ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • br78 ಪು. 32
  • ನಿಮಗೆ ನಮ್ಮ ಆಮಂತ್ರಣ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ನಮ್ಮ ಆಮಂತ್ರಣ
  • ಇಪ್ಪತ್ತನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು
  • ಅನುರೂಪ ಮಾಹಿತಿ
  • ನಿಮಗೆ ನಮ್ಮ ಆಮಂತ್ರಣ
    ಯೆಹೋವನ ಸಾಕ್ಷಿಗಳು—ಅವರು ಯಾರು? ಅವರು ಏನನ್ನು ನಂಬುತ್ತಾರೆ?
  • “ಪವಿತ್ರಾತ್ಮವೂ ವಧುವೂ, ‘ಬಾ!’ ಎಂದು ಹೇಳುತ್ತಾ ಇರುತ್ತಾರೆ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • “ಬಾ!” ಎಂಬ ಆಮಂತ್ರಣವನ್ನು ಧೈರ್ಯದಿಂದ ನೀಡಿರಿ
    1991 ನಮ್ಮ ರಾಜ್ಯದ ಸೇವೆ
  • ಪ್ರೀತಿಸಲು ಮತ್ತು ಸತ್ಕಾರ್ಯಗಳನ್ನು ಮಾಡಲು ಹುರಿದುಂಬಿಸುವುದು—ಹೇಗೆ?
    ಕಾವಲಿನಬುರುಜು—1995
ಇನ್ನಷ್ಟು
ಇಪ್ಪತ್ತನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು
br78 ಪು. 32

ನಿಮಗೆ ನಮ್ಮ ಆಮಂತ್ರಣ

ಈ ಬ್ರೋಷರಿನ ಪುಟಗಳ ಮೂಲಕ ನಿಮ್ಮೊಡನೆ ಮಾತಾಡುವುದರಲ್ಲಿ ನಾವು ಆನಂದಿಸಿದ್ದೇವೆ. ಯೆಹೋವನ ಸಾಕ್ಷಿಗಳ ಕುರಿತು ಹೆಚ್ಚನ್ನು ಕಲಿಯುವದರಲ್ಲಿ ನೀವು ಆನಂದಿಸಿದಿರಿ ಎಂದು ನಾವು ನಿರೀಕ್ಷಿಸುತ್ತೇವೆ. ನಮ್ಮ ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ನಮ್ಮನ್ನು ಭೇಟಿಯಾಗುವ ನಮ್ಮ ಆಮಂತ್ರಣವನ್ನು ದಯಮಾಡಿ ಸ್ವೀಕರಿಸಿರಿ. ನಮ್ಮ ಕೂಟಗಳು ಹೇಗೆ ನಡಿಸಲ್ಪಡುತ್ತವೆ ಎಂದು ನೋಡಿರಿ. ಕ್ರಿಸ್ತನ ರಾಜ್ಯದ ಕೆಳಗೆ ಪ್ರಮೋದವನದ ಭೂಮಿಯೊಂದರ ಸುವಾರ್ತೆಯನ್ನು ಇತರರೊಂದಿಗೆ ಸಾರಲು ನಾವು ಹೇಗೆ ಪ್ರಯತ್ನಿಸುತ್ತೇವೆಂದು ನೋಡಿರಿ.

ದೇವರು ಅದನ್ನು ವಾಗ್ದಾನಿಸಿದ್ದಾನೆ. “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅದರಲ್ಲಿ ನೀತಿಯು ವಾಸವಾಗಿರುವುದು.” (2 ಪೇತ್ರ 3:13) ಹತ್ತೊಂಬತ್ತು ಶತಮಾನಗಳು ಗತಿಸಿಹೋಗಿವೆ. ಕಾಯುವ ಅವಧಿಯು ಅದರ ಅಂತ್ಯಕ್ಕೆ ಸನ್ನಿಹಿತವಾಗುತ್ತಾ ಇದೆ. ಲೋಕ ಪರಿಸ್ಥಿತಿಗಳು ಇದನ್ನು ಸಾಂಕೇತಿಸುತ್ತವೆ. ಯೇಸುವಿನ ಪ್ರವಾದನೆಯ ನೆರವೇರಿಕೆಯು ಹತ್ತರಿಸುತ್ತದೆ: “ಆದರೆ ಇವು ಸಂಭವಿಸುವುದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ. ನಿಮ್ಮ ಬಿಡುಗಡೆಯು ಸಮೀಪವಾಗಿದೆ.”—ಲೂಕ 21:28.

“ಆ ದಿನವು ಸಮೀಪಿಸುವದನ್ನು ನೀವು ನೋಡುವಾಗ,” ಅಪೊಸ್ತಲ ಪೌಲನು ಅಂದದ್ದು, “ಪ್ರೀತಿಗೂ ಶ್ರೇಷ್ಠಕಾರ್ಯಳಿಗೂ ಪ್ರೇರೇಪಿಸಲು ಒಬ್ಬರನ್ನೊಬ್ಬರು ಪರಿಗಣಿಸಿ, ಸಭೆಯಾಗಿ ನಮ್ಮ ನೆರೆದುಬರುವಿಕೆಯನ್ನು ನಾವು ತೊರೆಯದೆ ಇರೋಣ.” (ಇಬ್ರಿಯ 10:24, 25, NW) ನಮ್ಮೊಂದಿಗೆ ಕೂಟವಾಗಿ ಸೇರಿಕೊಳ್ಳುವದರ ಮೂಲಕ ಪೌಲನ ಹಿತೋಕ್ತಿಯನ್ನು ಕೇಳಿರಿ ಎಂದೇ ನಿಮಗೆ ನಮ್ಮ ಆಮಂತ್ರಣವಾಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