ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g00 6/8 ಪು. 31
  • ಟಿವಿ ವೀಕ್ಷಣೆಗೆ ಲಗಾಮಿರಲಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಟಿವಿ ವೀಕ್ಷಣೆಗೆ ಲಗಾಮಿರಲಿ
  • ಎಚ್ಚರ!—2000
  • ಅನುರೂಪ ಮಾಹಿತಿ
  • ಟೆಲಿವಿಷನ್‌ ನಿಮ್ಮನ್ನು ಬದಲಾಯಿಸಿದೆಯೆ?
    ಎಚ್ಚರ!—1992
  • ಟೆಲಿವಿಷನ್‌ ನಿಮ್ಮನ್ನು ನಿಯಂತ್ರಿಸುವ ಮೊದಲು ಅದನ್ನುನೀವೇ ನಿಯಂತ್ರಿಸಿರಿ
    ಎಚ್ಚರ!—1992
ಎಚ್ಚರ!—2000
g00 6/8 ಪು. 31

ಟಿವಿ ವೀಕ್ಷಣೆಗೆ ಲಗಾಮಿರಲಿ

ಟೆಲಿವಿಷನ್‌, “ಕಥೆಗಾರನ, ಶಿಶುಪಾಲಕನ ಹಾಗೂ ಜನರ ಅಭಿಪ್ರಾಯವನ್ನು ರೂಪಿಸುವವನ” ಸ್ಥಾನವನ್ನು ತೆಗೆದುಕೊಳ್ಳುತ್ತದೆ. ಹೀಗೆಂದು ಅಮೆರಿಕದ ವಾರ್ತಾಮಾಧ್ಯಮ ತನಿಖೆಗಾರರಿಂದ ಸಂಕಲಿಸಲ್ಪಟ್ಟ ಒಂದು ವರದಿಯಾದ ನಾಟ್‌ ಇನ್‌ ದ ಪಬ್ಲಿಕ್‌ ಇಂಟರೆಸ್ಟ್‌—ಲೋಕಲ್‌ ಟಿವಿ ನ್ಯೂಸ್‌ ಇನ್‌ ಅಮೆರಿಕ ಹೇಳುತ್ತದೆ. “ಧೂಮಪಾನದ ಹೊಗೆಯು ಗಾಳಿಯಲ್ಲಿ ಎಲ್ಲೆಲ್ಲೂ ಹರಡಿರುವಂತೆ . . . ಟಿವಿ ಎಲ್ಲೆಲ್ಲೂ ಇದೆ.” ಧೂಮಪಾನದ ಹೊಗೆಯನ್ನು ಒಳಗೆಳೆದುಕೊಳ್ಳುವುದು ಹಾನಿಕಾರಿಯಾಗಿರುವಂತೆ, ಸಿಕ್ಕಾಬಟ್ಟೆಯಾಗಿ ಆಯ್ಕೆಮಾಡಲ್ಪಟ್ಟ ಟಿವಿ ಕಾರ್ಯಕ್ರಮಗಳನ್ನು ತಾಸುಗಟ್ಟಲೇ ನೋಡುವುದು ಹಾನಿಕಾರಿಯಾಗಿದೆ. ಮತ್ತು ಇದು ವಿಶೇಷವಾಗಿ ಮಕ್ಕಳ ವಿಷಯದಲ್ಲಿ ಸತ್ಯ.

ಟಿವಿ ಪರದೆಯ ಮೇಲೆ ತೋರಿಸಲ್ಪಡುವ ಪಾತಕ ಹಾಗೂ ಹಿಂಸಾತ್ಮಕ ಕೃತ್ಯಗಳ ಕುರಿತು ಮಾತಾಡುತ್ತಾ ಅದೇ ವರದಿಯು ಹೇಳಿದ್ದೇನೆಂದರೆ, “ಹಿಂಸಾತ್ಮಕ ಚಿತ್ರಗಳನ್ನು ನೋಡುವುದರಿಂದ ಮಕ್ಕಳು ಇನ್ನೂ ಹೆಚ್ಚು ಹಿಂಸಾತ್ಮಕರಾಗುತ್ತಾರೆ ಮಾತ್ರವಲ್ಲ, ಇದು ಅವರ ಓದುಬರಹ ಹಾಗೂ ಸಹಾನುಭೂತಿಯ ಮೇಲೆಯೂ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂದು ನೂರಾರು ಸಂಶೋಧನಾ ಅಧ್ಯಯನಗಳು ತೋರಿಸಿವೆ.” “ಟಿವಿಯಲ್ಲಿ ತೋರಿಸಲಾಗುವ ಹಿಂಸಾಚಾರ ಕಾರ್ಯಕ್ರಮಗಳು, ಯುವ ಜನರ ಆರೋಗ್ಯಕ್ಕೆ ಬೆದರಿಕೆಯನ್ನೊಡ್ಡುವಂತಹದ್ದಾಗಿವೆ” ಎಂದು 1992ರಲ್ಲಿ ಅಮೆರಿಕನ್‌ ಮೆಡಿಕಲ್‌ ಅಸೋಸಿಯೇಶನ್‌ ಹೇಳಿತು.

