ಕಷ್ಟ-ನೋವಿನ ಸಮಯದಲ್ಲಿ ಸಂಬಂಧಗಳನ್ನು ಕಾಪಾಡಿಕೊಳ್ಳಲು ಈ ಹೆಜ್ಜೆಗಳನ್ನು ತೆಗೆದುಕೊಳ್ಳಿ, ನೆಮ್ಮದಿಯಾಗಿರಿ
ನಿಮ್ಮ ಮದುವೆ ಬಂಧವನ್ನು ಬಲಪಡಿಸಿ
ನಿಮ್ಮ ಮದುವೆ ಬಂಧವನ್ನು ಬಲಪಡಿಸಿ
ಬೈಬಲಲ್ಲಿ ಹೀಗಿದೆ: “ಒಬ್ಬನಿಗಿಂತ ಇಬ್ರು ಉತ್ತಮ. . . . ಒಬ್ಬ ಬಿದ್ರೆ ಏಳೋಕೆ ಇನ್ನೊಬ್ಬ ಸಹಾಯ ಮಾಡ್ತಾನೆ.” (ಪ್ರಸಂಗಿ 4:9, 10) ಗಂಡ ಹೆಂಡತಿಯ ಸಂಬಂಧ ಆನಂದ ಸಾಗರ ತರ ಖುಷಿ ಖುಷಿಯಾಗಿ ಇರಬೇಕು.
ನಿಮಗೆಷ್ಟೇ ಒತ್ತಡ ಇದ್ದರೂ ಅದನ್ನ ಸಂಗಾತಿ ಮೇಲೆ ತೀರಿಸಬೇಡಿ. ನೀವೆಷ್ಟು ತಾಳ್ಮೆ ತೋರಿಸುತ್ತಿರೋ ಅಷ್ಟು ನೆಮ್ಮದಿ ನಿಮ್ಮ ಜೀವನದಲ್ಲಿ ಇರುತ್ತೆ.
ವಾರಕ್ಕೆ ಒಂದು ಸಲ ಆದರೂ, ನಿಮ್ಮ ಸಮಸ್ಯೆ ಬಗ್ಗೆ ನಿಮ್ಮ ಸಂಗಾತಿ ಜೊತೆ ಮಾತಾಡಿ. ಸಮಸ್ಯೆಗಳ ಬಗ್ಗೆ ಪರಿಹಾರ ಹುಡುಕಿ ನೀವೇ ಸಮಸ್ಯೆಗೆ ಕಾರಣ ಆಗಬೇಡಿ.
ನೀವಿಬ್ಬರು ಇಷ್ಟಪಟ್ಟು ಮಾಡೋ ಕೆಲಸಗಳನ್ನು ಒಟ್ಟಿಗೆ ಸೇರಿ ಮಾಡಿ.
ನೀವು ಒಟ್ಟಿಗೆ ಸೇರಿ ಕಳೆದ ಸುಂದರ ಕ್ಷಣಗಳನ್ನು ಮತ್ತೆ ನೆನಪು ಮಾಡಿಕೊಳ್ಳಿ. ನಿಮ್ಮ ಮದುವೆ ಫೋಟೊ ನೋಡಿ ಖುಷಿಪಡಿ.
ಡೇವಿಡ್ ಹೀಗಂತಾರೆ: “ಗಂಡ ಹೆಂಡತಿಯ ಅಭಿಪ್ರಾಯ ಯಾವಾಗಲೂ ಒಂದೇ ತರ ಇರಲ್ಲ. ಹಾಗಿದ್ರು ಅವರು ಒಂದೇ ಟೀಮ್ ತರ ಕೆಲಸ ಮಾಡಬಹುದು. ಹೀಗೆ ಒಟ್ಟಿಗೆ ಸೇರಿ ನಿರ್ಣಯಗಳನ್ನು ಮಾಡಿದಾಗ ಅದರ ಫಲಿತಾಂಶ ಒಳ್ಳೇದಾಗಿರುತ್ತೆ.”
ಸ್ನೇಹಿತರಿಂದ ದೂರ ಆಗಬೇಡಿ
ಸ್ನೇಹಿತರಿಂದ ದೂರ ಆಗಬೇಡಿ
ಸ್ನೇಹಿತರಿಂದ ಸಹಾಯ ಪಡೆಯೋದು ಮಾತ್ರ ಅಲ್ಲ ಅವರಿಗೆ ಹೇಗೆ ಸಹಾಯ ಮಾಡಬಹುದು ಅಂತ ಯೋಚನೆ ಮಾಡಿ. ಹೀಗೆ ನೀವು ಬೇರೆಯವರನ್ನು ಬಲಪಡಿಸಿದಾಗ ನಿಮಗೂ ಬಲ ಸಿಗುತ್ತೆ.
ದಿನಾಲೂ ನಿಮ್ಮ ಸ್ನೇಹಿತರ ಯೋಗ ಕ್ಷೇಮದ ಬಗ್ಗೆ ವಿಚಾರಿಸಿ.
ನೀವು ಎದುರಿಸುತ್ತಿರೋ ಸಮಸ್ಯೆಗಳನ್ನು ನಿಮ್ಮ ಸ್ನೇಹಿತರು ಹೇಗೆ ಎದುರಿಸಿದರು ಅಂತ ಕೇಳಿ.
