ಬೆಂಕಿಯು ಒಂದು ಕಟ್ಟಡ ಕಟ್ಟುವಿಕೆಯನ್ನು ಪ್ರೇರಿಸಿತು
“ಬೆಂಕಿ! ಬೆಂಕಿ! ಯೆಹೋವನ ಸಾಕ್ಷಿಗಳ ಎಸೆಂಬ್ಲಿ ಹಾಲ್ಗೆ ಬೆಂಕಿ ಹಿಡಿದಿದೆ!” ಆ ಬೆಚ್ಚಿದ ಕೂಗು ನೆದರ್ಲೆಂಡ್ಸ್ನ ಉತ್ತರ ಪ್ರಾಂತದ ಒಂದು ಊರಾದ ಹರೆನ್ವನ್ನಲ್ಲಿ 1989 ರ ಅಕ್ಟೋಬರದ ಒಂದು ಶುಕ್ರವಾರ ಅಪರಾಹ್ನಕ್ಕೆ ಕೇಳಬಂತು.
ಯೆಹೋವನ ಸಾಕ್ಷಿಗಳು ಈ ಉತ್ತಮ ಎಸೆಂಬ್ಲಿ ಹಾಲ್ನ್ನು 11 ವರ್ಷಗಳಿಂದ ಉಪಯೋಗಿಸಿದ್ದರು. ಬಹುಮಟ್ಟಿಗೆ ಪ್ರತಿ ವಾರಾಂತ್ಯದಲ್ಲಿ, ನೂರಾರು ಮಂದಿ ಎರಡು ದಿನಗಳ ಒಂದು ಸರ್ಕಿಟ್ ಸಮ್ಮೇಳನಕ್ಕಾಗಿ ಅಥವಾ ಒಂದು ದಿನದ ಒಂದು ವಿಶೇಷ ಸಮ್ಮೇಳನ ದಿನಕ್ಕಾಗಿ ಅಲ್ಲಿ ಕೂಡಿಬರುತ್ತಿದ್ದರು. ಬೈಬಲ್ ಉಪದೇಶಕ್ಕಾಗಿ ಅದೊಂದು ಆರಾಮಕರವಾದ ಸ್ಥಳವಾಗಿತ್ತು.
ಹಾಲ್ನ ಮಾಡಿನ ಮೇಲೆ ಒಂದು ಕೆಲಸ ನಡಿಯುತ್ತಿದ್ದಾಗ ಈ ದುರಂತವು ಸಂಭವಿಸಿತು. ಕಾರ್ಯತಃ ಕೆಲವೇ ನಿಮಿಷಗಳೊಳಗೆ ಈ ದುರಂತವು ಇಡೀ ಹಾಲ್ನ್ನು ಉರಿಸಿ ಧ್ವಂಸಗೊಳಿಸಿತ್ತು. ಆದರೂ ಯಾರಿಗೂ ಹಾನಿಯಾಗದೆ ಇದ್ದದ್ದು ಉಪಕಾರವೆನ್ನಬೇಕು.
ನಷ್ಟಕ್ಕಾಗಿ ವಿಷಾದಗೊಂಡರೂ ನಿರಾಶೆಗೊಳ್ಳದೆ, ಸಾಕ್ಷಿಗಳು ಇನ್ನೊಂದು ಸ್ಥಳದಲ್ಲಿ ಹೊಸ ಹಾಲ್ಗಾಗಿ ಯೋಜನೆ ಮಾಡತೊಡಗಿದರು. ಫೆವ್ಲೊಲ್ಯಾಂಡ್ ಪ್ರಾಂತದ ಸಿಫ್ವರ್ಟ್ಬ್ಯಾಂಟ್ನಲ್ಲಿ ಒಂದು ತಕ್ಕದ್ದಾದ ಸ್ಥಳವನ್ನು ಅವರು ಕಂಡುಕೊಂಡರು. ಇದು ಸಮುದ್ರ ಮಟ್ಟಕ್ಕೆ 5 ಮೀಟರ್ ತಗ್ಗಿನಲ್ಲಿರುವ ಹಿಂದಣ ಝಾಯ್ಡರ್ ಝೀ ಒಳನಾಡಿನ ಒಂದು ವಿಶಾಲ ಜವುಗು ಪ್ರದೇಶವಾಗಿತ್ತು.
