ನಮ್ಮ ವಾಚಕರಿಂದ
ಅತ್ಯಾಪ್ತ ಮಿತ್ರನು ಸ್ಥಳಬಿಟ್ಟು ಹೋದಾಗ “ಯುವ ಜನರು ಪ್ರಶ್ನಿಸುವುದು . . . ನನ್ನ ಅತ್ಯಾಪ್ತ ಮಿತ್ರನು ಸ್ಥಳಬಿಟ್ಟು ಹೋದದ್ದೇಕೆ?” (ಜನವರಿ 8, 1997) ಎಂಬ ಲೇಖನಕ್ಕಾಗಿ ನನ್ನ ಗಾಢವಾದ ಗಣ್ಯತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ಅದು ಸರಿಯಾದ ಸಮಯಕ್ಕೆ ಬಂತು. ಶೀಘ್ರದಲ್ಲೇ, ನನ್ನ ಸ್ನೇಹಿತೆಯರಲ್ಲಿ ಒಬ್ಬಳು ಸ್ಥಳಬಿಟ್ಟು ಹೋಗಲಿದ್ದಾಳೆ; ಅವಳೂ ಅವಳ ಗಂಡನೂ ಹೆಚ್ಚು ಪ್ರಚಾರಕರ ಆವಶ್ಯಕತೆಯಿರುವ ಒಂದು ಸಭೆಯಲ್ಲಿ ಸೇವೆಸಲ್ಲಿಸಲಿಕ್ಕಾಗಿ ಹೋಗಲಿದ್ದಾರೆ. ಅವಳ ವಿಷಯದಲ್ಲಿ ತುಂಬ ಸಂತೋಷಗೊಂಡಿರುವುದಾದರೂ, ನನಗೆ ಅವಳಿಲ್ಲದ ಅನಿಸಿಕೆ ತುಂಬ ಆಗುವುದೆಂಬುದು ನನಗೆ ಗೊತ್ತು. ನಿಮ್ಮ ಅತ್ಯುತ್ತಮವಾದ ಬುದ್ಧಿವಾದಕ್ಕಾಗಿ ನಿಮಗೆ ಉಪಕಾರ.
ಆರ್. ಎ., ಇಟಲಿ
ನಮ್ಮ ಸರ್ಕಿಟ್ ಮೇಲ್ವಿಚಾರಕರು, ಸಂಚರಣ ಶುಶ್ರೂಷಕರು, ಹೊಸದೊಂದು ಕ್ಷೇತ್ರದಲ್ಲಿ ಸೇವೆಮಾಡಲಿಕ್ಕಾಗಿ ನಮ್ಮನ್ನು ಬಿಟ್ಟುಹೋದಾಗ, ಈ ಲೇಖನವು ನನ್ನನ್ನು ಎಷ್ಟರ ಮಟ್ಟಿಗೆ ಪ್ರಭಾವಿಸಿತೆಂಬುದನ್ನು ನೀವು ಊಹಿಸಲಾರಿರಿ. ನನ್ನ ಆತ್ಮಿಕ ಹಾಗೂ ಭಾವನಾತ್ಮಕ ಆವಶ್ಯಕತೆಗಳ ಕುರಿತಾಗಿ ಅವರು ತುಂಬ ಕಾಳಜಿವಹಿಸಿದ್ದರು. ಆ ಲೇಖನದಲ್ಲಿನ ಛಾಯಾಚಿತ್ರವು ಚಿತ್ರಿಸಿದಂತೆಯೇ, ವಿದಾಯ ಹೇಳುವುದು ನೋವುಭರಿತ ಅನುಭವವಾಗಿತ್ತು. ಒಂಟಿತನವನ್ನು ನಿಭಾಯಿಸುವಂತೆ ನನಗೆ ಸಹಾಯ ಮಾಡುವುದರಲ್ಲಿ ನಿಮ್ಮ ಸಲಹೆಗಳು ಎಷ್ಟು ಸಮಯೋಚಿತವಾಗಿವೆ.
