ಶುದ್ಧ ಭಾಷೆ ಆರಾಧಕರ ಮಹಾ ಸಮೂಹವನ್ನು ಐಕ್ಯಗೊಳಿಸುತ್ತದೆ
ದೇವದತ್ತ ಶುದ್ಧ ಭಾಷೆಯು ಕ್ರಿಸ್ತೀಯ ಐಕ್ಯತೆಯ ಶಕ್ತಿ. ವೆಸ್ಟ್ ಬರ್ಲಿನಿನಲ್ಲಿ 1990ರ ಜುಲೈ 24-27ರಲ್ಲಿ ಮಂಗಳವಾರದಿಂದ ಹಿಡಿದು ಶುಕ್ರವಾರದ ವರೆಗೆ ನಡೆದ ಯೆಹೋವನ ಸಾಕ್ಷಿಗಳ ಸಮ್ಮೇಳನದಲ್ಲಿ ಉಪಸ್ಥಿತರಾಗಿದವ್ದರಿಗೆ ಇದರ ಸಾಬೀತು ಸ್ಪಷ್ಟವಾಗಿತ್ತು. ಏಕೆಂದರೆ 64 ವಿವಿಧ ದೇಶಗಳ ಸಾಕ್ಷಿಗಳು ಅಲ್ಲಿ ಹಾಜರಾಗಿದ್ದರು.
1989ರ ಬೇಸಗೆಯಲ್ಲಿ ಪೋಲೆಂಡಿನಲ್ಲಿ ನಡೆದ “ದಿವ್ಯ ಭಕ್ತಿ” ಜಿಲ್ಲಾ ಸಮ್ಮೇಳನಗಳಿಗೆ ರಷ್ಯ ಮತ್ತು ಚೆಕೊಸ್ಲೊವಾಕಿಯದಿಂದ ಸಾವಿರಾರು ಪ್ರತಿನಿಧಿಗಳು ಬಂದಿದ್ದರೂ ಈಸ್ಟ್ ಜರ್ಮನಿಯಿಂದ ನೂರಾರು ಮಂದಿ ಮಾತ್ರ ಬಂದಿದ್ದರು. ಆದರೆ ಅಂದಿನಿಂದ ರಾಜಕೀಯ ಲೋಕ ಪರಿಸ್ಥಿತಿಯಲ್ಲಿ ಎಷ್ಟೊಂದು ಬದಲಾವಣೆಯಾಗಿದೆ! ಈ ಬಾರಿ, ಈಸ್ಟ್ ಜರ್ಮನಿಯ ಸುಮಾರು 30,000 ಪ್ರತಿನಿಧಿಗಳು ಸಾಕ್ಷಿಗಳೊಂದಿಗೆ ವೆಸ್ಟ್ ಬರ್ಲಿನಿನ ಒಲಿಂಪಿಯ ಕ್ರೀಡಾಂಗಣದಲ್ಲಿ ಕೂಡಿಬಂದರು. ಈ ಸಮ್ಮೇಳನ ಜಗತ್ತಿನ ಇತರ ಭಾಗಗಳಲ್ಲಿ, ಸಾಧಾರಣವಾಗಿ ಗುರುವಾರದಿಂದ ಹಿಡಿದು ಭಾನುವಾರದ ವರೆಗೆ ನಡೆದಿದ್ದ ಸಮ್ಮೇಳನಗಳಂತೆಯೇ ಇತ್ತು.
ಮಂಗಳವಾರದ ಆರಂಭದ ಸ್ವಾಗತ ಭಾಷಣದಲ್ಲಿ ಅಧ್ಯಕ್ಷರು, ಯೆಹೋವನ ಸಾಕ್ಷಿಗಳು ಶುದ್ಧಭಾಷೆಯನ್ನಾಡುವುದರಲ್ಲಿ ಮಾಡಿರುವ ಪ್ರಗತಿಯಲ್ಲಿ 1919ರಿಂದ ನಡೆದಿರುವ ಸಮ್ಮೇಳನಗಳ ಪಾತ್ರವನ್ನು ನೆನಪಿಸಿದರು. ತದ್ರೀತಿ, ಇಲ್ಲಿರುವ ಸರ್ವರು ಶುದ್ಧಭಾಷೆಯನ್ನಾಡುವ ಸಾಮರ್ಥ್ಯವನ್ನು ಹೆಚ್ಚಿಸಿ ಅದಕ್ಕನುಸಾರ ಜೀವಿಸುವಂತೆ ಈ ಸಮ್ಮೇಳನ ಸಹಾಯಿಸುವುದು. ಯೆಹೋವನ ಜನರು ತಮ್ಮ ನೀಟು ಮತ್ತು ನಡತೆಯಿಂದಲೇ ಶುದ್ಧಭಾಷೆಯನ್ನಾಡುವುದರಲ್ಲಿ ತಾವು ಮಾಡಿರುವ ಪ್ರಗತಿಯನ್ನು ತೋರಿಸುವರೆಂದು ಅವರು ಜ್ಞಾಪಕ ಹುಟ್ಟಿಸಿದರು.
“ಸಕಲ ಜನಾಂಗಗಳಿಗೊಂದು ಶುದ್ಧಭಾಷೆ”
ಯೋಗ್ಯವಾಗಿಯೇ, ಸಮ್ಮೇಳನದ ಮುಖ್ಯ ಭಾಷಣದಲ್ಲಿ ಮೇಲಿನ ವಿಷಯವಿತ್ತು. ಅದು ಚೆಫನ್ಯ 3:9(NW) ರ ಮೇಲೆ ಆಧಾರಗೊಂಡಿತ್ತು. ಅಲ್ಲಿ ದೇವರು ವಾಗ್ದಾನಿಸಿದ್ದು:“ಆಗ ನಾನು ಜನರಿಗೆ, ಅವರೆಲ್ಲರೂ ಯೆಹೋವನ ಹೆಸರನ್ನು ಕರೆಯಲಾಗುವಂತೆ, ಆತನನ್ನು ಭುಜಕ್ಕೆ ಭುಜಕೊಟ್ಟು ಸೇವಿಸಲಾಗುವಂತೆ ಒಂದು ಶುದ್ಧಭಾಷೆಗೆ ಬದಲಾವಣೆಯನ್ನು ಕೊಡುವೆನು.” ಈ ಶುದ್ಧ ಭಾಷೆಯಲ್ಲಿ ದೇವರ ಮತ್ತು ಆತನ ಉದ್ದೇಶಗಳ ಕುರಿತ ಸತ್ಯದ ಸರಿಯಾದ ತಿಳುವಳಿಕೆ ಮತ್ತು ಮಾನ್ಯತೆ ಸೇರಿದೆ. ಇದನ್ನು ತನ್ನ ಪವಿತ್ರಾತ್ಮದ ಮೂಲಕ ಯೆಹೋವನು ಮಾತ್ರ ಒದಗಿಸಬಲ್ಲನು. ಸಕಲ ನೈತಿಕ ಅಶುದ್ಧತೆಯಿಂದ ಮುಕ್ತವಾಗಿರುವ ಈ ಶುದ್ಧಭಾಷೆಯ ಕಲಿಕೆಗೆ ಸತ್ಯದ ಮೇಲಿರುವ ಪ್ರೇಮವೇ ಪ್ರೇರಕ ಶಕ್ತಿಯಾಗಿರತಕ್ಕದ್ದು.
ಇದಲ್ಲದೆ, ಶುದ್ಧಭಾಷೆಯನ್ನಾಡುವುದೆಂದರೆ ಕೇವಲ ಶಬ್ದಕೋಶವನ್ನು ಉಪಯೋಗಿಸುವುದೆಂದರ್ಥವಲ್ಲ. ಬದಲಿಗೆ, ನಮ್ಮ ಜೀವನರೀತಿ ನಮ್ಮ ತುಟಿಗಳಿಂದ ಬರುವ ವಿಷಯಗಳಿಗೆ ಹೊಂದಿಕೆಯಾಗಿರತಕ್ಕದ್ದು. ನಮ್ಮ ಸರ್ವಭಾರ, ಮುಖಭಾವ, ಮತ್ತು ಭಾವಾಭಿನಯಗಳೂ ಪ್ರಾಮುಖ್ಯ, ಏಕೆಂದರೆ ಅವು ನಮ್ಮ ಆಂತರ್ಯವನ್ನು ಪ್ರತಿಬಿಂಬಿಸುತ್ತವೆ. ವಿಕಾಸ ಹೊಂದುತ್ತಿರುವ ಶುದ್ಧಭಾಷೆಗೆ ಸಮಾನಾಂತರವಾಗಿ ನಡೆಯಬೇಕಾದರೆ ನಮಗೊಂದು ಸ್ಥಿರವಾದ ಅಧ್ಯಯನ ಕಾರ್ಯಕ್ರಮವಿದ್ದು ನಾವು ಎಲ್ಲಾ ಸಭಾಕೂಟಗಳಲ್ಲಿ ಕ್ರಮವಾಗಿ ಉಪಸ್ಥಿತರಾಗಿರತಕ್ಕದ್ದು.
