ವಿವಿಧೋಪಯೋಗಿಯಾದ ವರ್ಣರಂಜಿತವಾದೊಂದು ಬೆಳೆ
ಡೀಸಲ್ ಇಂಧನ, ಜಾನುವಾರು ಮೇವು, ಸಾಬೂನು ಮತ್ತು ಮಾರ್ಜರಿನ್, ಇವುಗಳಲ್ಲಿ ಸಾಮಾನ್ಯವಾಗಿರುವ ಸಂಗತಿ ಯಾವುದು? ಕೆಲವು ದೇಶಗಳಲ್ಲಿ ಈ ಎಲ್ಲಾ ಐಟಮ್ಗಳು, ಎದ್ದುಕಾಣುವ ಹಳದಿಬಣ್ಣದ ಹೂವು ಇರುವ, ರೇಪ್ ಗಿಡದ ಸಹಾಯದಿಂದ ಉತ್ಪಾದಿಸಲ್ಪಡುತ್ತವೆ.
ಸಾಸಿವೆ ಕುಟುಂಬದ ಈ ವರ್ಣರಂಜಿತ ಸಂಬಂಧಿಯು, ಯೂರೋಪ್, ಏಷಿಯಾ, ಮತ್ತು ಉತ್ತರ ಅಮೆರಿಕದ ಭಾಗಗಳಲ್ಲಿ ಉತ್ಪಾದಿಸಲ್ಪಟ್ಟು, ಅದರ ಎಣ್ಣೆಸಮೃದ್ಧ ಬೀಜಗಳಿಗಾಗಿ ವಿಶೇಷವಾಗಿ ಬೆಲೆಯುಳ್ಳದ್ದೆಂದು ಎಣಿಸಲ್ಪಡುತ್ತದೆ. ರೇಪ್ಬೀಜದ 40 ಪ್ರತಿಶತವು ಎಣ್ಣೆಯಾಗಿದ್ದು, ಅದನ್ನು ಅನೇಕ ವಿಷಯಗಳಿಗಾಗಿ ಉಪಯೋಗಿಸಸಾಧ್ಯವಿದೆ.
ರೇಪ್ಬೀಜದ ಎಣ್ಣೆಯಲ್ಲಿ ಹೆಚ್ಚಿನದ್ದು—ಪ್ರಾಯಶಃ 90 ಪ್ರತಿಶತದಷ್ಟು—ಆಹಾರದ ಉತ್ಪಾದನೆಗಾಗಿ ಉಪಯೋಗಿಸಲ್ಪಡುತ್ತದೆ. ಅದನ್ನು ಮಾರ್ಜರಿನ್, ಬಿಸ್ಕತ್ತುಗಳು, ತಿಳಿಸಾರುಗಳು, ಐಸ್ಕ್ರೀಮ್, ಮತ್ತು ಮಿಠಾಯಿಗಳನ್ನು ತಯಾರಿಸುವುದರಲ್ಲಿ ಉಪಯೋಗಿಸಲಾಗುತ್ತದೆ. ಆದರೆ ರೇಪ್ಬೀಜದ ಎಣ್ಣೆಯು, ಕಡಿಮೆ ಮಲಿನಗೊಳಿಸುವ ಒಂದು ಡೀಸಲ್ ಇಂಧನವನ್ನು ಉತ್ಪಾದಿಸಲೂ ಉಪಯೋಗಿಸಲ್ಪಡಸಾಧ್ಯವಿದೆ, ಹೀಗೆ ಅದು ಪರಿಸರಕ್ಕೆ ಆಗುವ ಹಾನಿಯನ್ನು ಮಿತಗೊಳಿಸಬಲ್ಲದು. ಸಂಸ್ಕರಿಸಲ್ಪಟ್ಟಾಗ, ಎಣ್ಣೆಯನ್ನು ನಾಜೂಕಾದ ಮೆಷೀನ್ಗಳಿಗೆ ಚಲನಸೌಲಭ್ಯವನ್ನುಂಟುಮಾಡಲು ಸಹ ಬಳಸಸಾಧ್ಯವಿದೆ, ಮತ್ತು ಅದು ತೆಗೆಯಲ್ಪಟ್ಟ ನಂತರ, ಬೆಳೆಯ ಕಸವನ್ನು, ಸಸಾರಜನಕವು ಸಮೃದ್ಧವಾಗಿರುವ ಮತ್ತು ಪ್ರಾಣಿ ಆಹಾರವಾಗಿ ಉಪಯೋಗಕರವಾಗಿರುವ ಒಂದು ಬಿಲ್ಲೆಯಾಗಿ ಜಜ್ಜಲುಸಾಧ್ಯವಿದೆ.
ಎಂತಹ ಒಂದು ವಿವಿಧೋಪಯೋಗಿ ಬೆಳೆ! ನಿಜವಾಗಿಯೂ, ನಾವು ಕೀರ್ತನೆಗಾರನು ಹೇಳಿದಂತೆ ಹೇಳಸಾಧ್ಯವಿದೆ: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿದ್ದೀ.”—ಕೀರ್ತನೆ 104:24.