ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w90 2/1 ಪು. 32
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1990
  • ಅನುರೂಪ ಮಾಹಿತಿ
  • ನೀವು “ಯಾಜಕರಾಜ್ಯ” ಆಗುವಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಹೊಸ ಒಡಂಬಡಿಕೆಯ ಮುಖಾಂತರ ಹೆಚ್ಚು ಶ್ರೇಷ್ಠವಾದ ಆಶೀರ್ವಾದಗಳು
    ಕಾವಲಿನಬುರುಜು—1998
  • ಹೊಸ ಒಡಂಬಡಿಕೆಯ ಬಗ್ಗೆ ಯೆಹೋವನು ಮುಂಚಿತವಾಗಿಯೇ ತಿಳಿಸಿದನು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಯೆಹೋವನು ಒಡಂಬಡಿಕೆಗಳ ದೇವರಾಗಿದ್ದಾನೆ
    ಕಾವಲಿನಬುರುಜು—1998
ಇನ್ನಷ್ಟು
ಕಾವಲಿನಬುರುಜು—1990
w90 2/1 ಪು. 32

ವಾಚಕರಿಂದ ಪ್ರಶ್ನೆಗಳು

◼ ಹಿಂಸಾಕಂಬದ ಮೇಲೆ ಯೇಸು ಸತ್ತಾಗ, ನಿಯಮದೊಡಂಬಡಿಕೆಯು ಅಂತ್ಯಗೊಂಡಿತೋ ಮತ್ತು ಹೊಸ ಒಡಂಬಡಿಕೆಯಿಂದ ಅದು ಸ್ಥಾನಪಲ್ಲಟಗೊಂಡದ್ದು ಯಾವಾಗ?

ಅನೇಕರು ಈ ಪ್ರಶ್ನೆಗಳನ್ನು ಕೆಳಗಿನ ಮೂರು ಘಟನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡವರಾಗಿ ಕೇಳಿರುತ್ತಾರೆ: ನೈಸಾನ್‌ 14, ಸಾ.ಶ. 33 ರ ಅಪರಾಹ್ನ ಯೇಸುವು ಹಿಂಸಾಕಂಬದ ಮೇಲೆ ಮರಣಗೊಂಡದ್ದು, ಅವನ ಜೀವರಕ್ತದ ಬೆಲೆಯನ್ನು ಸ್ವರ್ಗದಲ್ಲಿ ಆತನು ತೆತ್ತದ್ದು ಮತ್ತು ಸಾ.ಶ. 33ರ ಪಂಚಾಶತ್ತಮ ದಿನದಲ್ಲಿ ಪವಿತ್ರಾತ್ಮವನ್ನು ಅವನು ಸುರಿದದ್ದು. ಶಾಸ್ತ್ರೀಯವಾಗಿ, ನಿಯಮದೊಡಂಬಡಿಕೆಯು ಪಂಚಾಶತ್ತಮದಲ್ಲಿಯೇ ಅಂತ್ಯಗೊಂಡು ಹೊಸ ಒಡಂಬಡಿಕೆಯಿಂದ ಸ್ಥಾನಪಲ್ಲಟ ಹೊಂದಿತು. ಇದು ಹಾಗೆ ಯಾಕೆಂದು ನಾವೀಗ ನೋಡೋಣ.

ನಿಯಮದಲ್ಲಿ ಸಾಧ್ಯವಾಗದೇ ಇರುವಂತಹ, ಪಾಪದ ಪೂರ್ಣ ಕ್ಷಮಾಪಣೆ ಅನುಮತಿಸುವ “ಹೊಸ ಒಡಂಬಡಿಕೆಯೊಂದರಿಂದ” ನಿಯಮದೊಡಂಬಡಿಕೆಯನ್ನು ತಾನು ಸಮಯಾನಂತರ ಸ್ಥಾನ ಪಲ್ಲಟಗೊಳಿಸುವನೆಂದು ಯೆಹೋವನು ಮುನ್ನುಡಿದಿದ್ದನು. (ಯೆರೆಮೀಯ 31:31-34) ಆ ಬದಲೀಯು ಯಾವಾಗ ಸಂಭವಿಸಿತು?

