ಪಾಠ 29
ಸತ್ತ ಮೇಲೆ ಏನಾಗುತ್ತೆ?
ನಿಮ್ಮ ಕುಟುಂಬದವರು, ಸ್ನೇಹಿತರು ಅಥವಾ ಸಂಬಂಧಿಕರು ಯಾರಾದ್ರೂ ಸತ್ತು ಹೋಗಿದ್ದಾರಾ? ಹಾಗಿದ್ರೆ ಅಂಥ ನೋವಿನಲ್ಲಿರುವಾಗ ಈ ಪ್ರಶ್ನೆಗಳು ಬರಬಹುದು: ಸತ್ತ ಮೇಲೆ ಏನಾಗುತ್ತೆ? ಸತ್ತುಹೋಗಿರುವ ನಮ್ಮ ಪ್ರಿಯರನ್ನ ಮತ್ತೆ ನೋಡಕ್ಕಾಗುತ್ತಾ? ಈ ಪಾಠದಲ್ಲಿ ಮತ್ತು ಮುಂದಿನ ಪಾಠದಲ್ಲಿ ಈ ಪ್ರಶ್ನೆಗಳಿಗೆ ಬೈಬಲಿನಿಂದ ಸಾಂತ್ವನ ಕೊಡುವ ಉತ್ತರಗಳನ್ನ ನೋಡಲಿದ್ದೇವೆ.
1. ಸತ್ತ ಮೇಲೆ ನಮಗೆ ಏನಾಗುತ್ತೆ?
ಯೇಸು ಸಾವನ್ನ ನಿದ್ರೆಗೆ ಹೋಲಿಸಿದನು. ಸಾವನ್ನ ನಿದ್ರೆಗೆ ಯಾಕೆ ಹೋಲಿಸಬಹುದು? ನಿದ್ರೆ ಮಾಡುತ್ತಿರುವ ವ್ಯಕ್ತಿಗೆ ತನ್ನ ಸುತ್ತಮುತ್ತ ಏನಾಗ್ತಿದೆ ಅಂತ ಗೊತ್ತಾಗಲ್ಲ. ಅದೇ ತರ ಒಬ್ಬ ವ್ಯಕ್ತಿ ಸತ್ತ ಮೇಲೆ ಅವನಿಗೆ ಏನೂ ಗೊತ್ತಾಗಲ್ಲ. ಬದುಕಿದ್ದಾಗ ಅವನು ಕುಟುಂಬದವರನ್ನ, ಸ್ನೇಹಿತರನ್ನ ತುಂಬ ಪ್ರೀತಿಸಿರುತ್ತಾನೆ. ಆದ್ರೆ ಸತ್ತು ಹೋದ ಮೇಲೆ ತಾನು ‘ಅವರನ್ನ ಬಿಟ್ಟು ಹೋಗಿದ್ದೇನೆ, ಒಂಟಿಯಾಗಿದ್ದೇನೆ’ ಅಂತ ಅವನಿಗೆ ಅನಿಸೋದಿಲ್ಲ. ‘ಸತ್ತವರಿಗೆ ಏನೂ ಗೊತ್ತಿರಲ್ಲ’ ಅಂತ ಬೈಬಲ್ ಹೇಳುತ್ತೆ.—ಪ್ರಸಂಗಿ 9:5 ಓದಿ.
2. ಸತ್ತ ಮೇಲೆ ಏನಾಗುತ್ತೆ ಅಂತ ತಿಳಿಯೋದ್ರಿಂದ ನಮಗೆ ಹೇಗೆ ನೆಮ್ಮದಿ ಸಿಗುತ್ತೆ?
