಬೆಂಕಿಗಳಿಂದಲ್ಲ, ಜನರಿಂದ ರಕ್ಷಿಸಲಿಕ್ಕಾಗಿಯೇ. ದ ಯುನೆಸ್ಕೋ ಕುರಿಯರ್‌ಗನುಸಾರ, “ಆಮೆಗಳ ಬೇಟೆಯು ನ್ಯಾಯವಿರುದ್ಧವಾಗಿದ್ದರೂ, ಸ್ಪಷ್ಟವಾಗಿಗಿ ಒಂದು ಸಾಂಪ್ರದಾಯಿಕ ಆಚರಣೆಯಾಗಿದೆ. ಆಮೆಗಳ, ಪ್ರತ್ಯೇಕವಾಗಿ ಹೆಣ್ಣು ಆಮೆಗಳ ಮಾಂಸ, ಮತ್ತು ಅವುಗಳ ರಕ್ತವು ವಿಶೇಷವಾಗಿ ರಸವತ್ತಾಗಿರುವುದಲದ್ಲೆ, ಔಷಧದ ಗುಣಗಳುಳ್ಳದ್ದೆಂದು ಎಣಿಸಲಾಗಿದೆ.” ಮಾನವರಿಂದ ತಿನ್ನಲ್ಪಟ್ಟಿದ್ದ ಈ ದೈತ್ಯ ಆಮೆಗಳಲ್ಲಿ, 42 ದೈತ್ಯ ಆಮೆಗಳ ಉಳಿಕೆಗಳನ್ನು, ಪರಿಹಾರ ಕಾರ್ಮಿಕರು ಕಂಡುಕೊಂಡರು.

ಅಮಲೌಷಧದ ವ್ಯಾಪಾರ ಭಾರಿ ವ್ಯಾಪಾರ

“ಅಂತಾರಾಷ್ಟ್ರೀಯ ಅಮಲೌಷಧದ ವ್ಯಾಪಾರವು, ವಾರ್ಷಿಕವಾಗಿ 400 ಬಿಲಿಯನ್‌ ಯುಎಸ್‌ ಡಾಲರುಗಳನ್ನು ಹೀರಿಕೊಳ್ಳುತ್ತಾ ಮತ್ತು ಏಷಿಯದಲ್ಲಿ ರಾಜಕೀಯ ವ್ಯವಸ್ಥೆಗಳನ್ನು ಉರುಳಿಸುತ್ತಾ, ಶಸ್ತ್ರಾಸ್ತ್ರಗಳ ವ್ಯಾಪಾರದ ನಂತರ, ಲೋಕದ ಎರಡನೆಯ ಅತ್ಯಂತ ಲಾಭಕರ ವ್ಯಾಪಾರವಾಗಿ ಪರಿಣಮಿಸಿದೆ,” ಎಂದು ಆಸ್ಟ್ರೇಲಿಯನ್‌ ವಾರ್ತಾಪತ್ರಿಕೆಯಾದ ದ ಸಿಡ್ನಿ ಮಾರ್ನಿಂಗ್‌ ಹೆರಲ್ಡ್‌ ಹೇಳುತ್ತದೆ. ಇಷ್ಟೊಂದು ಹಣದ ಮೊತ್ತಕ್ಕೆ “ಬಹುಮಟ್ಟಿಗೆ ಪ್ರತಿಯೊಬ್ಬರನ್ನೂ ಭ್ರಷ್ಟಗೊಳಿಸುವ ಶಕ್ತಿಯಿದೆ,” ಎಂದು ಇಂಟರ್‌ಪೋಲ್‌ನ ಸೆಕ್ರಿಟರಿ ಜನರಲ್‌ ಹೇಳುತ್ತಾರೆ. ಏಷಿಯ, ಗಮನದ ಕೇಂದ್ರವಾಗಿದೆ ಯಾಕೆಂದರೆ, ಲೋಕದ ಹಿರೋಯಿನ್‌ನ 80ಕ್ಕಿಂತಲೂ ಹೆಚ್ಚಿನ ಪ್ರತಿಶತವು, ಮ್ಯಾನ್ಮಾರ್‌, ಥಾಯ್‌ಲೆಂಡ್‌, ಮತ್ತು ಲಾವೊಸ್‌ನ ಗಡಿನಾಡುಗಳ ಬಳಿ ಗೋಲ್ಡನ್‌ ಟ್ರೈಆ್ಯಂಗಲ್‌ನಲ್ಲಿ ಅಷ್ಟೇ ಅಲ್ಲದೆ ಅಫ್ಘಾನಿಸ್ತಾನ್‌ ಮತ್ತು ಪಾಕಿಸ್ತಾನದ ಗೋಲ್ಡನ್‌ ಕ್ರಿಸೆಂಟ್‌ನಲ್ಲಿ ಉತ್ಪಾದಿಸಲಾಗುತ್ತದೆ. ಇಂಟರ್‌ಪೋಲ್‌ನ ಮುಖ್ಯ ಅಮಲೌಷಧಗಳ ಅಧಿಕಾರಿಯು ಕೂಡಿಸುವುದು: “ಅಮಲೌಷಧದ ವ್ಯಾಪಾರವು, ಭಯೋತ್ಪಾದನೆಗೆ ಹಣಕಾಸು ಒದಗಿಸುವ ಪ್ರಧಾನವಾದ ಸಾಧನವಾಗಿದೆ.”

