ಮುಖಪುಟ/ಪ್ರಕಾಶಕರ ಪುಟ
ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ
ನಮ್ಮ ವಾಚಕರಿಗೆ
ಪರದೈಸ ಭೂಮಿಯಲ್ಲಿ ನಿತ್ಯಜೀವ! ಒಂದು ಬೈಬಲ್ ಅಧ್ಯಯನದ ಮೂಲಕ ಈ ಅದ್ಭುತಕರ ನಿರೀಕ್ಷೆಯ ಕುರಿತು ನಾವು ಕಲಿತುಕೊಳ್ಳುತ್ತೇವೆ. ಆದರೆ ಇದು ಮತ್ತು ದೇವರ ವಾಕ್ಯದ ಇತರ ಮೂಲಭೂತ ಬೋಧನೆಗಳು ಕೇವಲ ಒಂದು ಆರಂಭವಾಗಿದೆಯಷ್ಟೆ. ಯಾರು ದೇವರನ್ನು ಪ್ರೀತಿಸುತ್ತಾರೋ ಅವರೆಲ್ಲರೂ ಆತನ ಅಮೂಲ್ಯ ಸತ್ಯಗಳ ‘ಎತ್ತರ ಆಳ ಎಷ್ಟೆಂಬದನ್ನು ಗ್ರಹಿಸುವಂತೆ’ ಬೈಬಲು ಅವರನ್ನು ಪ್ರೋತ್ಸಾಹಿಸುತ್ತದೆ. (ಎಫೆಸ 3:18) ಇದನ್ನು ಮಾಡಲಿಕ್ಕಾಗಿಯೇ ಈ ಪುಸ್ತಕವು ಸಿದ್ಧಪಡಿಸಲ್ಪಟ್ಟಿದೆ. ನೀವು ಆತ್ಮಿಕವಾಗಿ ಬೆಳೆಯುವಂತೆ ಮತ್ತು ದೇವರ ನೀತಿಯ ನೂತನ ಲೋಕದಲ್ಲಿ ಜೀವಿತಕ್ಕೆ ನಡೆಸುವ ಇಕ್ಕಟ್ಟಾದ ದಾರಿಯಲ್ಲಿ ನಡೆಯಲು ಹೆಚ್ಚು ಸನ್ನದ್ಧರಾಗಿರುವಂತೆ ಇದು ನಿಮಗೆ ಸಹಾಯಮಾಡುವುದು ಎಂದು ನಾವು ನಿರೀಕ್ಷಿಸುತ್ತೇವೆ.
—ಪ್ರಕಾಶಕರು
ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಉಪಯೋಗಿಸಲ್ಪಟ್ಟ ಬೈಬಲ್ ಭಾಷಾಂತರವು ‘ಸತ್ಯವೇದವು’ ಆಗಿದೆ. NW ಎಂದು ಬರೆದಿರುವಲ್ಲಿ, ಆ ಭಾಷಾಂತರವು ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ—ರೆಫರೆನ್ಸ್ಗಳೊಂದಿಗೆ (ಇಂಗ್ಲಿಷ್) ಆಗಿದೆ.
Photo Credits:
▪ ಮುಖಪುಟ: U.S. Navy photo
▪ ಪುಟ 180: ಮಕ್ಕಳು: UNITED NATIONS/J. FRANK