ಶುದ್ಧ ಭಾಷೆಯನ್ನು ಕಲಿಯುವುದು
ಮಂಗಳವಾರ ಮಧ್ಯಾಹ್ನದ ಭಾಷಣವೂಂದು ಒತ್ತಿಹೇಳಿದಂತೆ ಶುದ್ಧಭಾಷೆಯನ್ನು ಕಲಿಯುವುದೆಂದರೆ “ಮೂಲ ವಿಷಯಗಳಿಂದ ಪಕ್ವತೆಗೆ ಪ್ರಗತಿ ಹೊಂದುವುದು” ಎಂದರ್ಥ. ನಾವು ಆತ್ಮಿಕವಾಗಿ ವಿಕಸಿಸುತ್ತಿರಬೇಕಾದರೆ ಬೆಳವಣಿಗೆ ಅಗತ್ಯ. ಅಂದರೆ ಆತ್ಮಿಕ ಪ್ರಗತಿಗಿರುವ ಸಕಲ ಏರ್ಪಾಡುಗಳ ಪ್ರಯೋಜನ ಪಡೆದು ಬೈಬಲ್ ಸೂತ್ರಗಳನ್ನು ಪ್ರತಿದಿನವೂ ಅನ್ವಯಿಸಿಕೊಳ್ಳುವುದೆಂದರ್ಥ.
ಶುದ್ಧಭಾಷೆಯನ್ನಾಡುವುದರಲ್ಲಿ ನುರಿತವರಾಗಬೇಕಾದರೆ ನಾವು “ಯೆಹೋವನಿಂದ ಕಲಿಸಲ್ಪಟ್ಟವರು” ಆಗಿರಬೇಕು. ಇದು ಗುರುವಾರ ಪ್ರಾತಃಕಾಲದ ಭಾಷಣಮಾಲೆಯ ಮೇಲಿಷ್ವಯವಾಗಿತ್ತು. ಮೊದಲನೆಯ ಭಾಷಣಕಾರರು, ಇದನ್ನು ಹೇಗೆ ‘ಯೇಸುಕ್ರಿಸ್ತನು ಮಾದರೀಕರಿಸಿದನು’ ಎಂದು ತೋರಿಸಿದರು. ಯೆಹೋವನು ಯೇಸುವಿಗೆ ಕಲಿಸಿದ್ದನೆಂಬುದು ಯೇಸುವಿನ ಮಾತು ಮತ್ತು ವರ್ತನೆಗಳಿಂದ ವ್ಯಕ್ತವಾಗಿತ್ತು. ಆದುದರಿಂದ ನಾವು ಅವನು ಕಲಿಸಿದ ವಿಧವನ್ನು ಅನುಕರಿಸಬೇಕು. ಮತ್ತು ಯೇಸು ಸದಾ ತನ್ನ ತಂದೆಯ ಇಷ್ಟಕ್ಕೆ ಅಧೀನನಾದಂತೆ ನಾವೂ ಆಗತಕ್ಕದ್ದು.
ಯೆಹೋವನು ಕೂಟ ಮತ್ತು ಸಮ್ಮೇಳನಗಳ ಮೂಲಕ ಹೇಗೆ ಕಲಿಸುತ್ತಾನೆಂಬುದನ್ನು ಮುಂದಿನ ಮೂವರು ಭಾಷಣಕಾರರು ತೋರಿಸಿದರು. ನಾವು ಐದು ಸಭಾಕೂಟಗಳಿಂದಲೂ ಪ್ರಯೋಜನ ಪಡೆಯುವುದರಿಂದ ಅವುಗಳಲ್ಲಿ ಯಾವುದನ್ನೂ ಅಸಡ್ಡೆ ಮಾಡಬಾರದು. ಪ್ರತಿಯೊಂದು ಕೂಟವೂ ನಮ್ಮ ಆತ್ಮಿಕ ಬೆಳವಣಿಗೆಗೆ ಅಗತ್ಯ. ಯೆಹೋವನು ನಮಗೆ ಸರ್ಕಿಟ್, ಜಿಲ್ಲಾ ಸಮ್ಮೇಳನ ಮತ್ತು ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮಗಳ ಮೂಲಕವೂ ಕಲಿಸುತ್ತಾನೆ. ಇವೆಲ್ಲವುಗಳಿಂದ ಪ್ರಯೋಜನ ಪಡೆಯಲು ನಾವು ಗಮನಕೊಟ್ಟು ಕೇಳಿ ಬಳಿಕ ಕಲಿತದ್ದನ್ನು ಕಾರ್ಯರೂಪಕ್ಕೆ ಹಾಕಬೇಕು.
ಈ ಭಾಷಣಮಾಲೆಯನ್ನು ಅನುಸರಿಸಿ “ವೈಯಕ್ತಿಕ ಅಧ್ಯಯನಕ್ಕಾಗಿ ತ್ಯಾಗ ಮಾಡುವುದು” ಎಂಬ ಭಾಷಣ ಬಂತು. ಇದಕ್ಕೆ ಸಮಯ ಕಂಡುಹಿಡಿಯಲು ನಾವು ಎಫೆಸ 5.15, 16ರ ಸಲಹೆಗೆ ಕಿವಿಗೊಟ್ಟು ಕಡಿಮೆ ಪ್ರಾಮುಖ್ಯವಾದ ವಿಷಯಗಳಿಂದ ಸಮಯವನ್ನು ಬೆಲೆಗೆ ಕೊಳ್ಳಬೇಕು.
ನಾವು ಶುದ್ಧ ಭಾಷೆಯನ್ನು ಕಲಿಯುವುದರ ಒಂದು ನ್ಯಾಯಸಮ್ಮತ ಗುರಿಯು ಸಮರ್ಪಣೆ ಮತ್ತು ದೀಕ್ಷಾಸ್ನಾನವಾಗಿದೆ. ಈ ಸತ್ಯವು “ಶುದ್ಧಭಾಷೆಯನ್ನು ಕಲಿಯುವವರ ದೀಕ್ಷಾಸ್ನಾನ” ಎಂಬ ಭಾಷಣದಲ್ಲಿ ಎತ್ತಿ ತೋರಿಸಲ್ಪಟ್ಟಿತು. ಈ ಭಾಷೆ ಈಗ ಅನೇಕರನ್ನು ಸಮರ್ಪಣೆ ಮತ್ತು ದೀಕ್ಷಾಸ್ನಾನದತ್ತ ನಡೆಸುತ್ತಿದೆ. ಆದರೆ ಆ ಬಳಿಕ ಇವರು ಯೇಸುವಿನ ಮಾದರಿಯನ್ನನುಸರಿಸುತ್ತಾ ಸುವಾರ್ತೆಯನ್ನು ಆಸಕ್ತಿಯಿಂದ ಸಾರಿ, ನೂತನ ವ್ಯಕ್ತಿತ್ವವನ್ನು ಧರಿಸಿ, ಲೋಕದಿಂದ ಪ್ರತ್ಯೇಕವಾಗಿರುತ್ತಾ ಮುಂದುವರಿಯಬೇಕು.
ಗಟ್ಟಿಯಾದ ಆತ್ಮಿಕ ಆಹಾರ
ಪ್ರವಾದನಾ ನಾಟಕಗಳ ನೆರವೇರಿಕೆಗಳ ಮೇಲೆ ಆಧಾರಿತವಾದ ಗಟ್ಟಿಯಾದ ಆತ್ಮಿಕ ಆಹಾರವನ್ನು ಪಡೆಯಲು ಸಹ ಸಮ್ಮೇಳನಗಾರರು ಸಂತೋಷಿಸಿದರು. ಗುರುವಾರ ಅಪರಾಹ್ನ ಕೊಡಲ್ಪಟ್ಟ ಎರಡು ಭಾಷಣಗಳು ಯೆಹೆಜ್ಕೇಲನ ಪುವಾದನಾ ವಿಷಯವಸ್ತುಗಳ ಮೇಲೆ ಆಧಾರಿತವಾಗಿದ್ದವು. ಇದರಲ್ಲಿ ಮೊದಲನೆಯ, “ಯೆಹೋವನ ಸ್ವರ್ಗೀಯ ರಥ ಚಲಿಸುತ್ತದೆ” ಎಂಬ ಭಾಷಣ, ಮಿಂಚಿನ ವೇಗದಲ್ಲಿ ಚಲಿಸುತ್ತಿರುವ ಬೃಹದಾಕಾರದ, ಮಹಿಮಾಭರಿತ, ಭಯೋತ್ಪಾದಕ ದಿವ್ಯ ವಾಹನವನ್ನು ವರ್ಣಿಸಿತು. ಇದು ದೇವರ ಸ್ವರ್ಗೀಯ ಸಂಘಟನೆಯನ್ನು ಚಿತ್ರಿಸುತ್ತದೆ. ದೇವರು ಇದನ್ನು, ಅದರ ಪ್ರತಿಯೊಂದು ಚಲನೆಯನ್ನು ಪ್ರೀತಿಯಿಂದ ಮೇಲ್ವಿಚಾರಣೆ ಮಾಡುತ್ತಾ ಅದು ತನ್ನ ಉದ್ದೇಶಗಳನ್ನು ನೆರವೇರಿಸುವಂತೆ ಉಪಯೋಗಿಸುತ್ತಾನೆಂಬ ಅರ್ಥದಲ್ಲಿ ಸವಾರಿ ಮಾಡುತ್ತಾನೆ. ಯೆಹೆಜ್ಕೇಲನು, ವಿಶೇಷವಾಗಿ 1919ರಿಂದ, ಆತ್ಮಾಭಿಷಿಕ್ತ ಉಳಿಕೆಯವರನ್ನು ಚಿತ್ರಿಸುತ್ತಾನೆ. ಮತ್ತು, ವಿಶೇಷವಾಗಿ 1935ರಿಂದ ಇವರೊಂದಿಗೆ “ಮಹಾ ಸಮೂಹ”ದವರು ಕೂಡಿಕೊಂಡಿದ್ದಾರೆ.—ಪ್ರಕಟನೆ 7:9.
