ಪುನರುತ್ಥಾನದ ವಿಷಯದಲ್ಲಿ ಪ್ಲೇಟೋಗೆದುರಾಗಿ ಪೌಲನು
ಪುನರುತ್ಥಾನದ ವಿಷಯದಲ್ಲಿ ಅಪೊಸ್ತಲ ಪೌಲನು 1 ಕೊರಿಂಥ 15:35-58 ಮತ್ತು 1 ಕೊರಿಂಥ 5:1-10 ರಲ್ಲಿ ಬರೆದಿದ್ದಾನೆ. ಹಾಗೆ ಮಾಡಿದ್ದರಲ್ಲಿ ಅವನು ಪ್ಲೇಟೋ ಮತ್ತು ಗ್ರೀಕ್ ತತ್ವಜ್ಞಾನಿಗಳ ಅಮರಾತ್ಮದ ವಿಚಾರವನ್ನು ಅನುಸರಿಸಿದನೋ ಅಥವಾ ಅವನು ಯೇಸುವಿನ ಮತ್ತು ಶಾಸ್ತ್ರಗ್ರಂಥದ ಇತರ ಭಾಗಗಳ ಬೋಧನೆಗೆ ಹೊಂದಿಕೆಯಲ್ಲಿದ್ದನೋ?
1974 ರಲ್ಲಿ ಬರೆಯಲ್ಪಟ್ಟ ಮತ್ತು ಉತ್ತರ ಮತ್ತು ದಕ್ಷಿಣ ಅಮೆರಿಕದ ಗ್ರೀಕ್ ಆರ್ತೊಡಾಕ್ಸ್ ಚರ್ಚಿನ ಆರ್ಚ್ಬಿಷಪರಿಂದ ಅಂಗೀಕೃತವಾದ ಕಿರುಪುಸ್ತಕ ಇಮಾರ್ಟ್ಯಾಲಿಟಿ ಆಫ್ ದ ಸೋಲ್ ಆರ್ ರೆಸರೆಕ್ಷನ್ ಆಫ್ ದ ಇಂಡಿವಿಡ್ಯುಅಲ್: ಸೆಂಟ್ ಪೌಲ್ಸ್ ವ್ಯೂ ವಿದ್ ಸ್ಪೆಷಲ್ ರೆಫರೆನ್ಸ್ ಟು ಪ್ಲೇಟೋ ಒಂದು ಹೊರಗೆಡಹುವ ಉತ್ತರವನ್ನು ಕೊಡುತ್ತದೆ. ಮೇಲೆ ತಿಳಿಸಿದ ಶಾಸ್ತ್ರವಚನಗಳಲ್ಲಿ ಪುನರುತ್ಥಾನದ ವಿಧಾನವನ್ನು ಮತ್ತು ಆ ಕಾಲದಲ್ಲಿದ್ದ ಗ್ರೀಕ್ ಪ್ರಭಾವಗಳನ್ನು ಚರ್ಚಿಸಿದ ನಂತರ, ಕರ್ತೃವು ಈ ಕೆಳಗಿನ ತೀರ್ಮಾನಕ್ಕೆ ಬರುತ್ತಾನೆ:
“ಆತ್ಮವು ದೇಹದಿಂದ ಪ್ರತ್ಯೇಕವಾಗಿ ಅನಂತವಾದ ಮತ್ತು ಶಾಶ್ವತವಾದ ಅಸ್ತಿತ್ವದಲ್ಲಿ ಮುಂದುವರಿಯುತ್ತದೆ ಎಂದು ಪ್ಲೇಟೋ ಕಲಿಸುತ್ತಾನೆ. ಪ್ಲೇಟೋವಿಗೆ ಆತ್ಮವು ಸಹಜವಾಗಿ ಮತ್ತು ಸ್ವಾಭಾವಿಕವಾಗಿ ಅಮರವಾದದ್ದು . . . ಸಂತ ಪೌಲನು ಅಂಥ ಒಂದು ನೋಟವನ್ನು ಕಲಿಸುವುದೂ ಇಲ್ಲ ಮತ್ತು ಹಾಗೆ ಮಾಡಿದ್ದಾನೆಂದು ವಾದಿಸುವುದೂ ಇಲ್ಲ . . .