ತುಂಬ ಜನರಿಗೆ ಸಾವು ಅಂದರೆ ಭಯ, ಸತ್ತು ಹೋಗಿರೋರ ಬಗ್ಗೆನೂ ಭಯ. ಆದರೆ ಇದರ ಬಗ್ಗೆ ಬೈಬಲ್ ಹೇಳೋ ವಿಷಯ ನಮಗೆ ನೆಮ್ಮದಿ ಕೊಡುತ್ತೆ. “ಸತ್ಯ ನಿಮ್ಮನ್ನ ಬಿಡುಗಡೆ ಮಾಡುತ್ತೆ” ಅಂತ ಯೇಸು ಹೇಳಿದನು. (ಯೋಹಾನ 8:32) ಬೇರೆ ಧರ್ಮಗಳಲ್ಲಿ ಹೇಳೋ ತರ ಸತ್ತ ಮೇಲೆ ಆತ್ಮ ಉಳಿಯುತ್ತೆ ಅಂತ ಬೈಬಲ್ ಹೇಳಲ್ಲ. ಸತ್ತು ಹೋಗಿರೋರು ನರಳುತ್ತಾ ಇಲ್ಲ. ಅವರಿಗೆ ಏನೂ ಗೊತ್ತಾಗದೇ ಇರೋದ್ರಿಂದ ಯಾರಿಗೂ ಕೆಟ್ಟದ್ದನ್ನ ಮಾಡೋಕೆ ಆಗಲ್ಲ. ಹಾಗಾಗಿ ಅವರಿಗೆ ಶಾಂತಿ ಮಾಡುವುದಾಗಲಿ, ಪೂಜೆ, ಪ್ರಾರ್ಥನೆ ಮಾಡುವುದಾಗಲಿ ಬೇಕಾಗಿಲ್ಲ.
ಸತ್ತವರ ಜೊತೆ ಮಾತಾಡಬಹುದು ಅಂತ ಕೆಲವರು ಹೇಳ್ತಾರೆ. ಆದರೆ ಅದು ಸಾಧ್ಯಾನಾ? ನಾವೀಗಾಗಲೇ ಕಲಿತ ಹಾಗೆ, ‘ಸತ್ತವರಿಗೆ ಏನೂ ಗೊತ್ತಿರಲ್ಲ.’ ಹಾಗಾದ್ರೆ ಸತ್ತು ಹೋಗಿರೋ ತಮ್ಮ ಪ್ರಿಯರ ಜೊತೆ ಮಾತಾಡ್ತೀವಿ ಅಂತ ಹೇಳಿಕೊಳ್ಳುವವರು ನಿಜವಾಗಿ ಯಾರ ಜೊತೆ ಮಾತಾಡುತ್ತಿದ್ದಾರೆ? ಅವರು ಸತ್ತು ಹೋದ ತಮ್ಮ ಪ್ರಿಯರಂತೆ ನಟಿಸುವ ಕೆಟ್ಟ ದೂತರ ಜೊತೆ ಮಾತಾಡ್ತಾ ಇದ್ದಾರೆ. ಸತ್ತ ಮೇಲೆ ಒಬ್ಬ ವ್ಯಕ್ತಿಗೆ ಏನಾಗುತ್ತೆ ಅಂತ ತಿಳಿದುಕೊಂಡ್ರೆ, ನಾವು ಕೆಟ್ಟ ದೂತರ ಸಹವಾಸ ಮಾಡೋಕೆ ಹೋಗಲ್ಲ. ಆಗ ನಮಗೆ ಅವರಿಂದ ಯಾವುದೇ ತೊಂದರೆ ಆಗಲ್ಲ. ನಮ್ಮ ಒಳ್ಳೇದಕ್ಕಾಗಿಯೇ ಯೆಹೋವ ದೇವರು ಸತ್ತವರ ಜೊತೆ ಮಾತಾಡಬೇಡಿ ಅಂತ ಎಚ್ಚರಿಕೆ ಕೊಟ್ಟಿದ್ದಾನೆ.—ಧರ್ಮೋಪದೇಶಕಾಂಡ 18:10-12 ಓದಿ.
