ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 9/8 ಪು. 32
  • “ಜ್ಞಾನದ ಒಂದು ನಿಕ್ಷೇಪ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಜ್ಞಾನದ ಒಂದು ನಿಕ್ಷೇಪ”
  • ಎಚ್ಚರ!—1997
ಎಚ್ಚರ!—1997
g97 9/8 ಪು. 32

“ಜ್ಞಾನದ ಒಂದು ನಿಕ್ಷೇಪ”

ನೈಜೀರಿಯದ ಲೇಗೊಸಿನ ದನ್ಯೂಸ್‌ ಎಂಬ ಪತ್ರಿಕೆಯೊಂದಿಗೆ ಕೆಲಸಮಾಡುವ ಒಬ್ಬ ವ್ಯಕ್ತಿಯು, ಆ ದೇಶದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಬರೆದು, ಎಚ್ಚರ! ಪತ್ರಿಕೆಯನ್ನು ಮೇಲಿನ ಪದಗಳಲ್ಲಿ ವರ್ಣಿಸಿದನು. ಅವನು ವಿವರಿಸಿದ್ದು:

“ನಾನು ಎಚ್ಚರ! ಪತ್ರಿಕೆಯ ಒಂದು ಪ್ರತಿಯನ್ನು ಓದುವಾಗಲೆಲ್ಲ, ನಿಮಗೆ ಪತ್ರ ಬರೆಯುವ ಬಯಕೆ ನನಗಾಗುತ್ತದೆ. ಆದರೆ ಅನೇಕ ವೇಳೆ, ಒಂದು ಪತ್ರವನ್ನು ಬರೆಯಲು ನಾನು ಪ್ರಾರಂಭಿಸುತ್ತಿದ್ದ ವೇಳೆಗೆ, ಆ ಪತ್ರಿಕೆಯ ಮತ್ತೊಂದು ಅಷ್ಟೇ ಒಳ್ಳೆಯದಾದ, ವಾಸ್ತವದಲ್ಲಿ ಉತ್ತಮವಾದ ಪ್ರತಿಯು ತಲಪಿ, ನನ್ನನ್ನು ಪುನಃ ಪರವಶ ಮಾಡುತ್ತಿತ್ತು.

“ಇದೆಲ್ಲದರ ತಿರುಳು ಏನಾಗಿದೆ? ನನ್ನ ಅಭಿಪ್ರಾಯದಲ್ಲಿ ಎಚ್ಚರ! ಪತ್ರಿಕೆಯು, ಜ್ಞಾನದ ಒಂದು ನಿಕ್ಷೇಪವಾಗಿದೆ. ಇಷ್ಟೊಂದು ಸಮೃದ್ಧ, ಇಷ್ಟೊಂದು ಸುಂದರ, ಇಷ್ಟೊಂದು ಸಮತೂಕವುಳ್ಳ, ಮತ್ತು ಇಷ್ಟೊಂದು ಕೌಶಲಪೂರ್ಣವಾಗಿ ತಯಾರಿಸಲ್ಪಟ್ಟ ಒಂದು ಪ್ರಕಾಶನವನ್ನು ನಾನು ಕಂಡಿರುವುದು ವಿರಳ. ಇದು ಮಾನವಜಾತಿಗೆ ಒಂದು ಅಮೂಲ್ಯವಾದ ಕೊಡುಗೆಯಾಗಿದೆ.

“ನನ್ನ ಹೃದಯದಾಳದಿಂದ, ನಾನು ಇದನ್ನು ಹೇಳಲು ಇಚ್ಛಿಸುತ್ತೇನೆ: ನಿಮಗೆ ಲಕ್ಷಾಂತರ ಉಪಕಾರಗಳು. ಈ ಅದ್ಭುತಕರ ಕೆಲಸವನ್ನು ಮಾಡುತ್ತಾ ಇರಿ.”

ಎಚ್ಚರ! ಪತ್ರಿಕೆಯನ್ನು ಓದುವುದರಿಂದ ನೀವು ಸಹ ಪ್ರಯೋಜನ ಪಡೆಯುವಿರಿ ಎಂಬ ಭರವಸೆ ನಮಗಿದೆ. ಮತ್ತೊಂದು ಪ್ರತಿಯನ್ನು ಪಡೆಯಲು ಇಲ್ಲವೆ ಬೈಬಲನ್ನು ನಿಮ್ಮೊಂದಿಗೆ ಚರ್ಚಿಸಲು ನಿಮ್ಮ ಮನೆಯಲ್ಲಿ ನಿಮ್ಮನ್ನು ಯಾರಾದರೂ ಭೇಟಿಯಾಗುವಂತೆ ನೀವು ಬಯಸುವಲ್ಲಿ, Praharidurg Prakashan Society, Plot A/35 Nr Industrial Estate, Nangargaon, Lonavla 410 401, Mah., India, ಇವರಿಗೆ, ಅಥವಾ ಪುಟ 5ರಲ್ಲಿರುವ ಸೂಕ್ತವಾದ ವಿಳಾಸಕ್ಕೆ ದಯವಿಟ್ಟು ಪತ್ರ ಬರೆಯಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