ಎಚ್ಚರ! ಪತ್ರಿಕೆಯು ಜೀವವೊಂದನ್ನು ಉಳಿಸಲು ಸಹಾಯಮಾಡಿತು
ಎಕ್ವಡಾರ್ನಲ್ಲಿನ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳು, ಯಂತ್ರಿಗನು ತನ್ನ ಕಾರ್ನ ಕೆಲಸವನ್ನು ಮುಗಿಸಲು ಕಾಯುತ್ತಿದ್ದಾಗ, ಯಂತ್ರಿಗನ ಹೆಂಡತಿಯು, ತನ್ನ ಚಿಕ್ಕ ಮಗನಾದ ಬೈರಾನ್ನ ಕುರಿತಾಗಿ ಚಿಂತಿತಳಾಗಿದ್ದೇನೆಂದು ಆ ಸಾಕ್ಷಿಗೆ ಹೇಳಿದಳು. ಅವನು ಒಂದು ವಾರದಲ್ಲಿ ಐದಾರು ಸಾರಿ ಸೆಟೆತಗಳನ್ನು ಅನುಭವಿಸುತ್ತಿದ್ದನು, ಮತ್ತು ವೈದ್ಯರು ಸಮಸ್ಯೆಯ ರೋಗನಿರ್ಣಯ ಮಾಡಲು ಅಶಕ್ತರಾಗಿದ್ದರು. ಬೈರಾನನ್ನು ರಾಜಧಾನಿ ನಗರವಾದ ಕ್ವಿಟೊದಲ್ಲಿರುವ ವಿಶೇಷಜ್ಞರ ಬಳಿಯೂ ಕೊಂಡೊಯ್ಯಲಾಗಿತ್ತು.
“ಆ ತಾಯಿಯೊಂದಿಗೆ ಸಂಭಾಷಿಸುತ್ತಿದ್ದಾಗ, ಒಂದು ಕಾರ್ಗೆ ಪೆಯಿಂಟನ್ನು ಹಚ್ಚುತ್ತಿದ್ದ ಒಬ್ಬ ಕಾರ್ಮಿಕನನ್ನು ನಾನು ಗಮನಿಸಿದೆ, ಮತ್ತು ಸೀಸ ವಿಷಗೊಳಿಸುವಿಕೆಯ ಕುರಿತಾದ ಒಂದು ಎಚ್ಚರ! ಲೇಖನವನ್ನು ನೆನಪಿಸಿಕೊಂಡೆ. ಸೀಸ ವಿಷಗೊಳಿಸುವಿಕೆಯ ಒಂದು ಲಕ್ಷಣವು, ಸೆಟೆತಗಳು ಎಂದು ಆ ಲೇಖನವು ತಿಳಿಸಿತ್ತು. ಆ ಲೇಖನವನ್ನು ತರುವೆನೆಂದು ನಾನು ಆ ಸ್ತ್ರೀಗೆ ಹೇಳಿದೆ” ಎಂಬುದಾಗಿ ಆ ಸಾಕ್ಷಿಯು ವಿವರಿಸಿದಳು.
ಬೈರಾನ್ನ ಹೆತ್ತವರು ಆ ಲೇಖನವನ್ನು ಓದಿದಾಗ, ಸೀಸ ವಿಷಗೊಳಿಸುವಿಕೆಗಾಗಿ ಅವರು ತಮ್ಮ ಮಗನನ್ನು ಪರೀಕ್ಷೆಗೊಳಪಡಿಸಿದರು. ಬೈರಾನ್ನ ರಕ್ತದಲ್ಲಿ ಉಚ್ಚ ಮಟ್ಟದ ಸೀಸವನ್ನು ಕಂಡುಹಿಡಿಯಲಾಯಿತು. ವೈದ್ಯಕೀಯ ಚಿಕಿತ್ಸೆ ಮತ್ತು ಸೀಸಕ್ಕೆ ಇನ್ನೂ ಹೆಚ್ಚಿನ ಒಡ್ಡುವಿಕೆಯ ತಡೆಯುವಿಕೆಯು, ಬೈರಾನ್ನ ಆರೋಗ್ಯದಲ್ಲಿ ಗಮನಾರ್ಹವಾದ ಸುಧಾರಣೆಯಲ್ಲಿ ಫಲಿಸಿತು. “ಕಳೆದ ನಾಲ್ಕು ತಿಂಗಳುಗಳಲ್ಲಿ ಅವನಿಗೆ ಒಂದೇ ಒಂದು ಸೆಟೆತವು ಇರಲಿಲ್ಲ,” ಎಂದು ಆ ಸಾಕ್ಷಿಯು ಹೇಳಿದಳು. “ಅಂದಿನಿಂದ ತಂದೆಯು ಅನೇಕ ವೈದ್ಯರೊಂದಿಗೆ ಆ ವಿದ್ಯಮಾನದ ಕುರಿತಾಗಿ ಮಾತಾಡಿದ್ದಾನೆ, ಮತ್ತು ತನ್ನ ಮಗನ ಜೀವವನ್ನು ಉಳಿಸಿದ್ದಕ್ಕಾಗಿ ಅವನು ಯಾವಾಗಲೂ ಎಚ್ಚರ! ಪತ್ರಿಕೆಗೆ ಪ್ರಶಂಸೆಯನ್ನು ಸಲ್ಲಿಸುತ್ತಾನೆ. ಈಗ ಈ ವೈದ್ಯರಲ್ಲೂ ಕೆಲವರು ಎಚ್ಚರ! ಪತ್ರಿಕೆಯನ್ನು ಓದುತ್ತಿದ್ದಾರೆ.”
ಎಚ್ಚರ! ಪತ್ರಿಕೆಯನ್ನು ಓದುವುದರಿಂದ ನೀವೂ ಪ್ರಯೋಜನ ಪಡೆಯುವಿರೆಂದು ನಮಗೆ ಭರವಸೆಯಿದೆ. ನೀವು ಒಂದು ಪ್ರತಿಯನ್ನು ಪಡೆಯಲು ಅಥವಾ ನಿಮ್ಮೊಂದಿಗೆ ಬೈಬಲನ್ನು ಚರ್ಚಿಸಲಿಕ್ಕಾಗಿ, ನಿಮ್ಮ ಮನೆಗೆ ಯಾರಾದರೊಬ್ಬರು ಭೇಟಿ ನೀಡುವುದನ್ನು ನೀವು ಇಷ್ಟಪಡುವುದಾದರೆ, ದಯವಿಟ್ಟು Praharidurg Prakashan Society, Plot A/35 Nr Industrial Estate, Nangargaon, Lonavla 410 401, Mah., India, ಇವರಿಗೆ ಅಥವಾ 5ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ತಕ್ಕದ್ದಾದ ವಿಳಾಸಕ್ಕೆ ಬರೆಯಿರಿ.