ಹೆಂಗಸರ ವಿರುದ್ಧ ಅಧಿಕ ಹಿಂಸಾಚಾರ

“ಹೆಂಗಸರ ಮೇಲೆ ತಮ್ಮ ಗಂಡಂದಿರಿಂದ ಅಥವಾ ಗಂಡು ಜೊತೆಗಾರರಿಂದ ಆಗುವ ಆಕ್ರಮಣಗಳು, ಲೋಕದ ಅತ್ಯಂತ ಸಾಮಾನ್ಯ ವಿಧದ ಹಿಂಸಾಚಾರವಾಗಿವೆ,” ಎಂದು ಯುಎನ್‌ ವರದಿಯ ಕುರಿತು ಒಂದು ಲೇಖನದಲ್ಲಿ ದಿ ಆಸ್ಟ್ರೇಲಿಯನ್‌ ಎಂಬ ವಾರ್ತಾಪತ್ರಿಕೆಯು ಹೇಳುತ್ತದೆ. “ಲೋಕದ 25 ಪ್ರತಿಶತದಷ್ಟು ಹೆಂಗಸರು ಹಿಂಸಾತ್ಮಕವಾಗಿ ಅಪಪ್ರಯೋಗಿಸಲ್ಪಡುತ್ತಾರೆ,” ಎಂದು ಆ ಲೇಖನವು ವಿವರಿಸುತ್ತದೆ. ಚಿಲಿ, ಥಾಯ್‌ಲೆಂಡ್‌, ಪಾಕಿಸ್ತಾನ್‌, ಪ್ಯಾಪುವ ನ್ಯೂ ಗಿನೀ, ಮತ್ತು ರಿಪಬ್ಲಿಕ್‌ ಆಫ್‌ ಕೊರಿಯದಂತಹ ಕೆಲವು ದೇಶಗಳಲ್ಲಿ ಈ ಪ್ರಮಾಣವು ಇನ್ನೂ ಹೆಚ್ಚಾಗಿದೆ. ಒಂದು ದೇಶದಲ್ಲಿ, ಅದೇ ಯುಎನ್‌ ವರದಿಯನ್ನು ಚರ್ಚಿಸುವುದರಲ್ಲಿ ದ ಸಿಡ್ನಿ ಮಾರ್ನಿಂಗ್‌ ಹೆರಲ್ಡ್‌ ಎಂಬ ಮತ್ತೊಂದು ವಾರ್ತಾಪತ್ರಿಕೆಗನುಸಾರ, ಸ್ತ್ರೀ ಜನಸಂಖ್ಯೆಯ ಸುಮಾರು 80 ಪ್ರತಿಶತವು ಅಪಪ್ರಯೋಗಿಸಲ್ಪಡುತ್ತಿದೆ. ಬಲಿಗಳಲ್ಲಿ ಅನೇಕರು ಸತತವಾದ ಭಾವಾತ್ಮಕ ಅಪಪ್ರಯೋಗವನ್ನೂ ಸಹಿಸಿಕೊಳ್ಳುತ್ತಾರೆ. ಸಾಂಸಾರಿಕ ಹಿಂಸೆಯನ್ನು ಬಗೆಹರಿಸುವುದು ಬಹಳ ಕಠಿನ, ಯಾಕೆಂದರೆ ಅದು ಬಹುಮಟ್ಟಿಗೆ ಯಾವಾಗಲೂ ಮನೆಯ ಏಕಾಂತದಲ್ಲಿ ಸಂಭವಿಸುತ್ತದೆ. ಅನೇಕವೇಳೆ ಮಿತ್ರರು, ನೆರೆಯವರು, ಮತ್ತು ಸಂಬಂಧಿಕರು ಅದನ್ನು ವರದಿಸಲು ಇಷ್ಟಪಡದವರಾಗಿರುತ್ತಾರೆ.

