ಯೆಹೋವ, ನಿಷ್ಪಕ್ಷಪಾತನಾದ “ಸರ್ವಲೋಕಕ್ಕೆ ನ್ಯಾಯತೀರಿಸುವವನು”
“ಪ್ರತಿಯೊಬ್ಬನ ಕೆಲಸವನ್ನು ನೋಡಿ ಪಕ್ಷಪಾತವಿಲ್ಲದೆ ತೀರ್ಪುಮಾಡುವಾತನಾದ . . . ತಂದೆ.”—1 ಪೇತ್ರ 1:17.
1, 2. (ಎ) ಯೆಹೋವನು ಮಹಾ ನ್ಯಾಯಾಧಿಪತಿಯಾಗಿದ್ದಾನೆ ಎಂಬ ವಿಚಾರದಿಂದ ನಾವು ಯಾಕೆ ಭಯಭರಿತರೂ, ಹಾಗೂ ಸಾಂತನ್ವಿಸಲ್ಪಟ್ಟವರೂ ಆಗಿರತಕ್ಕದ್ದು? (ಬಿ) ಜನಾಂಗಗಳ ವಿರುದ್ಧವಾಗಿರುವ ಯೆಹೋವನ ವ್ಯಾಜ್ಯದಲ್ಲಿ, ಅವನ ಐಹಿಕ ಸೇವಕರು ಯಾವ ಪಾತ್ರವನ್ನು ಆಡುತ್ತಾರೆ?
ಯೆಹೋವನು ಮಹಾ “ಸರ್ವಲೋಕಕ್ಕೆ ನ್ಯಾಯತೀರಿಸುವವನು” ಆಗಿದ್ದಾನೆ. (ಆದಿಕಾಂಡ 18:25) ವಿಶ್ವದ ಸರ್ವೋಚ್ಛ ದೇವರೋಪಾದಿ, ಅವನ ಸೃಷ್ಟಿಜೀವಿಗಳ ನ್ಯಾಯತೀರಿಸುವ ಹಕ್ಕು ಅವನಿಗೆ ಸಂಪೂರ್ಣವಾಗಿ ಇದೆ. ಅದೇ ಸಮಯದಲ್ಲಿ ಇದು ಒಂದು ಭಯಚಕಿತಗೊಳಿಸುವ ಮತ್ತು ಸಾಂತ್ವನಗೊಳಿಸುವ ಯೋಚನೆಯಾಗಿದೆ. ಭಾವನಾತ್ಮಕವಾಗಿ ಅಸಂಗತೋಕ್ತಿಯೆಂದು ಭಾಸವಾಗುವ ಇದನ್ನು ಮೋಶೆಯು ಹೀಗೆ ಹೇಳಿ ವ್ಯಕ್ತಪಡಿಸಿದ್ದಾನೆ: “ನಿಮ್ಮ ದೇವರಾದ ಯೆಹೋವನು ದೇವಾಧಿದೇವನಾಗಿಯೂ ಕರ್ತರ ಕರ್ತನಾಗಿಯೂ ಇದ್ದಾನೆ; ಆತನು ಪರಮದೇವರೂ ಪರಾಕ್ರಮಿಯೂ ಭಯಂಕರನೂ ಆಗಿದ್ದಾನೆ. ಆತನು ದಾಕ್ಷಿಣ್ಯ ನೋಡುವವನಲ್ಲ, ಲಂಚತೆಗೆದುಕೊಳ್ಳುವವನಲ್ಲ. ಆತನು ತಾಯಿತಂದೆಯಿಲ್ಲದವರ ಮತ್ತು ವಿಧವೆಯರ ನ್ಯಾಯವನ್ನು ಸ್ಥಾಪಿಸುತ್ತಾನೆ; ಪರದೇಶಿಗಳಾದವರಲ್ಲಿ ಪ್ರೀತಿಯಿಟ್ಟು ಅವರಿಗೆ ಅನ್ನವಸ್ತ್ರಗಳನ್ನು ಕೊಡುತ್ತಾನೆ.”—ಧರ್ಮೋಪದೇಶಕಾಂಡ 10:17, 18.