“ಸೈಕೇ ಅಥವಾ ಪ್ರಾಣವು ಪ್ರತ್ಯೇಕ ಮತ್ತು ಭಿನ್ನ ಅಂಗಗಳೋಪಾದಿ ಅಮರತ್ವವುಳ್ಳದ್ದು ಎಂಬ ವಿಷಯದಲ್ಲಿ ಪೌಲನು ಚಿಂತಿಸದೆ, ಕ್ರಿಸ್ತನ ಪುನರುತ್ಥಾನದ ಫಲಿತಾಂಶವಾಗಿ ಮನುಷ್ಯನ ಇಡೀ ಸಂಘಟಿತ ಆತ್ಮ-ಪ್ರಾಣ ದೇಹದ ಪುನರುತ್ಥಾನದ ವಿಷಯದಲ್ಲಿ ಚಿಂತಿಸಿದ್ದನು. ಪುನರುತ್ಥಾನವಾಗುವ ದೇಹದ ಕುರಿತ ಪೌಲನ ಕಲ್ಪನೆಯು, ಸಮಾಧಿಯಿಂದ ಮೃತ ದೇಹಗಳಿಗೆ ತಿರುಗಿ ಜೀವಬರಿಸುವಂತೆ ಮಾಡುವುದಕ್ಕೆ ಸಂಬಂಧಪಟ್ಟದ್ದಲ್ಲ.
“ಪುನರುತ್ಥಾನಗೊಳ್ಳುವ ದೇಹದ ಕುರಿತಾದ ಅವನ ಕಲ್ಪನೆಯನ್ನು—ದೇವರ ಶಕಿಯ್ತಿಂದ ಅದೇ ವ್ಯಕ್ತಿಯು, ಅದೇ ವ್ಯಕ್ತಿತ್ವದಲ್ಲಿ, ಅದೇ ಮನಸ್ಸು ಮತ್ತು ದೇಹ ಪ್ರಕೃತಿಯಲ್ಲಿ, ವ್ಯಕ್ತಿಶಃ ಅದೇ ಮಾನಸಿಕ ಮತ್ತು ದೈಹಿಕ ಗುಣಗಳುಳ್ಳ ಇಡೀ ಮಾನವ ಏಕತೆಯನ್ನು ಉಂಟುಮಾಡುವ ಒಂದು ರೂಪಾಂತರದಲ್ಲಿ, ಪುನಃ ನಿರ್ಮಾಣವಾಗಿ, ಅಂಗಾಂಶವನ್ನು ಪುನಃ ಹೊಸತಾಗಿ ಹೊಂದುವಿಕೆಯಾಗಿ—ಚೆನ್ನಾಗಿ ವಿವರಿಸಬಹುದು. ನಮ್ಮ ಭವಿಷ್ಯತ್ತಿನ ಪುನರುತ್ಥಾನವು ನಮ್ಮ ಸ್ವಂತ ನೈಸರ್ಗಿಕ ಸೊತ್ತಾಗಿ ಅಲ್ಲ, ದೇವರ ಮಹಾ ದಾನವಾಗಿ ಸಂಭವಿಸಲಿದೆ.”
ಹೌದು, ಅಮರತ್ವವು ಯಾವುದೇ ಮಾನವನ ಸಹಜವಾದ ಸೊತ್ತಲ್ಲ. ಬದಲಿಗೆ ಅದು ಯಾರು ಅಭಿಷಿಕ್ತ ಕ್ರೈಸ್ತ ಸಭೆಯಲ್ಲಿ ಕೂಡಿರುತ್ತಾರೋ ಅವರಿಗೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಯೆಹೋವನಿಂದ ಕೊಡಲ್ಪಡುವ ಬೆಲೆಯುಳ್ಳ ಮತ್ತು ಕೃಪಾತಿಶಯದ ಕೊಡುಗೆಯಾಗಿದೆ.—1 ಕೊರಿಂಥ 15:20, 57; ಫಿಲಿಪ್ಪಿ 3:14.
[ಪುಟ 9 ರಲ್ಲಿರುವ ಚಿತ್ರ]
ಗ್ರೀಕ್ ತತ್ವಜ್ಞಾನಿ ಪ್ಲೇಟೋ
[ಕೃಪೆ]
Vatican Museum photograph