“ಭೌಗೋಲಿಕ ತುರ್ತು”

ಲೋಕದ ಏಳನೆಯ ವಾರ್ಷಿಕ ಏಡ್ಸ್‌ ದಿನದಂದು, ಪ್ಯಾರಿಸ್‌ನಲ್ಲಿ ಜರುಗಿದ ಏಡ್ಸ್‌ನ ಕುರಿತಾದ ಶೃಂಗ ಸಭೆಯಲ್ಲಿ, ಯುಎನ್‌ನ ಸೆಕ್ರಿಟರಿ ಜನರಲ್‌, ಬುಟ್ರೋಸ್‌ ಬುಟ್ರೋಸ್‌ ಘಾಲಿ, ಏಡ್ಸ್‌ ವ್ಯಾಧಿಯ ಗಾಬರಿಪಡಿಸುವಂತಹ ಪುರೋಗಮನದ ದೃಷ್ಟಿಯಿಂದ “ಭೌಗೋಲಿಕ ತುರ್ತಿನ ಸ್ಥಿತಿಯನ್ನು ಘೋಷಿಸುವಂತೆ” 42 ದೇಶಗಳು ಮತ್ತು 5 ಖಂಡಗಳಿಂದ ಬಂದಿದ್ದ ರಾಷ್ಟ್ರಾಧ್ಯಕ್ಷರನ್ನು ಮತ್ತು ಆರೋಗ್ಯ ಮಂತ್ರಿಗಳನ್ನು ಕೇಳಿಕೊಂಡರು. ಜುಲೈ 1993 ಮತ್ತು ಜುಲೈ 1994ರ ನಡುವೆ, ಏಡ್ಸ್‌ನ ಹರಡುವಿಕೆಯನ್ನು ನಿಯಂತ್ರಿಸುವ ಲೋಕವ್ಯಾಪಕ ಪ್ರಯತ್ನಗಳ ಹೊರತೂ, ಲೋಕದಲ್ಲಿನ ಏಡ್ಸ್‌ ಕೇಸುಗಳ ಒಟ್ಟು ಸಂಖ್ಯೆಯು ಸುಮಾರು 40 ಲಕ್ಷವನ್ನು ಮುಟ್ಟುತ್ತಾ, 60 ಪ್ರತಿಶತ ಹೆಚ್ಚಿತು. ಒಂದು ನಿರುತ್ಸಾಹಕ ವರದಿಯಲ್ಲಿ, ಲೋಕ ಆರೋಗ್ಯ ಸಂಸ್ಥೆಯು ಎಚ್ಚರಿಸಿದ್ದೇನೆಂದರೆ, ಬೆಳವಣಿಗೆಯ ಪ್ರಚಲಿತ ಪ್ರಮಾಣದಲ್ಲಿ ಏಡ್ಸ್‌ ವ್ಯಾಧಿಯು ನಿಶ್ಚಯವಾಗಿಯೂ “ಸಂಪೂರ್ಣ ಸಮಾಜಗಳ ಭವಿಷ್ಯವನ್ನು ಬೆದರಿಸುತ್ತಿದೆ” ಮತ್ತು ಇಸವಿ 2000ದಷ್ಟು ಬೇಗನೆ, ಮೂರರಿಂದ ನಾಲ್ಕು ಕೋಟಿ ಜನರು ಏಡ್ಸನ್ನುಂಟುಮಾಡುವ ಮಾರಕವಾದ ಏಚ್‌ಐವಿ ವೈರಸ್‌ನಿಂದ ಸೋಂಕಿಸಲ್ಪಟ್ಟಿರುವರೆಂದು ಅದು ಮುಂತಿಳಿಸಿತು.

ನಾಲ್ಕು ಚಕ್ರದ ವಾಹನವನ್ನು ಓಡಿಸುವುದು ಹೆಚ್ಚು ಸುರಕ್ಷಿತವೊ?