ಮುಂದಿನ ಭಾಷಣದ ತಲೆಪಂಕ್ತಿ, “ದೃಶ್ಯ ಸಂಘಟನೆಯೊಂದಿಗೆ ಹೆಜ್ಜೆ ಹಾಕಿರಿ” ಎಂದಾಗಿತ್ತು. ದೇವರ ದೃಶ್ಯ ಸಂಸ್ಥೆ ಆತನ ಸ್ವರ್ಗೀಯ ರಥಸದೃಶ ಸಂಘಟನೆಯೊಂದಿಗೆ ಚಲಿಸುತ್ತಿದೆ ಎಂಬುದು ನಿಸ್ಸಂಶಯ. ಯೆಹೆಜ್ಕೇಲನು ಮಾಡಿದಂತೆ, ಇಂದು ಯೆಹೋವನ ಸೇವಕರು ತಮ್ಮ ಪ್ರವಾದನಾ ನೇಮಕವನ್ನು ಔದಾಸೀನ್ಯ, ಕುಚೋದ್ಯ ಯಾ ವಿರೋಧ ಸಹ ಬಂದರೂ ವಿಧೇಯತೆಯಿಂದ ನೆರವೇರಿಸಬೇಕು. ಇಂಥ ಜೊತೆಹೆಜ್ಜೆಯು ಈಗ ಅನೇಕಾಶೀರ್ವಾಗಳಿಗೂ ದೇವರ ಶೀಘ್ರ ಸಮೀಪಿಸುತ್ತಿರುವ ನೂತನ ಜಗತ್ತಿನಲ್ಲಿ ಅನಂತ ಜೀವನಕ್ಕೂ ನಡೆಸುತ್ತದೆ.
ಶುಕ್ರವಾರ ಪ್ರಾತಃಕಾಲ, ಯೆಶಾಯ 28ನೇ ಅಧ್ಯಾಯದ ಮೇಲೆ ಆಧಾರಿತವಾದ ಮೂರು ಭಾಷಣಗಳಿಂದಲೂ ಗಟ್ಟಿಯಾದ ಆತ್ಮಿಕ ಆಹಾರ ಒದಗಿಸಲ್ಪಟ್ಟಿತು. ಇವುಗಳಲ್ಲಿ ಮೊದಲನೆಯದು ಶಕಿವ್ತತ್ತಾಗಿ ಪುರಾತನ ಕಾಲದ ಇಸ್ರಾಯೇಲ್ಯ ಹಾಗೂ ಯೆಹೂದ ಆತ್ಮಿಕ ಕುಡುಕರು ಕ್ರೈಸ್ತಪ್ರಪಂಚದ ಆತ್ಮಿಕ ಕುಡುಕರನ್ನು ಚಿತ್ರಿಸುತ್ತದೆಂದು ತೋರಿಸಿತು. ಮತ್ತು ಪ್ರಥಮ ಕುಡುಕರು ಯೆಹೋವನ ಪ್ರತಿಕೂಲ ತೀರ್ಪನ್ನು ಅನುಭವಿಸಿದಂತೆಯೇ ಕ್ರೈಸ್ತ ಪ್ರಪಂಚವೂ ಅನುಭವಿಸುವುದು.
ಮುಂದಿನ “ಅವರ ಆಶ್ರಯ ಸ್ಥಾನ—ಸುಳ್ಳು! ಎಂಬ ಶೀರ್ಷಿಕೆಯ ಭಾಷಣದಲ್ಲಿ ಕಠಿಣ ಎಚ್ಚರಿಕೆ ಅಡಗಿತ್ತು: ಪೂರ್ವಕಾಲದ ಯೆಹೂದವು ಐಗುಪ್ತದಲ್ಲಿಟ್ಟ ಭರವಸೆ ಹೇಗೆ ಆಶ್ರಯಹೀನವಾಯಿತೊ ಅದೇ ರೀತಿ ನಮ್ಮ ದಿನಗಳ ರಾಜಕೀಯ ಶಕಿಗ್ತಳೊಂದಿಗೆ ಕ್ರೈಸ್ತ ಪ್ರಪಂಚದ ಮೈತ್ರಿಯೂ ಆಗುವುದು. ಯೆಶಾಯ 28ರ ಮೂರನೆಯ ಭಾಷಣವಾದ, “ಯೆಹೋವನ ಅಪೂರ್ವ ಕೆಲಸದ ಕುರಿತು ಎಚ್ಚರಿಸುತ್ತಾ ಹೋಗಿರಿ” ಎಂಬುದು ದೇವಜನರನ್ನು ಸಂಬೋಧಿಸಿ ಮಾತಾಡಿತು. ಯೆಹೋವನು ಕ್ರೈಸ್ತ ಪ್ರಪಂಚಕ್ಕೆ ಮಾಡುವ ವಿಷಯವನ್ನು ಅಪೂರ್ವವೆನ್ನುವುದು ಯೋಗ್ಯ, ಏಕೆಂದರೆ ಅದು ಪೂರ್ತಿ ಬೆರಗುಗೊಳಿಸುವ ರೀತಿಯಲ್ಲಿ ಬರುವುದು. ಇಂದು, ಯೆಹೋವನು ತನ್ನ ಚಿಕ್ಕ ಗುಂಪಾದ ಅಭಿಷಿಕ್ತ ಕ್ರೈಸ್ತರಿಗೆ ಮತ್ತು ನಾಲ್ವತ್ತು ಲಕ್ಷಕ್ಕೂ ಹೆಚ್ಚಿರುವ “ಬೇರೆ ಕುರಿ”ಗಳಿಗೆ ಮಹಿಮೆಯ ಕಿರೀಟವಾಗಿದ್ದಾನೆ.(ಯೋಹಾನ 10:16) ಭಾಷಣಗಾರನು ಈ ಹುರಿದುಂಬಿಸುವ ಮಾತುಗಳಿಂದ ಮುಕ್ತಾಯಗೊಳಿಸಿದನು:“ನಮ್ಮ ಆಸಕ್ತಿ, ದೃಢತೆ ಮತ್ತು ನಿಷ್ಠೆ ನಮ್ಮ ದೇವರಾದ ಯೆಹೋವನ ನಿತ್ಯಸ್ತುತಿಗೆ ಸಹಾಯ ನೀಡುವಂತಾಗಲಿ!”
ಶುದ್ಧಭಾಷೆಯನ್ನಾಡುವುದೆಂದರೆ ಸಹೋದರ ಪ್ರೀತಿಯನ್ನು ತೋರಿಸುವುದು ಎಂದರ್ಥ
ಬುಧವಾರ ಅಪರಾಹ್ನ ಸಮ್ಮೇಳನಗಾರರ ಮನಸ್ಸಿಗೆ, ಶುದ್ಧಭಾಷೆಯನ್ನಾಡುವುದರಲ್ಲಿ “ಅನಾಥರನ್ನೂ ವಿಧವೆಯರನ್ನೂ ಅವರ ಸಂಕಟಗಳಲ್ಲಿ ಪರಿಗಣನೆ ಮಾಡುವುದು” ಸಹ ಸೇರಿದೆ ಎಂಬುದು ನಾಟಿಸಲ್ಪಟ್ಟಿತು. ವೈಯಕ್ತಿಕ ತರಬೇತನ್ನು ಕೊಟ್ಟು ತಂದೆಗಳಿಲ್ಲದ ಹುಡುಗರಿಗೆ ಸಹಾಯ ನೀಡಸಾಧ್ಯವಿದೆ. ವಿಧವೆಯರಿಗೆ ಪ್ರೋತ್ಸಾಹದ ದಯಾನುಡಿಗಳಿಂದ, ಕ್ರೈಸ್ತ ಚಟುವಟಿಕೆ ಮತ್ತು ಸಮಾಜ ಗೋಷ್ಠಿಗಳಲ್ಲಿ ಸೇರಿಸಿಕೊಂಡು ಮತ್ತು ಅರ್ಹರಾಗಿರುವಲ್ಲಿ ಮತ್ತು ನಿಜವಾಗಿಯೂ ಅವಶ್ಯವಿರುವಲ್ಲಿ ಲೌಕಿಕ ಸಹಾಯವನ್ನು ಕೊಟ್ಟು ಅವರ ಕಡೆಗೆ ವಿಚಾರಪರತೆ ತೋರಿಸಬಹುದು. ಇವನ್ನು ಹೇಗೆ ಮಾಡಲಾಗುತ್ತದೆಂದು ಸಂದರ್ಶನ ಮಾತುಕತೆಗಳು ತೋರಿಸಿದವು.
