ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g22 ನಂ. 1 ಪು. 4-6
  • 1 | ಆರೋಗ್ಯವನ್ನು ಕಾಪಾಡಿಕೊಳ್ಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 1 | ಆರೋಗ್ಯವನ್ನು ಕಾಪಾಡಿಕೊಳ್ಳಿ
  • ಎಚ್ಚರ!—2022
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಇದು ಯಾಕೆ ಮುಖ್ಯ
  • ಈ ಮುಂದಿನ ವಿಷಯವನ್ನ ನೆನಪಿಡಿ
  • ಈಗ ನೀವೇನು ಮಾಡಬಹುದು
  • ಆರೋಗ್ಯ ಕಾಪಾಡಿಕೊಳ್ಳಲು ಐದು ಹೆಜ್ಜೆಗಳು
    ಎಚ್ಚರ!—2015
  • ಆರೋಗ್ಯ ಸಮಸ್ಯೆ ನಿಭಾಯಿಸೋದು ಹೇಗೆ?
    ಇತರ ವಿಷಯಗಳು
  • ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧ
    ಎಚ್ಚರ!—1999
  • ನಿಮ್ಮ ನಂಬಿಕೆ ಮತ್ತು ಆತ್ಮಿಕಾರೋಗ್ಯವನ್ನು ಕಾಪಾಡಿರಿ
    ಕಾವಲಿನಬುರುಜು—1991
ಇನ್ನಷ್ಟು
ಎಚ್ಚರ!—2022
g22 ನಂ. 1 ಪು. 4-6
ಅನೇಕ ವಿಧದ ಆಹಾರಗಳನ್ನು ಟೇಬಲ್‌ ಮೇಲೆ ಇಡಲಾಗಿದೆ.

ಲೋಕದಲ್ಲಿದೆ ಕಷ್ಟ-ನೋವು

1 | ಆರೋಗ್ಯವನ್ನು ಕಾಪಾಡಿಕೊಳ್ಳಿ

ಇದು ಯಾಕೆ ಮುಖ್ಯ

ಒಂದು ವಿಪತ್ತು ಅಥವಾ ವಿಕೋಪ ನಡೆದಾಗ ಅದು ಜನರ ಆರೋಗ್ಯದ ಮೇಲೆ ಬೇರೆಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತೆ.

  • ಸಮಸ್ಯೆ-ತೊಂದರೆಗಳು ಬಂದಾಗ ಜನರಲ್ಲಿ ಮಾನಸಿಕ ಒತ್ತಡ ಜಾಸ್ತಿ ಆಗುತ್ತೆ. ತುಂಬ ಸಮಯ ಒತ್ತಡದಲ್ಲೇ ಇದ್ದಾಗ ಕಾಯಿಲೆಗಳು ಬರೋ ಸಾಧ್ಯತೆನೂ ಹೆಚ್ಚಾಗುತ್ತೆ.

  • ವಿಪತ್ತುಗಳಾದಾಗ ಆರೋಗ್ಯ ವ್ಯವಸ್ಥೆ ತಲೆಕೆಳಗಾಗಿ ವೈದ್ಯರು ಸಿಗೋದು ಹಾಗೂ ಚಿಕಿತ್ಸೆ ಪಡೆಯೋದು ಕಷ್ಟ ಆಗುತ್ತೆ.

  • ವಿಪತ್ತು-ವಿಕೋಪಗಳಿಂದಾಗಿ ಜನರಿಗೆ ಹಣಕಾಸಿನ ಸಮಸ್ಯೆ ಆಗುತ್ತೆ. ಇದರಿಂದಾಗಿ ಪೌಷ್ಟಿಕ ಆಹಾರವನ್ನು, ಔಷಧಿಗಳನ್ನು ಪಡೆಯೋದು ತುಂಬ ಕಷ್ಟ ಆಗಿಬಿಡುತ್ತೆ.

ಈ ಮುಂದಿನ ವಿಷಯವನ್ನ ನೆನಪಿಡಿ

  • ನಮಗೆ ಗಂಭೀರ ಕಾಯಿಲೆ ಅಥವಾ ಮಾನಸಿಕ ಒತ್ತಡ ಇದ್ದಾಗ ಆರೋಗ್ಯದ ಕಡೆಗೆ ಸರಿಯಾಗಿ ಗಮನ ಕೊಡಕ್ಕೆ ಆಗಲ್ಲ. ಇದರಿಂದ ನಮ್ಮ ಆರೋಗ್ಯ ಇನ್ನೂ ಹದಗೆಡಬಹುದು.

