ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g01 7/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—2001
  • ಅನುರೂಪ ಮಾಹಿತಿ
  • ನರ್ಸ್‌ಗಳ ಅತಿ ಪ್ರಾಮುಖ್ಯ ಪಾತ್ರ
    ಎಚ್ಚರ!—2001
  • ನರ್ಸ್‌ಗಳು ನಮಗೆ ಅವರ ಆವಶ್ಯಕತೆ ಏಕಿದೆ?
    ಎಚ್ಚರ!—2001
  • ಪರಿವಿಡಿ
    ಎಚ್ಚರ!—2001
  • ನಮ್ಮ ವಾಚಕರಿಂದ
    ಎಚ್ಚರ!—1994
ಇನ್ನಷ್ಟು
ಎಚ್ಚರ!—2001
g01 7/8 ಪು. 30

ನಮ್ಮ ವಾಚಕರಿಂದ

ದೈಹಿಕ ಅಲಂಕಾರ “ಬೈಬಲಿನ ದೃಷ್ಟಿಕೋನ: ದೈಹಿಕ ಅಲಂಕಾರ​—⁠ಈ ವಿಷಯದಲ್ಲಿ ವಿವೇಚನೆಯನ್ನು ತೋರಿಸುವ ಅಗತ್ಯವಿದೆ,” (ಅಕ್ಟೋಬರ್‌ - ಡಿಸೆಂಬರ್‌ 2000) ಎಂಬ ನಿಮ್ಮ ಲೇಖನಕ್ಕೆ ಪ್ರತ್ಯುತ್ತರವಾಗಿ ನಾನು ಬರೆಯುತ್ತಿದ್ದೇನೆ. ಲಕ್ಷಣವಾದ ದೈಹಿಕ ಅಲಂಕಾರವು ಸುಂದರವಾಗಿದೆ—⁠ಒಂದು ನಿಜವಾದ ಕಲಾಕೃತಿ. ಸಮಾಜವು ನನ್ನ ಹೊರಗಿನ ತೋರಿಕೆಗಳ ಆಧಾರದ ಮೇಲೆ ನನ್ನ ಕುರಿತು ಅಭಿಪ್ರಾಯವನ್ನು ರೂಪಿಸಬಹುದು ಮತ್ತು ವರ್ಗೀಕರಿಸಬಹುದು, ಆದರೆ ದೇವರ ದೃಷ್ಟಿಯಲ್ಲಿ ನಾನು ಮೆಚ್ಚಲ್ಪಟ್ಟಿದ್ದೇನೆ ಎಂಬುದು ನನಗೆ ಗೊತ್ತು. ಇತರರು ನನ್ನ ದೇಹದ ಮೇಲಿರುವ ಹಚ್ಚೆಗಳ ಮೇಲೆ ಗಮನವನ್ನು ಕೇಂದ್ರೀಕರಿಸುವ ಬದಲು ನಾನು ಆಂತರಿಕವಾಗಿ ಏನಾಗಿದ್ದೇನೆ ಎಂಬುದನ್ನು ನೋಡಲಿ ಎಂಬುದಾಗಿ ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ.

