ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g98 6/8 ಪು. 10
  • ಬರಲಿರುವ ಹವಾಮಾನ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬರಲಿರುವ ಹವಾಮಾನ
  • ಎಚ್ಚರ!—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸೃಷ್ಟಿಕರ್ತನ ಪ್ರೀತಿಯ ವಾಗ್ದಾನ
  • ಹವಾಮಾನದ ಏರುಪೇರು ಮತ್ತು ನಮ್ಮ ಭವಿಷ್ಯ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ಇತರ ವಿಷಯಗಳು
  • ಭೂಮಿಯನ್ನ ನಾಶ ಮಾಡ್ತಿದ್ದಾರೆ—ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ಇತರ ವಿಷಯಗಳು
  • ಈ ಭೂಮಿಯನ್ನು ಸಂರಕ್ಷಿಸುವುದು ಯಾರು?
    ಇತರ ವಿಷಯಗಳು
  • ಸೃಷ್ಟಿಕರ್ತನಿಂದ ಒಂದು ಶಾಶ್ವತ ಕೊಡುಗೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಇನ್ನಷ್ಟು
ಎಚ್ಚರ!—1998
g98 6/8 ಪು. 10

ಬರಲಿರುವ ಹವಾಮಾನ

ನಮ್ಮ ವಾತಾವರಣದ ಮಾಲಿನ್ಯವು, ಮನುಷ್ಯರು ಸೃಷ್ಟಿಸಿರುವ ಪರಿಸರೀಯ ಸಮಸ್ಯೆಗಳಲ್ಲಿ ಕೇವಲ ಒಂದಾಗಿದೆ. ಬೇರೆ ಸಮಸ್ಯೆಗಳಲ್ಲಿ ಭಾರೀ ಅರಣ್ಯನಾಶವು, ಪ್ರಾಣಿಜಾತಿಗಳ ನಾಶನ, ಮತ್ತು ನದಿ, ಸರೋವರ ಹಾಗೂ ಸಾಗರಗಳ ಮಾಲಿನ್ಯವು ಒಳಗೊಂಡಿದೆ. ಈ ಸಮಸ್ಯೆಗಳಲ್ಲಿ, ಪ್ರತಿಯೊಂದನ್ನೂ ಜಾಗರೂಕತೆಯಿಂದ ವಿಶ್ಲೇಷಿಸಿ, ಅವುಗಳನ್ನು ಸರಿಪಡಿಸಲು ಸೂಚನೆಗಳನ್ನು ಕೊಡಲಾಗಿದೆ. ಈ ಸಮಸ್ಯೆಗಳು ಭೌಗೋಳಿಕವಾಗಿರುವುದರಿಂದ, ಅವು ಭೌಗೋಳಿಕ ಪರಿಹಾರಗಳನ್ನು ಕೇಳಿಕೊಳ್ಳುತ್ತವೆ. ಸಮಸ್ಯೆಗಳ ವಿಷಯದಲ್ಲಿ ಮತ್ತು ಅವುಗಳನ್ನು ತಿದ್ದಲು ಏನು ಮಾಡಬಹುದೆಂಬ ವಿಷಯದಲ್ಲಿ ವ್ಯಾಪಕವಾದ ಏಕಾಭಿಪ್ರಾಯವಿದೆ. ವರ್ಷಂಪ್ರತಿ, ಕ್ರಮಕೈಕೊಳ್ಳಬೇಕೆಂಬ ಕರೆಗಳು ಕೇಳಿಬರುತ್ತವೆ. ವರ್ಷಂಪ್ರತಿ, ಮಾಡಲಾಗುವ ಕೆಲಸವು ಕೊಂಚವೇ. ಎಷ್ಟೋ ಸಲ ಕಾರ್ಯನೀತಿ ಮಾಡುವವರು ಸಮಸ್ಯೆಗಳ ಕುರಿತು ಪ್ರಲಾಪಿಸುತ್ತ, ಏನಾದರೂ ಮಾಡಲೇಬೇಕೆಂದು ಹೇಳುತ್ತಾರಾದರೂ, ಕಾರ್ಯತಃ, “ನಾವು ಮಾಡುವುದಿಲ್ಲ, ಈಗಲೇ ಮಾಡುವುದಿಲ್ಲ” ಎಂದು ಕೂಡಿಸಿ ಹೇಳುತ್ತಾರೆ.