ಜೆ. ಡಿ., ನೈಜೀರಿಯ
ಸಹನೆ ನಾನು 22 ವರ್ಷ ಪ್ರಾಯದವನು, ಮತ್ತು “ಸಹನೆ—ಲೋಕವು ತೀರ ವಿಪರೀತಕ್ಕೆ ಹೋಗಿದೆಯೋ?” (ಫೆಬ್ರವರಿ 8, 1997) ಎಂಬ ಲೇಖನಮಾಲೆಗಾಗಿ ನಾನು ನಿಮಗೆ ಉಪಕಾರ ಹೇಳಲು ಬಯಸುತ್ತೇನೆ. ಯುವ ಕ್ರೈಸ್ತರಿಗೆ ಅನೇಕ ಪಂಥಾಹ್ವಾನಗಳನ್ನು ಎದುರಿಸಲಿಕ್ಕಿರುತ್ತದೆ. ಈ ಲೇಖನಗಳು, ನಾನು ವೈಪರೀತ್ಯಕ್ಕೆ ಹೋಗದಂತೆ ನನ್ನನ್ನು ಉತ್ತೇಜಿಸಿದವು ಮತ್ತು ಲೋಕದ ಒತ್ತಡಗಳ ಮಧ್ಯೆಯೂ ಯೆಹೋವನನ್ನು ಸೇವಿಸುವ ನನ್ನ ನಿರ್ಧಾರವನ್ನು ಬಲಪಡಿಸಿದವು.
ಎಮ್. ಬಿ., ಇಟಲಿ
ಅಡಿಗೆಮನೆಯ ವಿನೋದ “ಅಡಿಗೆಮನೆಯು ವಿನೋದದ ಸ್ಥಳವಾಗಿರಬಲ್ಲದು” (ಫೆಬ್ರವರಿ 8, 1997) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ. ಅಡಿಗೆಮನೆಯಲ್ಲಿ ನಡೆಯುವ ಸಂಭಾಷಣೆಗಳಿಂದ ನಾನು ಸಹ ಪ್ರಯೋಜನವನ್ನು ಪಡೆದುಕೊಂಡಿದ್ದೇನೆ. ಈರುಳ್ಳಿ ಹಾಗೂ ಆಲೂಗಡ್ಡೆಗಳ ಸಿಪ್ಪೆಯನ್ನು ಸುಲಿಯುತ್ತಿರುವಾಗ, ನನ್ನ ತಾಯಿ ನನಗೆ ಯೆಹೋವನನ್ನು ಪ್ರೀತಿಸುವಂತೆ ಕಲಿಸುತ್ತಿದ್ದರು ಮತ್ತು ಆತನನ್ನು ಸಂಪೂರ್ಣವಾಗಿ ಸೇವಿಸುವಂತೆ ನನ್ನನ್ನು ಉತ್ತೇಜಿಸುತ್ತಿದ್ದರು. ನನ್ನ ತಂದೆಯವರು ನಮ್ಮನ್ನು ಧಾರ್ಮಿಕವಾಗಿ ವಿರೋಧಿಸಿದ ಸಂಕಷ್ಟದ ಸಮಯಾವಧಿಯಲ್ಲಿ, ಈ ಅಡಿಗೆಮನೆಯ ಸಂಭಾಷಣೆಗಳು ವಿಶೇಷವಾಗಿ ಅಮೂಲ್ಯವಾಗಿ ಪರಿಣಮಿಸಿದವು. ಈಗ ನನ್ನ ತಾಯಿಗೂ ನನಗೂ, ನನ್ನ ತಂದೆಯವರು ಯೆಹೋವನ ಒಬ್ಬ ಸೇವಕರಾಗಿ ಪರಿಣಮಿಸಿರುವುದನ್ನು ನೋಡುವ ಆನಂದ ದೊರಕಿದೆ. ಹಾಗೂ, ರುಚಿಕರವಾದ ಅನೇಕ ಅಡಿಗೆಗಳನ್ನು ಮಾಡಲು ನಾನು ಕಲಿತಿದ್ದೇನೆ!