2 ಎಂಥ ಒಂದು ಆಶ್ಚರ್ಯಕರ ಸಮತೆ! ಪರಮನಾದ, ಪರಾಕ್ರಮಿಯಾದ, ಭಯಂಕರನಾದ ದೇವರು, ಆದರೂ ಪಕ್ಷಪಾತವಿಲ್ಲದ, ಮತ್ತು ಅನಾಥರ, ವಿಧವೆಯರ, ಮತ್ತು ಪರದೇಶಿಗಳ ಅಭಿರುಚಿಗಳನ್ನು ಪ್ರೀತಿಯಿಂದ ಸಂರಕ್ಷಿಸುತ್ತಾನೆ. ಯೆಹೋವನಿಗಿಂತ ಹೆಚ್ಚು ಪ್ರೀತಿಯ ಬೇರೆ ನ್ಯಾಯಾಧಿಪತಿಯನ್ನು ಯಾರು ಬಯಸ್ಯಾರು? ಸೈತಾನನ ಲೋಕದ ಜನಾಂಗಗಳ ವಿರುದ್ಧ ವ್ಯಾಜ್ಯವೊಂದಲ್ಲಿರುವವನಂತೆ ತನ್ನನ್ನು ಸ್ವತಃ ಚಿತ್ರಿಸುತ್ತಾ, ಭೂಮಿಯಲ್ಲಿರುವ ತನ್ನ ಸೇವಕರು ಅವನ ಸಾಕ್ಷಿಗಳಾಗಿರುವಂತೆ ಯೆಹೋವನು ಕರೆನೀಡುತ್ತಾನೆ. (ಯೆಶಾಯ 34:8; 43:9-12) ಅವನ ದೇವತ್ವವನ್ನು ಮತ್ತು ಕಾನೂನುಬದ್ಧ ಸಾರ್ವಭೌಮತೆಯನ್ನು ರುಜುಪಡಿಸಲು ಅವರ ಸಾಕ್ಷ್ಯಗಳ ಮೇಲೆ ಅವನೇನೂ ಅವಲಂಬಿಸಿರುವದಿಲ್ಲ. ಆದರೆ ಅವನ ಪರಮ ಶ್ರೇಷ್ಠತೆಯನ್ನು ಅವರು ಅಂಗೀಕರಿಸುತ್ತಾರೆ ಎಂದು ಎಲ್ಲಾ ಮಾನವ ಕುಲದ ಮುಂದೆ ಪುರಾವೆ ನೀಡುವ ವಿಶೇಷವಾದ ಒಂದು ಸುಯೋಗವನ್ನು ಅವನು ತನ್ನ ಸಾಕ್ಷಿಗಳಿಗೆ ದಯಪಾಲಿಸುತ್ತಾನೆ. ಅವನ ಸಾಕ್ಷಿಗಳು ಅವನ ನೀತಿಯ ಸಾರ್ವಭೌಮತೆಗೆ ತಾವಾಗಿಯೇ ಅಧೀನರಾಗುವ, ಮತ್ತು ಅವರ ಸಾರ್ವಜನಿಕ ಶುಶ್ರೂಷೆಯ ಮೂಲಕ, ಈ ಸರ್ವೋಚ್ಛ ನ್ಯಾಯಾಧಿಪತಿಯ ಅಧಿಕಾರದ ಕೆಳಗೆ ತಾವಾಗಿಯೇ ಇಟ್ಟುಕೊಳ್ಳುವಂತೆ ಇತರರನ್ನು ಅವರು ಪ್ರೇರಿಸುತ್ತಾರೆ.
ಯೆಹೋವನ ನ್ಯಾಯತೀರಿಸುವ ವಿಧ
3. ಯೆಹೋವನ ನ್ಯಾಯತೀರಿಸುವ ವಿಧಾನವನ್ನು ಹೇಗೆ ಸಾರಾಂಶಿಸಬಹುದು, ಮತ್ತು ಆದಾಮ, ಹವ್ವರ ಸಂಗತಿಯಲ್ಲಿ ಇದು ಹೇಗೆ ಉದಾಹರಿಸಲ್ಪಟ್ಟಿತ್ತು?
3 ಮಾನವ ಕುಲದ ಆರಂಭಿಕ ಇತಿಹಾಸದ ಸಮಯದಲ್ಲಿ, ಯೆಹೋವನು ವೈಯಕ್ತಿಕವಾಗಿ ನಿರ್ದಿಷ್ಟ ಅಪರಾಧಿಗಳನ್ನು ತೀರ್ಪುಮಾಡಿದನು. ನ್ಯಾಯವಿಧಾಯಕ ಸಂಗತಿಗಳನ್ನು ಅವನು ನಿರ್ವಹಿಸಿದ ವಿಧದ ಉದಾಹರಣೆಗಳು, ಮುಂದಿನ ದಿವಸಗಳಲ್ಲಿ ಅವನ ಜನರ ನಡುವೆ ನ್ಯಾಯವಿಧಾಯಕ ಕ್ರಮವಿಧಾನಗಳನ್ನು ನಿರ್ವಹಿಸಲು ಜವಾಬ್ದಾರರಾಗಲಿರುವವರಿಗಾಗಿ ಒಂದು ನಮೂನೆಯನ್ನು ಇಟ್ಟವು. (ಕೀರ್ತನೆ 77:11, 12) ತೀರ್ಪುನೀಡುವ ಅವನ ವಿಧಾನವನ್ನು ಹೀಗೆ ಸಾರಾಂಶಿಸಬಹುದು: ಎಲ್ಲಿ ಅಗತ್ಯವೊ ಅಲ್ಲಿ ಧೃಡತೆ, ಎಲ್ಲಿ ಸಾಧ್ಯವೊ ಅಲ್ಲಿ ಕರುಣೆ. ಆದಾಮ, ಹವ್ವರ ವಿಚಾರದಲ್ಲಿ, ಪರಿಪೂರ್ಣ ಮಾನವ ಸೃಷ್ಟಿಯಾಗಿದ್ದ ಅವರು ಬೇಕುಬೇಕೆಂದೇ ದಂಗೆಯೆದ್ದುದರಿಂದ, ಕರುಣೆಗೆ ಅವರು ಅರ್ಹರಾಗಿರಲಿಲ್ಲ. ಆದಕಾರಣ, ಯೆಹೋವನು ಅವರಿಗೆ ಮರಣ ದಂಡನೆಯನ್ನಿತ್ತನು. ಆದರೆ ಅವರ ಸಂತತಿಯವರ ಪರವಾಗಿ ಅವನ ಕರುಣೆಯು ಕಾರ್ಯನಡಿಸಿತು. ಯೆಹೋವನು ಮರಣ ದಂಡನೆಯ ಜ್ಯಾರಿಗೊಳಿಸುವಿಕೆಯನ್ನು ತತ್ಕಾಲಕ್ಕೆ ಮುಂದೂಡಿದನು, ಇದರಿಂದ ಆದಾಮ ಮತ್ತು ಹವ್ವರಿಗೆ ಮಕ್ಕಳುಂಟಾಗುವಂತೆ ಆಯಿತು. ಅವರ ಸಂತಾನದವರಿಗೆ ಪಾಪ ಮತ್ತು ಮರಣದಿಂದ ಬಿಡುಗಡೆಹೊಂದುವ ನಿರೀಕ್ಷೆಯನ್ನು ಅವನು ಪ್ರೀತಿಯಿಂದ ಒದಗಿಸಿದನು.—ಆದಿಕಾಂಡ 3:15; ರೋಮಾಪುರ 8:20, 21.