ಇಸವಿ 1970ರಲ್ಲಿ, ಆದಿಯ ಭೂದಿನ (ಅರ್ತ್‌ ಡೇ)ದಂದು ನ್ಯೂ ಯಾರ್ಕ್‌ ಸಿಟಿಯಲ್ಲಿ ಪ್ರದರ್ಶಕರು ಒಂದು ದೊಡ್ಡ ಸಂಕೇತ ಚಿತ್ರವನ್ನು ಎತ್ತಿಹಿಡಿದಿದ್ದರು. ಭೂಗ್ರಹವು “ಸಹಾಯಮಾಡಿ!!” ಎಂದು ಕಿರಿಚಾಡುತ್ತಿರುವುದನ್ನು ಆ ಸಂಕೇತವು ಚಿತ್ರಿಸಿತು. ಆ ಬೇಡಿಕೆಗೆ ಯಾರಾದರೂ ಪ್ರತಿಕ್ರಿಯಿಸುವರೊ? ದೇವರ ವಾಕ್ಯವು ಉತ್ತರವನ್ನು ಒದಗಿಸುತ್ತದೆ: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯಮಾಡ ಶಕ್ತನಲ್ಲ; ಅವನ ಉಸಿರು ಹೋಗಲು ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು.” (ಕೀರ್ತನೆ 146:3, 4) ಆ ಬಳಿಕ ಕೀರ್ತನೆಗಾರನು ಸೃಷ್ಟಿಕರ್ತನ ಕಡೆಗೆ ನಿರ್ದೇಶಿಸುತ್ತಾನೆ, ಏಕೆಂದರೆ, ಮಾನವಕುಲವನ್ನು ಎದುರಿಸುತ್ತಿರುವ ಸಕಲ ಜಟಿಲವಾದ ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿ, ವಿವೇಕ ಮತ್ತು ಸಂಕಲ್ಪವು ಆತನೊಬ್ಬನಲ್ಲಿಯೇ ಇದೆ. ನಾವು ಓದುವುದು: ‘ಯಾವನು ಭೂಮಿ, ಆಕಾಶ, ಸಾಗರ, ಚರಾಚರ ಇವುಗಳನ್ನು ನಿರ್ಮಿಸಿದ ತನ್ನ ದೇವರಾದ ಯೆಹೋವನನ್ನು ನಂಬಿರುತ್ತಾನೋ ಅವನೇ ಧನ್ಯನು.’—ಕೀರ್ತನೆ 146:5, 6.

ಸೃಷ್ಟಿಕರ್ತನ ಪ್ರೀತಿಯ ವಾಗ್ದಾನ

ಭೂಮಿಯು ದೇವರ ಕೊಡುಗೆ. ಭೂಮಿಯ ಹವಾಮಾನವು ಆಹ್ಲಾದಕರವಾಗಿರುವಂತೆ ಮಾಡುವ ಸಕಲ ಜಟಿಲವಾದ ಮತ್ತು ಆಶ್ಚರ್ಯಕರವಾದ ಯಾಂತ್ರೀಕತೆಗಳೊಂದಿಗೆ ಆತನು ಭೂಮಿಯನ್ನು ವಿನ್ಯಾಸಿಸಿ ಸೃಷ್ಟಿಸಿದನು. (ಕೀರ್ತನೆ 115:15, 16) ಬೈಬಲು ಹೇಳುವುದು: “ಆತನು [ದೇವರು] ತನ್ನ ಶಕ್ತಿಯಿಂದ ಭೂಮಿಯನ್ನು ನಿರ್ಮಿಸಿ ತನ್ನ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ ತನ್ನ ವಿವೇಕದಿಂದ ಆಕಾಶಮಂಡಲವನ್ನು ಹರಡಿದ್ದಾನೆ; ಆತನ ಗರ್ಜನೆಗೆ ಆಕಾಶದಲ್ಲಿ ನೀರು ಮೊರೋ ಎನ್ನುತ್ತದೆ; ಆತನು ಭೂಮಿಯ ಕಟ್ಟಕಡೆಯಿಂದ ಮೋಡಗಳನ್ನು ಏರಮಾಡುತ್ತಾನೆ; ಮಳೆಗೋಸ್ಕರ ಮಿಂಚನ್ನು ಹೊಳೆಯಮಾಡುತ್ತಾನೆ; ತನ್ನ ಭಂಡಾರದಿಂದ ಗಾಳಿಯನ್ನು ಬೀಸಮಾಡುತ್ತಾನೆ.”—ಯೆರೆಮೀಯ 10:12, 13.

