ಬುರುಂಡಿಯಲ್ಲಿ ಹಿಂಸೆಯು ಮುಂದುವರಿಯುತ್ತಿದೆ
1989 ರ ಆರಂಭದಲ್ಲಿ ಮಧ್ಯ ಆಫ್ರಿಕನ್ ರಾಷ್ಟ್ರವಾದ ಬುರುಂಡಿಯ ಅಧಿಪತಿಗಳು ಯೆಹೋವನ ಸಾಕ್ಷಿಗಳ ಮೇಲೆ ಹಿಂಸೆಯ ಸೆಲೆಯನ್ನು ಬಡೆದರು. ವಾಚ್ಟವರ್ ಅಗೋಸ್ತ್ 15, 19989 ರ ಸಂಚಿಕೆಯಲ್ಲಿ ವರದಿಸಿದ ಪ್ರಕಾರ ಸಾಕ್ಷಿಗಳ ಮೇಲೆ ಅತ್ಯಾಚಾರ, ಕೈದು, ಹೊಡೆತ ಮತ್ತಿತರ ತೀಕ್ಷ್ಣ ವಿಧಾನಗಳ ಮೂಲಕ ಅವರು ತಮ್ಮ ನಂಬಿಕೆಯನ್ನು ತ್ಯಜಿಸಿ ಬಿಡುವಂತೆ ಬಲಾತ್ಕರಿಸಲಾಯಿತು. ಅಂದಿನಿಂದ ಪರಿಸ್ಥಿತಿ ಹೇಗಿದೆ?
ಬುರುಂಡಿಯಿಂದ ಬಂದ ಇನ್ನೊಂದು ವರದಿಯು ಹೇಳಿದ್ದೇನೆಂದರೆ, ಕಿನಿನ್ಯ ಮತ್ತು ಗಿಟೇಗಕ್ಕೆ ಜಿಲ್ಲಾ ಮೇಲ್ವಿಚಾರಕನು ಸಂದರ್ಶಿಸಿದ ಸಮಯದಲ್ಲಿ ಅಧಿಕಾರಿಗಳು ಸಭಾಕೂಟವೊಂದರಲ್ಲಿ ಸದಸ್ಯರನ್ನು ಕೈದು ಮಾಡಲು ಪ್ರಯತ್ನಿಸಿದರು ಎಂಬದಾಗಿ, ಜಿಲ್ಲಾ ಮತ್ತು ಸರ್ಕಿಟ್ ಮೇಲ್ವಿಚಾರಕರು ಪಾರಾಗಶಕ್ತರಾದರು, ಆದರೆ ಕೈದಾದವರಲ್ಲಿ ಇಬ್ಬರು ಹೈಸ್ಕೂಲ್ ವಿದ್ಯಾರ್ಥಿಗಳು ಮತ್ತು ಒಬ್ಬಾಕೆ ಪ್ರಾಥಮಿಕ ಶಾಲಾ ಹುಡುಗಿ. ಅವರೆಲ್ಲರಿಗೆ ಹೊಡೆತಗಳು ಬಿದ್ದವು. ಕೈದಾದವರು ಮಾರಣೇ ದಿನ ಗವರ್ನರ ಮುಂದೆ ತರಲ್ಪಟ್ಟರು. ರಾಜಕೀಯ ಪಕ್ಷದ ಸದಸ್ಯರಾಗುವುದಿಲ್ಲವೇಕೆಂದು ವಿವರಿಸುವಂತೆ ಅವರಿಗೆ ಹೇಳಲಾಯಿತು. ಪುನಃ ಹೊಡೆತಗಳು ಬಿದ್ದವು. ಬೇರೆ ವರದಿಗಳೂ ಈ ಸಂಗತಿಯನ್ನು ವರದಿ ಮಾಡಿವೆ.