ಕೆ. ಎಮ್‌., ಅಮೆರಿಕ

ಒಬ್ಬ ವ್ಯಕ್ತಿಯು ದೈಹಿಕ ಅಲಂಕಾರವನ್ನು ಮಾಡಿಕೊಳ್ಳುವನೋ ಇಲ್ಲವೋ ಎಂಬುದು ಅವನ ವೈಯಕ್ತಿಕ ನಿರ್ಧಾರವಾಗಿದೆ ಎಂಬುದಾಗಿ ಲೇಖನವು ತಿಳಿಸಿತು. ಹಾಗಿದ್ದರೂ, ಒಬ್ಬ ವ್ಯಕ್ತಿಯು ತಾನು ಆಂತರಿಕವಾಗಿ ಸುಂದರವಾಗಿದ್ದೇನೆಂದು ತೋರಿಸುವ ಒಂದು ವಿಧವು, ‘ತನ್ನನ್ನು ಸಭ್ಯತೆಯಿಂದಲೂ, ಸ್ವಸ್ಥಮನಸ್ಸಿನಿಂದಲೂ ಅಲಂಕರಿಸಿಕೊಳ್ಳುವುದೇ’ ಆಗಿದೆ. (1 ತಿಮೊಥೆಯ 2:​9, NW) ಒಬ್ಬ ಕ್ರೈಸ್ತನು ತನ್ನ ಸ್ವಂತ ಮನಸ್ಸಾಕ್ಷಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ಜವಾಬ್ದಾರನಾಗಿದ್ದಾನೆ ಮಾತ್ರವಲ್ಲ, “ಮತ್ತೊಬ್ಬನ” ಮನಸ್ಸಾಕ್ಷಿಯನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನು ಸಹ ಬೈಬಲ್‌ ಸ್ಪಷ್ಟಪಡಿಸುತ್ತದೆ. (1 ಕೊರಿಂಥ 10:29)​—⁠ಸಂಪಾ. (g01 4/8)

ಲೈಂಗಿಕ ಕಿರುಕುಳ “ಯುವ ಜನರು ಪ್ರಶ್ನಿಸುವುದು . . . ಲೈಂಗಿಕ ಕಿರುಕುಳವನ್ನು ನಾನು ಹೇಗೆ ನಿಭಾಯಿಸಬಲ್ಲೆ?” (ಅಕ್ಟೋಬರ್‌ - ಡಿಸೆಂಬರ್‌ 2000) ಎಂಬ ಲೇಖನಕ್ಕಾಗಿ ನಾನು ನನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಇಷ್ಟಪಡುತ್ತೇನೆ. ನಾನು ಅನೈತಿಕ ನಡತೆಯಲ್ಲಿ ಒಳಗೂಡದ ಕಾರಣ, ಶಾಲೆಯಲ್ಲಿ ನನ್ನನ್ನು ಎಷ್ಟೋ ಹೆಸರುಗಳಿಂದ ಕರೆಯುತ್ತಿದ್ದರು. ಪ್ರೌಢ ಶಾಲೆಯನ್ನು ಮುಗಿಸಿದ ನಂತರ ಕಿರುಕುಳ ನಿಂತುಹೋಗುವುದು ಎಂದು ನಾನು ನೆನಸಿದೆ, ಆದರೆ ಅನೇಕ ಹುಡುಗಿಯರು ನನ್ನೊಂದಿಗೆ ಅಶ್ಲೀಲ ಸೂಚಕ ಮಾತುಗಳನ್ನಾಡಿದ್ದಾರೆ. ನನ್ನ ಕ್ರೈಸ್ತ ನಂಬಿಕೆಗಳು ಎಲ್ಲರಿಗೂ ಗೊತ್ತಾಗುವಂತೆ ಮಾಡಿದ್ದು, ಇಂತಹ ಪ್ರಲೋಭನೆಯನ್ನು ವಿರೋಧಿಸಲು ನನಗೆ ಸಹಾಯಮಾಡಿದೆ. ಈ ಆತ್ಮಿಕ ಆಹಾರವನ್ನು ನಮಗೆ ಒದಗಿಸಿದ್ದಕ್ಕಾಗಿ ನಿಮಗೆ ತುಂಬ ಉಪಕಾರ.

ಏಚ್‌. ಸಿ., ಸಾಂಬಿಯ (g01 4/22)

ಈ ಲೇಖನವು ನನಗೆ ದೊಡ್ಡ ಸಹಾಯವಾಗಿತ್ತು. ನನ್ನ ಮೂರನೇ ತರಗತಿಯಲ್ಲಿರುವ ಒಬ್ಬ ಹುಡುಗನು ನನ್ನನ್ನು ನೋಡುತ್ತಾ ಇರುತ್ತಾನೆ. ಆದರೆ ಈಗ ನಾನು ಏನು ಮಾಡಬೇಕೆಂಬುದು ನನಗೆ ಗೊತ್ತಿದೆ.