ಜನವರಿ 1991 ರೊಳಗೆ ಒಂದು ಹೊಸ ಎಸೆಂಬ್ಲಿ ಹಾಲ್ನ್ನು ಕಟ್ಟಲಾರಂಭಿಸುವ ಒಂದು ಸಂಕೇತ ಸೂಚನೆಯನ್ನು ಕೊಡಲಾಯಿತು. 1991 ರ ಮೇ ಮತ್ತು ಸಪ್ಟಂಬರದ ನಡುವೆ ಅದು ಕಟ್ಟಲ್ಪಡಲಿಕ್ಕಿತ್ತು. ನೂರಾರು ಸಾಕ್ಷಿಗಳು ಅದರ ಸ್ಥಳದಲ್ಲಿ ಕೆಲಸಮಾಡಲು ಸ್ವಯಂಸೇವಕರಾಗಿ ಬಂದರು, ಮತ್ತು ಕೆಲವು ಯುವ ಜನರು ಈ ಯೋಜನೆಯನ್ನು ಯೆಹೋವ ದೇವರ ಪೂರ್ಣ ಸಮಯದ ಸೇವೆಗಾಗಿ ಇರುವ ಒಂದು ಮೆಟ್ಟುಗಲ್ಲಾಗಿ ನೋಡಿದರು. ಹಲವಾರು ಕೆಲಸಗಾರರು ಬೆಲ್ಚಿಯಂ ಮತ್ತು ಇಂಗ್ಲೆಂಡಿನಿಂದ ಬಂದರು.
ಒಂದು ಚೆನ್ನಾಗಿ ರಚಿಸಲ್ಪಟ್ಟ ಕಟ್ಟಡವು ಕಟ್ಟಲ್ಪಟ್ಟಿತು. ಅದರ ಸಭಾಂಗಣ ಮತ್ತು ಕ್ಯಾಫಿಟೀರಿಯವು ಗಾಜಿನ-ಮಾಡಿನ ಮೊಗಸಾಲೆಯಿಂದ ಪ್ರತ್ಯೇಕಿಸಲ್ಪಟ್ಟಿರುತ್ತದೆ. ಮುಖ್ಯ ಸಭಾಂಗಣದಲ್ಲಿ 1,008 ಜನರಿಗೆ ಆಸನಗಳಿವೆ, ಮತ್ತು ಮಗ್ಗುಲಿನ ಹಾಲ್ನಲ್ಲಿ ಇನ್ನು 230 ಜನರು ಕಾರ್ಯಕ್ರಮವನ್ನು ಟೆಲಿವಿಷನ್ ಪರದೆಗಳಲ್ಲಿ ನೋಡಶಕ್ತರು.
ಇಂದು ಸಾವಿರಾರು ಜನರು ಹೇಳುವುದು: ‘ಬನ್ನಿರಿ, ಯೆಹೋವನ ಪರ್ವತಕ್ಕೆ ಹೋಗೋಣ. ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು.’ (ಯೆಶಾಯ 2:2, 3) ಈ ಹೊಸ ಎಸೆಂಬ್ಲಿ ಹಾಲ್ ಎಲ್ಲಿ ಅಂಥ ಆತ್ಮಿಕ ಬೋಧನೆಯು ನೀಡಲ್ಪಡುತ್ತದೋ ಅಂಥ ಅನೇಕ ಸ್ಥಳಗಳಲ್ಲಿ ಕೇವಲ ಒಂದಾಗಿದೆ. ಸ್ಥಳೀಕ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹವು ಇನ್ನೊಂದು. ಅಲ್ಲಿ ನಿಮಗೆ ಹೃತ್ಪೂರ್ವಕ ಸ್ವಾಗತವಿದೆ. (w92 5/15)