4. ಕಾಯಿನನೊಂದಿಗೆ ಯೆಹೋವನು ಹೇಗೆ ವ್ಯವಹರಿಸಿದನು, ಮತ್ತು ಇದು ನಿರ್ದಿಷ್ಟ ಆಸಕ್ತಿಯ ಸಂಗತಿಯಾಗಿರುವದು ಯಾಕೆ?
4 ಕಾಯಿನನೊಂದಿಗೆ ಯೆಹೋವನು ವ್ಯವಹರಿಸಿದ ವಿಧವು ವಿಶಿಷ್ಠವಾದ ಅಭಿರುಚಿಯುಳ್ಳದ್ದಾಗಿದೆ ಯಾಕಂದರೆ ಅದು “ಪಾಪದ ವಶಕ್ಕೆ ಮಾರಲ್ಪಟ್ಟ” ಆದಾಮ, ಹವ್ವರ ಅಪರಿಪೂರ್ಣ ಸಂತತಿಯವರಲ್ಲೊಲ್ಲೊಬ್ಬನು ಒಳಗೂಡಿರುವದರ ದಾಖಲಿಸಲ್ಪಟ್ಟ ಮೊದಲ ಮೊಕದ್ದಮೆಯಾಗಿರುತ್ತದೆ. (ರೋಮಾಪುರ 7:14) ಯೆಹೋವನು ಇದನ್ನು ಗಮನದಲ್ಲಿಟ್ಟುಕೊಂಡನೋ ಮತ್ತು ಅವನ ಹೆತ್ತವರೊಂದಿಗೆ ವ್ಯವಹರಿಸಿದ್ದಕ್ಕಿಂತಲೂ ಭಿನ್ನವಾದ ವಿಧದಲ್ಲಿ ಕಾಯಿನನೊಂದಿಗೆ ವ್ಯವಹರಿಸಿದನೋ? ಮತ್ತು ಇಂದಿನ ಕ್ರೈಸ್ತ ಹಿರಿಯರಿಗೆ ಅದೊಂದು ಪಾಠವನ್ನು ಒದಗಿಸಬಲ್ಲದೇ? ನಾವು ನೋಡೋಣ. ಅವನ ಯಜ್ಞವು ಸ್ವೀಕರಿಸಲ್ಪಡದಿದ್ದಾಗ, ಕಾಯಿನನ ತಪ್ಪಾದ ಪ್ರತಿಕ್ರಿಯೆಯನ್ನು ವಿವೇಚಿಸಿಕೊಂಡು, ಯೆಹೋವನು ಪ್ರೀತಿಯಿಂದ ಅವನಿರುವ ಅಪಾಯದ ಕುರಿತು ಅವನನ್ನು ಎಚ್ಚರಿಸಿದನು. ಒಂದು ಹಳೆಯ ನಾಣ್ಣುಡಿ ಹೇಳುವದು: ‘ಚಿಕಿತ್ಸೆಗಿಂತ ಪ್ರತಿಬಂಧಕವೆ ವಾಸಿ.’ ಅವನ ಮೇಲೆ ಪಾಪಮಯ ಪ್ರವೃತ್ತಿಯು ಪ್ರಭುತ್ವ ನಡಿಸಲು ಅನುಮತಿಸುವದರ ಕುರಿತು, ಯೆಹೋವನು ಸಾಧ್ಯವಿರುವಷ್ಟರ ಮಟ್ಟಿಗೆ ಎಚ್ಚರಿಕೆಯನ್ನು ಕಾಯಿನನಿಗೆ ಕೊಟ್ಟನು. “ಒಳ್ಳೇ ಕೆಲಸ ಮಾಡಲು” ತಿರುಗುವಂತೆ ಅವನಿಗೆ ಸಹಾಯ ಮಾಡಲು ಅವನು ಪ್ರಯತ್ನಿಸಿದನು. (ಆದಿಕಾಂಡ 4:5-7) ದೇವರು ಒಬ್ಬ ಪಾಪೀ ಮಾನವನಿಗೆ ಪಶ್ಚಾತ್ತಾಪ ಪಡುವಂತೆ ಕರೆಯನ್ನಿತ್ತದ್ದು ಇದು ಮೊತ್ತ ಮೊದಲ ಬಾರಿಯಾಗಿದೆ. ಕಾಯಿನನು ಒಂದು ಪಶ್ಚಾತ್ತಾಪವಿಲ್ಲದ ಮನೋಭಾವವನ್ನು ತೋರಿಸಿದಾಗ, ಮತ್ತು ಘೋರ ಅಪರಾಧವನ್ನು ಗೈದಾಗ, ದೇಶಭ್ರಷ್ಟನಾಗಿ ಹೋಗುವಂತೆ ಯೆಹೋವನು ಅವನಿಗೆ ತೀರ್ಪನ್ನಿತ್ತನು, ಮತ್ತು ಇತರ ಯಾರೇ ಮಾನವನು ಅವನನ್ನು ಹತಿಸಕೂಡದು ಎಂಬ ಅಪ್ಪಣೆಯೊಂದಿಗೆ ಇದನ್ನು ಮೃದುಗೊಳಿಸಿದನು.—ಆದಿಕಾಂಡ 4:8-15.
5, 6. (ಎ) ಜಲಪ್ರಲಯದ ಹಿಂದಿನ ಸಂತತಿಯೊಂದಿಗೆ ಯೆಹೋವನು ಹೇಗೆ ಮುಂದರಿದನು? (ಬಿ) ಸೊದೋಮ್ ಗೊಮೋರಗಳ ನಿವಾಸಿಗಳ ವಿರುದ್ಧ ನ್ಯಾಯದಂಡನೆಯನ್ನು ಜಾರಿಗೊಳಿಸುವ ಮೊದಲು ಯೆಹೋವನು ಏನನ್ನು ಮಾಡಿದನು?