ಎ. ಎಮ್. ಎಮ್., ಇಟಲಿ
ಮನೋರಂಜನೆಯ ಉದ್ಯಮದಲ್ಲಿರುವ ಒಬ್ಬ ಧಣಿಯ ಮನೆಯಲ್ಲಿ ನಾನು ಒಬ್ಬ ಅಡಿಗೆಯವಳಾಗಿ ಕೆಲಸಮಾಡುತ್ತೇನೆ. ಹೀಗೆ ನಾನು ಅಡಿಗೆಮನೆಯಲ್ಲಿ ಕೆಲಸಮಾಡುತ್ತಿರುವಾಗ, ಅಲ್ಲಿನ ಸಂದರ್ಶಕರೊಂದಿಗೆ—ಕೆಲವು ಪ್ರಸಿದ್ಧ ವ್ಯಕ್ತಿಗಳನ್ನೂ ಒಳಗೊಂಡು—ಆತ್ಮಿಕ ಆಹಾರವನ್ನು ಹಂಚಿಕೊಳ್ಳಲು ನನಗೆ ಅನೇಕ ಸಂದರ್ಭಗಳಿದ್ದವು. ನಾನು ಅಡಿಗೆಮನೆಯ ಡ್ರಾಯರ್‌ನಲ್ಲಿ ಕೆಲವೊಂದು ಬೈಬಲ್ ಸಾಹಿತ್ಯವನ್ನು ಇಡುತ್ತೇನೆ. ಒಂದು ಸಂದರ್ಭದಲ್ಲಿ ನಾನು ಒಬ್ಬ ಸಂದರ್ಶಕನೊಂದಿಗೆ ಒಂದು ಬೈಬಲ್ ಚರ್ಚೆಗಿಳಿದೆ. ಅವನು ತದನಂತರ ಇನ್ನೂ ಹೆಚ್ಚಿನ ಚರ್ಚೆಗಾಗಿ ಅಡಿಗೆಮನೆಯೊಳಗೆ ಬಂದನು. ನಾನು ಕೋಳಿಯನ್ನು ಫ್ರೈಮಾಡುವುದರಲ್ಲಿ ಕಾರ್ಯಮಗ್ನಳಾಗಿದ್ದಾಗ, ಅವನು ಪ್ರಕಟನೆ ಅದರ ಮಹಾ ಪರಮಾವಧಿಯು ಹತ್ತಿರ! ಪುಸ್ತಕದ ನನ್ನ ಪ್ರತಿಯಿಂದ ಗಟ್ಟಿಯಾಗಿ ಓದಿದನು. ಹೌದು, ನೀವು ಹೇಳಿದ್ದು ಸರಿ. ಅಡಿಗೆಮನೆಯು ವಿನೋದದ ಸ್ಥಳವಾಗಿರಸಾಧ್ಯವಿದೆ!
