ಯುಕ್ರೇನ್ಗೆ ಒಂದು ಪರಿಹಾರ ನಿಯೋಗ
ಪುನೊಮ್ಮೆ ಘೋರ ವರದಿಗಳು ವಾರ್ತಾ ಮಾಧ್ಯಮಗಳನ್ನು ತುಂಬಿದವು. ಆರ್ಥಿಕ ಅವ್ಯವಸ್ಥೆ, ಆಹಾರದ ಅಭಾವ ಮತ್ತು ಹಸಿವೆ ಭೂಮಿಯಲ್ಲಿಲ್ಲಾ ಹೆಜ್ಜೆಯನ್ನಿಡುತ್ತವೆ—ಈ ಸಲ ಸೋವಿಯೆಟ್ ರಶ್ಯವಾಗಿದ್ದ ಕೆಲವು ಭಾಗಗಳಲ್ಲಿ. ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯು ಇತ್ತೀಚೆಗೆ ಡೆನ್ಮಾರ್ಕಿನಲ್ಲಿರುವ ವಾಚ್ ಟವರ್ ಸೊಸೈಟಿಗೆ ಯುಕ್ರೇನಿನಲ್ಲಿರುವ ನಿರ್ಗತಿಕ ಸಾಕ್ಷಿಗಳಿಗಾಗಿ ಪರಿಹಾರವನ್ನು ವ್ಯವಸ್ಥಾಪಿಸಲು ಕೇಳಿಕೊಂಡಿತ್ತು. ಡ್ಯಾನಿಷ್ ಸಹೋದರರು ಏನು ಮಾಡಿದರು?
ತತ್ಕ್ಷಣವೇ ಅವರು ಅದರ ಕುರಿತಾಗಿ ಕೆಲಸ ಮಾಡಲು ಪ್ರಾರಂಭಿಸಿದರು! ಅಲ್ಲಿನ ಶಾಖಾ ಆಫೀಸು ಸಹೋದರರನ್ನು ಮಾರುಕಟ್ಟೆಗಳನ್ನು ಶೋಧಿಸಿ ಆಹಾರ ಸಾಮಗ್ರಿಗಳಲ್ಲಿ ಉತ್ತಮವಾದುದ್ದನ್ನು ಖರೀದಿಸಲು ಕಳುಹಿಸಿತು. ಅಗತ್ಯತೆಯ ಕುರಿತಾಗಿ ಅವರನ್ನು ತಿಳಿಯಪಡಿಸುವ ಮಾಹಿತಿಯು ಡೆನ್ಮಾರ್ಕಿನಲ್ಲಿರುವ ಯೆಹೋವನ ಜನರ ಎಲ್ಲಾ ಸಭೆಗಳಿಗೆ ಹೋಯಿತು. ಶಾಖೆಯು ವರದಿಸುವುದು: “ಎಲ್ಲಾ ಸಭೆಗಳು ನೆರವಾಗಲು ತುಂಬಾ ಸಿದ್ಧರಾಗಿದ್ದರು. ಕೊನೆಗೆ, ಆ ಸಂಕಷ್ಟದಲ್ಲಿರುವವರಿಗೆ ನಮ್ಮಲ್ಲಿದ್ದ ಸಹಾನುಭೂತಿಯ ವಾಸ್ತವಿಕ ರುಜುವಾತುಗಳನ್ನು ಕೊಡಶಕ್ತರಾದೆವು.” ಎರಡು ವ್ಯಾನುಗಳೊಂದಿಗೆ ಐದು ಟ್ರಕ್ಕುಗಳು ಮತ್ತು 14 ಸ್ವಯಂ-ಸೇವಕ ಡ್ರೈವರುಗಳು ಶನಿವಾರ, ದಶಂಬರ 7, 1991 ರಂದು ಡೆನ್ಮಾರ್ಕ್ ಬ್ರಾಂಚ್ನಲ್ಲಿ ವರದಿ ಮಾಡಿದರು. ಬ್ರಾಂಚ್ ಕೆಲಸಗಾರರು ಅವರು ತಂದಂತಹ ಆಹಾರ ಸಾಮಗ್ರಿಗಳಿಂದ ಟ್ರಕ್ಕುಗಳನ್ನು ತುಂಬಿಸಿದರು.
ಸೋಮವಾರ ಮಧ್ಯಾಹ್ನ, ದಶಂಬರ 9 ರಂದು ಸಾಮಾನು ತುಂಬಿದ ವಾಹನಗಳ ಸಾಲು ಯೂರೋಪಿನ ಮೂಲಕ ಯುಕ್ರೇನಿಗೆ ಒಂದು ದೀರ್ಘಪ್ರಯಾಣಕ್ಕಾಗಿ ಹೊರಟಿತು. “ಇಡೀ ಬೆತೆಲ್ ಕುಟುಂಬವು ಅವರಿಗೆ ಬೀಳ್ಕೊಡಲಿಕ್ಕಾಗಿ ಕೈಬೀಸಲು ಒಟ್ಟುಗೂಡಿದಾಗ ಅದು ಮನತಾಕುವ ಒಂದು ದೃಶ್ಯವಾಗಿತ್ತು” ಎಂದು ಬ್ರಾಂಚ್ ಬರೆಯುತ್ತದೆ. “ಹಲವಾರು ಪರಿಹಾರ ನಿಯೋಗಗಳು ಆಕ್ರಮಣಗಳ ಬಲಿಪಶುಗಳಾಗಿದ್ದಾರೆಂದು ತಿಳಿದವರಾಗಿ, ತುಂಬಾ ಪ್ರಾರ್ಥನೆಗಳೊಂದಿಗೆ ನಾವು ನಮ್ಮ ಸಹೋದರರನ್ನು ಮಾರ್ಗವಿಡೀ ಹಿಂಬಾಲಿಸಿದೆವು.”