ನೇಹಾ ಹೀಗಂತಾರೆ: “ಬಿರುಗಾಳಿ ಬಂದಾಗ ಹಡಗಿಗೆ ಹೇಗೆ ಚುಕ್ಕಾಣಿ ಸಹಾಯ ಮಾಡುತ್ತೋ ಅದೇ ತರ ಕಷ್ಟಗಳು ಬಂದಾಗ ಸ್ನೇಹಿತರು ನಮಗೆ ಸಹಾಯ ಮಾಡುತ್ತಾರೆ. ನಮಗೆ ಗೊತ್ತಿರೋ ವಿಷಯಗಳನ್ನು ಅವರು ನೆನಪು ಮಾಡುತ್ತಾ ಸಹಾಯ ಮಾಡುತ್ತಾರೆ. ಅವರು ನಿಮಗೆ ಕಾಳಜಿ ತೋರಿಸುತ್ತಾರೆ, ನೀವೂ ಅವರಿಗೆ ಕಾಳಜಿ ತೋರಿಸುತ್ತೀರ.”
ಮಕ್ಕಳ ಜೊತೆ ಸಮಯ ಕಳೆಯಿರಿ
ಮಕ್ಕಳ ಜೊತೆ ಸಮಯ ಕಳೆಯಿರಿ
ಬೈಬಲಲ್ಲಿ ಹೀಗಿದೆ: “ಕೇಳಿಸ್ಕೊಳ್ಳೋದನ್ನ ಜಾಸ್ತಿ ಮಾಡಿ, ಮಾತಾಡೋದನ್ನ ಕಮ್ಮಿ ಮಾಡಿ.” (ಯಾಕೋಬ 1:19) ಮಕ್ಕಳು ತಮ್ಮ ಭಯ ಮತ್ತು ಚಿಂತೆಗಳನ್ನೆಲ್ಲಾ ಹೇಳಿಕೊಳ್ಳೋಕೆ ಹಿಂದೆ ಮುಂದೆ ಮಾಡುತ್ತಾರೆ. ಆದರೆ ನೀವು ಅವರು ಹೇಳೋದನ್ನು ತಾಳ್ಮೆಯಿಂದ ಕೇಳಿದರೆ ಅವರು ಮನಸ್ಸುಬಿಚ್ಚಿ ನಿಮ್ಮ ಹತ್ತಿರ ಮಾತಾಡಬಹುದು.
ಮಕ್ಕಳು ನಿಮ್ಮ ಜೊತೆ ಮನಸ್ಸುಬಿಚ್ಚಿ ಮಾತಾಡೋ ಸಂದರ್ಭಗಳನ್ನು ಸೃಷ್ಟಿಸಿ. ಕೆಲವು ಮಕ್ಕಳು ಎದುರುಬದುರು ಕೂತು ಮಾತಾಡೋದಕ್ಕಿಂತ ಕಾರಲ್ಲಿ ಹೋಗುವಾಗ, ವಾಕಿಂಗ್ ಮಾಡೋವಾಗ ಮಾತಾಡೋಕೆ ಇಷ್ಟಪಡುತ್ತಾರೆ.
ಹಿಂಸೆ-ಅಪರಾಧಗಳ ಬಗ್ಗೆ ಇರೋ ನ್ಯೂಸ್ಗಳನ್ನು ನಿಮ್ಮ ಮಕ್ಕಳು ಜಾಸ್ತಿ ನೋಡದ ಹಾಗೆ ಜಾಗ್ರತೆ ವಹಿಸಿ.
ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿ ಇಡೋಕೆ ನೀವು ಯಾವ ಹೆಜ್ಜೆಗಳನ್ನು ತಗೊಂಡಿದ್ದೀರ ಅಂತ ನಿಮ್ಮ ಮಕ್ಕಳಿಗೆ ಹೇಳಿ.
ತುರ್ತು ಪರಿಸ್ಥಿತಿ ಬಂದರೆ ಮುಂಚಿತವಾಗಿ ಏನು ಮಾಡಬೇಕು ಅಂತ ನಿಮ್ಮ ಮಕ್ಕಳ ಜೊತೆ ಪ್ರಾಕ್ಟೀಸ್ ಮಾಡಿ.
ಭವ್ಯ ಹೀಗಂತಾರೆ: “ಮಕ್ಕಳು ತಮ್ಮ ಭಯ, ಚಿಂತೆಯನ್ನ ಹೇಳೋಕೆ ಇಷ್ಟಪಡಲ್ಲ. ಹಾಗಾಗಿ ಅವರ ಜೊತೆ ಮಾತಾಡುತ್ತಾ ತಮ್ಮ ಭಾವನೆಗಳನ್ನು ಹೇಳಿಕೊಳ್ಳೋಕೆ ಬಿಟ್ಟುಕೊಡಿ. ಅವರ ವಯಸ್ಸಲ್ಲಿ ಇದ್ದಾಗ ನಿಮಗೂ ಈ ತರ ಅನಿಸುತ್ತಿತ್ತು. ಆಗ ನೀವೇನು ಮಾಡಿದ್ರಿ ಅಂತನೂ ಹೇಳಿ.”