5 ಜಲಪ್ರಲಯದ ಮೊದಲು, ‘ಮನುಷ್ಯರ ಕೆಟ್ಟತನ ಭೂಮಿಯ ಮೇಲೆ ಹೆಚ್ಚಾಗಿರುವದನ್ನು ನೋಡಿ, ಮತ್ತು ತನ್ನ ಹೃದಯದಲ್ಲಿ ನೊಂದುಕೊಂಡನು.’ (ಆದಿಕಾಂಡ 6:5, 6) ಜಲಪ್ರಲಯಕ್ಕಿಂತ ಹಿಂದಿನ ಸಂತತಿಯ ಅಧಿಕಾಂಶ ಜನರು ಅವರ ಇಚ್ಛಾ ಸ್ವಾತಂತ್ರ್ಯವನ್ನು ದುರುಪಯೋಗಗೊಳಿಸಿದ್ದರು ಮತ್ತು ಆದುದರಿಂದ ಅವರ ಮೇಲೆ ನ್ಯಾಯತೀರ್ಪನ್ನು ತಾನು ಜಾರಿಗೊಳಿಸತಕ್ಕದ್ದು ಎನ್ನುವಷ್ಟರ ಮಟ್ಟಿಗೆ ಅವನು ವಿಷಾಧಿಸಿದನು ಅಂದರೆ ಅವನು “ಪಶ್ಚಾತ್ತಾಪ ಪಟ್ಟನು.” ಆದರೂ, “ಸುನೀತಿಯನ್ನು ಸಾರುವವನಾಗಿದ್ದ” ನೋಹನನ್ನು ಅನೇಕ ವರ್ಷಗಳ ತನಕ ಉಪಯೋಗಿಸಿ, ಅವರಿಗೆ ನೀಡಬೇಕಾಗಿದ್ದ ಎಚ್ಚರಿಕೆಯನ್ನು ಅವನು ಕೊಟ್ಟನು. ಅನಂತರ, ‘ಭಕ್ತಿಹೀನರಾದ ಪುರಾತನರ ಲೋಕವನ್ನು ಸುಮ್ಮನೆ ಬಿಡಲು’ ಯಾವುದೇ ಕಾರಣವನ್ನು ಅವನು ಕಾಣಲಿಲ್ಲ.—2 ಪೇತ್ರ 2:5.
6 ತದ್ರೀತಿಯಲ್ಲಿ, ಸೊದೋಮ್ ಗೊಮೋರದ ಭ್ರಷ್ಟ ನಿವಾಸಿಗಳ ವಿರುದ್ಧವಾಗಿ ಯೆಹೋವನು ಒಂದು ಕಾನೂನು ಕ್ರಮವನ್ನು ತಕ್ಕೊಳ್ಳುವ ಹಂಗಿಗೊಳಗಾಗಿದ್ದನು. ಈ ಜನರ ಆಘಾತಕಾರಿ ನಡತೆಯ ಕುರಿತು “ಮೊರೆಯನ್ನು” ಕೇವಲ ನೀತಿವಂತನಾದ ಲೋಟನ ಪ್ರಾರ್ಥನೆಗಳಿಂದಾಗಿ, ಅವನು ಆಲಿಸಿದನು. (ಆದಿಕಾಂಡ 18:20; 2 ಪೇತ್ರ 2:7, 8) ಆದರೆ ಕ್ರಿಯೆಗೈಯುವ ಮೊದಲು ಅವನ ದೇವದೂತರುಗಳ ಮೂಲಕ ವಾಸ್ತವಾಂಶಗಳನ್ನು ಪರಿಶೀಲಿಸಲು ಅವನು ‘ಕೆಳಗೆ ಬಂದನು.’ (ಆದಿಕಾಂಡ 18:21, 22; 19:1) ಅವನು ಅನ್ಯಾಯವಾಗಿ ಕ್ರಿಯೆಗೈಯುವದಿಲ್ಲವೆಂದು ಅಬ್ರಹಾಮನಿಗೆ ಆಶ್ವಾಸನೆ ನೀಡಲು ಸಮಯವನ್ನು ತಕ್ಕೊಂಡನು.—ಆದಿಕಾಂಡ 18:23-32.
7. ಯೆಹೋವನ ನ್ಯಾಯತೀರಿಸುವ ವಿಧಾನದ ಉದಾಹರಣೆಗಳಿಂದ ನ್ಯಾಯವಿಧಾಯಕ ಕಮಿಟಿಗಳಲ್ಲಿ ಸೇವೆ ಸಲ್ಲಿಸುವ ಹಿರಿಯರು ಯಾವ ಪಾಠಗಳನ್ನು ಕಲಿಯಶಕ್ತರು?