  • ಆರೋಗ್ಯ ಸಮಸ್ಯೆ ಇದ್ದಾಗ ಸರಿಯಾದ ಚಿಕಿತ್ಸೆ ಪಡೆಯಲಿಲ್ಲ ಅಂದರೆ ಆರೋಗ್ಯ ಹಾಳಾಗೋದಲ್ಲದೆ ಜೀವಕ್ಕೂ ಅಪಾಯ ಆಗಬಹುದು.

  • ಲೋಕದಲ್ಲಿ ಎಷ್ಟೇ ಕಷ್ಟ-ನೋವು ಇದ್ದರೂ ಒಳ್ಳೇ ಆರೋಗ್ಯ ಇದ್ರೆ ಸರಿಯಾಗಿ ಯೋಚನೆ ಮಾಡಿ ಒಳ್ಳೇ ನಿರ್ಧಾರ ಮಾಡಕ್ಕೆ ಸಹಾಯ ಆಗುತ್ತೆ.

  • ನೀವು ಶ್ರೀಮಂತರಾಗಿರಲಿ ಬಡವರಾಗಿರಲಿ ಆರೋಗ್ಯ ಕಾಪಾಡಿಕೊಳ್ಳೋಕೆ ಸರಿಯಾದ ಹೆಜ್ಜೆಗಳನ್ನು ತೆಗೆದುಕೊಳ್ಳಿ.

ಈಗ ನೀವೇನು ಮಾಡಬಹುದು

ಜಾಣನಾಗಿರೋ ಒಬ್ಬ ವ್ಯಕ್ತಿ ಸಮಸ್ಯೆಗಳನ್ನ ಗುರುತಿಸಿ ಅದರಿಂದ ತಪ್ಪಿಸಿಕೊಳ್ಳೋಕೆ ಮುಂಚೆನೇ ಹೆಜ್ಜೆಗಳನ್ನು ತೆಗೆದುಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಾನೆ. ಇದು ನಮ್ಮ ಆರೋಗ್ಯದ ವಿಷಯದಲ್ಲಿ ನೂರಕ್ಕೆ ನೂರು ಸತ್ಯ. ನಮ್ಮನ್ನು, ನಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ರೆ, ತುಂಬ ಕಾಯಿಲೆಗಳನ್ನು ತಡೆಗಟ್ಟಬಹುದು. ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ಉತ್ತಮ. ಈ ಮಾತನ್ನು ನಾವು ಯಾವಾಗ್ಲೂ ನೆನಪಿಟ್ಟುಕೊಳ್ಳೋಣ.

ಅಮಿತ್‌a ಹೀಗಂತಾರೆ: “ನಾವು ನಮ್ಮನ್ನು, ನಮ್ಮ ಮನೆಯನ್ನು ಶುದ್ಧವಾಗಿ ಇಟ್ಟಿದ್ದರಿಂದ ಆಸ್ಪತ್ರೆಗೆ ಹಾಕೋ ದುಡ್ಡನ್ನು ಉಳಿತಾಯ ಮಾಡಕ್ಕೆ ಆಯ್ತು.”

a ಹೆಸರುಗಳನ್ನು ಬದಲಾಯಿಸಲಾಗಿದೆ.

ಹೇಗೆ ಪಡೆಯೋದು ನೆಮ್ಮದಿ—ನಾವು ಹೀಗೆ ಮಾಡಿ ನೋಡಿ

ಕಷ್ಟ-ನೋವಿನ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಹೆಜ್ಜೆಗಳನ್ನು ತೆಗೆದುಕೊಳ್ಳಿ, ನೆಮ್ಮದಿಯಾಗಿರಿ

ಶುದ್ಧತೆ ಕಾಪಾಡಿ

ಒಬ್ಬ ವ್ಯಕ್ತಿ ಸೋಪ್‌ ಮತ್ತು ನೀರಿನಿಂದ ತನ್ನ ಕೈಯನ್ನ ತೊಳೆಯುತ್ತಿದ್ದಾನೆ.

ಶುದ್ಧತೆ ಕಾಪಾಡಿ

ಬೈಬಲಲ್ಲಿ ಹೀಗಿದೆ: “ಜಾಣ ಅಪಾಯ ನೋಡಿ ಅಡಗಿಕೊಳ್ತಾನೆ.” (ಜ್ಞಾನೋಕ್ತಿ 22:3) ಆರೋಗ್ಯಕ್ಕೆ ಅಪಾಯ ತರೋ ವಿಷಯಗಳನ್ನು ಗುರುತಿಸಿ ಅದ್ರಿಂದ ದೂರ ಇರಿ.

