ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lmd ಪಾಠ 5
  • ಜಾಣ್ಮೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಾಣ್ಮೆ
  • ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪೌಲ ಏನು ಮಾಡಿದನು?
  • ನಮಗೇನು ಪಾಠ?
  • ಪೌಲನ ತರ ನೀವೂ ಮಾಡಿ
  • ‘ದೇವರನ್ನ ಹುಡುಕಬೇಕು, ನಮಗೆ ಸಿಗ್ತಾನೆ’
    ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
  • ದೀನತೆ
    ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
  • ಹೊಲ ಕೊಯ್ಲಿಗೆ ಸಿದ್ಧವಾಗಿರೋದು ಕಾಣಿಸ್ತಿದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ‘ಬೋಧಿಸುವುದರಲ್ಲಿ ನಿನ್ನನ್ನು ತೊಡಗಿಸಿಕೊಳ್ಳುತ್ತಾ ಇರು’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
ಇನ್ನಷ್ಟು
ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
lmd ಪಾಠ 5

ಸಂಭಾಷಣೆ ಶುರುಮಾಡಿ

ಅಪೊಸ್ತಲ ಪೌಲ ಅಥೆನ್ಸಿನ ಜನರ ಹತ್ರ ಮಾತಾಡ್ತಿದ್ದಾನೆ.

ಅಪೊಸ್ತಲರ ಕಾರ್ಯ 17:22, 23

ಪಾಠ 5

ಜಾಣ್ಮೆ

ತತ್ವ: “ನಿಮ್ಮ ಮಾತು ಯಾವಾಗ್ಲೂ ಮೃದುವಾಗಿ ಇರಲಿ.”—ಕೊಲೊ. 4:6.

ಪೌಲ ಏನು ಮಾಡಿದನು?

ಅಪೊಸ್ತಲ ಪೌಲ ಅಥೆನ್ಸಿನ ಜನರ ಹತ್ರ ಮಾತಾಡ್ತಿದ್ದಾನೆ.

ವಿಡಿಯೋ: ಪೌಲ ಅಥೆನ್ಸಿನ ಜನರಿಗೆ ಸಾರಿದ

1. ವಿಡಿಯೋ ನೋಡಿ ಅಥವಾ ಅಪೊಸ್ತಲರ ಕಾರ್ಯ 17:22, 23 ಓದಿ. ಆಮೇಲೆ ಈ ಪ್ರಶ್ನೆಗಳ ಬಗ್ಗೆ ಯೋಚ್ನೆ ಮಾಡಿ:

  1. ಎ. ಅಥೆನ್ಸಿನ ಜನ ಮಾಡ್ತಿದ್ದ ಸುಳ್ಳು ಧರ್ಮದ ಆಚಾರಗಳನ್ನ ನೋಡಿ ಪೌಲನಿಗೆ ಹೇಗನಿಸ್ತು?—ಅಪೊಸ್ತಲರ ಕಾರ್ಯ 17:16 ನೋಡಿ.

  2. ಬಿ. ಪೌಲ ಅವರನ್ನ ತಿದ್ದೋ ಬದಲು ಅವರು ನಂಬ್ತಿದ್ದ ವಿಷ್ಯಗಳನ್ನೇ ಬಳಸಿ ಹೇಗೆ ಜಾಣ್ಮೆಯಿಂದ ಸಾರಿದ?

ನಮಗೇನು ಪಾಠ?

2. ನಾವು ಯಾವಾಗ, ಹೇಗೆ ಮತ್ತು ಏನ್‌ ಮಾತಾಡ್ಬೇಕು ಅಂತ ಚೆನ್ನಾಗಿ ಯೋಚ್ನೆ ಮಾಡಿದ್ರೆ ಜನ ಅದನ್ನ ಕೇಳಿಸ್ಕೊಳ್ತಾರೆ.

ಪೌಲನ ತರ ನೀವೂ ಮಾಡಿ

3. ಯೋಚ್ನೆ ಮಾಡಿ ಮಾತಾಡಿ. ಉದಾಹರಣೆಗೆ, ನೀವು ಕ್ರೈಸ್ತರಲ್ಲದ ಜನರ ಹತ್ರ ಮಾತಾಡ್ತಿದ್ರೆ ಬೈಬಲನ್ನ ಪರಿಚಯಿಸುವಾಗ ಅಥವಾ ಯೇಸು ಬಗ್ಗೆ ಮಾತಾಡುವಾಗ ಅವರಿಗೆ ತಕ್ಕ ಹಾಗೆ ಏನಾದ್ರೂ ಬದಲಾವಣೆ ಮಾಡ್ಕೊಬೇಕಾ ಅಂತ ಯೋಚ್ನೆ ಮಾಡಿ.

4. ಅವಸರಪಟ್ಟು ತಿದ್ದೋಕೆ ಹೋಗಬೇಡಿ. ಆ ವ್ಯಕ್ತಿ ಮಾತಾಡುವಾಗ ಮಧ್ಯದಲ್ಲಿ ಬಾಯಿ ಹಾಕಬೇಡಿ. ಅವರನ್ನ ಮಾತಾಡೋಕೆ ಬಿಡಿ. ಅವರು ಹೇಳ್ತಿರೋದು ಏನಾದ್ರೂ ಬೈಬಲ್‌ಗೆ ವಿರುದ್ಧವಾಗಿದ್ರೆ ವಾದ ಮಾಡೋಕೆ ಹೋಗಬೇಡಿ. (ಯಾಕೋ. 1:19) ಚೆನ್ನಾಗಿ ಕೇಳಿಸ್ಕೊಳ್ಳಿ. ಆಗ ಅವರ ಮನಸ್ಸಲ್ಲಿ ಏನಿದೆ ಅಂತ ಅರ್ಥ ಮಾಡ್ಕೊಳ್ಳೋಕೆ ಆಗುತ್ತೆ.—ಜ್ಞಾನೋ. 20:5.

5. ಅವರು ಹೇಳೋ ವಿಷ್ಯ ಸರಿಯಾಗಿ ಇದ್ರೆ ಅದನ್ನ ಒಪ್ಕೊಳ್ಳಿ, ಹೊಗಳಿ. ಅವರ ಆಚಾರ ವಿಚಾರಗಳೇ ಸರಿ ಅಂತ ಅವರು ಅಂದ್ಕೊಂಡಿರಬಹುದು. ಅದಕ್ಕೆ ನೀವಿಬ್ರೂ ಒಪ್ಪುವಂಥ ವಿಷ್ಯದ ಬಗ್ಗೆ ಮಾತಾಡಿ. ಆಮೇಲೆ ಬೈಬಲ್‌ ಏನ್‌ ಹೇಳುತ್ತೆ ಅನ್ನೋದನ್ನ ನಿಧಾನವಾಗಿ ಅವ್ರಿಗೆ ಹೇಳಿ.

ಇದನ್ನೂ ನೋಡಿ

ಜ್ಞಾನೋ. 25:15; 2 ತಿಮೊ. 2:23-26; 1 ಪೇತ್ರ 3:15

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