7 ಈ ಉದಾಹರಣೆಗಳಿಂದ ಹಿರಿಯರು ಇಂದು ಏನನ್ನು ಕಲಿಯಸಾಧ್ಯವಿದೆ? ಆದಾಮ, ಹವ್ವರ ನಿದರ್ಶನದಲ್ಲಿ ತಪ್ಪಿತಸ್ಥರಿಗೆ ಯಾರು ಸಂಬಂಧಿತರಾಗಿರುತ್ತಾರೋ ಅವರು ನಿಂದಾರ್ಹರಲ್ಲವಾದರಿಂದ ಅವರಿಗೆ ಯೆಹೋವನು ಪ್ರೀತಿ ಮತ್ತು ಪರಿಗಣನೆಯನ್ನು ತೋರಿಸಿದನು. ಆದಾಮ, ಹವ್ವರ ಸಂತತಿಯವರೆಡೆಗೆ ಕರುಣೆಯನ್ನು ಅವನು ತೋರಿಸಿದನು. ಕಾಯಿನನು ಇರುವಂತಹ ಅಪಾಯವನ್ನು ಯೆಹೋವನು ಮುನ್ನೋಡಿದನು ಮತ್ತು ದಯೆಯಿಂದ ಅವನೊಂದಿಗೆ ತರ್ಕಿಸುತ್ತಾ, ಪಾಪಗೈಯುವದನ್ನು ತಡೆಗಟ್ಟಲು ಪ್ರಯತ್ನಿಸಿದನು. ಅವನನ್ನು ದೇಶಭ್ರಷ್ಟನನ್ನಾಗಿ ಮಾಡಿದಾಗಲೂ, ಯೆಹೋವನು ಕಾಯಿನನ ಕುರಿತು ಪರಿಗಣನೆಯುಳ್ಳವನಾಗಿದ್ದನು. ಇನ್ನೂ ಹೆಚ್ಚಾಗಿ, ಜಲಪ್ರಲಯದ ಹಿಂದಿನ ಸಂತತಿಯವರ ಮೇಲೆ ನ್ಯಾಯತೀರ್ಪನ್ನು ಜ್ಯಾರಿಗೊಳಿಸಿದ್ದು, ಬಹಳಷ್ಟು ತಾಳ್ಮೆಯ ಸೈರಣೆಯನ್ನು ತೋರಿಸಿದ ನಂತರವೇ. ಹಠಮಾರಿ ದುಷ್ಟತನದ ಎದುರಿನಲ್ಲಿ, ಯೆಹೋವನು “ತನ್ನ ಹೃದಯದಲ್ಲಿ ನೊಂದುಕೊಂಡನು.” ಅವನ ನೀತಿಯ ಆಳಿಕ್ವೆಯ ವಿರುದ್ಧ ಜನರು ದಂಗೆಯೆದ್ದ ಮತ್ತು ಅವರನ್ನು ಅಪ್ರಸನ್ನತೆಯಿಂದ ನ್ಯಾಯತೀರ್ಪು ಮಾಡುವ ಹಂಗುಳ್ಳವನಾದ ಕಾರಣ ಅವನು ವಿಷಾದಿಸಿದನು. (ಆದಿಕಾಂಡ 6:6; ಹೋಲಿಸಿರಿ ಯೆಹೆಜ್ಕೇಲ 18:31; 2 ಪೇತ್ರ 3:9.) ಸೊದೋಮ್ ಗೊಮೋರದ ಸಂಗತಿಯಲ್ಲಿ, ವಾಸ್ತವಾಂಶಗಳನ್ನು ಪರಿಶೀಲಿಸಿದ ನಂತರವೇ ಯೆಹೋವನು ಕ್ರಿಯೆಗೈದನು. ಇಂದು ಕಾನೂನು ಮೊಕದ್ದಮೆಗಳನ್ನು ನಿರ್ವಹಿಸುವವರಿಗೆ ಇವು ಎಂಥ ಶ್ರೇಷ್ಠತಮ ಉದಾಹರಣೆಗಳಾಗಿವೆ!
ಕುಲಪತಿಗಳ ಸಮಯಗಳಲ್ಲಿ ಮಾನವ ನ್ಯಾಯಾಧೀಶರು
8. ಕುಲಪತಿಗಳ ಸಮಯಗಳಲ್ಲಿ ಯೆಹೋವನ ಯಾವ ನಿಯಮಗಳ ಮಾಹಿತಿ ಅವರಿಗಿತ್ತು?
8 ಆ ಸಮಯದಲ್ಲಿ ಯಾವುದೇ ಲಿಖಿತ ವಿಧಿನಿಯಮಗಳು ಇಲ್ಲದಿದ್ದರೂ ಕೂಡ, ಕುಲಪತಿಗಳ ಸಮಾಜಕ್ಕೆ ಯೆಹೋವನ ಮೂಲ ನಿಯಮಗಳ ಪರಿಚಯವಿತ್ತು, ಮತ್ತು ಅವನ ಸೇವಕರು ಅವುಗಳನ್ನು ಪರಿಪಾಲಿಸುವ ಹಂಗಿನೊಳಗಿದ್ದರು. (ಹೋಲಿಸಿರಿ ಆದಿಕಾಂಡ 26:5.) ಯೆಹೋವನ ಸಾರ್ವಭೌಮತೆಗೆ ವಿಧೇಯತೆ ಮತ್ತು ಅಧೀನತೆಯ ಆವಶ್ಯಕತೆಯನ್ನು ಏದೆನಿನ ನಾಟಕವು ತೋರಿಸಿತು. ಕಾಯಿನನ ಸಂಗತಿಯಲ್ಲಿ, ಕೊಲೆಯನ್ನು ಯೆಹೋವನು ಅಸಮ್ಮತಿಸುತ್ತಾನೆ ಎಂದು ಪ್ರಕಟಿತವಾಯಿತು. ಜಲಪ್ರಲಯದ ನಂತರ ಬಲುಬೇಗನೆ, ಜೀವದ ಪವಿತ್ರತೆ, ಜೀವಹತ್ಯೆ, ಮರಣದಂಡನೆ, ಮತ್ತು ರಕ್ತವನ್ನು ಭುಜಿಸುವದರ ಕುರಿತಾದ ನಿಯಮಗಳನ್ನು ದೇವರು ಮಾನವ ಕುಲಕ್ಕೆ ಕೊಟ್ಟನು. (ಆದಿಕಾಂಡ 9:3-6) ಅಬ್ರಹಾಮ, ಸಾರ, ಮತ್ತು ಗೆರಾರಿನ ಅರಸ ಅಬೀಮೆಲೆಕರನ್ನು ಒಳಗೂಡಿದ್ದ, ಗಾಜಾದ ಹತ್ತಿರ ಸಂಭವಿಸಿದ ಘಟನೆಯ ಸಮಯದಲ್ಲಿ ವ್ಯಭಿಚಾರವನ್ನು ಯೆಹೋವನು ಬಲವಾಗಿ ಖಂಡಿಸಿದನು.—ಆದಿಕಾಂಡ 20:1-7.