ಗುರುವಾರ ಅಪರಾಹ್ನ, ಇನ್ನೊಂದು ಹೃದಯ ಹುರಿದುಂಬಿಸುವ ಭಾಷಣವು “ಕ್ರೈಸ್ತರು ಒಬ್ಬರನ್ನೊಬ್ಬರು ಪರಾಮರಿಸುವ ವಿಧ”ವನ್ನು ತೋರಿಸಿತು. ಯೆಹೋವನ ಸಾಕ್ಷಿಗಳಲ್ಲಿ ಪರಸ್ಪರ ಪರಾಮರಿಕೆಯ ಉತ್ತಮ ದಾಖಲೆ ಇದೆ. ವಿಶೇಷವಾಗಿ ಚಂಡಮಾರುತ, ಭೂಕಂಪದಂಥ ವಿಪತ್ತುಗಳು ಸಂಭವಿಸುವಾಗ, ಅಧಿಕಾರಿಗಳಿಗೆ ಬರೆಯುವ ಆವಶ್ಯಕತೆ ಬರುವಾಗ ಯಾ ಸ್ಥಳೀಕ ಆವಶ್ಯಕತೆಗಳೇಳುವಾಗ ಇಂಥ ಚಿಂತೆ ಕಂಡುಬರುತ್ತದೆ. ಆದರೆ ಮಾನವ ಅಪೂರ್ಣತೆಯ ಕಾರಣ ತೊಂದರೆಗಳೇಳುವಲ್ಲಿ ನಾವು ಮತ್ತಾಯ 5:23,24ರ ಮತ್ತು 18:15-17ರಲ್ಲಿರುವ ಯೇಸುವಿನ ಸಲಹೆಯಲ್ಲಿ ಸೇರಿರುವ ಮೂಲಸೂತ್ರಗಳನ್ನು ಪ್ರಯೋಗಿಸಬೇಕು. ವಿಶೇಷವಾಗಿ ಸಹೋದರರ ಮಧ್ಯೆ ವ್ಯವಹಾರದ ಏರ್ಪಾಡುಗಳಿರುವಾಗ ಯಜಮಾನನಾಗಲಿ ಕಾರ್ಮಿಕನಾಗಲಿ ಆತ್ಮಿಕ ಸಂಬಂಧದಿಂದ ಸ್ವಾರ್ಥಲಾಭ ಪಡೆಯದಂತೆ ಪರಸ್ಪರ ಸನ್ಮಾನ ಹಾಗೂ ಜಾಗರೂಕತೆಯ ಅವಶ್ಯವಿದೆ.
ಶುದ್ಧಭಾಷೆಯನ್ನಾಡುವುದೆಂದರೆ ನಮ್ಮ ನಡತೆಯನ್ನು ಗಮನಿಸುವುದು ಎಂದರ್ಥ
ನಮ್ಮ ನಡತೆಯನ್ನು ಗಮನಿಸುವ ಕುರಿತು ಪದೇ ಪದೇ ಒತ್ತಿ ಹೇಳಲಾಯಿತು. ಮಂಗಳವಾರ ಮಧ್ಯಾಹ್ನದ ಮೇಲಿನ ಪ್ರಥಮ ಭಾಷಣಕರ್ತರು “ದೇವರ ವಾಕ್ಯವನ್ನು ಕೇಳುವುದು ಮತ್ತು ಪಾಲಿಸುವುದು” ಎಂಬ ವಿಷಯದ ಮೇಲೆ ಮಾತಾಡಿದರು. ನಾವು ಸಮ್ಮೇಳನಕ್ಕೆ ಬರಲು ಎರಡು ಮುಖ್ಯ ಕಾರಣಗಳಿವೆ ಎಂದು ಅವರು ತೋರಿಸಿದರು: ಸೂಕ್ಷ್ಮ ಪರಿಜ್ಞಾನ ಪಡೆಯುವುದು ಮತ್ತು ಆ ಜ್ಞಾನದಂತೆ ವರ್ತಿಸಲು ಪ್ರೇರಿಸಲ್ಪಡುವುದು.
ಬುಧವಾರದ ಪ್ರಥಮ ಭಾಷಣವು “ಕ್ರಿಸ್ತನು ಅಧರ್ಮವನ್ನು ದ್ವೇಷಿಸಿದನು—ನೀವೋ?” ಎಂಬ ಶೋಧಿಸುವ ಪ್ರಶ್ನೆಯನ್ನು ಕೇಳಿತು. ನೀತಿಯನ್ನು ಪ್ರೀತಿಸಿದರೆ ಮಾತ್ರ ಸಾಲದು. ನಮಗೆ ಒಳ್ಳೆಯ ಮನಸ್ಸಾಕ್ಷಿ ಇರುವಂತೆ, ಯೆಹೋವನೊಂದಿಗೆ ಸುಸಂಬಂಧವನ್ನು ಕಾಪಾಡುವಂತೆ, ಆತನ ನಾಮಕ್ಕೆ ಕಳಂಕ ತರದಂತೆ ಮತ್ತು ಅಧರ್ಮದ ಫಲವಾದ ನೀತಿಭ್ರಷ್ಟತೆ ಮತ್ತು ಮರಣವನ್ನು ಕೊಯ್ಯದಂತೆ ಅಧರ್ಮವನ್ನು ದ್ವೇಷಿಸತಕ್ಕದ್ದು.
ಈ ವಿಷಯಕ್ಕೆ ಒತ್ತಾಗಿ ಸಂಬಂಧಿಸಿದ್ದ ಮುಂದಿನ ಭಾಷಣವು “ಲೌಕಿಕ ವಿಚಿತ್ರ ಕಲ್ಪನೆಗಳನ್ನು ನಿರಾಕರಿಸಿರಿ, ರಾಜ್ಯ ನಿಜತ್ವಗಳನ್ನು ಬೆನ್ನಟ್ಟಿರಿ” ಎಂದಾಗಿತ್ತು. ಸೈತಾನ, ಹವ್ವ ಮತ್ತು ಪದಚ್ಯುತರಾದ ದೂತರು- ಇವರೆಲ್ಲರೂ ವಿಚಿತ್ರ ಕಲ್ಪನೆಗಳನ್ನು ಬೆನ್ನಟ್ಟಿ ಹಾಳಾದರು. ಪ್ರಾಪಂಚಿಕ ಸ್ವಪ್ನ ಅಥವಾ ನಿಷಿದ್ಧ ಪ್ರಣಯ ಸಂಬಂಧಗಳು ಸೇರಿರುವ ಲೌಕಿಕ ವಿಚಿತ್ರಕಲ್ಪನೆಗಳು ಭ್ರಮನಿರಸನದಲ್ಲಿ ಯಾ ಮಹತ್ತರವಾದ ಪಾಪಗಳಲ್ಲಿಯೂ ಅಂತ್ಯಗೊಳ್ಳುತ್ತವೆ. ಈ ಭ್ರಮೆಗೆ ಪ್ರತಿಕೂಲವಾಗಿ ವರ್ತಿಸಲು ನಾವು ಅಧ್ಯಯನ, ಪ್ರಾರ್ಥನೆ, ಕೂಟಗಳ ಹಾಜರಿ ಮತ್ತು ಬಹಿರಂಗ ಸೇವೆಗಳ ಮೂಲಕ ರಾಜ್ಯ ನಿಜತ್ವಗಳನ್ನು ಬೆನ್ನಟ್ಟಬೇಕು.