ಹೆಚ್ಚನ್ನ ತಿಳಿಯೋಣ
ಸಾವಿನ ಬಗ್ಗೆ ಬೈಬಲ್ ಏನು ಹೇಳುತ್ತೆ? ಮನುಷ್ಯರನ್ನ ಇಷ್ಟೊಂದು ಪ್ರೀತಿಸುವ ದೇವರು, ಸತ್ತುಹೋದವರಿಗೆ ಶಿಕ್ಷೆ ಕೊಡುತ್ತಾನಾ? ಈ ಪ್ರಶ್ನೆಗಳಿಗೆ ಉತ್ತರ ತಿಳಿಯೋಣ.
3. ಸತ್ತ ಮೇಲೆ ಏನಾಗುತ್ತೆ ಅಂತ ತಿಳಿದುಕೊಳ್ಳಿ
ಸತ್ತ ಮೇಲೆ ಏನಾಗುತ್ತೆ ಅನ್ನೋದರ ಬಗ್ಗೆ ಜನರಿಗೆ ಬೇರೆಬೇರೆ ನಂಬಿಕೆಗಳಿವೆ. ಆದರೆ ಆ ಎಲ್ಲಾ ನಂಬಿಕೆಗಳು ಸರಿಯಾಗಿ ಇರಲು ಸಾಧ್ಯವಿಲ್ಲ.
ಸತ್ತ ಮೇಲೆ ಏನಾಗುತ್ತೆ ಅಂತ ನಿಮ್ಮ ಸುತ್ತ ಮುತ್ತ ಇರುವ ಜನರು ನಂಬುತ್ತಾರೆ?
ಇದರ ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ತಿಳಿಯಲು ವಿಡಿಯೋ ನೋಡಿ.
ಪ್ರಸಂಗಿ 3:20 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಒಬ್ಬ ವ್ಯಕ್ತಿ ಸತ್ತ ಮೇಲೆ ಏನಾಗುತ್ತೆ?
ಸತ್ತ ಮೇಲೆ ಅವರ ಆತ್ಮ ಎಲ್ಲೂ ಹೋಗಲ್ಲ ಅಂತ ಹೇಗೆ ಹೇಳಬಹುದು?
ಯೇಸುವಿನ ಸ್ನೇಹಿತನಾದ ಲಾಜರನ ಸಾವಿನ ಬಗ್ಗೆ ಬೈಬಲ್ ತಿಳಿಸುತ್ತೆ. ಯೋಹಾನ 11:11-14 ಓದಿ, ಲಾಜರನಿಗೆ ಏನಾಯ್ತು ಅಂತ ನೋಡಿ. ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಸಾವನ್ನ ಯೇಸು ಯಾವುದಕ್ಕೆ ಹೋಲಿಸಿದ್ದಾನೆ?
ಒಬ್ಬ ವ್ಯಕ್ತಿ ಸತ್ತ ಮೇಲೆ ಏನಾಗುತ್ತೆ ಅಂತ ಈ ಹೋಲಿಕೆಯಿಂದ ಗೊತ್ತಾಗುತ್ತೆ?
ಸಾವಿನ ಬಗ್ಗೆ ಬೈಬಲ್ ಹೇಳುವ ವಿಷಯ ಸರಿ ಇದೆ ಅಂತ ನಿಮಗೆ ಅನಿಸುತ್ತಾ? ಯಾಕೆ?
4. ಸಾವಿನ ಬಗ್ಗೆ ಸತ್ಯ ತಿಳಿಯೋದ್ರಿಂದ ನಮಗೆ ಪ್ರಯೋಜನ ಇದೆ
ಸಾವಿನ ಬಗ್ಗೆ ಇರೋ ಸತ್ಯ ತಿಳಿದುಕೊಂಡರೆ ನಮಗೆ ಸತ್ತವರ ಭಯ ಇರಲ್ಲ. ಪ್ರಸಂಗಿ 9:10 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಸತ್ತವರು ನಮಗೆ ತೊಂದರೆ ಕೊಡ್ತಾರಾ?
