“ಜನರೆಲ್ಲರು ಎಂದಾದರೂ ಒಬ್ಬರನ್ನೊಬ್ಬರು ಪ್ರೀತಿಸುವರೊ?”
“ಜನರೆಲ್ಲರು ಎಂದಾದರೂ ಒಬ್ಬರನ್ನೊಬ್ಬರು ಪ್ರೀತಿಸುವರೊ?” ಎಂಬ ನಾಲ್ಕು ಪುಟದ ಹಸ್ತಪತ್ರಿಕೆಯು, 1997ರ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳುಗಳಲ್ಲಿ ವ್ಯಾಪಕವಾಗಿ ಹಂಚಲ್ಪಟ್ಟಿತ್ತು. 100ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಲೋಕವ್ಯಾಪಕವಾಗಿ 30 ಕೋಟಿಗಿಂತಲೂ ಹೆಚ್ಚು ಪ್ರತಿಗಳು ವಿತರಿಸಲ್ಪಟ್ಟಿದ್ದವು. ಅದರ ಪರವಾಗಿ ಅನೇಕ ಶ್ಲಾಘನೀಯ ಹೇಳಿಕೆಗಳು ಬಂದಿವೆ. ಅಮೆರಿಕದ ಪೆನ್ಸಿಲ್ವೇನಿಯದ ಎಸ್ಟೊನ್ನಲ್ಲಿ ಎಕ್ಸ್ಪ್ರೆಸ್-ಟೈಮ್ಸ್ ವಾರ್ತಾಪತ್ರಿಕೆಯಲ್ಲಿನ ಈ ಕೆಳಗಿನ ಪುನರ್ವಿಮರ್ಶೆಯೂ ಅದರಲ್ಲಿ ಸೇರಿದೆ:
“ನೆರೆಹೊರೆಯವರು ಒಬ್ಬರು ಇನ್ನೊಬ್ಬರ ವಿಷಯದಲ್ಲಿ ತಣ್ಣಗಾಗಿರುವುದರ ಉದಾಹರಣೆಯನ್ನು ಅದು ಎತ್ತಿತೋರಿಸುತ್ತದೆ—ಬಾಸ್ನಿಯ-ಹರ್ಸಗೋವಿನ ಮತ್ತು ರುಆಂಡದಲ್ಲಾದಂತೆ, ಒಬ್ಬರು ಇನ್ನೊಬ್ಬರ ಮೇಲೆ ಸಂಚುಹೂಡುತ್ತಾ, ಬೇರೆ ಬೇರೆ ಜಾತಿ ಹಾಗೂ ಧರ್ಮದ ಗುಂಪುಗಳಲ್ಲಿದ್ದು ಬಹಳ ಸಮಯದಿಂದಲೂ ನೆರೆಹೊರೆಯವರಾಗಿದ್ದವರು, ಈಗ ಪರಸ್ಪರ ಹತ್ಯೆಗೈದಿದ್ದಾರೆ.
“ಅಮೆರಿಕದಲ್ಲಿನ ಪರಿಸ್ಥಿತಿಯ ಕುರಿತು ತಿಳಿಸುತ್ತಾ, ಅಲ್ಲಿ ವೃದ್ಧರು ಒಂಟಿಯಾಗಿ ಜೀವಿಸುತ್ತಾರೆ, ಅವರ ಬಳಿಗೆ ಯಾರೂ ಹೋಗುವುದಿಲ್ಲ ಎಂದು ಅದು ವಿವರಿಸಿತು, ಮತ್ತು ಒಂದು ಛಾಯಾಚಿತ್ರವು, ಚೈನ್ಹಾಕಲ್ಪಟ್ಟಿರುವ ತನ್ನ ಮನೆಬಾಗಿಲನ್ನು ಸ್ವಲ್ಪ ಮಾತ್ರ ತೆರೆದು, ಭಯದಿಂದ ಇಣುಕುತ್ತಿರುವ ಸ್ತ್ರೀಯೊಬ್ಬಳ ಮುಖವನ್ನು ಸೆರೆಹಿಡಿದಿದೆ.”
ಸ್ಲೊವೇನಿಯದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸ್, ದ ಫಿಲೊಸಫಿಕಲ್ ಲಿಟ್ರೇಚರ್ ಕ್ಲಬ್ ಇಂಪ್ರೆಸ್ಯದಿಂದ ಈ ಬೇಡಿಕೆಯನ್ನು ಪಡೆದುಕೊಂಡಿದೆ: “ಧಾರ್ಮಿಕ ಸತ್ಯದ ಕುರಿತಾದ ವಿವರಣೆಯ ವಿಷಯದಲ್ಲಿ ಹೇಳುವುದಾದರೆ, ಸ್ಲೊವೇನಿಯದಲ್ಲಿರುವ ರೋಮನ್ ಕ್ಯಾತೊಲಿಕ್ ಚರ್ಚಿಗೇ ಪೂರ್ಣಾಧಿಕಾರವಿದೆಯೆಂದು ನಾವು ವಿಷಾದಿಸುತ್ತೇವೆ. ಈ ಧಾರ್ಮಿಕ ಸತ್ಯತೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಿಕ್ಕಾಗಿ, “ಜನರೆಲ್ಲರು ಎಂದಾದರೂ ಒಬ್ಬರನ್ನೊಬ್ಬರು ಪ್ರೀತಿಸುವರೊ?” ಎಂಬ ಮೇಲ್ಬರಹವುಳ್ಳ ಟ್ರ್ಯಾಕ್ಟ್ನ 50 ಪ್ರತಿಗಳನ್ನು ನಮಗೆ ಕಳುಹಿಸಿಕೊಡಿ ಎಂದು ನಾವು ವಿನಯಪೂರ್ವಕವಾಗಿ ಬೇಡಿಕೊಳ್ಳುತ್ತೇವೆ. ಇದು ಅಪೂರ್ವವಾದ ಒಂದು ಟ್ರ್ಯಾಕ್ಟಾಗಿದೆ; ಕೇವಲ ಅದರಲ್ಲಿರುವ ವಿಚಾರಗಳಿಂದ ಮಾತ್ರ ನಾವು ಪ್ರಭಾವಿತರಾಗಿಲ್ಲ, ಬದಲಾಗಿ ಅದರ ಚಿತ್ರಗಳೂ ನಮ್ಮ ಮೇಲೆ ಬಹಳಷ್ಟು ಪ್ರಭಾವವನ್ನು ಬೀರಿವೆ.”
ಇಡೀ ಲೋಕದ ಜನರು ಶಾಂತಿ ಹಾಗೂ ಹೊಂದಿಕೆಯಲ್ಲಿ ಜೀವಿಸಬಲ್ಲರು ಎಂಬುದಕ್ಕೆ ಪುರಾವೆಯನ್ನು ಪಡೆದುಕೊಳ್ಳಲು ನೀವು ಸಹ ಇಷ್ಟಪಡುವಲ್ಲಿ, ದಯವಿಟ್ಟು ಇದರ ಜೊತೆಯಲ್ಲಿರುವ ಕೂಪನ್ ಅನ್ನು ತುಂಬಿಸಿ, ಅಂಚೆಯ ಮೂಲಕ ಕಳುಹಿಸಿರಿ.
◻ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರಿನ ಒಂದು ಪ್ರತಿಯನ್ನು ನನಗೆ ಕಳುಹಿಸಿರಿ.
◻ ಒಂದು ಉಚಿತ ಗೃಹ ಬೈಬಲ್ ಅಭ್ಯಾಸಕ್ಕಾಗಿ ನನ್ನನ್ನು ಸಂಪರ್ಕಿಸಿರಿ.