ನಾಲ್ಕು ಚಕ್ರದ ವಾಹನವನ್ನು—ವಿಶೇಷವಾಗಿ ಹಿಮ ಮತ್ತು ಮಂಜುಗಡ್ಡೆಯಲ್ಲಿ—ಓಡಿಸುವುದು ಯಾವಾಗಲೂ ಹೆಚ್ಚು ಸುರಕ್ಷಿತವೆಂದು ಅನೇಕರು ನಂಬುತ್ತಾರೆ. ಆದರೆ, “ನಿಲ್ಲಿಸುವ ವಿಷಯದಲ್ಲಿ, ನಾಲ್ಕು ಚಕ್ರದ ವಾಹನಗಳು ಎರಡು ಚಕ್ರದ ವಾಹನಗಳ ಸಂಬಂಧದಲ್ಲಿ ಮೇಲ್ಮೆ ಪಡೆದಿರುವುದಿಲ್ಲ,” ಎಂಬುದಾಗಿ ದ ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿಸುತ್ತದೆ. ವಿಮೆಯ ಅಧಿಕಾರಿಗಳಿಗನುಸಾರ, ಅತ್ಯಂತ ಜನಪ್ರಿಯ ನಮೂನೆಗಳಲ್ಲಿ ಕೆಲವು, ನಿಜವಾಗಿಯೂ “ಸಾಧಾರಣವಾದ ಹಾನಿ ಮತ್ತು ಆಘಾತದ ವಿಮೆಯ ಹಕ್ಕುಗಳಿಗಿಂತ ಕೀಳಾದವುಗಳನ್ನು” ಪಡೆದಿವೆ. ಸ್ಪಷ್ಟವಾಗಿಗಿ ಅನೇಕ ಚಾಲಕರು ಅಧಿಕ ಭರವಸೆಯುಳ್ಳವರಾಗಿ, ನಾಲ್ಕು ಚಕ್ರದ ವಾಹನಗಳನ್ನು ಓಡಿಸುವಾಗ ಅನಾವಶ್ಯಕವಾದ ಗಂಡಾಂತರಗಳಿಗೆ ಈಡಾಗುತ್ತಾರೆ. ಲಾಸ್‌ ಆ್ಯನ್‌ಜೆಲಿಸ್‌ನ ಯುಸಿಎಲ್‌ಎ ಮೆಡಿಕಲ್‌ ಸೆಂಟರ್‌ನಲ್ಲಿ ಒಬ್ಬ ಸಂಶೋಧಕರಾಗಿರುವ ಮಾರ್ಕ್‌ ಶೋನ್‌ ಗಮನಿಸುವುದೇನೆಂದರೆ, “ಚಲನ ಚಿತ್ರಗಳು ಮತ್ತು ಟಿವಿಯ ಮೂಲಕ, ನಾಲ್ಕು ಚಕ್ರದ ವಾಹನಗಳ ಓಡಿಸುವಿಕೆಯನ್ನು ಜನರು ಸ್ವಾವಲಂಬನೆ ಮತ್ತು ಸ್ವಾತಂತ್ರ್ಯದ ಪ್ರಜ್ಞೆಯೊಂದಿಗೆ ಸೇರಿಸತೊಡಗಿದ್ದಾರೆ.” ಶಕ್ತಿ ಮತ್ತು ಅಜೇಯತನದ ಈ ಪ್ರಜ್ಞೆಯು, ಕಟ್ಟಕಡೆಗೆ ಸುರಕ್ಷಿತ ವಾಹನ ಓಡಿಸುವಿಕೆಗೆ ಅತ್ಯುತ್ತಮ ಸೂತ್ರವಾಗಿರುವ ಯುಕ್ತವಾದ ತೀರ್ಪನ್ನು ಅಡ್ಡೈಸಸಾಧ್ಯವಿದೆ.