ಏಚ್‌. ಕೆ., ಅಮೆರಿಕ (g01 4/22)

ಇದು ಸರಿಯಾದ ಸಮಯದಲ್ಲೇ ಬಂತು! ನನ್ನ ಕೆಲಸದ ಸ್ಥಳದಲ್ಲಿ ನಾನು ಲೈಂಗಿಕ ಕಿರುಕುಳವನ್ನು ಅನುಭವಿಸುತ್ತಿದ್ದೇನೆ. ನಾನು ಭಾವನಾತ್ಮಕವಾಗಿ ಬತ್ತಿಹೋಗುತ್ತಿದ್ದೆ. ನಾನು ಹತಾಶ ಸ್ಥಿತಿಯಲ್ಲಿದ್ದಾಗ ಈ ಲೇಖನವು ಬಂತು. ನನ್ನ ಕೆಲಸದ ಸ್ಥಳದಲ್ಲಿರುವ ಜನರೊಂದಿಗೆ ಹೇಗೆ ವ್ಯವಹರಿಸಬೇಕೆಂಬುದು ನನಗೆ ಈಗ ಗೊತ್ತಾಗಿದೆ.

ಎಲ್‌. ಟಿ., ಅಮೆರಿಕ (g01 4/22)

ನರ್ಸ್‌ಗಳು ಸುಮಾರು ಮೂರು ವರ್ಷಗಳಿಂದ ನಾನು ಒಬ್ಬ ನರ್ಸ್‌ ಆಗಿದ್ದೇನೆ. ಅಸ್ವಸ್ಥತೆ ಮತ್ತು ನರಳುವಿಕೆಯೊಂದಿಗೆ ನೇರವಾಗಿ ನಿರ್ವಹಿಸುವುದು ಸುಲಭದ ಕೆಲಸವೇನಲ್ಲ. “ನರ್ಸ್‌ಗಳು ಇಲ್ಲದಿರುತ್ತಿದ್ದರೆ ನಾವೇನು ಮಾಡುತ್ತಿದ್ದೆವು?” (ಜನವರಿ - ಮಾರ್ಚ್‌ 2001) ಎಂಬ ಲೇಖನಮಾಲೆಯಲ್ಲಿ, ಬೇರೆಯವರು ನಮ್ಮ ಕೆಲಸವನ್ನು ಗಣ್ಯಮಾಡುತ್ತಾರೆ ಎಂಬುದನ್ನು ಓದುವುದು ಎಷ್ಟು ಪ್ರೋತ್ಸಾಹದಾಯಕವಾಗಿತ್ತು! ಮತ್ತು ಶೀಘ್ರವೇ ನರ್ಸ್‌ಗಳು ಬೇಕಾಗಿರುವುದಿಲ್ಲ ಎಂಬ ಬೈಬಲಿನ ವಾಗ್ದಾನವು ಇನ್ನೂ ಹೆಚ್ಚು ಪ್ರೋತ್ಸಾಹದಾಯಕವಾಗಿತ್ತು.​—⁠ಯೆಶಾಯ 33:24.

ಜೆ. ಎಸ್‌. ಬಿ., ಬ್ರಸಿಲ್‌ (g01 7/8)

ನಾನು ಮತ್ತು ನನ್ನ ಗಂಡ ಹೊರರೋಗಿಗಳ ಒಂದು ನರ್ಸಿಂಗ್‌ ಸೇವೆಯನ್ನು ನಿರ್ವಹಿಸುತ್ತಿದ್ದೇವೆ. ಮತ್ತು ಈ ಲೇಖನಮಾಲೆಯು ನಮಗೆ ದೊಡ್ಡ ಪ್ರಚೋದನೆಯಾಗಿತ್ತು. ನಮ್ಮ ವೃತ್ತಿಯೆಡೆಗೆ ಮತ್ತು ನಮ್ಮ ರೋಗಿಗಳೆಡೆಗಿರುವ ನಮ್ಮ ಮನೋಭಾವವನ್ನು ಉತ್ತಮಗೊಳಿಸಲು ಇದು ನಮಗೆ ಸಹಾಯಮಾಡಿತು. ಶಹಬಾಷ್‌!