ಅದರ ಉದ್ದೇಶವನ್ನು ಪೂರೈಸಿಯಾದ ಮೇಲೆ, ಹಳೆಯ ಒಡಂಬಡಿಕೆಯಾದ ನಿಯಮದೊಡಂಬಡಿಕೆಯನ್ನು ಮೊದಲಾಗಿ ದಾರಿಯಿಂದ ತೆಗೆಯಬೇಕಿತ್ತು. (ಗಲಾತ್ಯ 3:19, 24, 25) ಅಪೊಸ್ತಲ ಪೌಲನು ಬರೆದದ್ದು: “(ದೇವರು) ನಮ್ಮ ಅಪರಾಧಗಳನ್ನೆಲ್ಲಾ ಕ್ಷಮಿಸಿ ನಮ್ಮ ಮೇಲೆ ದೋಷಾರೋಪಣೆ ಮಾಡಿದಂಥ ಆಜ್ಞಾರೂಪವಾಗಿದ್ದಂಥ ಪತ್ರವನ್ನು ಕೆಡಿಸಿ ಅದನ್ನು ಹಿಂಸಾಕಂಭಕ್ಕೆ ಜಡಿದು ಇಲ್ಲದಂತಾಗ ಮಾಡಿದನು.” (ಕೊಲೊಸ್ಸೆ 2:13, 14) ಯೇಸುವು ಸತ್ತ ಕ್ಷಣದಲ್ಲಿಯೇ ನಿಯಮದೊಡಂಬಡಿಕೆಯ ಸ್ಥಾನದಲ್ಲಿ ಹೊಸ ಒಡಂಬಡಿಕೆಯು ಬದಲೀಯಾಗಿ ಬಂತೆಂದು ಇದರ ಅರ್ಥವೂ?

ಇಲ್ಲ, ಹೊಸ ಒಡಂಬಡಿಕೆಯು ಹೊಸ ಜನಾಂಗವಾದ ಆತ್ಮೀಕ ಇಸ್ರಾಯೇಲ್‌ ಮತ್ತು ತಕ್ಕದ್ದಾದ ಯಜ್ಞದ ರಕ್ತದ ಮೂಲಕ ಆರಂಭಿಸಲ್ಪಡಬೇಕಾಗಿತ್ತು. (ಇಬ್ರಿಯ 8:5,6; 9:15-22) ಯೇಸುವು ನೈಸಾನ್‌ 16 ರಲ್ಲಿ ಪುನರುತ್ಥಾನ ಹೊಂದಿ, 40 ದಿನಗಳ ನಂತರ ಪರಲೋಕಕ್ಕೇರಿ ಹೋದನು. (ಅ. ಕೃತ್ಯ 13:3-9) ಅವನ ದಿವಾರೋಹಣದ 10 ದಿನಗಳ ನಂತರ ಯಾ ಪಂಚಾಶತಮ ದಿನದಲ್ಲಿ “ವಾಗ್ದಾನಿಸಿದ ಪವಿತ್ರಾತ್ಮವನ್ನು” ಯೇಸುವು ತನ್ನ ಶಿಷ್ಯರ ಮೇಲೆ ಸುರಿಸಿದನು. ಅದನ್ನು ಆತನು ತನ್ನ ತಂದೆಯಿಂದ ಪಡೆದಿದ್ದನು ಮತ್ತು ಹೀಗೆ ಆತ್ಮೀಕ ಇಸ್ರಾಯೇಲ್‌ ಅಸ್ತಿತ್ವಕ್ಕೆ ಬಂತು. (ಅ. ಕೃತ್ಯ 2:33) ಮಧ್ಯಸ್ಥಗಾರನಾದ ಯೇಸುಕ್ರಿಸ್ತನ ಮೂಲಕ, ದೇವರು ಆತ್ಮೀಕ ಇಸ್ರಾಯೇಲಿನೊಂದಿಗೆ ಹೊಸ ಒಡಂಬಡಿಕೆಯನ್ನು ಮಾಡುತ್ತಾನೆ.

ಇವೆಲ್ಲಾ ಸಂಬಂಧಿತ ಸಂಗತಿಗಳ ನೋಟದಲ್ಲಿ, ಯಾವ ಸಮಯದಲ್ಲಿ ನಿಯಮದೊಡಂಬಡಿಕೆಯ ಸ್ಥಾನದಲ್ಲಿ ಹೊಸ ಒಡಂಬಡಿಕೆಯು ಸ್ಥಾನಾಂತರಗೊಂಡಿತು?