ಸಮರ್ಪಕವಾದ ಕ್ರಿಸ್ತೀಯ ಜೀವನ ನಡೆಸಲು, ಬುಧವಾರ ಅಪರಾಹ್ನ ಕೊಟ್ಟ “ಕ್ರೈಸ್ತರೇ—ನಿಮ್ಮ ಆರ್ಥಿಕ ಆದಾಯವನ್ನು ಅನುಸರಿಸಿ ಜೀವಿಸಿರಿ” ಎಂಬ ಭಾಷಣದ ಸಲಹೆಗೂ ನಾವು ಕಿವಿಗೊಡಬೇಕು. ಇದಕ್ಕೆ ತಪ್ಪುವಲ್ಲಿ ಶಾರೀರಿಕವಾಗಿಯೂ ಆತ್ಮಿಕವಾಗಿಯೂ ಹಾನಿ ಬಂದೊದಗುವುದು ನಿಶ್ಚಯ. ಅನಾವಶ್ಯಕವಾದ ಸಾಲಕ್ಕೆ ಹೋಗದೆ, ವಾಸ್ತವವಾದ ಬಜೆಟನ್ನು ಮಾಡಿ ಅದಕ್ಕೆ ಅಂಟಿಕೊಂಡು ನಮ್ಮ ಸ್ವಾರ್ಥದ ಬಯಕೆಗಳನ್ನು ತಡೆಹಿಡಿಯುವುದೇ ವಿವೇಕದ ಮಾರ್ಗ. ನಾವು ಸದಾ ದಿವ್ಯ ಭಕ್ತಿಯನ್ನು ಬೆಳೆಸುವುದು ಅಗತ್ಯ. ಇದು, ಸಸ್ವಂತೃಪ್ತಿಯೊಂದಿಗೆ ಮಹಾ ಲಾಭವನ್ನು ಪಡೆಯುವ ಸಾಧನವಾಗಿದೆ.—1 ತಿಮೊಥಿ 6:6-8.
ಮಂಗಳವಾರದ “ನಿಮ್ಮ ಮಿತ್ರರು ಯೆಹೋವನ ಮಿತ್ರರೋ?” ಎಂಬ ಭಾಷಣ ನಮ್ಮ ಒಡನಾಟವನ್ನು ಗಮನಿಸುವ ಪ್ರಾಮುಖ್ಯತೆಯನ್ನು ಎತ್ತಿಹೇಳಿತು. ನಮ್ಮ ಮಿತ್ರರು ಕ್ರಿಸ್ತಸದೃಶ ವ್ಯಕ್ತಿತ್ವ ಧರಿಸಿರುವ ಮತ್ತು ಸಾರುವ ಕೆಲಸದಲ್ಲಿ ಆಸಕ್ತಿಯಿರುವ ಕ್ರೈಸ್ತರಾಗಿರಬೇಕು. ಲೌಕಿಕ ಮಿತ್ರರು ದೇವಮಿತ್ರರಲ್ಲ, ಮತ್ತು ಅವರೊಂದಿಗೆ ಒಡನಾಟ ಮಾಡುವುದರಿಂದ ನಮಗೆ ಹಾನಿ ತಪ್ಪದು. ಸಭೆಯೊಳಗೆ ಸಹ, ನಮ್ಮ ಒಡನಾಟ ಭಕ್ತಿವೃದ್ಧಿಯದ್ದಾಗಬೇಕಾದರೆ ನಮಗೆ ಆಯ್ಕೆಯ ಒಡನಾಟ ಅಗತ್ಯ.
ನಡತೆಯ ಕುರಿತ ಈ ಸಲಹೆ ಆಧುನಿಕ ದಿನದ “ಪಿಶಾಚನ ತಂತ್ರೋಪಾಯಗಳನ್ನು ನಿಭಾಯಿಸುವುದು” ಎಂಬ ನಾಟಕದಲ್ಲಿ ಸುಚಿತ್ರಿತವಾಯಿತು.
ಕುಟುಂಬಗಳಿಗೆ ಶುದ್ಧಭಾಷೆಯ ಬುದ್ಧಿವಾದ
“ಹೆತ್ತವರೇ—ನಿಮ್ಮ ಬದ್ಧತೆಯನ್ನು ಪೂರೈಸಿರಿ!” ಎಂಬ ಬುಧವಾರದ ಭಾಷಣ ಅತ್ಯಾವಶ್ಯಕವಾಗಿತ್ತು. ಹೆತ್ತವರು ದೇವರ ಚಿತ್ತವನ್ನು ಅರಿತವರಾಗಿದ್ದು ತಾವೇ ಅದನ್ನು ತಮಗೆ ಸಾಮರ್ಥ್ಯವಿರುವಷ್ಟು ಒಳ್ಳೆಯದಾಗಿ ಮಾಡತಕ್ಕದ್ದು. ಅವರು ತಮ್ಮ ಮಕ್ಕಳಿಗೂ ದೇವರ ವಾಕ್ಯವನ್ನು ಬೋಧಿಸಬೇಕು. ಇದಲ್ಲದೆ, ಮಕ್ಕಳನ್ನು ಕ್ರೈಸ್ತ ಕೂಟಗಳಿಗೂ ಕ್ಷೇತ್ರಸೇವೆಗೂ ಕರೆದುಕೊಂಡು ಹೋಗುವುದಷ್ಟೆ ಸಾಲದು. ಯೆಹೋವನನ್ನು ಪ್ರೀತಿಸಲು ಮತ್ತು ದೇವಭಕ್ತಿಯ ವಿಷಯಗಳನ್ನು ಮಾಡುವುದರಲ್ಲಿರುವ ಪ್ರಾಯೋಗಿಕ ವಿವೇಕವನ್ನು ನೋಡುವಂತೆ ಅವರಿಗೆ ಕಲಿಸಬೇಕು.
ಆ ಬಳಿಕ “ನಮ್ಮ ದಿನಗಳಲ್ಲಿ ಕುಟುಂಬ” ಎಂಬ ಭಾಷಣಮಾಲೆ ನಡೆಯಿತು. ಕುಟುಂಬದ ಮೂಲ ದೇವರಲ್ಲಾಯಿತು ಎಂದು ಪ್ರಥಮ ಭಾಷಣಗಾರರು ತೋರಿಸಿದರು. ತಂದೆಗಳು ಆತ್ಮಿಕ ವಿಷಯಗಳ ಕುರಿತು ಉತ್ತಮ ಮಾತುಸಂಪರ್ಕ ಬೆಳೆಸಬೇಕು. ತಾಯಂದಿರು ಉತ್ತಮ ಕುಟುಂಬ ಕಟ್ಟುವವರು ಆಗಿರಬೇಕು ಮತ್ತು ಮಕ್ಕಳು ಹೆತ್ತವರಿಗೆ ಸಹಕಾರ ನೀಡುತ್ತಾ ಯೆಹೋವನಿಗೆ ಸನ್ಮಾನ ಕೊಡತಕ್ಕದ್ದು.
ಬಳಿಕ ಮಾತಾಡಿದ ಭಾಷಣಗಾರರು “ಕುಟುಂಬಗಳು ವಿರೋಧಿಗಳಿಂದ ಆಕ್ರಮಣಕ್ಕೊಳಗಾಗಿವೆ” ಎಂದು ತೋರಿಸಿದರು. ಆರ್ಥಿಕ ಒತ್ತಡಗಳು ಪ್ರತಿಕೂಲ ಪರಿಣಾಮವನ್ನುಂಟುಮಾಡಿವೆ. ಉದ್ಯೋಗ ಸ್ಥಳಗಳಲ್ಲಿ ಪಾಪ ಮಾಡಲು ಇರುವ ಶೋಧನೆಗಳು ಹೇರಳ. ವಾರ್ತಾವಾಹಕ ಸಾಧನಗಳು ಹಿಂಸಾತ್ಮಕ ಕೃತ್ಯ, ನಿಷಿದ್ಧ ಸಂಭೋಗ ಮತ್ತು ಪ್ರಾಪಂಚಿಕ ಆಕರ್ಷಣೆಗಳನ್ನು ಸೂಸುತ್ತವೆ. ಆದುದರಿಂದ ಶಿಕ್ಷಣ ಮೊದಲಲ್ಲೇ ಆರಂಭವಾಗಬೇಕು, ಮತ್ತು ಲೌಕಿಕ ಪ್ರಭಾವವನ್ನು ಜಯಿಸಲು ಮಹಾ ಶ್ರಮಶೀಲತೆ ಅವಶ್ಯ. ವಾಚ್ಟವರ್ ಸೊಸೈಟಿಯಿಂದ ಬರುವ ದೇವಪ್ರಭುತ್ವ ಉಪಕರಣಗಳನ್ನು ಸದುಪಯೋಗಿಸತಕ್ಕದ್ದು.