ಎಸ್‌. ಎಸ್‌., ಜರ್ಮನಿ (g01 7/8)

ಮನಮುಟ್ಟುವಂಥ ಈ ಲೇಖನಗಳಿಗಾಗಿ ನಾನು ನಿಮಗೆ ಉಪಕಾರ ಹೇಳುತ್ತೇನೆ. ನಾನು ಪ್ರೌಢ ವ್ಯಕ್ತಿಯಾಗಲು ನರ್ಸಿಂಗ್‌ ನನಗೆ ಅನೇಕ ರೀತಿಯಲ್ಲಿ ಸಹಾಯಮಾಡಿದೆ. ಜೀವಿತದ ಉದ್ದೇಶವೇನು ಎಂಬುದರ ಕುರಿತು ಯೋಚಿಸಲು ಮತ್ತು ಬೈಬಲಿನ ಕುರಿತು ಕಲಿಯಲು ನನ್ನನ್ನು ಪ್ರಭಾವಿಸಿದ ಅಂಶಗಳಲ್ಲಿ ಇದೂ ಒಂದು. ಎಚ್ಚರ! ಪತ್ರಿಕೆಯ ಈ ಪ್ರತಿಯು, ನಾನು ಈ ವರೆಗೆ ಪಡೆದಿರುವ ಗಣ್ಯತೆಯ ಅಭಿವ್ಯಕ್ತಿಗಳಲ್ಲಿ ಅತಿ ಶ್ರೇಷ್ಠವಾದದ್ದು. ನಾನು ಇದರಿಂದ ಮುಂದೆ ಬಹಳ ಸಮಯದ ವರೆಗೆ ಪ್ರೋತ್ಸಾಹವನ್ನು ಪಡೆದುಕೊಳ್ಳುತ್ತಿರುವೆ!

ಜೆ. ಡಿ., ಚೆಕ್‌ ರಿಪಬ್ಲಿಕ್‌ (g01 7/8)

ಈ ಲೇಖನಮಾಲೆಗಾಗಿ ತುಂಬ ಥ್ಯಾಂಕ್ಸ್‌. ನಾನು ಅನೇಕ ವರ್ಷಗಳಿಂದ ಒಬ್ಬ ರೆಜಿಸ್ಟರ್ಡ್‌ ನರ್ಸ್‌ ಆಗಿದ್ದೇನೆ. ನನಗೆ ನನ್ನ ರೋಗಿಗಳ ವಿಷಯದಲ್ಲಿ ಎಷ್ಟು ಅನುಕಂಪ ಉಂಟಾಗುತ್ತದೆಂದರೆ, ಅವರ ಕಣ್ಣಿಗೆ ಔಷಧದ ತೊಟ್ಟುಗಳನ್ನು ಹಾಕುವಾಗ ನನ್ನ ಕಣ್ಣುಗಳೇ ತುಂಬಿಬರುತ್ತವೆ. ಲೋಕದಾದ್ಯಂತವಿರುವ ನರ್ಸ್‌ಗಳು ಈ ಎಚ್ಚರ! ಪತ್ರಿಕೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವರು ಎಂಬುದರ ಕುರಿತು ನಾನು ನಿಶ್ಚಯದಿಂದಿದ್ದೇನೆ.

ಎಲ್‌. ಏ. ಆರ್‌., ಅಮೆರಿಕ (g01 7/8)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