“ಶಾಂತಿ ಮತ್ತು ಹೊಂದಿಕೆಯಲ್ಲಿ ಜೀವಿಸುತ್ತಿರುವ ಒಂದು ಲೋಕ”
ಈ ಮೇಲಿನ ಸಂಗತಿಯು ನಿಜವಾಗಿಯೂ ಸಂಭವಿಸುವುದೆಂದು ನೀವು ನಂಬುತ್ತೀರೊ? ಅಮೆರಿಕದ ಫ್ಲೋರಿಡದಲ್ಲಿರುವ ಒಬ್ಬ ಸ್ತ್ರೀಯು ಬರೆದುದು: “ಜನರೆಲ್ಲರು ಎಂದಾದರೂ ಒಬ್ಬರನ್ನೊಬ್ಬರು ಪ್ರೀತಿಸುವರೊ? ಎಂಬ ನಿಮ್ಮ ಕಿರುಹೊತ್ತಗೆಯು, ನಾನು ಓದಿರುವ ನಿರೀಕ್ಷೆಯ ಸಂದೇಶಗಳಲ್ಲೇ ಅತ್ಯಂತ ಶಕ್ತಿಶಾಲಿಯಾದದ್ದಾಗಿದೆ. ನಾನು ಅದನ್ನು ಪದೇ ಪದೇ ಓದುತ್ತೇನೆ. ಶಾಂತಿ ಮತ್ತು ಹೊಂದಿಕೆಯಲ್ಲಿ ಜೀವಿಸುತ್ತಿರುವ ಒಂದು ಲೋಕದ ಕುರಿತಾದ ಪ್ರೀತಿಪೂರ್ಣ ವಿಚಾರದ ಬಗ್ಗೆ ಓದುವಾಗಲೆಲ್ಲಾ ನಾನು ಸಂತೋಷಿಸುತ್ತೇನೆ.”
ಜನರು ಶಾಂತಿ ಮತ್ತು ಹೊಂದಿಕೆಯಲ್ಲಿ ಜೀವಿಸಸಾಧ್ಯವಿದೆ ಎಂಬುದರ ಕುರಿತಾದ ಪುರಾವೆಯನ್ನು ಪಡೆದುಕೊಳ್ಳಲು ನೀವು ಸಹ ಬಯಸುವುದಾದರೆ, ದಯವಿಟ್ಟು Watch Tower, H-58 Old Khandala Road, Lonavla 410 401, Mah., India, ಇವರಿಗೆ, ಅಥವಾ 5ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದ್ದಾದ ವಿಳಾಸಕ್ಕೆ ಬರೆಯಿರಿ. ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೊ? ಎಂಬ 32 ಪುಟದ ಬ್ರೋಷರಿನ ಒಂದು ಪ್ರತಿಯು, ರೂ. 6ಕ್ಕೆ ನಿಮಗೆ ಕಳುಹಿಸಲಾಗುವುದು. ಆ ಬ್ರೋಷರಿನ, “ದೇವರು ಉಂಟುಮಾಡುವ ಅದ್ಭುತಕರ ನೂತನ ಲೋಕ” ಎಂಬ ಶೀರ್ಷಿಕೆಯ ಭಾಗ 10, ನಿಮ್ಮ ಹೃದಯಕ್ಕೆ ಹರ್ಷವನ್ನು ಉಂಟುಮಾಡುವುದೆಂದು ನಾವು ನಂಬುತ್ತೇವೆ.