ಟಿವಿ ಕಾರ್ಯಕ್ರಮಗಳು ನಿಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನು ನೀವು ಹೇಗೆ ತಡೆಯಸಾಧ್ಯವಿದೆ? ಟೆಲಿವಿಷನ್‌ ಅನ್ನು ಹೆಚ್ಚು ಜಾಗರೂಕವಾಗಿ ಹೇಗೆ ಉಪಯೋಗಿಸಬೇಕು ಎಂಬುದರ ಕುರಿತಾಗಿ ಹಲವಾರು ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಶಿಫಾರಸ್ಸುಗಳ ಮೇಲಾಧರಿಸಿ, ಕೆಲವು ಸಲಹೆಗಳನ್ನು ಈ ವರದಿಯು ಪಟ್ಟಿಮಾಡುತ್ತದೆ. ಆ ಸಲಹೆಗಳಲ್ಲಿ ಕೆಲವೊಂದು ಹೀಗಿವೆ:

◼ ಯಾವ ಟಿವಿ ಕಾರ್ಯಕ್ರಮಗಳನ್ನು ನೋಡಬೇಕು ಎಂಬುದನ್ನು ನಿರ್ಧರಿಸಿ, ಹೆಚ್ಚು ಸಮಯವನ್ನು ಅದರ ಮುಂದೆ ಕಳೆಯದೆ ಅದಕ್ಕೆ ಮಿತಿಯನ್ನಿಡಿರಿ. ಮಕ್ಕಳು ಯಾವಾಗ ನೋಡಬೇಕು ಎಂಬುದಕ್ಕೆ ಸಮಯವನ್ನು ಗೊತ್ತುಪಡಿಸಿರಿ. ಮಕ್ಕಳ ರೂಮುಗಳಲ್ಲಿ ಟಿವಿಯನ್ನು ಇಡಬೇಡಿರಿ.

◼ ಟೆಲಿವಿಷನ್‌ನ ಪಕ್ಕದಲ್ಲಿಯೇ ಒಂದು ಭೂಗೋಳವನ್ನು ಇಡಿರಿ. ಇದರಿಂದ ಕಾರ್ಯಕ್ರಮಗಳಲ್ಲಿ ತೋರಿಸಲ್ಪಡುವ ಸ್ಥಳಗಳನ್ನು ಮಕ್ಕಳು ಭೂಗೋಳದಲ್ಲಿ ನೋಡಿ ತಿಳಿದುಕೊಳ್ಳಸಾಧ್ಯವಿದೆ.

◼ ನೀವು ಮಕ್ಕಳೊಂದಿಗೆ ಕುಳಿತು ಟಿವಿಯನ್ನು ನೋಡಿರಿ. ಆಗ ನೀವು ಅದರಲ್ಲಿ ಯಾವುದು ಕಾಲ್ಪನಿಕವಾಗಿದೆ ಹಾಗೂ ಯಾವುದು ನೈಜ ಸಂಗತಿಯಾಗಿದೆ ಎಂಬುದನ್ನು ವಿವರಿಸಶಕ್ತರಾಗುವಿರಿ. ಏಕೆಂದರೆ ಇನ್ನೂ ಹತ್ತು ವರ್ಷ ಪ್ರಾಯವಾಗಿರದ ಅನೇಕ ಮಕ್ಕಳಿಗೆ ಇದು ಗೊತ್ತಾಗುವುದಿಲ್ಲ.

◼ ನಿಮ್ಮ ಮನೆಯಲ್ಲಿ ಎಲ್ಲರಿಗೂ ಕಾಣಿಸುವಂತಹ ಸ್ಥಳದಲ್ಲಿ ಟಿವಿಯನ್ನು ಇಡಬೇಡಿರಿ. ಅದನ್ನು ಬಾಗಿಲುಗಳುಳ್ಳ ಕಪಾಟಿನಲ್ಲಿ ಇಡಿರಿ. ಆಗ ಟಿವಿಯನ್ನು ಆನ್‌ ಮಾಡಿ, ಚ್ಯಾನಲ್‌ಗಳನ್ನು ಬದಲಾಯಿಸುತ್ತಾ ಇರಲು ಸ್ವಲ್ಪ ಕಷ್ಟವಾಗುವುದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