ನವೀನ ಸಾಧನವು ಹೃದಯಾಘಾತದ ಅಪಾಯದ ಕುರಿತು ಎಚ್ಚರಿಸುತ್ತದೆ

ಆಸ್ಟ್ರೇಲಿಯದ ವಿಕ್ಟೋರಿಯದಲ್ಲಿರುವ ವಿಜ್ಞಾನಿಗಳು, ಕುತ್ತಿಗೆಯ ಒಂದು ಪ್ರಧಾನ ಅಪಧಮನಿಯ ಮೇಲಿನ ಚರ್ಮದ ಮೇಲೆ ಇರಿಸಲ್ಪಟ್ಟಾಗ, ಹೃದಯ ರೋಗದ ಅಪಾಯವನ್ನು ಮುಂತಿಳಿಸುವ ಒಂದು ನವೀನ ಸಾಧನವನ್ನು ವಿಕಸಿಸಿದ್ದಾರೆ. ಆಂತರಿಕ ಶಸ್ತ್ರಚಿಕಿತ್ಸೆಯಿಲ್ಲದೆ, ಪ್ರತಿಯೊಂದು ಹೃದಯಬಡಿತದ ನಂತರ ಅದು ರಕ್ತದ ಒತ್ತಡದಲ್ಲಿನ ರಕ್ತದ ಗತಿ ಮತ್ತು ಭಿನ್ನತೆಗಳನ್ನು ಅಳೆಯುತ್ತದೆ. ಅನಂತರ “ರೋಗಿಯ ಸಂಪೂರ್ಣ ಹೃದಯರಕ್ತನಾಳದ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವವನ್ನು” ಲೆಕ್ಕಮಾಡಲು ಒಂದು ಕಂಪ್ಯೂಟರನ್ನು ಬಳಸಸಾಧ್ಯವಿದೆ, ಎಂದು ದ ಸಿಡ್ನಿ ಮಾರ್ನಿಂಗ್‌ ಹೆರಲ್ಡ್‌ ವಾರ್ತಾಪತ್ರಿಕೆಯಲ್ಲಿನ ವರದಿಯು ಹೇಳುತ್ತದೆ. ಹೃದಯರಕ್ತನಾಳ ರೋಗದ ವಿಷಯದಲ್ಲಿ ಒಬ್ಬ ವ್ಯಕ್ತಿಗಿರುವ ಗಂಡಾಂತರವನ್ನು ನಿರ್ಧರಿಸುವ ಸಾಂಪ್ರದಾಯಿಕ ವಿಧಾನಗಳಿಗಿಂತ ಈ ಸಾಧನವು ಹೆಚ್ಚು ನಿಷ್ಕೃಷ್ಟವಾಗಿರುವ ವಾಗ್ದಾನವನ್ನೀಯುತ್ತದೆ. ಉನ್ನತ ಕಲೆಸ್ಟರಾಲ್‌ ಮಟ್ಟಗಳು ಮತ್ತು ಅಧಿಕ ರಕ್ತದ ಒತ್ತಡವು ಅಪಾಯದ ಬಲವಾದ ಸೂಚಕಗಳಾಗಿದ್ದರೂ, “ಈ ವರ್ಗಗಳಲ್ಲಿರುವ ಅನೇಕ ಜನರಿಗೆ ಒಂದು ಹೃದಯಾಘಾತ ಆಗುವುದೇ ಇಲ್ಲ,” ಎಂದು ಆ ವರದಿಯು ಹೇಳುತ್ತದೆ. ಅದು ಕೂಡಿಸುವುದೇನೆಂದರೆ, “ಈ ಪರೀಕ್ಷೆಯ ಬಳಕೆಯಿಂದ, [ಅವರು] ಕಲೆಸ್ಟರಾಲ್‌ ಕಡಿಮೆಮಾಡುವ ದುಬಾರಿ ಔಷಧಗಳನ್ನು ತೆಗೆದುಕೊಳ್ಳುವುದರಿಂದ ಅಥವಾ ಅವರಿಗೆ ಅಗತ್ಯವಾಗಿರದ ಕಟ್ಟುನಿಟ್ಟಿನ ಆಹಾರಪಥ್ಯಗಳನ್ನು ಅನುಸರಿಸುವುದರಿಂದ ಉಳಿಸಲ್ಪಡುವರು.”