ಯೇಸುವಿನ ಮರಣದೊಟ್ಟಿಗೆ ನಿಯಮಶಾಸ್ತ್ರವು ಕೊನೆಗೊಂಡಿತೆಂದು ಒಬ್ಬನು ಹೇಳಶಕ್ತನಲ್ಲ. ಆತ್ಮದಲ್ಲಿ ಪುನರುತ್ಥಿತನಾದ ಯೇಸುವು 40 ದಿನಗಳ ತನಕ ಭೂಮಿಯ ಮೇಲಿದ್ದನು. ಆಗ ಅವನ ಶಿಷ್ಯರು ಇನ್ನೂ ನಿಯಮಶಾಸ್ತ್ರವನ್ನು ಪರಿಪಾಲಿಸುತ್ತಿದ್ದರು. ಇನ್ನೂ ಹೆಚ್ಚಾಗಿ, ನಿಯಮಶಾಸ್ತ್ರದ ಒಂದು ಪ್ರಮುಖ ಲಕ್ಷಣವೇನೆಂದರೆ ಮಹಾ ಯಾಜಕನು ವರ್ಷಕ್ಕೊಮ್ಮೆ ಅತಿ ಪವಿತ್ರಸ್ಥಾನಕ್ಕೆ ಹೋಗುವದೇ. ಅದು ಯೇಸುವಿನ ಪುನರುತ್ಥಾನವು ಪರಲೋಕಕ್ಕೆ ಎಂದು ಚಿತ್ರಿಸುತ್ತದೆ. ಅಲ್ಲಿ ದೇವರ ಸಮ್ಮುಖದಲ್ಲಿ, ಹೊಸ ಒಡಂಬಡಿಕೆಯ ಮಧ್ಯಸ್ಥನೋಪಾದಿ, ಅವನ ವಿಮೋಚನಾಯಜ್ಞದ ಬೆಲೆಯನ್ನು ಅರ್ಪಿಸಶಕ್ತನಾಗಿದ್ದನು. (ಇಬ್ರಿಯ 9:23, 24) ಇದು, ಯೆರೆಮೀಯ 31:31-34 ರ ನೆರವೇರಿಕೆಯಲ್ಲಿ ಹೊಸ ಒಡಂಬಡಿಕೆಯನ್ನು ಆರಂಭಿಸಲು ದಾರಿಯನ್ನು ತೆರೆಯಿತು.

ವಿಮೋಚನಾ ಯಜ್ಞದ ತನ್ನ ಸ್ವೀಕಾರದ ಮೇಲೆ ಯೆಹೋವನು ಕ್ರಿಯೆಗೈಯಲು ತೊಡಗಿದಾಗ ಹೊಸ ಒಡಂಬಡಿಕೆಯು ಜಾರಿಗೆ ಬಂತು. ರಾಜ್ಯಕ್ಕೋಸ್ಕರ ಒಡಂಬಡಿಕೆಯಲ್ಲಿ ಬಂದಿರುವ ಆತ್ಮೀಕ ಇಸ್ರಾಯೇಲ್‌ ಎಂಬ ಹೊಸ ಜನಾಂಗವನ್ನು ಅಸ್ತಿತ್ವಕ್ಕೆ ತರಲು ಯೇಸುವಿನ ಶಿಷ್ಯರ ಮೇಲೆ ತನ್ನ ಪವಿತ್ರಾತ್ಮವನ್ನು ಸುರಿಸಿದನು. (ಲೂಕ 22:29; ಅ. ಕೃತ್ಯ 2:1-4) ಇದು ನಿಯಮದೊಡಂಬಡಿಕೆಯನ್ನು ಯೆಹೋವನು ರದ್ದುಗೊಳಿಸಿದ್ದಾನೆಂದು ತೋರಿಸಿತು. ಸಾಂಕೇತಿಕವಾಗಿ ಯೇಸುವು ಸತ್ತ ಹಿಂಸಾಕಂಭಕ್ಕೆ ಜಡಿದೋಪಾದಿ ಇತ್ತು. ಈ ರೀತಿ ಸಾ.ಶ.33 ರ ಪಂಚಾಶತಮದಲ್ಲಿ ಹೊಸ ಜನಾಂಗವಾದ ಆತ್ಮೀಕ ಇಸ್ರಾಯೇಲಿನ ಜನನವುಂಟಾದಾಗ ಹೊಸ ಒಡಂಬಡಿಕೆಯು ಕಾರ್ಯೋನ್ಮುಖಗೊಂಡಾಗ ಯಾ ಆರಂಭಿಸಿದಾಗ, ನಿಯಮಡಂಬಡಿಕೆಯು ಕೊನೆಗೊಂಡಿತು.—ಇಬ್ರಿಯ 7:12; 8:1,2.

