“ಶುದ್ಧ ಭಾಷೆ” ಜಿಲ್ಲಾ ಅಧಿವೇಶನವನ್ನು ತಪ್ಪಿಸಬೇಡಿರಿ
ನಾಲ್ಕು ಪ್ರತಿಫಲದಾಯಕ ಬೈಬಲ್ ಉಪದೇಶದ ದಿನಗಳು ನಿಮಗಾಗಿ ಕಾದಿವೆ. ಗುರುವಾರ ಮಧ್ಯಾಹ್ನ 1:30ಕ್ಕೆ ಕಾರ್ಯಕ್ರಮ ಆರಂಭಿಸುವಾಗ ಅಲ್ಲಿ ಹಾಜರಿರ್ರಿ. ವಿಚಾರ ಪ್ರೇರಕ ಭಾಷಣವಾದ, “ನಿಮ್ಮ ಸ್ನೇಹಿತರು ಯೆಹೋವನ ಸ್ನೇಹಿತರೋ” ಹಾಗೂ “ಸಕಲ ಜನಾಂಗಗಳಿಗಾಗಿ ಒಂದು ಶುದ್ಧ ಭಾಷೆ” ಎಂಬ ಮುಖ್ಯ ಉಪನ್ಯಾಸದಲ್ಲಿ ಆನಂದಿಸಿರಿ. ಮಧ್ಯಾಹ್ನದ ಕೊನೆಯ ಭಾಷಣವಾದ, “ರಕ್ತದಿಂದ ನಿಮ್ಮ ಜೀವವನ್ನು ರಕ್ಷಿಸುವುದು—ಹೇಗೆ? ಎಂಬದು ಈ ಪ್ರಶ್ನೆಯನ್ನು ಉತ್ತರಿಸುವುದು: ಜೀವವನ್ನು ರಕ್ಷಿಸಲು ನಿಜವಾಗಿ ರಕ್ತವು ಬೇಕೋ?
ಶುಕ್ರವಾರ ಬೆಳಿಗ್ಗೆ ಕಾರ್ಯಕ್ರಮವು 9:30ಕ್ಕೆ ಆರಂಭಿಸುವುದು. ಶೋಧಕ ಭಾಷಣವಾದ, “ಕ್ರಿಸ್ತನು ಅಧರ್ಮವನ್ನು ದ್ವೇಷಿಸಿದನು—ನೀವೂ?” ಮತ್ತು “ಐಹಿಕ ಭ್ರಮೆಗಳನ್ನು ತಿರಸ್ಕರಿಸಿರಿ, ರಾಜ್ಯದ ನಿಜತ್ವಗಳನ್ನು ಬೆನ್ನಟ್ಟಿರಿ” ಎಂಬ ಪ್ರೇರಕ ಉಪದೇಶದಿಂದ ಪ್ರಯೋಜನ ಹೊಂದಲು ಉಪಸ್ಥಿತರಿರ್ರಿ. ಹೆತ್ತವರು ತಮ್ಮ ಹಂಗುಗಳನ್ನು ಹೇಗೆ ಅಧಿಕ ಪರಿಣಾಮಕಾರಿಯಾಗಿ ನೆರವೇರಿಸಬಹುದೆಂದು ತೋರಿಸಲಾಗುವುದು ಮತ್ತು ಒಂದು ಆಧುನಿಕ ಕಾಲದ ಡ್ರಾಮಾವು, ಯುವಕರಿಗೆ ಶಾಲೆಯಲ್ಲಿ ಪಾಠಕ್ರಮಕ್ಕಿಂತ ಬೇರೆಯಾದ ಚಟುವಟಿಕೆಗಳಲ್ಲಿ ಪಾಲಿಗರಾಗುವ ಕುರಿತು ಅತ್ಯುತ್ತಮ ಮಾರ್ಗದರ್ಶನೆ ನೀಡುವುದು.
