ಅಲೆಕ್ಸಾಂಡ್ರಿನ್ ಹಸ್ತಾಕ್ಷರ ಗ್ರಂಥ
ಅಲೆಕ್ಸಾಂಡ್ರಿನ್ ಹಸ್ತಾಕ್ಷರ ಗ್ರಂಥ (ಕೋಡೆಕ್ಸ್), ಪಂಡಿತರಿಗೆ ಎಟಕಿಸುವಂತೆ ಮಾಡಲ್ಪಟ್ಟ ಪ್ರಮುಖ ಬೈಬಲ್ ಹಸ್ತ ಪ್ರತಿಗಳಲ್ಲಿ ಮೊದಲನೇದ್ದು. ಅದರ ಸಂಶೋಧನೆಯು ಗ್ರೀಕ್ ಶಾಸ್ತ್ರ ವಚನದ ರಚನಾತ್ಮಕ ಠೀಕೆಗೆ ನಡಿಸಿ, ತರುವಾಯ ಬಂದ ಪವಿತ್ರ ಶಾಸ್ತ್ರ ದ ತರ್ಜುಮೆಗಾರರಿಗೆ ಪ್ರಯೋಜನದಾಯಕವಾಯಿತು. ಅದು ಬೆಳಕಿಗೆ ಬಂದದ್ದು ಯಾವಾಗ ಮತ್ತು ಹೇಗೆ?
ಇಜಿಪ್ನ್ಟ ಅಲೆಕ್ಸಾಂಡ್ರಿಯದ ಕುಲಪತಿ ಕೈರಿಲೊಸ್ ಲೌಕಾರಿಸ್ ಒಬ್ಬ ಮಹಾ ಪುಸ್ತಕ ಸಂಗ್ರಹಗಾರ. ಅವನು 1621 ರಲ್ಲಿ ತುರ್ಕಿಯ ಕಾನ್ಸ್ಟಾಂಟಿನೋಪಲ್ನಲ್ಲಿ ಕುಲಪತಿಯಾದಾಗ, ಅವನು ತನ್ನೊಂದಿಗೆ ಈ ಕೋಡೆಕ್ಸ್ ಅಲೆಕ್ಸಾಂಡ್ರಿನಸ್ನ್ನು ಒಯ್ದನು. ಮಧ್ಯಪೂರ್ವದ ಅವಿಶ್ರಾಂತ ಸ್ಥಿತಿಗತಿಯಿಂದಾಗಿ ಮತ್ತು ಹಸ್ತ ಪ್ರತಿಯು ಮುಸಲ್ಮಾನರ ಕೈಗೆ ಬಿದ್ದರೆ ನಾಶವಾಗುವ ಸಂಭಾವ್ಯತೆಯಿಂದ, ಇಂಗ್ಲೆಂಡಲ್ಲಿ ಅದು ಹೆಚ್ಚು ಸುರಕ್ಷಿತ ಎಂದು ಲೌಕಾರಿಸ್ ಭಾವಿಸಿದನು. ಈ ಕಾರಣದಿಂದ ಅವನದನ್ನು ತುರ್ಕಿಯ ಬ್ರಿಟಿಷ್ ರಾಯಭಾರಿಯ ಮೂಲಕ, ಇಂಗ್ಲೆಂಡಿನ 1 ನೇ ಜೇಮ್ಸ್ ರಾಜನಿಗೆ ಕೊಡುಗೆಯಾಗಿ ಅರ್ಪಿಸಿದನು. ಆದರೆ ಹಸ್ತ ಪ್ರತಿಯು ಕೈ ಸೇರುವ ಮೊದಲೇ ಅರಸನು ತೀರಿ ಹೋದನಾದ್ದರಿಂದ, ಮೂರು ವರ್ಷದ ನಂತರ, ಅವನ ವಾರಸುದಾರ 1 ನೇ ಚಾರ್ಲ್ಸ್ಗೆ ಅದನ್ನು ನೀಡಲಾಯಿತು.