ಬುರುಂಡಿಯ ಒಬ್ಬ ನಂಬುಗೆಯ ಕ್ರೈಸ್ತ ಹಿರಿಯನು ಬರೆಯುವದು: “ಯೆಹೋವನ ಯಾವ ಸಾಕ್ಷಿಯಾದರೂ ಕಳ್ಳತನ, ಕೊಲೆ, ಅಥವಾ ವಿಧ್ವಂಸಕ್ಕಾಗಿ ದಸ್ತಗಿರಿಯಾಗಿಲ್ಲ. ಸಾಕ್ಷಿಗಳನ್ನು ಶಿಕ್ಷಿಸಲಿಕ್ಕೆ ಅಧಿಕಾರಿಗಳಿಗೆ ನಿಜ ಆಧಾರವಿದ್ದರೆ ಬಹಿರಂಗ ನ್ಯಾಯಾಲಯದಲ್ಲಿ ವಿಚಾರಣೆ ನಡಿಸಲಿ. ಶಾಂತಿಪ್ರಿಯ ನಾಗರಿಕರನ್ನು ಹಿಂಸೆ ಪಡಿಸುವ ಬದಲಾಗಿ, ಅವರ ಸೊತ್ತುಗಳನ್ನು ಆಕ್ರಮಿಸಿ ಕಾಡುಮೃಗಗಳಂತೆ ಅವರನ್ನು ಬೆನ್ನಟ್ಟುವ ಬದಲಾಗಿ ಅದು ಲೇಸು. ಒಳನಾಡಿನ ಅನೇಕ ಸಹೋದರರು ತಮ್ಮ ಮನೆಗಳನ್ನು ಬಿಟ್ಟು ಪಲಾಯನ ಮಾಡುವಂತೆ ಮತ್ತು ದೇಶಭ್ರಷ್ಟರಾಗಿ ಜೀವಿಸುವಂತೆ ಬಲಾತ್ಕರಿಸಲ್ಪಟ್ಟಿದ್ದಾರೆ. ಒಬ್ಬಾಕೆ ಸಹೋದರಿ ಸೆರೆಯಲ್ಲಿದ್ದ ತನ್ನ ಗಂಡನನ್ನು ಬಿಡಿಸುವ ಪ್ರಯತ್ನದಲ್ಲಿ ಅನೇಕ ಅಧಿಕಾರಿಗಳ ಬಳಿ ವಿನಂತಿಸಿದಳು. ಅವರೆಲ್ಲರೂ ನಿರಾಕರಿಸುತ್ತಾ ಉತ್ತರಿಸಿದ್ದು: “ನಮ್ಮ ದೇಶವನ್ನು ಅಭದ್ರಗೊಳಿಸಲಿಕ್ಕಾಗಿ ಪರದೇಶದಿಂದ ನೀವು ಹಣ ಪಡೆಯುತ್ತೀರಾದರಿಂದ ನಾವು ನಿನ್ನ ಗಂಡನನ್ನೆಂದೂ ಬಿಡುಗಡೆ ಮಾಡಲಾರೆವು.” ಎಂತಹ ಮಿಥ್ಯಾಪವಾದ!
ಆದರೂ ಬುರುಂಡಿಯೊಳಗಿಂದ ಒಳ್ಳೆಯ ವಾರ್ತೆಯು ಸಿಕ್ಕಿದೆ. ಅಲ್ಲಿನ ಸಾಕ್ಷಿಗಳು ಅಂಜುಬುರುಕರಲ್ಲ ಯಾ ಬಿಟ್ಟು ಕೊಡುವವರಲ್ಲ. ಜಾಗ್ರತೆಯಿಂದಲೂ ಸುವಾರ್ತೆಯ ಸಾರುವಿಕೆಯು ವಿಸ್ತಾರವಾಗುತ್ತಲಿದೆ. ಯೆಹೋವನಲ್ಲಿ ಪೂರ್ಣ ಭರವಸದೊಂದಿಗೆ ತಾವು ತಾಳಿಕೊಳ್ಳಶಕ್ತರೆಂದು ಸಹೋದರ ಮತ್ತು ಸಹೋದರಿಯರು ಮನಗಂಡಿದ್ದಾರೆ. ಈ ಅನ್ಯಾಯಕ್ಕಾಗಿ ಧಿಕ್ಕಾರ ವ್ಯಕ್ತಪಡಿಸುವ ಅನೇಕ ಪತ್ರಗಳನ್ನು ಈವಾಗಲೇ ಬುರುಂಡಿಗೆ ಕಳುಹಿಸಲ್ಪಟ್ಟಿವೆ ಮತ್ತು ಬುರುಂಡಿಯು ಯೆಹೋವನ ಸಾಕ್ಷಿಗಳ ವಿರುದ್ಧ ತನ್ನ ನಿರ್ಧಯೆಯ ಹಿಂಸಾಚಾರವನ್ನು ಮುಂದರಿಸುತ್ತಿರುವದನ್ನು ಲೋಕವು ಕಾಣುವಾಗ ಇನ್ನೂ ಅನೇಕ ಪತ್ರಗಳು ಹಿಂಬಾಲಿಸುವವೆಂಬದಕ್ಕೆ ಸಂಶಯವಿಲ್ಲ.
[ಪುಟ 29 ರಲ್ಲಿರುವ ಚೌಕ]
The address of the president of Burundi is:
His Excellency Major Pierre Buyoya;
President of the Republic of Burundi;
Bujumbura;
REPUBLIC OF BURUNDI