“ನೂತನ ಜಗತ್ತಿನೊಳಗೆ” ಕುಟುಂಬದ “ರಕ್ಷೆ” ಎಂಬ ಮುಂದಿನ ಭಾಷಣ ಇನ್ನೂ ಹೆಚ್ಚು ಗಂಭೀರವಾಗಿ ಹೆತ್ತವರ ಜವಾಬ್ದಾರಿಯನ್ನು ತಿಳಿಸಿತು. ಅತ್ಯಂತ ಮಹಾ ಶ್ರದ್ಧೆಯಿಂದ ಮಕ್ಕಳ ತರಬೇತು ನಡೆಯಬೇಕು. ಮಕ್ಕಳ ಹೃದಯ ಮುಟ್ಟುವ ಉದ್ದೇಶದಿಂದ ಕುಟುಂಬ ಬೈಬಲ್ ಅಧ್ಯಯನ ಮತ್ತು ಯಾವುದನ್ನು ಅಭ್ಯಾಸ ಮಾಡಬೇಕು ಎಂಬ ವಿಷಯದಲ್ಲಿ ಉತ್ತಮ ಸಲಹೆ ನೀಡಲ್ಪಟ್ಟಿತು. ಹೀಗಾಗುವಲ್ಲಿ ಮಾತ್ರ ಹೆತ್ತವರೂ ಮಕ್ಕಳೂ ನೂತನ ಲೋಕದಲ್ಲಿ ರಕ್ಷೆ ಹೊಂದುವ ನಿರೀಕ್ಷೆಯುಳ್ಳವರಾಗಬಹುದು.
ಈಗ ಅನೇಕ ಸಾಕ್ಷಿಗಳಿರುವ ಕುಟುಂಬ ಸನ್ನಿವೇಶಕ್ಕೆ ಉತ್ತಮ ಸಲಹೆಯನ್ನು “ವಿಭಾಗಿತ ಕುಟುಂಬದೊಳಗೆ ನಿಭಾಯಿಸಿ ನಿಲ್ಲುವುದು” ಎಂಬ ಭಾಷಣವು ಕೊಟ್ಟಿತು. ಇಂಥ ಸನ್ನಿವೇಶದಲ್ಲಿರುವವರು ಅವಿಶ್ವಾಸಿ ಒಂದು ದಿನ ವಿಶ್ವಾಸಿಯಾಗುವನೆಂಬ ನಿರೀಕ್ಷೆಯನ್ನು ಎಂದಿಗೂ ಬಿಟ್ಟು ಬಿಡಲೇಬಾರದು ಎಂದು ಅವರಿಗೆ ಬುದ್ಧಿ ಹೇಳಲಾಯಿತು. ಅವಿಶ್ವಾಸಿ ಜೊತೆಯೊಂದಿಗೆ ಸಮಯ ಕಳೆದು ಕ್ರೈಸ್ತ ಜೊತೆಯಾದ ನಿಮ್ಮಿಂದ ಅವಶ್ಯಪಡುವುದನ್ನೆಲ್ಲ ನೀವು ಮಾಡುತ್ತಿದ್ದೀರಿ ಎಂದು ನಿಶ್ಚಯ ಮಾಡಿಕೊಳ್ಳಿರಿ. ನೀವು ಹಿರಿಯರಿಂದ ಯಾ ಪ್ರಾಯಶಃ ವಿಭಾಗಿತ ಕುಟುಂಬಗಳಲ್ಲಿರುವ ಇತರರಿಂದ ಸಹಾಯ ಪಡೆಯಬಲ್ಲಿರಿ.
ಇತರರೊಂದಿಗೆ ಶುದ್ಧ ಭಾಷೆಯನ್ನಾಡುವುದು
ಅತ್ಯಂತ ಯೋಗ್ಯವಾಗಿ, ನಾವು ಇತರರಿಗೆ ಶುದ್ಧಭಾಷೆಯನ್ನು ಕಲಿಸಲು ಸಂದರ್ಭಗಳನ್ನು ಉಪಯೋಗಿಸುವುದಕ್ಕೆ ಹೆಚ್ಚು ಗಮನ ಕೊಡಲಾಗಿತ್ತು. ಬುಧವಾರ ಬೆಳಿಗ್ಗೆ ಸಮ್ಮೇಳನಗಾರರು “ನಿಮ್ಮ ಬೆಲೆಬಾಳುವ ಸಮಯವನ್ನು ವಿವೇಕದಿಂದ ಉಪಯೋಗಿಸಿರಿ” ಎಂಬ ಭಾಷಣವನ್ನು ಕೇಳಿದರು. ಇದನ್ನು ಮಾಡಬೇಕಾದರೆ, ಮತ್ತಾಯ 6:33ಕ್ಕೆ ಹೊಂದಿಕೆಯಾಗಿ ನಾವು ಆದ್ಯತೆಯನ್ನು ಸ್ಥಾಪಿಸತಕ್ಕದ್ದು. ಅಲ್ಲಿ ಹೇಳುವುದು:“ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ.” ಇದರಲ್ಲಿ ಸ್ವಂತ ಬೈಬಲ್ ಅಧ್ಯಯನ, ಎಲ್ಲ ಕೂಟಗಳಿಗೆ ಹಾಜರಿ ಮತ್ತು ಕ್ರಮದ ಕ್ಷೇತ್ರ ಸೇವೆ ಸೇರಿವೆ. ಅಂದರೆ ಸುಖದಾಯಕವಾದರೂ ಕಡಮೆ ಪ್ರಾಮುಖ್ಯವಿರುವ ಚಟುವಟಿಕೆಗಳಿಂದ ನಾವು ಸಮಯವನ್ನು ಕೊಳ್ಳಬೇಕೆಂದು ಇದು ಕೇಳಿಕೊಳ್ಳುತ್ತದೆ. ಅನೇಕ ಸಂದರ್ಶನ ಮಾತುಕತೆಗಳು ಕೆಲವರು ಇದನ್ನು ಹೇಗೆ ಮಾಡುತ್ತಿದ್ದಾರೆಂದು ತೋರಿಸಿದವು.
ನಾವು ಯೆಹೋವನ ಸಾಕ್ಷಿಗಳೆಂಬುದನ್ನು ಎಂದಿಗೂ ಮರೆಯಬಾರದು. ಗುರುವಾರ ಮಧ್ಯಾಹ್ನ “ಪ್ರತಿ ಸಂದರ್ಭದಲ್ಲಿಯೂ ಶುದ್ಧಭಾಷೆಯನ್ನು ಮಾತಾಡುತ್ತಾ ಹೋಗಿರಿ” ಎಂಬ ವಿಷಯದಲ್ಲಿ ಅನೇಕ ಅಭಿನಯಗಳು ಈ ವಿಷಯವನ್ನು ಹೃದಯದಲ್ಲಿ ಮೂಡಿಸಿದವು. ಬೀದಿ ಸಾಕ್ಷಿಸೇವೆ, ಅನೌಪಚಾರಿಕ ಸಾಕ್ಷಿ, ಟೆಲಿಫೋನಿನ ಉಪಯೋಗದ ಮೂಲಕ ಇದನ್ನು ಹೇಗೆ ಮಾಡಬಹುದೆಂದು ಈ ಅಭಿನಯಗಳು ತೋರಿಸಿದವು. ಯೆಹೋವ ದೇವರ ಮತ್ತು ನಮ್ಮ ನೆರೆಯವರ ಕಡೆಗೆ ನಿಸ್ವಾರ್ಥ ಪ್ರೀತಿಯು ನಾವು ಪ್ರತಿ ಸಂದರ್ಭದಲ್ಲಿಯೂ ಶುದ್ಧಭಾಷೆಯನ್ನಾಡುವಂತೆ ನಮ್ಮನ್ನು ಪ್ರೇರಿಸುವುದು.
ಈ ವಿಷಯಕ್ಕೆ ಒತ್ತಾಗಿ ಸಂಬಂಧಿಸಿದ ಮುಂದಿನ ಭಾಷಣವು, “ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳದವರಿಗಿರುವ ಆಶೀರ್ವಾದಗಳು.” ಕ್ರೈಸ್ತ ಪ್ರಪಂಚಕ್ಕೆ ತೀರಾ ಪ್ರತಿಕೂಲ ಸ್ಥಾನದಲ್ಲಿ ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಶಿಕ್ಷಣ ಸಂಘಟನೆ ನಿಂತಿದೆ. ನಾವು ವ್ಯಕ್ತಿಪರವಾಗಿ ಅಧಿಕಾರಿಗಳಿಂದ ಬರುವ ವಿರೋಧ, ವ್ಯಾಪಕವಾದ ಔದಾಸೀನ್ಯ ಮತ್ತು ಆರ್ಥಿಕ ಸಮಸ್ಯೆಗಳ ಒತ್ತಡಗಳನ್ನೆಲ್ಲ ತಡೆದು ನಿಲ್ಲತಕ್ಕದ್ದು. ರೀಸನಿಂಗ್ ಫ್ರಾಮ್ ದ ಸ್ಕ್ರಿಪ್ಚರ್ಸ್ ಪುಸ್ತಕದ ಮೇಲೆ ಆಧಾರಿತವಾದ ಅಭಿನಯಗಳು ಇಂಥ ಒತ್ತಡಗಳನ್ನು ಹೇಗೆ ಜಯಿಸಬಹುದೆಂದು ತೋರಿಸಿದವು.