ಆ ಹಸ್ತ ಪ್ರತಿಯು ಕೈರಿಲೊಸ್ ಲೌಕಾರಿಸ್ ಭಾವಿಸಿದಷ್ಟು ಮೂಲ್ಯತೆಯದ್ದಾಗಿತ್ತೋ? ಹೌದು, ಸಾ.ಶ. ಐದನೇ ಶತಕದ ಆದಿಭಾಗದಷ್ಟು ಹಿಂದಿನ ಹಸ್ತ ಪ್ರತಿಯದು. ಅದರ ಬರಹದಲ್ಲಿ ಹಲವಾರು ಶಾಸ್ತ್ರಿಗಳು ಪಾಲಿಗರಾಗಿದ್ದರು, ಮತ್ತು ಶಾಸ್ತ್ರ ವಚನವು ಇಡೀ ತಿದ್ದುಪಡಿಯಾಗಿತ್ತು. ಅದು ಚರ್ಮ ಕಾಗದದ ಮೇಲೆ ಪ್ರತಿ ಪುಟದಲ್ಲಿ ಎರಡು ಅಂಕಣಗಳಲ್ಲಿ ಬರೆಯಲ್ಪಟ್ಟಿತ್ತು. ಶಬ್ದಗಳು ದೊಡ್ಡಕ್ಷರಗಳಲ್ಲಿದ್ದು, ನಡುವೆ ಯಾವ ತೆರಪೂ ಇರಲಿಲ್ಲ. ಮತ್ತಾಯ ಪುಸ್ತಕದ ಹೆಚ್ಚಿನಾಂಶವು ಕಾಣೆಯಾಗಿದೆ, ಹಾಗೂ ಆದಿಕಾಂಡ, ಕೀರ್ತನೆಗಳು, ಯೋಹಾನ ಮತ್ತು 2ನೇ ಕೊರಿಂಥದ ಕೆಲವಾಂಶಗಳು ಸಹಾ. ಕೋಡೆಕ್ಸ್ ಎ, ಎಂಬ ಅಧಿಕೃತ ಹೆಸರನ್ನು ಪಡೆದಿರುವ ಇದರಲ್ಲಿ 773 ಹಾಳೆಗಳಿವೆ ಮತ್ತು ಅದು ಗಮನಾರ್ಹ ಮಹತ್ವದ ಒಂದು ಆರಂಭದ ಸಾಕ್ಷ್ಯವಾಗಿ ಉಳಿದದೆ.
ಹೆಚ್ಚಿನ ಬೈಬಲ್ ಹಸ್ತ ಪ್ರತಿಗಳನ್ನು ಅವುಗಳ ನಡುವೆ ಇರುವ ಸಮಾನತೆಗಳ ಕಾರಣ ಗುಂಪುಗಳಾಗಿ, ಒಂದೇ ಬುಡಕಟ್ಟಿನಿಂದ ಬಂದವುಗಳಾಗಿ ವರ್ಗೀಕರಿಸಬಹುದು. ಶಾಸ್ತ್ರಿಗಳು ಅದೇ ಮೂಲದಿಂದ ಅಥವಾ ಒತ್ತಾದ ನಮೂನೆಗಳಿಂದ ತಮ್ಮ ಪ್ರತಿಗಳನ್ನು ಮಾಡಿದಾಗ ಅವು ಹೊರಬಂದವು. ಆದರೆ ಅಲೆಕ್ಸಾಂಡ್ರಿಯನ್ ಕೋಡೆಕ್ಸ್ನ ಸಂಬಂಧದಲ್ಲಿಯಾದರೋ, ಸಾಧ್ಯವಾದಷ್ಟು ಒಳ್ಳೇ ಮೂಲವಚನ ಒದಗಿಸಲು ಬೇರೆ ಬೇರೆ ಬುಡಕಟ್ಟುಗಳಿಂದ ಪಠನಗಳನ್ನು ಒಟ್ಟುತರುವ ವಿಷಯದಲ್ಲಿ ಶಾಸ್ತ್ರಿಗಳು ಚಿಂತಿತರಾದಂತೆ ಕಂಡರು. ವಾಸ್ತವದಲ್ಲಿ ಅದು, 1611ರ ಕಿಂಗ್ ಜೇಮ್ಸ್ ವರ್ಶನ್ಗೆ ಮೂಲವಾಗಿ ಪ್ರಯೋಗಿಸಲ್ಪಟ್ಟ ಯಾವುದೇ ಗ್ರೀಕ್ ಹಸ್ತ ಪ್ರತಿಗಳಿಗಿಂತ ಉತ್ತಮವೂ ಹಳೆಯದ್ದೂ ಆಗಿ ರುಜುವಾಯಿತು.