ದೊಡ್ಡ ನಗರದಲ್ಲಿ ಜೀವನ

ಇಂಗ್ಲೆಂಡ್‌ನ ಲಂಡನ್‌, ಯೂರೋಪಿನ ಅತಿ ದೊಡ್ಡ ನಗರವಾಗಿರುವುದಾದರೂ, ದಿ ಇಂಡಿಪೆಂಡ್ಟೆನ್‌ ಎಂಬ ವಾರ್ತಾಪತ್ರಿಕೆಗನುಸಾರ, ಅದರ ಎಪ್ಪತ್ತು ಲಕ್ಷ ನಿವಾಸಿಗಳು ಅಲ್ಲಿ ಜೀವಿಸುತ್ತಿರುವುದರ ಕುರಿತು ಒಟ್ಟಿನಲ್ಲಿ ಆನಂದಿತರಾಗಿಲ್ಲ. ತಮ್ಮ ಪ್ರಧಾನ ಚಿಂತೆಗಳಲ್ಲಿ ಮಾಲಿನ್ಯ ಮತ್ತು ವಾಹನ ಸಂದಣಿಯು ಸೇರಿದ್ದು, ಕಳೆದ ಐದು ವರ್ಷಗಳಲ್ಲಿ ರಾಜಧಾನಿಯಲ್ಲಿನ ಜೀವಿತವು ಕೀಳಾಗಿದೆ ಎಂದು, ಮತ ನೀಡಿದ ಲಂಡನ್‌ ನಿವಾಸಿಗಳಲ್ಲಿ, 7ರಲ್ಲಿ 6 ಮಂದಿ ನಂಬುತ್ತಾರೆ. ಯಾವ ವರ್ಗದ ಜನರನ್ನು ಅವರು ನಂಬಿದರೆಂದು ಕೇಳಲ್ಪಟ್ಟಾಗ, 64 ಪ್ರತಿಶತವು ವೈದ್ಯರನ್ನು ಉದ್ಧರಿಸಿತು; ಪೊಲೀಸರು ಮತ್ತು ಶಿಕ್ಷಕರು ಕಡಿಮೆ ಭರವಸೆಯನ್ನು ಪ್ರೇರೇಪಿಸಿದರು. ಲಂಡನಿನ ಹಣಕಾಸಿನ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ವ್ಯಾಪಾರಿಗಳ ಮೇಲೆ ತಾವು ಭರವಸೆಯನ್ನು ಇಡಬಲ್ಲೆವೆಂದು ಕೇವಲ 2 ಪ್ರತಿಶತ ಮಂದಿಗೆ ಅನಿಸಿತು. ಈ ಕ್ಷೇತ್ರವು “ನಿಜವಾದ ಸಂಪತ್ತನ್ನು ಸೃಷ್ಟಿಸದೆ ಇತರ ಜನರ ವೆಚ್ಚದಲ್ಲಿ ತಮ್ಮನ್ನು ಶ್ರೀಮಂತರನ್ನಾಗಿ ಮಾಡಿಕೊಳ್ಳುವ ಜನರಿಂದ ತುಂಬಿದೆ,” ಎಂದು ಸುಮಾರು 60 ಪ್ರತಿಶತ ಜನರು ನಂಬಿದರು.

“ನಿಮ್ಮ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ತಿನ್ನಿರಿ”

ದಶಕಗಳಿಂದ ಕರಾಟಿನಾಯ್‌ಗ್ಡಳನ್ನು ಆಹಾರದ ಅನುಬಂಧಗಳೋಪಾದಿ ಸೇವಿಸುವ ಶಿಫಾರಸ್ಸನ್ನು ವಿಜ್ಞಾನಿಗಳು ಮಾಡಿದ್ದಾರೆ. ಬೀಟ ಕ್ಯಾರಟೀನ್‌ ಪ್ರಸಿದ್ಧವಾದ ಕರಾಟಿನಾಯ್ಡ್‌ ಆಗಿದೆ ಮತ್ತು ಅದನ್ನು ಹೃದಯಾಘಾತಗಳ, ಪಾರ್ಶ್ವವಾಯು ಹೊಡೆತಗಳ, ಮತ್ತು ನಿರ್ದಿಷ್ಟವಾದ ಕ್ಯಾನ್ಸರ್‌ಗಳ ತಡೆಯುವಿಕೆಯೊಂದಿಗೆ ಸಂಬಂಧಿಸಲಾಗಿದೆ. ಆದರೆ, ಹೊಸ ಅಧ್ಯಯನಗಳು ಬೀಟ ಕ್ಯಾರಟೀನ್‌ನ ಅನುಬಂಧಗಳ ಪ್ರಯೋಜನಗಳ ಮೇಲೆ ಪ್ರಶ್ನೆಯೆಬ್ಬಿಸುತ್ತವೆ. ದ ನ್ಯೂ ಯಾರ್ಕ್‌ ಟೈಮ್ಸ್‌ಗನುಸಾರ, ಆಹಾರ ವಿಜ್ಞಾನಿ ಡಾ. ಪಾಲ್‌ ಲಾಶಾನ್ಸ್‌, “ಒಂದೊಂದಾಗಿ ಕರಾಟಿನಾಯ್‌ಗ್ಡಳ ಅನುಬಂಧಗಳನ್ನು ಸೇವಿಸುವುದರ ವಿರುದ್ಧವಾಗಿ ಎಚ್ಚರಿಸಿದರು.” ಅವರು ವಿವರಿಸಿದ್ದೇನೆಂದರೆ, “ಸ್ವಾಭಾವಿಕ ಆಹಾರಗಳಲ್ಲಿ ನಮಗೆ ಕರಾಟಿನಾಯ್‌ಗ್ಡಳ ಒಂದು ಮಿಶ್ರಣ ದೊರೆಯುತ್ತದೆ, ಮತ್ತು ಈ ಮಿಶ್ರಣವನ್ನು ಪಡೆಯುವುದು ಎಷ್ಟು ಪ್ರಾಮುಖ್ಯವಾಗಿದೆ ಎಂದು ನಮಗೆ ಈ ವರೆಗೆ ತಿಳಿದಿಲ್ಲ.” ಮತ್ತೊಬ್ಬ ಸಂಶೋಧಕಿಯಾದ ಡಾ. ರೆಜೀನಾ ಸೀಗರ್ಲ್‌ ಶಿಫಾರಸ್ಸು ಮಾಡುವುದೇನೆಂದರೆ, “ಹಣ್ಣುಗಳು ಮತ್ತು ತರಕಾರಿಗಳಲ್ಲಿರುವ ರಕ್ಷಣಾತ್ಮಕ ಪದಾರ್ಥಗಳನ್ನು ನಾವು ಗುರುತಿಸುವ ತನಕ, ಅವುಗಳನ್ನು ಒಂದು ಮಾತ್ರೆಯೊಳಗೆ ಸಂಗ್ರಹಿಸಲು ನಮಗೆ ಸಾಧ್ಯವಿಲ್ಲ.” ಟೈಮ್ಸ್‌ ಗಮನಿಸುವುದೇನೆಂದರೆ, “ಹೆಚ್ಚಿನ ಪರಿಣತರು, ‘ನಿಮ್ಮ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ತಿನ್ನಿರಿ’ ಎಂದು ಸಾಂಪ್ರದಾಯಿಕವಾಗಿ ತಾಯಂದಿರಿಂದ ಕೊಡಲ್ಪಡುವ ಸಲಹೆಗೆ ಹಿಂದಿರುಗಿದ್ದಾರೆ.”