ದೇವರ ಚಿತ್ತವನ್ನು ಆಸಕ್ತಿಯಿಂದ ಮಾಡುವುದು ಎಂಬ ಬೈಬಲ್ ನಾಟಕವೂ ಆಸಕ್ತಿಯಿಂದ ಸಾರುವುದನ್ನು ಪ್ರೋತ್ಸಾಹಿಸಿತು. ಯೇಹುವೆಂಬವನು ಯೆಹೋವನ ಹೆಸರಿನಲ್ಲಿ ಎಷ್ಟು ಆಸಕ್ತನಾಗಿದನ್ದೆಂದೂ ನಾವು ದೇವರ ಕೆಲಸಕ್ಕೆ ಅಂಥ ಧೈರ್ಯ ಮತ್ತು ಆಸಕ್ತಿಯನ್ನು ಪ್ರದರ್ಶಿಸುವುದು ಎಷ್ಟು ಪ್ರಾಮುಖ್ಯವೆಂದೂ ಅದು ತೋರಿಸಿತು.
ಸಮ್ಮೇಳನದಲ್ಲಿ ಬಿಡುಗಡೆಯಾದ ಸಾಹಿತ್ಯಗಳು
ಸಮ್ಮೇಳನದಲ್ಲಿ ಎರಡು ಮುಖ್ಯ ಪುಸ್ತಕಗಳು ಇಂಗ್ಲಿಷ್ ಮತ್ತು ಜರ್ಮನ್ ಭಾಷೆಗಳಲ್ಲಿ ಬಿಡುಗಡೆಯಾದವು. “ನಿಮ್ಮ ಜೀವವನ್ನು ರಕ್ತದ ಮೂಲಕ ರಕ್ಷಿಸುವುದು—ಹೇಗೆ?” ಎಂಬ ಭಾಷಣದ ಸಮಯದಲ್ಲಿ ಮೊದಲನೆಯ ಪುಸ್ತಕವು ಪರಿಚಯಿಸಲ್ಪಟ್ಟಿತು. ಭಾಷಣಗಾರರು ಮೊದಲು ರಕ್ತಪೂರಣಗಳಿಂದಾಗುವ ಹಾನಿಗಳ ಕುರಿತು ಹೇಳಿದರು. ರಕ್ತನಷ್ಟವನ್ನು ಭರ್ತಿಮಾಡಲು ಅನೇಕ ಅನ್ಯಮಾರ್ಗಗಳಿವೆ ಎಂದು ಅವರು ತೋರಿಸಿದರು. ಯೆಹೋವನ ಸಾಕ್ಷಿಗಳು ರಕ್ತವನ್ನು ವಿಸರ್ಜಿಸುವುದು ಅದು ಆರೋಗ್ಯಹೀನವಾಗಿರುವುದರಿಂದಲ್ಲ, ಬದಲಿಗೆ ಅದನ್ನು ಅಂಗೀಕರಿಸುವುದು ಅಪವಿತ್ರವಾಗಿರುವುದರಿಂದಲೇ. ಅವರು ಅದನ್ನು ವಿಸರ್ಜಿಸುವುದು ರಕ್ತವು ಮಲಿನವಾಗಿರಬಹುದಾದ ಕಾರಣದಿಂದಲ್ಲ, ಅದು ದೇವರಿಗೆ ಅಮೂಲ್ಯವಾಗಿರುವ ಕಾರಣದಿಂದಲೇ. ನಿಜವಾಗಿ ಜೀವರಕ್ಷಿಸುವ ರಕ್ತವು ಯೇಸು ಕ್ರಿಸ್ತನ ಪ್ರಾಯಶ್ಚಿತ್ತದ ರಕ್ತವೇ. ಸಮಾಪ್ತಿಯಲ್ಲಿ, ಭಾಷಣಕರ್ತರು 32 ಪುಟಗಳ “ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು?”ಎಂಬ ಬ್ರೋಷರ್ ತೋರಿಸಿ ಸಭಿಕರನ್ನು ಸಂತೋಷಿಸಿದರು.
“ಜನರೇ, ಯೆಹೋವನನ್ನು ಹುಡುಕಿರಿ” ಎಂಬ ಭಾಷಣದ ಸಮಯ ಮಹತ್ವದ ಎರಡನೆಯ ಪುಸ್ತಕ ಹೊರಬಂತು. ಸಾಮಾನ್ಯವಾಗಿ ಜನರು ದೇವರನ್ನು ಹುಡುಕುತ್ತಿಲ್ಲ. ಅನೇಕ ವಿಧದ ಧರ್ಮಗಳ ಅಸ್ತಿತ್ವವು, ಮನುಷ್ಯನು ದೇವರ ವಾಕ್ಯವನ್ನು ಅಸಡ್ಡೆ ಮಾಡಿರುವ ಕಾರಣ ದೇವರಿಗಾಗಿ ಹುಡುಕುವುದರಲ್ಲಿ ತೀರಾ ತಪ್ಪಿದ್ದಾನೆಂದು ತೋರಿಸುತ್ತದೆ. ಪ್ರತಿ ವರ್ಷದ ನಮ್ಮ ಸ್ಮಾರಕ ದಿನದ ವರದಿಯು ಯೆಹೋವನ ಪಕ್ಷದಲ್ಲಿ ನಿಲ್ಲಲು ಲಕ್ಷಗಟ್ಟಲೆ ಜನರಿಗೆ ಸಹಾಯದ ಅಗತ್ಯವಿದೆ ಎಂದು ತೋರಿಸುತ್ತದೆ. ಯೆಶಾಯ 55:6,7 ಯೆಹೋವನು ನಿಜವಾಗಿಯೂ ಪ್ರೀತಿಸುವ ಮತ್ತು ಕೃಪಾಪೂರ್ಣನಾದ ದೇವರೆಂದೂ “ಮಹಾಕೃಪೆಯಿಂದ ಕ್ಷಮಿಸು”ವಾತನೆಂದೂ ತೋರಿಸುತ್ತದೆ. ಆತನ ಸಾಕ್ಷಿಗಳಾದ ನಾವು, ಇತರರು ನಮ್ಮೊಂದಿಗೆ ಭುಜಕ್ಕೆ ಭುಜಕೊಟ್ಟು ಯೆಹೋವನನ್ನು ಸೇವಿಸುವ ಉದ್ದೇಶದಿಂದ ಅವರಿಗೆ ಸಹಾಯ ಮಾಡುವಂತೆ ಈ ಶುದ್ಧಭಾಷೆಯು ನಮಗೆ ಕೊಡಲ್ಪಟ್ಟಿದೆ.
ಇಂದು, ಜನರು ಸಮೂಹವಾಗಿ ವಲಸೆಹೋಗುತ್ತಿರುವುದರಿಂದ ಇದು ಯೆಹೋವನ ಜನರಿಗೆ ಪಂಥಾಹ್ವಾನವಾಗಿ ನಿಂತದೆ. ಇದರ ಪರಿಣಾಮವಾಗಿ, ನಮ್ಮ ಪ್ರದೇಶದಲ್ಲಿ ವಿವಿಧ ಧರ್ಮಗಳ ಜನರು ಕಂಡು ಬರಬಹುದು. ಆದುದರಿಂದ, ಹಿಂದುಗಳು, ಬೌದ್ಧರು, ಶಿಂಟೋ ಮತಸ್ಥರು ಮತಿತ್ತರ ಧರ್ಮಗಳವರಿಗೆ ಸಹಾಯ ಮಾಡಲಿಕ್ಕಾಗಿ ಸೊಸೈಟಿಯು ಉತ್ತಮವಾದ 384 ಪುಟಗಳ ಮ್ಯಾನ್ಕೈಂಡ್ಸ್ ಸರ್ಚ್ ಫಾರ್ ಗಾಡ್ ಎಂಬ ಪುಸ್ತಕವನ್ನೊದಗಿಸಿದೆ. ಕ್ರೈಸ್ತ ಪ್ರಪಂಚದ ಹೊರಗಿನ ಪ್ರಧಾನ ಧರ್ಮಗಳ ಮೂಲ ಬೋಧನೆಗಳನ್ನು ಇದು ಅಧಿಕಾರಯುಕ್ತವಾಗಿ ನೀಡುತ್ತದೆ. ಆದರೆ ಕ್ರೈಸ್ತಪ್ರಪಂಚದ ಒಳಗಿನ ಸುಳ್ಳುಧರ್ಮದ ದಾಖಲೆಯನ್ನೂ ಇದು ಪತ್ತೆ ಹಚ್ಚುತ್ತದೆ. ವಿವಿಧ ಧರ್ಮಗಳವರು ಬೈಬಲ್ ಅಧ್ಯಯನ ಆರಂಭಿಸಲು ಈ ಪುಸ್ತಕ ದಾರಿ ತೆರೆಯಬಲ್ಲದು.