1ನೇ ತಿಮೊಥಿ 3:16 ರ ಅಲೆಕ್ಸಾಂಡ್ರಿಯನ್ ಪಠನವು, ಪ್ರಕಾಶಿತವಾದಾಗ, ಬಹಳಷ್ಟು ವಾಗ್ವಾದವನ್ನು ಎಬ್ಬಿಸಿತು. ಕಿಂಗ್ ಜೇಮ್ಸ್ ವರ್ಶನ್ನಲ್ಲಿ ಅದು ಓದುವುದು: “ದೇವರು ಶರೀರಧಾರಿಯಾಗಿ ಪ್ರತ್ಯಕ್ಷನಾದನು,” ಇದು ಕ್ರಿಸ್ತನಿಗೆ ಸೂಚಿಸಿ ಹೇಳಿದೆ. ಆದರೆ ಈ ಪುರಾತನ ಕೋಡೆಕ್ಸ್ನಲ್ಲಿ, “ದೇವರು” ಎಂಬದರ ಪದಸಂಕೋಚವು ಮೂಲದಲ್ಲಿ “OC” (ಅಥವಾ “ಯಾರು”) ಎಂದು ಓದಿರಬಹುದಾದ ಎರಡು ಗ್ರೀಕ್ ಅಕ್ಷರಗಳಿಂದ ಬರೆಯಲ್ಪಟ್ಟಿದೆ, ಕ್ರಿಸ್ತ ಯೇಸುವು “ದೇವರಲ್ಲ” ಎಂಬದೇ ಇದರರ್ಥ.
“ಯಾರು” ಅಥವಾ “ಯಾವುದು” ಇದರಲ್ಲಿ ಸರಿಯಾದ ಭಾಷಾಂತರ ಯಾವುದು, ಎಂದು ದೃಢೀಕರಿಸಲು 200 ಕ್ಕಿಂತಲೂ ಹೆಚ್ಚು ವರ್ಷಗಳು ಮತ್ತು ಬೇರೆ ಹಳೇ ಹಸ್ತ ಪ್ರತಿಗಳ ಸಂಶೋಧನೆ ಬೇಕಾಯಿತು. ಬ್ರೂಸ್ ಎಮ್. ಮೆಟ್ಸರ್ ತನ್ನ ಟೆಕ್ಚುವಲ್ ಕಾಮೆಂಟ್ರಿ ಆನ್ ದ ಗ್ರೀಕ್ ನ್ಯೂ ಟೆಸ್ಟಮೆಂಟ್ ಪುಸ್ತಕದಲ್ಲಿ ತೀರ್ಮಾನಿಸಿದ್ದು: “ಒಂಭತ್ತನೆಯ ಅಥವಾ ಹತ್ತನೆಯ ಶತಕಕ್ಕೆ ಮುಂಚಿನ ಯಾವುವೇ ದೊಡ್ಡಕ್ಷರಗಳು . . . ಅದನ್ನು theos (ದೇವರು) ಎಂದು ಬೆಂಬಲಿಸುವುದಿಲ್ಲ; ಎಲ್ಲಾ ಪುರಾತನ ತರ್ಜುಮೆಗಳು ಅದನ್ನು “ಯಾರು” ಎಂದೇ ಮುಂಭಾವಿಸಿವೆ. ನಾಲ್ಕನೆಯ ಶತಕದ ಮುಂಚಿನ ಯಾವ ಮಠೀಯ ಲೇಖಕನೂ ಅದನ್ನು theos ಎಂದು ಓದುವುದಕ್ಕೆ ಆಧಾರಕೊಡುವುದಿಲ್ಲ. ಇಂದು, ಹೆಚ್ಚಿನ ತರ್ಜುಮೆಗಳು ಈ ವಚನದಲ್ಲಿ “ದೇವರು” ಎಂಬ ಯಾವುದೇ ನಿರ್ದೇಶವನ್ನು ವಿಸರ್ಜಿಸಿವೆ.
1757 ರಲ್ಲಿ ಅರಸನ ರಾಯಲ್ ಲೈಬ್ರೆರಿಯು ಬ್ರಿಟಿಷ್ ಲೈಬ್ರೆರಿಯ ಭಾಗವಾಗಿ ಪರಿಣಮಿಸಿತು, ಮತ್ತು ಈ ಉತ್ತಮ ಕೋಡೆಕ್ಸ್ ಈಗ ಬ್ರಿಟಿಷ್ ಮ್ಯೂಸಿಯಂನ ಹಸ್ತ ಪ್ರತಿ ಕೊಠಡಿಯಲ್ಲಿ ಬಹಿರಂಗ ಪ್ರದರ್ಶನಕ್ಕಿದೆ. ಅದು ನಿಜವಾಗಿಯೂ ಒಂದು ಪ್ರೇಕ್ಷಣೀಯವಾದ ನಿಕ್ಷೇಪವು. (w88 12/15)