ಬೈಬಲ್ ಕಿರುಹೊತ್ತಗೆಗಳು ಸಾಧಿಸಬಲ್ಲ ವಿಷಯ
ರಷ್ಯದ ಮಾಸ್ಕೊ ನಗರದ ಹತ್ತಿರವಿರುವ ಗಾಲಿಟ್ಸಿನಾ ನಗರದಲ್ಲಿ, ಮಗುವಿನ ತಳ್ಳುಬಂಡಿಯನ್ನು ದೂಡಿಕೊಂಡು ಹೋಗುತ್ತಿದ್ದ ಸ್ತ್ರೀಯೊಬ್ಬಳಿಗೆ ಯೆಹೋವನ ಸಾಕ್ಷಿಗಳಲ್ಲೊಬ್ಬನು ಕುಟುಂಬ ಜೀವನವನ್ನು ಆನಂದಿಸಿರಿ ಎಂಬ ಕಿರುಹೊತ್ತಗೆಯನ್ನು ಕೊಟ್ಟನು. ಆ ಸಾಕ್ಷಿ ಮುಂದೆ ನಡೆದುಕೊಂಡು ಹೋದನು. ಆದರೆ ಬೇಗನೆ, ಆ ಸ್ತ್ರೀಯ ಸ್ವರವು ತನ್ನ ಗಮನವನ್ನು ಸೆಳೆಯುವಂತೆ ಕರೆಯುತ್ತಿರುವುದು ಅವನಿಗೆ ಕೇಳಿಸಿತು. ಆಕೆ ತಳ್ಳುಬಂಡಿಯನ್ನು ದೂಡಿಕೊಂಡೇ ಅವನ ಬಳಿಗೆ ಬರಲು ಓಡಿಬರುತ್ತಿದ್ದಳು.
ತನಗೆ ಹೆಚ್ಚು ಕಲಿಯಲು ಆಸಕ್ತಿಯಿದೆಯೆಂದು ಆ ಸ್ತ್ರೀ ಹೇಳಲಾಗಿ, ಆ ಸಾಕ್ಷಿ ಅವಳಿಗೆ ಬೈಬಲ್ ವಿಷಯಗಳ ಮೇಲಿನ ಇನ್ನೆರಡು ಕಿರುಹೊತ್ತಗೆಗಳನ್ನು ಕೊಟ್ಟನು. ಅವಳು ತರುವಾಯ ತನ್ನನ್ನು ಸಂಪರ್ಕಿಸಲಾಗುವಂತೆ, ಅವನು ತನ್ನ ಫೋನ್ ನಂಬರನ್ನೂ ಕೊಟ್ಟನು. ಅದೇ ಸಾಯಂಕಾಲ, ಆಕೆ ಫೋನ್ ಮಾಡಿದಳು ಮತ್ತು ಆಕೆಗೆ ಸಾಪ್ತಾಹಿಕ ಗೃಹ ಬೈಬಲ್ ಅಧ್ಯಯನದ ಏರ್ಪಾಡುಗಳನ್ನು ಮಾಡಲಾಯಿತು. ಕೇವಲ ಏಳು ತಿಂಗಳುಗಳಲ್ಲಿ, ಆಕೆಯೂ ಆಕೆಯ ತಂಗಿಯೂ ದೇವರನ್ನು ಸೇವಿಸಲು ಸಮರ್ಪಣೆಯನ್ನು ಮಾಡಿ, ದೀಕ್ಷಾಸ್ನಾನ ಹೊಂದಿದರು.
ಕುಟುಂಬ ಜೀವನವನ್ನು ಆನಂದಿಸಿರಿ, ಮನಗುಂದಿದವರಿಗೆ ಸಾಂತ್ವನ, ಲೋಕವನ್ನು ನಿಜವಾಗಿಯೂ ಯಾರು ಆಳುತ್ತಾರೆ?, ಮತ್ತು ಶಾಂತಿಭರಿತ ಹೊಸ ಲೋಕದಲ್ಲಿ ಜೀವನ ಎಂಬ ಬೈಬಲ್ ಕಿರುಹೊತ್ತಗೆಗಳನ್ನು ನೀವು ಓದಬಯಸುವುದಾದರೆ, Watch Tower, H-58, Old Khandala Road, Lonavla 410 401, Mah., India, ಇವರಿಗೆ, ಅಥವಾ 5ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದ್ದಾದ ವಿಳಾಸಕ್ಕೆ ಬರೆಯಿರಿ.