ಶನಿವಾರ ಬೆಳಿಗ್ಗಿನ ಕಾರ್ಯಕ್ರಮವು ಸಮರ್ಪಣೆ ಮತ್ತು ದೀಕ್ಷಾಸ್ನಾನದ ಮೇಲೆ ಪ್ರಸಂಗವನ್ನು ಕೊಡುವುದು ಹಾಗೂ ವೈಯಕ್ತಿಕ ಬೈಬಲಭ್ಯಾಸ ಮಾಡುವದಕ್ಕಾಗಿ ತ್ಯಾಗಗಳನ್ನು ಮಾಡುವ ಅಗತ್ಯವನ್ನು ಚರ್ಚಿಸುವುದು. “ಯೆಹೋವನ ದಿವ್ಯ ರಥವು ಮುಂಚಲಿಸುತ್ತಿದೆ” ಎಂಬ ಹುರಿದುಂಬಿಸುವ ಭಾಷಣವು ಮಧ್ಯಾಹ್ನದ ಕಾರ್ಯಕ್ರಮದಲ್ಲಿದೆ. ಅದಲ್ಲದೆ, ಸುಳ್ಳುಧರ್ಮದಿಂದ ಕುರುಡರಾಗಿರುವವರಿಗೆ ನೆರವಾಗಲು ನಮ್ಮ ಜವಾಬ್ದಾರಿಕೆಯ ಕುರಿತು ಬಲವಾದ ಜ್ಞಾಪಕಗಳು ಹಾಗೂ ಈ ಹೊಣೆಗಾರಿಕೆಯನ್ನು ನೆರವೇರಿಸಲು ವ್ಯಾವಹಾರ್ಯ ಸಹಾಯವು ನೀಡಲ್ಪಡುವುದು.
ಕ್ರೈಸ್ತ ಪ್ರಪಂಚ ಮತ್ತು ಅದರ ವೈದಿಕರ ವಿರುದ್ಧ ನೀಡಲ್ಪಡುವ ಪ್ರಬಲ ಸಂದೇಶವನ್ನು ಕೇಳಲು ಭಾನುವಾರ ಬೆಳಿಗ್ಗೆ ನೀವು ಹಾಜರಿರ ಬಯಸುವಿರಿ. ಇದನ್ನು ಹಿಂಬಾಲಿಸಿ ಯೇಹು ಮತ್ತು ಯೋನದಾಬರ ಜೀವಿತ ಘಟನೆಗಳ ಆಧಾರದಲ್ಲಿ ತಕ್ಕುಡುಪಿನ ನಾಟಕವು ನೀಡಲ್ಪಡುವುದು. ಅನಂತರ, ಮಧ್ಯಾಹ್ನ “ಶುದ್ಧಭಾಷೆಯಿಂದ ಐಕ್ಯತೆಯುಳ್ಳವರಾಗಿರ್ರಿ” ಎಂಬ ಬಹಿರಂಗ ಭಾಷಣವನ್ನು ತಪ್ಪದೆ ಕೇಳಿರಿ.
ಸಪ್ಟಂಬರ 1990 ರಿಂದ ಜನವರಿ 1991ರ ತನಕ ಇಡೀ ಭಾರತದಲ್ಲಿಯೇ 26 ಅಧಿವೇಶನಗಳು ಏರ್ಪಡಿಸಲ್ಪಟ್ಟಿವೆ. ಆದ್ದರಿಂದ ನಿಮ್ಮ ಮನೆಗೆ ಹೆಚ್ಚು ದೂರವಿರದ ಸ್ಥಳದಲ್ಲಿ ಒಂದು ಇರುವುದು. ನಿಮಗೆ ಅತಿ ಹತ್ತಿರದ ಅಧಿವೇಶನದ ಕುರಿತು ಸ್ಥಳಿಕ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿರಿ, ಅಥವಾ ಈ ಪತ್ರಿಕೆಯ ಪ್ರಕಾಶಕರಿಗೆ ಬರಿಯಿರಿ.