9, 10. ಕುಲಪತಿಗಳ ಸಮಾಜದಲ್ಲಿ ಒಂದು ನ್ಯಾಯವಿಧಾಯಕ ವ್ಯವಸ್ಥೆಯ ಅಸ್ತಿತ್ವದಲ್ಲಿತ್ತೆಂದು ಯಾವ ಉದಾಹರಣೆಗಳು ತೋರಿಸುತ್ತವೆ?
9 ಆ ಸಮಯಗಳಲ್ಲಿ, ಕುಟುಂಬದ ಶಿರಸ್ಸುಗಳು ನ್ಯಾಯಾಧಿಪತಿಗಳಾಗಿ ಕಾರ್ಯನಿರ್ವಹಿಸಿದರು ಮತ್ತು ಕಾನೂನು ಸಮಸ್ಯೆಗಳನ್ನು ನಿರ್ವಹಿಸಿದರು. ಯೆಹೋವನು ಅಬ್ರಹಾಮನ ಕುರಿತಾಗಿ ಅಂದದ್ದು: “ಅವನು ತನ್ನ ಪುತ್ರಪೌತ್ರರಿಗೆ—ನೀವು ನ್ಯಾಯನೀತಿಗಳನ್ನು ನಡಿಸಿ ಯೆಹೋವನ ಮಾರ್ಗವನ್ನು ಅನುಸರಿಸಬೇಕೆಂದು ಬೋಧಿಸುವಂತೆ ಅವನನ್ನು ನಾನು ಆದುಕೊಂಡೆನಲ್ಲಾ.” (ಆದಿಕಾಂಡ 18:19) ತನ್ನ ಸ್ವಂತ ಮತ್ತು ಲೋಟನ ದನಕಾಯುವವರ ನಡುವೆ ಎದ್ದ ಜಗಳವನ್ನು ತೀರ್ಮಾನಿಸುವದರಲ್ಲಿ, ಅಬ್ರಹಾಮನು ನಿಸ್ವಾರ್ಥತೆ ಮತ್ತು ವಿವೇಚನೆಯನ್ನು ತೋರಿಸಿದನು. (ಆದಿಕಾಂಡ 13:7-11) ಕುಲದ ಶಿರಸ್ಸು ಮತ್ತು ನ್ಯಾಯಾಧಿಪತಿಯೋಪಾದಿ ಕ್ರಿಯೆಗೈಯುತ್ತಾ, ತಾಮಾರಳು ಒಬ್ಬ ವ್ಯಭಿಚಾರಿಣಿ ಎಂದು ನಂಬುತ್ತಾ, ಅವನ ಸೊಸೆಯನ್ನು ಕಲ್ಲೆಸೆದು ಕೊಲ್ಲಬೇಕು ಮತ್ತು ಸುಡಬೇಕೆಂದು ಯೆಹೂದನು ಖಂಡಿಸಿದನು. (ಆದಿಕಾಂಡ 38:11, 24; ಹೋಲಿಸಿರಿ ಯೆಹೋಶುವ 7:25.) ಆದಾಗ್ಯೂ, ಅವನು ಎಲ್ಲಾ ನಿಜಾಂಶಗಳನ್ನು ತಿಳಿದಾಗ, ಸ್ವತಃ ತನಗಿಂತಲೂ ಅವಳು ಹೆಚ್ಚು ನೀತಿವಂತಳೆಂದು ಘೋಷಿಸಿದನು. (ಆದಿಕಾಂಡ 38:25; 26) ಒಂದು ನ್ಯಾಯವಿಧಾಯಕ ತೀರ್ಮಾನವನ್ನು ಮಾಡುವ ಮೊದಲು ಎಲ್ಲಾ ನಿಜಾಂಶಗಳನ್ನು ತಿಳಿದುಕೊಳ್ಳುವದು ಎಷ್ಟು ಪ್ರಾಮುಖ್ಯವಾಗಿರುತ್ತದೆ!
10 ಯೋಬನ ಪುಸ್ತಕವು ನ್ಯಾಯವಿಧಾಯಕ ವ್ಯವಸ್ಥೆಯನ್ನು ಪ್ರಾಸಂಗಿಕವಾಗಿ ಸೂಚಿಸುತ್ತದೆ ಮತ್ತು ನಿಷ್ಪಕ್ಷಪಾತದ ನ್ಯಾಯತೀರ್ಪಿನ ಅಪೇಕ್ಷಣೀಯತೆಯನ್ನು ತೋರಿಸುತ್ತದೆ. (ಯೋಬ 13:8, 10; 31:11; 32:21) ನಗರದ ಚೌಕದಲ್ಲಿ ಕುಳಿತು ಅವನೊಬ್ಬ ಗೌರವಾನಿತ್ವ ನ್ಯಾಯಾಧಿಪತಿಯಾಗಿದ್ದು, ನ್ಯಾಯವನ್ನು ನಿರ್ವಹಿಸುವ ಮತ್ತು ವಿಧವೆಯ ಹಾಗೂ ತಂದೆಯಿಲ್ಲದ ಹುಡುಗನ ಪರವಾಗಿ ಸಮರ್ಥಿಸುವದನ್ನು ಯೋಬನು ಸ್ವತಃ ಸ್ಮರಿಸಿಕೊಳ್ಳುತ್ತಾನೆ. (ಯೋಬ 29:7-16) ಹೀಗೆ, ಕುಲಪತಿಗಳ ಸಮಾಜದೊಳಗೆ, ವಿಮೋಚನೆಯ ಮತ್ತು ಇಸ್ರಾಯೇಲ್ ಜನಾಂಗದ ದೇವದತ್ತ ಕಾನೂನುಬದ್ಧ ಸಂವಿಧಾನಕ್ಕಿಂತ ಮೊದಲೇ, ಅಬ್ರಹಾಮನ ಸಂತತಿಯವರಲ್ಲಿ ನ್ಯಾಯಾಧೀಶರುಗಳಾಗಿ “ಹಿರೀಪುರುಷರು” ಕಾರ್ಯವೆಸಗುತ್ತಿದ್ದರೆಂಬುದಕ್ಕೆ ಪುರಾವೆಯು ಇದೆ. (ವಿಮೋಚನಕಾಂಡ 3:16, 18) ವಾಸ್ತವದಲ್ಲಿ, ನಿಯಮದೊಡಂಬಡಿಕೆಯ ಶರ್ತಗಳು, ಜನರನ್ನು ಪ್ರತಿನಿಧಿಸಿದ್ದ ಇಸ್ರಾಯೇಲ್ಯರ “ಹಿರೀಪುರುಷರಿಗೆ” ಯಾ ಹಿರಿಯರಿಗೆ ಮೋಶೆಯಿಂದ ನೀಡಲ್ಪಟ್ಟವು.—ವಿಮೋಚನಕಾಂಡ 19:3-7.