ಆ ಪ್ರಶ್ನೆಗೆ ಮೊದಲ ಉತ್ತರವನ್ನು ದಾಟಿ ನೋಡುವುದಾದರೆ, ನಿಯಮದೊಡಂಬಡಿಕೆಯ ಅಂತ್ಯದಲ್ಲಿ ಮತ್ತು ಸಾ.ಶ.33 ರ ಪಂಚಾಶತಮದಲ್ಲಿ ಹೊಸ ಒಡಂಬಡಿಕೆಯು ಆರಂಭಗೊಂಡಾಯಿತೆಂಬ ಸಾಕ್ಷಗಳ ನಂತರ, ದೇವರು ಮಾಂಸಿಕ ಇಸ್ರಾಯೇಲ್ಯರೆಡೆಗೆ ಪೂರ್ಣವಾಗಿ ಬೆನ್ನು ತೋರಿಸಲಿಲ್ಲವೆಂದು ನಾವು ಗಮನಿಸಬಹುದು. ಉದಾಹರಣೆಗೆ, ಅಬ್ರಹಾಮನ ಒಡಂಬಡಿಕೆಗನುಸಾರಸಾರ 70 ನೆಯ “ವಾರವು” ಸಾ.ಶ. 36 ರಲ್ಲಿ ಅಂತ್ಯಗೊಳ್ಳುವ ತನಕ ಯೆಹೋವನು ಯೆಹೂದ್ಯರೆಡೆಗೂ, ಮತಾಂತರ ಹೊಂದಿದ ಅನ್ಯರಿಗೂ ಮತ್ತು ಸಮಾರ್ಯದವರೆಡೆಗೂ ವಿಶೇಷ ಕೃಪೆಯನ್ನು ತೋರಿಸಿದನು. (ಅದಿಕಾಂಡ 12:1-3; 15:18; 22:18; ದಾನಿಯೇಲ 9:27; ಅ. ಕೃತ್ಯ 10:9-28, 44-48) ನಿಯಮದೊಡಂಬಡಿಕೆಯನ್ನು ಸಾ.ಶ. 33 ರ ನಂತರ ಆಚರಿಸುವ ಅವಶ್ಯಕತೆಯಿಲ್ಲವೆಂಬ ವಾಸ್ತವಾಂಶಕ್ಕೆ ಹೊಂದಿಸಿಕೊಳ್ಳಲು ಕೆಲವು ಅಭಿಷಿಕ್ತ ಯೆಹೂದ್ಯ ಕ್ರೈಸ್ತರಿಗೂ ಕೂಡ ಸ್ವಲ್ಪ ಸಮಯ ತಗಲಿತು: ಸಾ.ಶ. 49 ರಲ್ಲಿ ಆಡಳಿತ ಮಂಡಲಿಗೆ ತರಲ್ಪಟ್ಟ ಪ್ರಶ್ನೆಯಿಂದ ನಾವಿದನ್ನು ಕಾಣಬಹುದು. (ಅ. ಕೃತ್ಯ 15:1, 2) ನಿಯಮದೊಡಂಬಡಿಕೆಯು ಪೂರ್ಣವಾಗಿ ತ್ಯಜಿಸಲಾಗಿದೆ ಎಂಬುದು ಆಗ ದೇವಾಲಯ ಮತ್ತು ನಿಯಮಶಾಸ್ತ್ರಕ್ಕೆ ಸಂಬಂಧಿತ ವಂಶಾವಳಿ ದಾಖಲೆಗಳು ರೋಮನ್ಯರಿಂದ ನಾಶಗೊಳಿಸಲ್ಪಟ್ಟಾಗ ನಿರ್ವಿವಾದವಾಗಿ ಸಾ.ಶ. 70 ರಲ್ಲಿ ರುಜುವಾಯಿತು.—ಮತ್ತಾಯ 23:38. (w89 2/1)

[ಪುಟ 32 ರಲ್ಲಿರುವ ಚಿತ್ರ ಕೃಪೆ]

 Pictorial Archive (Near Eastern History) Est.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