ಅಷ್ಟೇ ಅಲ್ಲ, ಬೈಬಲ್ ಏನು ಹೇಳುತ್ತೆ ಅಂತ ಕಲಿಯೋದಾದ್ರೆ ಸತ್ತವರಿಗೆ ಶಾಂತಿ ಮಾಡಿಸಬೇಕು, ಅವರನ್ನ ಆರಾಧಿಸಬೇಕು ಅನ್ನೋ ನಂಬಿಕೆಗಳಿಂದ ಹೊರಬರಬಹುದು. ಯಾಜಕಕಾಂಡ 20:6 ಮತ್ತು ಪ್ರಕಟನೆ 4:11 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಸತ್ತವರನ್ನ ಆರಾಧಿಸುವ ಅಥವಾ ಅವರಿಂದ ಸಹಾಯ ಪಡೆಯಲಿಕ್ಕೆ ಪ್ರಯತ್ನಿಸುವ ಒಬ್ಬ ವ್ಯಕ್ತಿಯ ಬಗ್ಗೆ ಯೆಹೋವ ದೇವರಿಗೆ ಹೇಗನಿಸುತ್ತೆ?
ಸಾವಿನ ಬಗ್ಗೆ ಇರೋ ಸತ್ಯ ತಿಳಿದುಕೊಂಡ್ರೆ ಯೆಹೋವನಿಗೆ ಇಷ್ಟವಿಲ್ಲದ ಪದ್ಧತಿಗಳಿಂದ ದೂರ ಇರಕ್ಕಾಗುತ್ತೆ
5. ಸಾವಿನ ಬಗ್ಗೆ ಇರೋ ಸತ್ಯ ತಿಳಿದುಕೊಳ್ಳೋದ್ರಿಂದ ನೆಮ್ಮದಿ ಸಿಗುತ್ತೆ
ಕೆಟ್ಟ ಕೆಲಸ ಮಾಡಿದ್ರೆ ಸತ್ತ ಮೇಲೂ ನರಳುತ್ತಾ ಇರಬೇಕಾಗುತ್ತೆ ಅಂತ ತುಂಬ ಜನರು ನಂಬುತ್ತಾರೆ. ಆದರೆ ಬೈಬಲ್ ಹಾಗೆ ಹೇಳಲ್ಲ. ಎಂಥದ್ದೇ ಕೆಟ್ಟ ಕೆಲಸ ಮಾಡಿದ್ರೂ ಸತ್ತ ಮೇಲೆ ಯಾರೂ ಕೂಡ ನರಳಲ್ಲ ಅಥವಾ ಚಿತ್ರಹಿಂಸೆ ಅನುಭವಿಸಲ್ಲ. ಈ ವಿಷಯ ಎಲ್ಲರಿಗೂ ನೆಮ್ಮದಿ ಕೊಡುತ್ತೆ! ರೋಮನ್ನರಿಗೆ 6:7 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಒಬ್ಬ ವ್ಯಕ್ತಿ ಸತ್ತ ಮೇಲೆ ಅವನ ತಪ್ಪುಗಳನ್ನ ದೇವರು ಕ್ಷಮಿಸಿ ಬಿಡುತ್ತಾನೆ ಅಂತ ಬೈಬಲ್ ಹೇಳುತ್ತೆ. ಆಮೇಲೆ ಅದೇ ತಪ್ಪುಗಳಿಗಾಗಿ ಮತ್ತೆ ಅವನು ನರಳುತ್ತಾ ಇರುತ್ತಾನೆ ಅಂತ ನಿಮಗೆ ಅನಿಸುತ್ತಾ?