ಹಿಂಸೆಯನ್ನು ಪ್ರೇರಿಸುವ ಆಟಿಕೆಗಳು

ಮಾಟದಿಂದಲೊ ಎಂಬಂತೆ ಯುದ್ಧ ಕಲೆಗಳನ್ನರಿತ ಯೋಧರಾಗಿ ರೂಪಾಂತರಗೊಳ್ಳುವ ಹದಿವಯಸ್ಕರ ಕುರಿತಾದ ಒಂದು ಟಿವಿ ಕಾರ್ಯಕ್ರಮವು, ಅಮೆರಿಕದಲ್ಲಿರುವ ಮಕ್ಕಳಲ್ಲಿ ಅತಿ ಜನಪ್ರಿಯವಾಗಿದೆ. ಟಿವಿ ಪಾತ್ರಧಾರಿಗಳು ಮೈಟಿ ಮಾರ್ಫಿನ್‌ ಪವರ್‌ ರೇಂಜರ್ಸ್‌ ಎಂಬುದಾಗಿ ಅರಿಯಲ್ಪಟ್ಟಿದ್ದಾರೆ. ಪವರ್‌ ರೇಂಜರ್ಸ್‌ನ ಹಿಂಸಾತ್ಮಕ ಕೃತ್ಯಗಳನ್ನು ಅನುಕರಿಸುವ ಚಿಕ್ಕ ಮಕ್ಕಳಿಂದ ಪ್ರದರ್ಶಿಸಲ್ಪಡುವ, ಪೀಡಿಸುವ ವರ್ತನೆಯೆಂದು ತೋರುವ ವರ್ತನೆಯಿಂದ ಶಾಲಾ ಅಧಿಕಾರಿಗಳು ಚಿಂತಿತರಾಗಿದ್ದಾರೆ. ದ ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿಸುವುದೇನೆಂದರೆ, ಇತ್ತೀಚಿನ ಒಂದು ಸಮೀಕ್ಷೆಯಲ್ಲಿ 96 ಪ್ರತಿಶತ “ಮತನೀಡಿದ ಶಿಕ್ಷಕರು, ತಾವು ಮಾರ್ಫಿನ್‌ ಪ್ರೇರಿತ ಆಕ್ರಮಣಾ ಕೃತ್ಯಕ್ಕೆ ಸಾಕ್ಷಿಗಳಾಗಿದ್ದೆವೆಂದು ಹೇಳುತ್ತಾರೆ.” ಕೆಲವು ವಿದ್ಯಮಾನಗಳಲ್ಲಿ ಮಕ್ಕಳು ಮೂರು ವರ್ಷ ಪ್ರಾಯದವರಷ್ಟು ಎಳೆಯವರಾಗಿದ್ದಾರೆ. “ಚಿಕ್ಕ ಮಕ್ಕಳು ಇದ್ದಕ್ಕಿದ್ದಹಾಗೆ ಉದ್ರೇಕಗೊಂಡ, ಕಾದಾಡುವ ಮುಷ್ಟಿಮಲ್ಲರಾಗಬಹುದು,” ಎಂಬುದಾಗಿ ಜರ್ನಲ್‌ ಹೇಳುತ್ತದೆ. ಪವರ್‌ ರೇಂಜರ್‌ ಆಟಿಕೆಗಳ ಮಾರಾಟದಿಂದ ಒಂದು ವರ್ಷದಲ್ಲಿ ಫಲಿಸಲಿರುವ ಅಪೇಕ್ಷಿತ 300 ಮಿಲಿಯನ್‌ ಡಾಲರುಗಳಿಂದ, ಕಾರ್ಯಕ್ರಮದ ಜನಪ್ರಿಯತೆಯು ಪ್ರತಿಬಿಂಬಿಸಲ್ಪಡುತ್ತದೆ.