ಎ. ಆರ್., ಅಮೆರಿಕ
ಪಾಪಗಳನ್ನು ಒಪ್ಪಿಕೊಳ್ಳುವುದು ನಾನು ಒಬ್ಬ ಸಭಾ ಹಿರಿಯನೋಪಾದಿ ಸೇವೆಮಾಡುತ್ತಿದ್ದೇನೆ, ಮತ್ತು “ಯುವ ಜನರು ಪ್ರಶ್ನಿಸುವುದು . . . ನಾನು ನನ್ನ ಪಾಪವನ್ನು ಒಪ್ಪಿಕೊಳ್ಳಬೇಕೊ?” (ಫೆಬ್ರವರಿ 8, 1997) ಎಂಬ ಲೇಖನಕ್ಕಾಗಿ ನನ್ನ ಗಣ್ಯತೆಯನ್ನು ನಾನು ವ್ಯಕ್ತಪಡಿಸಲು ಬಯಸುತ್ತೇನೆ. ಈ ಲೇಖನವು, ಸ್ವಲ್ಪ ಸಮಯದ ಹಿಂದೆ ಮಾಡಲ್ಪಟ್ಟ ಗಂಭೀರ ತಪ್ಪುಗಳನ್ನು ಒಪ್ಪಿಕೊಳ್ಳುವಂತೆ ಅನೇಕ ಯುವ ಜನರನ್ನು ಪ್ರಚೋದಿಸಿತು. ಈ ಪ್ರೀತಿಪೂರ್ಣ ಸಹಾಯವನ್ನು ಪಡೆದುಕೊಂಡ ಬಳಿಕ, ಈ ಯುವ ಜನರು ಯೆಹೋವನೊಂದಿಗಿನ ತಮ್ಮ ಸಂಬಂಧವನ್ನು ಪುನಃ ಸ್ಥಾಪಿಸಿಕೊಂಡದ್ದನ್ನು ನೋಡುವುದು ಒಂದು ಆನಂದವಾಗಿತ್ತು. ಅವರು ತಮ್ಮನ್ನು ಶುದ್ಧವಾಗಿರಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಓ. ಬಿ., ಇಟಲಿ
ಒಬ್ಬನ ಪಾಪಗಳ ಕುರಿತು ಮೌನವಾಗಿರುವುದು, ತುಂಬ ಹಾನಿಕರವಾಗಿರಸಾಧ್ಯವಿದೆ ಎಂಬುದನ್ನು ಗಣ್ಯಮಾಡಲು ಈ ಲೇಖನವು ನನಗೆ ಸಹಾಯ ಮಾಡಿತು. ತಪ್ಪನ್ನು ಒಪ್ಪಿಕೊಳ್ಳುವುದು ನಾಚಿಕೆ ಹಾಗೂ ಪೇಚಾಟವನ್ನು ಉಂಟುಮಾಡಬಹುದಾದರೂ, ನೀವು ನಿಮ್ಮ ಪಾಪವನ್ನು ಯೆಹೋವನಿಗೆ ಹಾಗೂ ನಿಮ್ಮ ಹೆತ್ತವರಿಗೆ ನಿವೇದಿಸಿಕೊಳ್ಳುವಾಗ, ನೀವು ಅವರೊಂದಿಗೆ ಹೆಚ್ಚು ಬಲವಾದ, ಹಾಗೂ ಹೆಚ್ಚು ನಿಕಟವಾದ ಸಂಬಂಧವನ್ನು ಅನುಭವಿಸುತ್ತೀರಿ.
ಬಿ. ಕೆ., ಗಯಾನ
ನನಗೆ ಅಗತ್ಯವಿದ್ದಾಗಲೇ ಆ ಲೇಖನವು ಬಂತು. ನಾನು ಮಾಡಿದ್ದ ಸಂಗತಿಯನ್ನು, ನನ್ನ ಹೆತ್ತವರಿಗೆ ಹಾಗೂ ಸಭೆಗೆ ನಾನು ಹೇಳಬೇಕಾಗಿದೆ ಎಂಬುದನ್ನು ಅವಲೋಕಿಸಲು ಇದು ನನಗೆ ಸಹಾಯ ಮಾಡಿತು. ಆ ಲೇಖನವು ನನಗೇ ಬರೆಯಲ್ಪಟ್ಟಿದೆಯೋ ಎಂಬಂತೆ ನನಗನಿಸಿತು. ಕಟ್ಟಕಡೆಗೆ ನನ್ನ ಸಮಸ್ಯೆಗಳ ಕುರಿತಾಗಿ ನಾನು ಅವರಿಗೆ ಹೇಳಿದಾಗ, ನನಗೆ ತುಂಬ ನಿರಾಳವಾದ ಅನಿಸಿಕೆಯಾಯಿತು!
ಎ. ಎ., ಅಮೆರಿಕ