ಇಸ್ರಾಯೇಲಿನಲ್ಲಿ ನ್ಯಾಯವಿಧಾಯಕ ವ್ಯವಸ್ಥೆ
11, 12. ಇಬ್ಬರು ಬೈಬಲ್ ವಿದ್ವಾಂಸರುಗಳಿಗನುಸಾರ, ಇತರ ಜನಾಂಗಗಳಿಂದ ಇಸ್ರಾಯೇಲಿನ ನ್ಯಾಯವಿಧಾಯಕ ವ್ಯವಸ್ಥೆಯನ್ನು ಭಿನ್ನವಾಗಿ ಮಾಡಿದ್ದು ಯಾವುದು?
11 ಇಸ್ರಾಯೇಲಿನಲ್ಲಿ ನ್ಯಾಯದ ಆಡಳಿತವು ಆಸುಪಾಸಿನ ಜನಾಂಗಗಳಲ್ಲಿ ಅನುಸರಿಸಲ್ಪಡುತ್ತಿದ್ದ ಕಾನೂನು ಕ್ರಮಗಳಿಗಿಂತ ಬಹಳಷ್ಟು ಭಿನ್ನವಾಗಿತ್ತು. ನಾಗರಿಕ ಶಾಸನ ಮತ್ತು ದಂಡ (ಕ್ರಿಮಿನಲ್) ಶಾಸನಗಳ ನಡುವೆ ಯಾವುದೇ ಭೇದವಿರಲಿಲ್ಲ. ಎರಡೂ ನೈತಿಕ ಮತ್ತು ಧಾರ್ಮಿಕ ಶಾಸನಗಳೊಂದಿಗೆ ಹೆಣೆದುಕೊಂಡಿದ್ದವು. ಒಬ್ಬನ ನೆರೆಯವನ ವಿರುದ್ಧ ಮಾಡುವ ಅಪರಾಧವು ಯೆಹೋವನ ವಿರುದ್ಧ ಮಾಡುವ ಅಪರಾಧವಾಗಿತ್ತು. ದ ಪೀಪಲ್ ಆ್ಯಂಡ್ ದ ಫೆಯತ್ ಆಫ್ ದ ಬೈಬಲ್ ಎಂಬ ತನ್ನ ಪುಸ್ತಕದಲ್ಲಿ ಗ್ರಂಥಕರ್ತ ಆಂಡ್ರೆ ಶ್ರಕ್ಇ ಬರೆಯುವದು: “ಹೀಬ್ರುಗಳ ನ್ಯಾಯಸಂಬಂಧವಾದ ಸಂಪ್ರದಾಯವು ಅವರ ನೆರೆಹೊರೆಯವರಿಂದ ಭಿನ್ನವಾಗಿರುತ್ತದೆ, ಕೇವಲ ಅಪರಾಧಗಳ ಮತ್ತು ಶಿಕ್ಷೆಗಳ ಅದರ ಅರ್ಥವಿವರಣೆಯಲ್ಲಿ ಮಾತ್ರವಲ್ಲ, ಕಾನೂನುಗಳ ಆತ್ಮದಲ್ಲಿಯೂ ಕೂಡ. . . . ಟೋರಾ [ನಿಯಮಶಾಸ್ತ್ರ] ದೈನಂದಿನ ಜೀವಿತದಿಂದೇನೂ ಪ್ರತ್ಯೇಕವಾಗಿರಲಿಲ್ಲ; ಶುಭ ಅಶುಭಗಳನ್ನು ತಿಳಿಸುವ ಮೂಲಕ ಅದು ದಿನನಿತ್ಯದ ಜೀವಿತದ ಸ್ವಭಾವ ಮತ್ತು ಸಾರಾಂಶವನ್ನು ಆಜ್ಞಾಪಿಸುತ್ತದೆ. . . . ಇಸ್ರಾಯೇಲಿನಲ್ಲಿ . . . ನಗರದ ನ್ಯಾಯಸಂಬಂಧವಾದ ಚಟುವಟಿಕೆಗಳಲ್ಲಿ ಒಂದು ಸ್ಪಷ್ಟವಾಗಿದ ಪ್ರತ್ಯೇಕತೆಯನ್ನು ಮಾಡಲು ಹೆಚ್ಚುಕಡಿಮೆ ಕಷ್ಟಸಾಧ್ಯವೇ. ಜೀವಂತ ದೇವರ ಇಚ್ಛೆಯನ್ನು ಪೂರೈಸುವ ಕಡೆಗೆ ಜೀವನದ ಅಖಂಡತೆಯಲ್ಲಿ ಅವುಗಳು ಅವಿತುಕೊಂಡಿವೆ.”