ವಿಷವುಳ್ಳ ಆವಿ

ಕಾರ್ಬನ್‌ ಮಾನಾಕ್ಸ್ಯೆಡ್‌ (ಸಿಓ)ನ ವಿಷಪ್ರಯೋಗಗಳ ಸಂಖ್ಯೆಯ ಕುರಿತು ಅಮೆರಿಕದಲ್ಲಿರುವ ಆರೋಗ್ಯ ಅಧಿಕಾರಿಗಳು ಚಿಂತಿತರಾಗಿದ್ದಾರೆ. ಎಮ್‌ಎಮ್‌ಡಬ್ಲ್ಯೂಆರ್‌ (ಮಾರ್ಬಿಡಿಟಿ ಆ್ಯಂಡ್‌ ಮಾರ್ಟ್ಯಾಲಿಟಿ ವೀಕ್‌ಲಿ ರಿಪೋರ್ಟ್‌) ಹೇಳುವುದೇನೆಂದರೆ, “ರಾಷ್ಟ್ರೀಯವಾಗಿ, ಉದ್ದೇಶಪೂರ್ವಕವಲ್ಲದ ಸಿಓ ವಿಷಪ್ರಯೋಗದಿಂದ ವಾರ್ಷಿಕವಾಗಿ ಸುಮಾರು 590 ಮರಣಗಳು ಸಂಭವಿಸುತ್ತವೆ.” ಇದು ಅನೇಕ ಮಾರಕವಲದ್ಲ ಸಿಓ ವಿಷಪ್ರಯೋಗದ ವಿದ್ಯಮಾನಗಳನ್ನು ಒಳಗೊಳ್ಳುವುದಿಲ್ಲ. ಮಾರಕವಾದ ಅನಿಲವು ನಿರ್ವರ್ಣವಾದದ್ದು, ಪರಿಮಳವಿಲ್ಲದ್ದು, ಮತ್ತು ನೀರಸವಾದದ್ದು ಆಗಿರುವುದರಿಂದ ಅದನ್ನು ಕಂಡುಹಿಡಿಯುವುದು ಕಠಿನವಾಗಿದೆ. ತಲೆನೋವುಗಳನ್ನು, ಪಿತ್ತೋದ್ರೇಕವನ್ನು, ನರವ್ಯೂಹದಲ್ಲಿ ಅಸಮತೆಗಳನ್ನು, ವಿಸ್ಮೃತಿನಿದ್ರೆಯನ್ನು ಮತ್ತು ಮರಣವನ್ನುಂಟುಮಾಡುತ್ತಾ, ಅನಿಲವು ಜೀವಕೋಶಗಳಿಗೆ ಆಮ್ಲಜನಕವನ್ನು ಸಾಗಿಸಲು ರಕ್ತಕ್ಕಿರುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಎಮ್‌ಎಮ್‌ಡಬ್ಲ್ಯೂಆರ್‌ಗನುಸಾರ, “ಸಿಓನ ಶೇಖರಣೆಯು ಮನೆಯೊಳಗೆ ಸಂಭವಿಸುವ ಯಾವುದೇ ಸುಡುವ ಪ್ರಕ್ರಿಯೆಯೊಂದಿಗೆ (ಉದಾ., ಗೃಹ ಕಾಯಿಸುವುದು, ಅಡಿಗೆ ಮಾಡುವುದು, ಎಂಜಿನ್‌ ಆನ್‌ ಇರುವ ವಾಹನ ಅಥವಾ ಗ್ಯಾಸೊಲೀನ್‌ನಿಂದ ನಡೆಸಲ್ಪಡುವ ಸಲಕರಣೆ) ಸಂಬಂಧಿಸಲ್ಪಡಬಹುದು—ವಿಶೇಷವಾಗಿ ಗಾಳಿಯಾಟವು ತಕ್ಕಷ್ಟು ಇಲ್ಲದಿರುವಾಗ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