ದಶಂಬರ 18 ರಂದು ಕಳವಳವು ಅಂತ್ಯಗೊಂಡಿತು. ಡೆನ್ಮಾರ್ಕಿನ ಬ್ರಾಂಚ್ಗೆ ಸಮಾಚಾರ ಸಿಕ್ಕಿತೇನಂದರೆ ಸಾಮಾನು-ವಾಹನಗಳ ಸಾಲು ಯುಕ್ರೇನಿನ ಲಿವ್ವ್ಗೆ ಸುರಕ್ಷಿತವಾಗಿ ಮುಟ್ಟಿದೆ ಎಂದು. ಯುಕ್ರೇನಿನ ಸಹೋದರರು ನೆರವನ್ನು ಪಡೆದರು. 20 ಕಿಲೊಗ್ರಾಮ್ಗಳ, 1,100 ಕೌಟುಂಬಿಕ ಪ್ಯಾಕೇಜುಗಳು—ಅದರ ಪ್ರತಿಯೊಂದು ಪ್ಯಾಕೇಜಿನಲ್ಲಿ ಮಾಂಸ, ಹಿಟ್ಟು, ಅಕ್ಕಿ, ಸಕ್ಕರೆ, ಮತ್ತು ಇತರ ಆಹಾರ ವಸ್ತುಗಳು ತುಂಬಿದ್ದವು—ಅವುಗಳನ್ನು ಇಳಿಸುವುದರಲ್ಲಿ ಅವರು ಎಷ್ಟೊಂದು ನೆಮ್ಮದಿಯನ್ನು ಹೊಂದಿರಬೇಕು! ಎಲ್ಲಾ ಕೂಡಿ ವಾಹನಗಳ ಸಾಲು ಸುಮಾರು 22 ಟನ್ನುಗಳಷ್ಟು ಸರಬರಾಜನ್ನು ಮುಟ್ಟಿಸಿತು. ಡೆನ್ಮಾರ್ಕ್ ಬ್ರಾಂಚ್ ಬರೆಯುವುದು: “ಆತನ ಸಂರಕ್ಷಣೆಗಾಗಿ ಮತ್ತು ನೆರವಿನ ಒಂದು ಹಸ್ತವನ್ನು ಚಾಚಲು ನಮಗೆ ಒಂದು ಸಂದರ್ಭವನ್ನು ಕೊಟ್ಟದ್ದಕ್ಕಾಗಿ ನಾವು ಯೆಹೋವನಿಗೆ ಉಪಕಾರ ಹೇಳುವಾಗ, ನಮ್ಮ ಆನಂದವು ಮಹತ್ತರದ್ದಾಗಿದೆ.”
ಉಡುಪುಬಟ್ಟೆಗೆಳ ಒಂದು ರವಾನಿಸುವಿಕೆಯನ್ನೂ ಯೋಜಿಸಲಾಗಿದೆ. ಬ್ರಾಂಚ್ ಈ ವಿಷಯದಲ್ಲೂ ವರದಿಸುತ್ತದೆ: “ಸಭೆಗಳ ಪ್ರತಿಕ್ರಿಯೆಯು ತಡೆಯಲಸಾಧ್ಯವಾಗಿದೆ.” ಯೆಹೋವನು ನಿಜವಾಗಿಯೂ ‘ಅವನ ಜನರು ಎಲ್ಲಾ ವಿಷಯಗಳಲ್ಲಿ ಐಶ್ವರ್ಯವಂತರಾಗಿದ್ದು ಉದಾರವಾಗಿ ಕೊಡಶಕ್ತರಾಗುವಂತೆ’ ಮಾಡುತ್ತಾನೆ. (2 ಕೊರಿಂಥ 9:11) ಅವರು ತಿರುಗಿ ತಮ್ಮ ಸಹೋದರ ಸಹೋದರಿಯರಿಗೆ ಕೊಡುವುದರಿಂದ ಬರುವ ಆನಂದವನ್ನು ಆಳವಾಗಿ ಅನುಭವಿಸುತ್ತಾರೆ. ಹೀಗೆ ಅವರು ತೋರಿಸಿದ ಪ್ರೀತಿಯು ಯೇಸುವಿನ ಹಿಂಬಾಲಕರನ್ನು ಗುರುತಿಸುವ ಒಂದು ಚಿಹ್ನೆಯಾಗಿರುತ್ತದೆ. (ಯೋಹಾನ 13:35) ಈ ನಿರ್ಗತಿಕ ಲೋಕದಲ್ಲಿ ಅಂಥ ಪ್ರೀತಿ ತುಂಬಾ ವಿರಳವಾಗಿ ಕಂಡುಕೊಳ್ಳಬಹುದು. (w92 3/15)