ಸಾರ್ವಜನಿಕ ಭಾಷಣ ಮತ್ತು ಸಮಾಪ್ತಿಯ ಹೇಳಿಕೆಗಳು
ಶುಕ್ರವಾರದ ಸಾರ್ವಜನಿಕ ಭಾಷಣದ ಶೀರ್ಷಿಕೆ, “ಶುದ್ಧಭಾಷೆಯ ಮೂಲಕ ಐಕ್ಯಗೊಳ್ಳಿರಿ” ಎಂದಾಗಿತ್ತು. ಮೂರು ಸಾವಿರ ವಿವಿಧ ಭಾಷೆಗಳು ಈಗ ಐಕ್ಯತೆಗೆ ಅಡ್ಡಿ ಮಾಡುತ್ತವಾದರೂ ಶುದ್ಧಭಾಷೆಯು ಐಕ್ಯಕ್ಕೆ ಬಲಾಢ್ಯವಾದ ಶಕ್ತಿಯಾಗಿದೆ. ಇದು ಬಬಿಲೋನ್ಯ ದೋಷಗಳಿಂದ ಯೆಹೋವನ ಸಾಕ್ಷಿಗಳಿಗೆ ಭದ್ರತೆ ಕೊಟ್ಟು, ಜೀವ ಮತ್ತು ರಕ್ತದ ಪವಿತ್ರತೆಗೆ ಅವರಿಗೆ ಸನ್ಮಾನವನ್ನು ಕಲಿಸಿ, ಆತ್ಮಿಕವಾಗಿ ಮತ್ತು ಶಾರೀರಿಕವಾಗಿ ಪ್ರಯೋಜನ ತರುವ ಬೈಬಲ್ ಸೂತ್ರಗಳಿಗನುಸಾರ ಅವರು ಜೀವಿಸುವಂತೆ ಅವರಿಗೆ ಸಹಾಯ ನೀಡಿಯದೆ. ಶುದ್ಧಭಾಷೆಯನ್ನು ಕಲಿತು ಮಾತಾಡುವ ವಿಷಯದಲ್ಲಿ ಸರ್ವರೂ ಚಿಂತಿತರಾಗಬೇಕು, ಏಕೆಂದರೆ ಇಂಥವರು ಮಾತ್ರ ಅರ್ಮಗೆದೋನನ್ನು ಪಾರಾಗುವರು. ಚೆಫನ್ಯ 2:1-3ರ ಬುದ್ಧಿವಾದಕ್ಕೆ ಕಿವಿಗೊಡದಿರಲು ಸಮಯವಿಲ್ಲ.
“ಪ್ರಾರ್ಥನೆಯ ಸಂಬಂಧದಲ್ಲಿ ಎಚ್ಚರವಾಗಿರ್ರಿ” ಎಂಬ ವಿಷಯದಲ್ಲಿ ತುಸು ಉತ್ತಮ ಸಲಹೆ ದೊರೆತ ಬಳಿಕ “ಶುದ್ಧಭಾಷೆಗೆ ಅನುಕೂಲವಾಗಿ ನಡೆಯುವುದು” ಎಂಬ ವಿಷಯದಲ್ಲಿ ಸಮಾಪ್ತಿ ಹೇಳಿಕೆಗಳು ನಡೆದವು. ಶುದ್ಧಭಾಷೆಯಂತೆ ಈಗ ನಡೆಯುವವರ ಸಂಖ್ಯೆ ನಿಜವಾಗಿಯೂ ಹೆಚ್ಚುತ್ತಾ ಇದೆ. ಮತ್ತು ಈ ಸಮ್ಮೇಳನದಲ್ಲಿ ಉಪಸ್ಥಿತರಾಗಿದವ್ದರು ತಮ್ಮ ನೈರ್ಮಲ್ಯ, ಕ್ರಮಬದ್ಧತೆ ಮತ್ತು ಸಂಘಟನಾತ್ಮಕ ಸಾಮರಸ್ಯಗಳಿಂದ ಶುದ್ಧಭಾಷೆಗೆ ಮಾನ ತೋರಿಸಿದರು. ಆ ಹೊಸ ಪುಸ್ತಕಗಳು ಎಲ್ಲಾ ಯೆಹೋವನ ಸಾಕ್ಷಿಗಳು ಹೆಚ್ಚು ಕಾರ್ಯಸಾಧಕವಾಗಿ ಶುದ್ಧ ಭಾಷೆಯನ್ನು ಹರಡಿಸುವಂತೆ ಸಹಾಯ ಮಾಡುವುವು.
ಸಮ್ಮೇಳನದ ಅಂತಿಮ ಉಪನ್ಯಾಸಕರು ಎಲ್ಲರಿಗೆ ಸಹನಶೀಲತೆಯ ಅವಶ್ಯವನ್ನು ನೆನಪಿಸಿದರು. ಈ ಸಮ್ಮೇಳನದ ಪರಿಣಾಮವಾಗಿ ಎಲ್ಲರೂ ತಮ್ಮ ಮುಂದುವರಿಯುವ ದೃಢತೆಯಲ್ಲಿ ಬಲವುಳ್ಳವರಾಗಬೇಕೆಂದು ಅವರು ಸೂಚಿಸಿದರು. ಬಳಿಕ ಅವರು ಹೀಗೆ ಮುಗಿಸಿದರು:“ನಾವು ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯಾದ ಯೆಹೋವ ದೇವರನ್ನು ಮಹಿಮೆ ಪಡಿಸುವ ಸಲುವಾಗಿ ಆ ದೇವದತ್ತ ಶುದ್ಧಭಾಷೆಗನುಕೂಲವಾಗಿ ಈಗಲೂ ಎಂದೆಂದಿಗೂ ನಡೆಯುತ್ತಾ ಹೋಗುವಂತಾಗಲಿ!” (w91 1/15)
[ಪುಟ 24 ರಲ್ಲಿರುವ ಚೌಕ]
ವೆಸ್ಟ್ ಬರ್ಲಿನ್ ಸಮ್ಮೇಳನದ ಅತ್ಯುನ್ನತ ಹಾಜರಿ 44,532 ಮತ್ತು 1,018 ಜನ ದೀಕ್ಷಾಸ್ನಾನ ಹೊಂದಿದರು. ದೀಕ್ಷಾಸ್ನಾನಾರ್ಥಿಗಳು ಒಲಿಂಪಿಯ ಕ್ರೀಡಾಂಗಣದಿಂದ ಹೊರಗೆ ಹೋಗಲು 19 ನಿಮಿಷಗಳು ಹಿಡಿದವು. ಮತ್ತು ಈ ಸಮಯ ಕೈಚಪ್ಪಾಳೆಯ ಸಮ್ಮತಿ ಸೂಚಿಸಲ್ಪಟ್ಟಿತು. ಇಂಗ್ಲಿಷ್ ಮಾತಾಡುವ ಪ್ರತಿನಿಧಿಗಳಿಗೆ ಪ್ರತ್ಯೇಕ ಸ್ಥಳವಿತ್ತು. ಇಂಥ ಸುಮಾರು 6,000 ಮಂದಿ ಪೂರ್ತಿ ಕಾರ್ಯಕ್ರಮವನ್ನು ತಮ್ಮ ಭಾಷೆಯಲ್ಲಿ ಕೇಳಿದರು. ಈ ಸಮ್ಮೇಳನದಲ್ಲಿ ಪೋಲೆಂಡಿನಿಂದ 4,500 ಜನರೂ ಇದ್ದರು. ಇವರ ಪ್ರಯೋಜನಾರ್ಥವಾಗಿ ಮಧ್ಯಾಹ್ನದ ಎರಡು ತಾಸುಗಳಲ್ಲಿ ಆಡಳಿತ ಮಂಡಲಿಯ ಸದಸ್ಯರು ಸಂಕ್ಷಿಪ್ತ ಭಾಷಣಗಳನ್ನು ಕೊಟ್ಟರು.
[ಪುಟ 22,23 ರಲ್ಲಿರುವಚಿತ್ರ]
1. ಒಲಿಂಪಿಯ ಕ್ರೀಡಾಂಗಣ, ವೆಸ್ಟ್ ಬರ್ಲಿನ್
2. ಮುದ್ರಿತ ಸಮ್ಮೇಳನ ಕಾರ್ಯಕ್ರಮ
3. ಈಸ್ಟ್ ಜರ್ಮನಿಯಿಂದ ಇನ್ನೂರು ಬಸ್ಸುಗಳು ಪ್ರತಿನಿಧಿಗಳನ್ನು ತಂದವು
4. ಪುಸ್ತಕಗಳನ್ನು ಪಡೆಯಲು ಪೋಲೆಂಡಿನ ಪ್ರತಿನಿಧಿಗಳು ಸಂತೋಷಿಸಿದರು
5. ಪುಷ್ಪಾಲಂಕಾರ ದೃಶ್ಯವನ್ನು ಬೆಳಗಿಸಿತು
6. ಆಡಳಿತ ಮಂಡಲಿಯ ಸದಸ್ಯರುಗಳಲ್ಲಿ ಒಬ್ಬರಾದ ಎ. ಡಿ. ಶ್ರೋಡರ್ ವೆಸ್ಟ್ ಬರ್ಲಿನಿನ ಕಾರ್ಯಕ್ರಮದಲ್ಲಿ