ನಾವು ಯೆಹೋವ ದೇವರ ಬಗ್ಗೆ ಹೆಚ್ಚು ತಿಳಿದುಕೊಂಡಾಗ ಆತನು ಸತ್ತವರಿಗೆ ಚಿತ್ರಹಿಂಸೆ ಕೊಡೋ ದೇವರಲ್ಲ ಅಂತ ಚೆನ್ನಾಗಿ ಅರ್ಥ ಆಗುತ್ತೆ. ಧರ್ಮೋಪದೇಶಕಾಂಡ 32:4 ಮತ್ತು 1 ಯೋಹಾನ 4:8 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಇಷ್ಟೆಲ್ಲಾ ಒಳ್ಳೇ ಗುಣಗಳಿರೋ ಪ್ರೀತಿಯ ದೇವರು ಸತ್ತವರಿಗೆ ಶಿಕ್ಷೆ ಕೊಡ್ತಾನೆ ಅಂತ ನಿಮಗೆ ಅನಿಸುತ್ತಾ?
ಸತ್ತ ನಂತರ ಏನಾಗುತ್ತೆ ಅಂತ ತಿಳಿದುಕೊಂಡ ಮೇಲೆ ನಿಮಗೇನು ಅನಿಸುತ್ತೆ? ಯಾಕೆ?
ಕೆಲವರು ಹೀಗಂತಾರೆ: “ಸತ್ತು ಹೋದವರು ದೆವ್ವ ಆಗಿ ಬಂದು ನಂಗೆ ತೊಂದರೆ ಕೊಡ್ತಾರೆ.”
ಹೀಗೆ ಭಯಪಡುವವರಿಗೆ ನೀವು ಯಾವ ಬೈಬಲ್ ವಚನಗಳನ್ನ ತೋರಿಸ್ತೀರಾ?
ನಾವೇನು ಕಲಿತ್ವಿ
ಒಬ್ಬ ವ್ಯಕ್ತಿ ಸತ್ತು ಹೋದ ಮೇಲೆ ಅವನಿಗೆ ಏನೂ ಗೊತ್ತಾಗಲ್ಲ, ಅವನು ಕಷ್ಟಪಡಲ್ಲ ಅಥವಾ ಬೇರೆ ಯಾರಿಗೂ ಹಾನಿ ಮಾಡಲ್ಲ.
ನೆನಪಿದೆಯಾ
ಸತ್ತ ಮೇಲೆ ಏನಾಗುತ್ತೆ?
ಸಾವಿನ ಬಗ್ಗೆ ಇರೋ ಸತ್ಯ ತಿಳಿದುಕೊಳ್ಳೋದ್ರಿಂದ ನಮಗೇನು ಪ್ರಯೋಜನ ಇದೆ?
ಸಾವಿನ ಬಗ್ಗೆ ಇರೋ ಸತ್ಯ ತಿಳಿದುಕೊಳ್ಳೋದ್ರಿಂದ ನಮಗೆ ಹೇಗೆ ನೆಮ್ಮದಿ ಸಿಗುತ್ತೆ?
ಇದನ್ನೂ ನೋಡಿ
“ಆತ್ಮದ” ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ನೋಡಿ.
ದೇವರು ಕೆಟ್ಟವರನ್ನ ನರಕದಲ್ಲಿ ಹಾಕಿ ಶಿಕ್ಷಿಸುತ್ತಾನಾ?
ಸತ್ತ ಮೇಲೆ ಏನಾಗುತ್ತೆ ಅಂತ ಬೈಬಲಿನಿಂದ ಕಲಿತಿದ್ರಿಂದ ಒಬ್ಬ ವ್ಯಕ್ತಿಗೆ ಹೇಗೆ ಸಾಂತ್ವನ ಸಿಕ್ತು ಅಂತ ನೋಡಿ.
“ಬೈಬಲ್ ಕೊಟ್ಟ ಸ್ಪಷ್ಟ ಮತ್ತು ತರ್ಕಬದ್ಧ ಉತ್ತರ ನಂಗೆ ತುಂಬ ಹಿಡಿಸ್ತು” (ಕಾವಲಿನಬುರುಜು, ಲೇಖನ)