  • ಆಹಾರವನ್ನು ಮುಟ್ಟುವ ಮುಂಚೆ ಮತ್ತು ಶೌಚಾಲಯಕ್ಕೆ ಹೋಗಿ ಬಂದಮೇಲೆ ನಿಮ್ಮ ಕೈಗಳನ್ನ ಸೋಪು ಮತ್ತು ನೀರಿಂದ ತೊಳೆಯಿರಿ.

  • ಮನೆಯಲ್ಲಿ ಪದೇಪದೇ ಮುಟ್ಟುವ ವಸ್ತುಗಳನ್ನು, ಜಾಗಗಳನ್ನು ಸ್ಯಾನಿಟೈಸ್‌ ಮಾಡಿ.

  • ಸಾಂಕ್ರಾಮಿಕ ರೋಗ ಇರುವವರಿಂದ ಆದಷ್ಟು ದೂರ ಇರಿ.

ಪೌಷ್ಟಿಕ ಆಹಾರ ತಿನ್ನಿ

ಅನೇಕ ವಿಧದ ಆಹಾರಗಳನ್ನು ಟೇಬಲ್‌ ಮೇಲೆ ಇಡಲಾಗಿದೆ.

ಪೌಷ್ಟಿಕ ಆಹಾರ ತಿನ್ನಿ

ಬೈಬಲಲ್ಲಿ ಹೀಗಿದೆ: “ಯಾವನೂ ತನ್ನ ದೇಹವನ್ನ ದ್ವೇಷಿಸಲ್ಲ, ಅದನ್ನ ಪೋಷಿಸಿ ಪ್ರೀತಿಸಿ ಅಮೂಲ್ಯವಾಗಿ ನೋಡ್ತಾನೆ.” (ಎಫೆಸ 5:29) ಆರೋಗ್ಯ ಹಾಳು ಮಾಡೋ ಯಾವುದನ್ನೂ ನಾವು ಸೇವಿಸಬಾರದು.

  • ಸಾಕಷ್ಟು ನೀರು ಕುಡಿರಿ.

  • ಎಲ್ಲಾ ತರದ ಹಣ್ಣು-ತರಕಾರಿಗಳನ್ನು ತಿನ್ನಿ.

  • ಕೊಬ್ಬಿನಾಂಶ, ಉಪ್ಪಿನಾಂಶ ಮತ್ತು ಸಿಹಿ ಅಂಶ ಇರುವ ಆಹಾರವನ್ನು ಕಮ್ಮಿ ತಿನ್ನಿ.

  • ತಂಬಾಕು, ಧೂಮಪಾನ, ಡ್ರಗ್ಸ್‌ನಿಂದ ದೂರ ಇರಿ ಮತ್ತು ಮದ್ಯಪಾನವನ್ನು ಅತಿಯಾಗಿ ಕುಡಿಬೇಡಿ.

ಚೇತನ್‌ ಹೀಗಂತಾರೆ: “ನಾವು ಒಳ್ಳೇ ಆರೋಗ್ಯ ಕಾಪಾಡಿಕೊಳ್ಳೋಕೆ ಪೌಷ್ಟಿಕ ಆಹಾರ ಸೇವಿಸುತ್ತೇವೆ. ಇಲ್ಲಾ ಅಂದ್ರೆ ನಮ್ಮೆಲ್ಲ ಹಣವನ್ನ ಆಸ್ಪತ್ರೆಗೆ ಸುರಿಬೇಕಾಗುತ್ತೆ. ಅದೇ ದುಡ್ಡಲ್ಲಿ ನಾವು ಒಳ್ಳೇ ಆಹಾರವನ್ನು ಖರೀದಿಸ್ತೀವಿ.”

ವ್ಯಾಯಾಮ ಮಾಡಿ ಮತ್ತು ಸಾಕಷ್ಟು ವಿಶ್ರಾಂತಿ ಪಡೆಯಿರಿ

ಒಬ್ಬ ವ್ಯಕ್ತಿ ಕೆಸರಿನ ರಸ್ತೆಯಲ್ಲಿ ಜಾಗಿಂಗ್‌ ಮಾಡ್ತಿದ್ದಾನೆ.

ವ್ಯಾಯಾಮ ಮಾಡಿ

ಬೈಬಲಲ್ಲಿ ಹೀಗಿದೆ: “ಅತಿಯಾಗಿ ದುಡಿಯೋದಕ್ಕಿಂತ ಒಂದಿಷ್ಟು ವಿಶ್ರಾಂತಿ ಪಡ್ಕೊಳ್ಳೋದೇ ಒಳ್ಳೇದು. ಅತಿಯಾಗಿ ದುಡಿಯೋದು ಗಾಳಿ ಹಿಡಿಯೋಕೆ ಓಡಿದ ಹಾಗೆ.” (ಪ್ರಸಂಗಿ 4:6) ನಾವು ಚೆನ್ನಾಗಿ ಕೆಲಸ ಮಾಡಬೇಕು ಜೊತೆಗೆ ವಿಶ್ರಾಂತಿನೂ ಪಡಿಬೇಕು.