ಮಾನವಜಾತಿಗಾಗಿ ಸೃಷ್ಟಿಕರ್ತನಿಗಿರುವ ಪ್ರೀತಿಯನ್ನು ಅಪೊಸ್ತಲ ಪೌಲನು ಪುರಾತನ ಲುಸ್ತ್ರದ ಜನರಿಗೆ ವರ್ಣಿಸಿದನು. ಅವನಂದದ್ದು: “[ದೇವರು] ತನ್ನ ವಿಷಯದಲ್ಲಿ ಸಾಕ್ಷಿಕೊಡದೆ ಇರಲಿಲ್ಲ; ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ದಯಪಾಲಿಸಿ ಆಹಾರಕೊಟ್ಟು ನಿಮ್ಮ ಮನಸ್ಸುಗಳನ್ನು ಆನಂದದಿಂದ ತುಂಬಿಸಿ ಉಪಕಾರಮಾಡುತ್ತಾ ಬಂದವನು ಆತನೇ.”—ಅ. ಕೃತ್ಯಗಳು 14:17.

ಈ ಭೂಗ್ರಹದ ಭವಿಷ್ಯವು, ಮಾನವರ ಪ್ರಯತ್ನಗಳ ಮತ್ತು ಒಪ್ಪಂದಗಳ ಮೇಲೆ ಹೊಂದಿಕೊಂಡಿರುವುದಿಲ್ಲ. ಹವಾಮಾನದ ಕುರಿತಾಗಿ, ಅದನ್ನು ನಿಯಂತ್ರಿಸಲು ಶಕ್ತನಾದಾತನು ತನ್ನ ಪುರಾತನಕಾಲದ ಜನರಿಗೆ ವಾಗ್ದಾನ ಮಾಡಿದ್ದು: “ನಾನು ಮುಂಗಾರು ಹಿಂಗಾರು ಮಳೆಗಳನ್ನು ಆಯಾ ಕಾಲದಲ್ಲಿಯೇ ಬರಮಾಡುವೆನು; ನಿಮ್ಮ ಹೊಲಗಳು ಒಳ್ಳೇ ಬೆಳೆಯನ್ನು ಕೊಡುವವು, ತೋಟದ ಮರಗಳು ಬಹಳ ಫಲಕೊಡುವವು.” (ಯಾಜಕಕಾಂಡ 26:4) ಬೇಗನೇ ಜನರು ಅಂತಹ ಪರಿಸ್ಥಿತಿಗಳನ್ನು ಭೂವ್ಯಾಪಕವಾಗಿ ಅನುಭವಿಸುವರು. ವಿಧೇಯ ಮಾನವರು ಇನ್ನೆಂದಿಗೂ ನಾಶಕರವಾದ ತುಫಾನುಗಳಿಗೆ, ಭರತದ ಅಲೆಗಳಿಗೆ, ನೆರೆಗಳಿಗೆ, ಅನಾವೃಷ್ಟಿಗಳಿಗೆ ಅಥವಾ ಇನ್ನಾವುದೇ ನೈಸರ್ಗಿಕ ವಿಪತ್ತುಗಳಿಗೆ ಭಯಪಡರು.

ಅಲೆಗಳು, ಗಾಳಿ ಮತ್ತು ಹವಾಮಾನ—ಇವೆಲ್ಲವೂ ಆಹ್ಲಾದಕರವಾಗಿರುವುವು. ಜನರು ಹವಾಮಾನದ ಕುರಿತು ಆಗಲೂ ಮಾತಾಡುತ್ತಿರಬಹುದು, ಆದರೆ ಅವರು ಅದರ ಕುರಿತಾಗಿ ಏನೂ ಮಾಡರು. ದೇವರ ರಚನೆಯ ಭವಿಷ್ಯತ್ತಿನಲ್ಲಿ, ಜೀವನವು ಎಷ್ಟು ಉಜ್ವಲವಾಗಿರುವುದೆಂದರೆ, ಅವರಿಗೆ ಹಾಗೆ ಮಾಡುವ ಆವಶ್ಯಕತೆಯೇ ಇರದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