  • ವ್ಯಾಯಾಮ ಮಾಡಿ. ಇದನ್ನ ಮಾಡಕ್ಕೆ ಕಷ್ಟ ಅನಿಸಿದ್ರೆ ವಾಕಿಂಗ್‌ನಿಂದ ಶುರುಮಾಡಿ. ನಿಮಗೆ ವಯಸ್ಸಾಗಿದ್ರೂ, ಏನೇ ಕಾಯಿಲೆ ಇದ್ರೂ ನಿಮ್ಮಿಂದ ಆದಷ್ಟು ವ್ಯಾಯಾಮ ಮಾಡಿ.

  • ಒಬ್ಬ ಯುವ ಸ್ತ್ರೀ ವಿರಾಮ ಮಾಡ್ತಿದ್ದಾರೆ.

    ಸಾಕಷ್ಟು ವಿಶ್ರಾಂತಿ ಪಡೆಯಿರಿ

    ಸಾಕಷ್ಟು ವಿಶ್ರಾಂತಿ ಪಡೆಯಿರಿ. ನಾವು ಕಮ್ಮಿ ನಿದ್ರೆ ಮಾಡಿದಾಗ ಒತ್ತಡ ಜಾಸ್ತಿ ಆಗುತ್ತೆ ಮತ್ತು ಸರಿಯಾಗಿ ಗಮನ ಕೊಟ್ಟು ಕೆಲಸ ಮಾಡಕ್ಕೆ ಆಗಲ್ಲ.

  • ಯಾವಾಗ ನಿದ್ದೆ ಮಾಡಬೇಕು, ಯಾವಾಗ ಎದ್ದೇಳಬೇಕು ಅಂತ ಸರಿಯಾದ ಸಮಯವನ್ನು ಸೆಟ್‌ ಮಾಡಿ. ಪ್ರತಿದಿನ ಅದೇ ಸಮಯಕ್ಕೆ ನಿದ್ದೆ ಮಾಡೋಕೆ ಮತ್ತು ಎದ್ದೇಳೋಕೆ ಪ್ರಯತ್ನಿಸಿ.

  • ನಿದ್ದೆಮಾಡುವ ಮುಂಚೆ ಟಿವಿ ಅಥವಾ ಫೋನ್‌ ಬಳಸಬೇಡಿ.

  • ನಿದ್ದೆಮಾಡುವ ಮುಂಚೆ ಅತಿಯಾಗಿ ಊಟ ಮಾಡಬೇಡಿ, ಟಿ-ಕಾಫಿ ಮತ್ತು ಮದ್ಯಪಾನ ಕುಡಿಬೇಡಿ.

ಜೀತು ಹೀಗಂತಾರೆ: “ನಾನು ಚೆನ್ನಾಗಿ ನಿದ್ದೆ ಮಾಡಿಲ್ಲ ಅಂದ್ರೆ ನನ್ನ ಆರೋಗ್ಯ ಚೆನ್ನಾಗಿರಲ್ಲ. ಇದರಿಂದ ನಂಗೆ ತುಂಬ ತಲೆನೋವು ಬರುತ್ತೆ, ತುಂಬ ಸುಸ್ತಾಗುತ್ತೆ. ಅದೇ, ಚೆನ್ನಾಗಿ ನಿದ್ದೆಮಾಡಿ ಎದ್ದಾಗ ಕಲ್ಲನ್ನೇ ಕರಗಿಸುವಷ್ಟು ಶಕ್ತಿ ನಂಗಿರುತ್ತೆ.”

“ವೈರಸ್‌ ಅಪಾಯ—ನಿಭಾಯಿಸುವ ಉಪಾಯ” ವಿಡಿಯೋದ ಒಂದು ದೃಶ್ಯ. ಮಹಿಳೆ ಬಾಗಿಲು ತೆರೆದಾಗ ವೈರಸ್‌ ಹೊಸ್ತಿಲಿನಲ್ಲಿ ಇದೆ.

ಹೆಚ್ಚನ್ನ ತಿಳಿಯಿರಿ. ವೈರಸ್‌ ಅಪಾಯ—ನಿಭಾಯಿಸುವ ಉಪಾಯ ಅನ್ನೋ ವಿಡಿಯೋವನ್ನ ಮತ್ತು “ಆರೋಗ್ಯ ಕಾಪಾಡಿಕೊಳ್ಳಲು ಐದು ಹೆಜ್ಜೆಗಳು” ಅನ್ನೋ ಲೇಖನವನ್ನು ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