12 ಈ ವಿಶಿಷ್ಟವಾದ ಸನ್ನಿವೇಶವು ಇಸ್ರಾಯೇಲಿನಲ್ಲಿ ನ್ಯಾಯದ ಆಡಳಿತವನ್ನು ಇತರ ಸಮಕಾಲೀನ ಜನಾಂಗಗಳಿಗಿಂತ ಅತಿ ಉನ್ನತವಾದ ಮಟ್ಟದಲ್ಲಿ ಇಟ್ಟಿತು. ಬೈಬಲ್ ವಿದ್ವಾಂಸ ರೊಲೆಂಡ್ ಡಿ ವಾಕ್ಸ್ ಬರೆಯುವುದು: “ರೂಪದಲ್ಲಿ ಮತ್ತು ತಾತ್ಪರ್ಯದಲ್ಲಿ ಇಸ್ರಾಯೇಲ್ ನಿಯಮವು, ಪೌರಸ್ತ್ಯರ ‘ಒಪ್ಪಂದಗಳ’ ಷರತ್ತುಗಳಿಂದ ಮತ್ತು ಅವರ ‘ಕ್ರೋಢೀಕರಿಸಿದ ನ್ಯಾಯಸೂತ್ರಗಳ’ ಪ್ರಕರಣಗಳಿಂದ ಮೂಲಸ್ವರೂಪದಲ್ಲಿಯೇ ಭಿನ್ನವಾಗಿದೆ. ಅದೊಂದು ಧಾರ್ಮಿಕ ಕಾನೂನು. . . . ಇಸ್ರಾಯೇಲ್ ನಿಯಮದೊಂದಿಗೆ ಯಾವುದೇ ಪೌರಸ್ತ್ಯ ನಿಯಮಾವಳಿಯನ್ನು ಹೋಲಿಸಸಾಧ್ಯವಿಲ್ಲ, ಅದು ಸಮಗ್ರವಾಗಿ ಅದರ ಗ್ರಂಥಕರ್ತನೋಪಾದಿ ದೇವರಿಗೆ ಸೇರಿದುದು ಎಂದು ಹೇಳಲಾಗಿದೆ. ಅದರಲ್ಲಿ ನೀತಿವಿಷಯದ ಮತ್ತು ಸಂಸ್ಕಾರಿಕ ನಿಯಮನಗಳು ಇರುವುದಾದರೆ, ಯಾ ಸಂಮಿಳಿತವಾಗಿದ್ದರೆ, ದೈವಿಕ ಒಡಂಬಡಿಕೆಯ ಪೂರ್ಣ ಕ್ಷೇತ್ರವನ್ನು ಅದು ಆವರಿಸುತ್ತದೆ, ಮತ್ತು ಈ ಒಡಂಬಡಿಕೆಯು ಒಬ್ಬರೊಡನ್ನೊಬ್ಬರಿಗೆ ಇರಬೇಕಾದ ಮಾನವರ ಸಂಬಂಧಗಳ ಮತ್ತು ದೇವರೊಂದಿಗೆ ಅವರಿಗೆ ಇರಬೇಕಾದ ಸಂಬಂಧಗಳ ಮೇಲೆ ಆಡಳಿತ ನಡಿಸುವದರ ಕಾರಣದಿಂದಾಗಿರುತ್ತದೆ.” ಮೋಶೆಯು ಹೀಗೆ ಕೇಳಿದರ್ದಲ್ಲಿ ಆಶ್ಚರ್ಯವೇನೂ ಇಲ್ಲ: “ಇಂಥ ನ್ಯಾಯವಾದ ಆಜ್ಞಾವಿಧಿಗಳುಳ್ಳ ಈ ಧರ್ಮಶಾಸ್ತ್ರಕ್ಕೆ ಸಮಾನವಾದದ್ದು ಬೇರೆ ಯಾವ ಜನಾಂಗಕ್ಕೆ ಉಂಟು?”—ಧರ್ಮೋಪದೇಶಕಾಂಡ 4:8.
ಇಸ್ರಾಯೇಲಿನಲ್ಲಿ ನ್ಯಾಯಸ್ಥಾಪಕರು
13. ಇಂದಿನ ಹಿರಿಯರಿಗೆ ಮೋಶೆಯು ಯಾವ ವಿಧಗಳಲ್ಲಿ ಒಂದು ಉತ್ತಮ ಮಾದರಿಯಾಗಿದ್ದನು?
13 ಅಂಥ ಒಂದು ಉನ್ನತ ಮಟ್ಟದ ನ್ಯಾಯವಿಧಾಯಕ ವ್ಯವಸ್ಥೆಯೊಂದಿಗೆ, ನ್ಯಾಯಾಧಿಪತಿಯಾಗಿ ಕಾರ್ಯನಡಿಸಲು ಎಂಥ ವಿಧದ ಪುರುಷನು ಬೇಕಾಗಿದ್ದನು? ಇಸ್ರಾಯೇಲಿನಲ್ಲಿ ನೇಮಿಸಲ್ಪಟ್ಟ ಅತಿ ಮೊದಲ ನ್ಯಾಯಾಧಿಪತಿಯ ಕುರಿತು, ಬೈಬಲು ಹೇಳುವದು: “ಆ ಮೋಶೆ ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕನು.” (ಅರಣ್ಯಕಾಂಡ 12:3) ಅವನು ತನ್ನ ಕುರಿತಾಗಿಯೇ ಹೆಚ್ಚು ನಿಶ್ಚಯವುಳ್ಳವನಾಗಿರಲಿಲ್ಲ. (ವಿಮೋಚನಕಾಂಡ 4:10) ಜನರ ನ್ಯಾಯತೀರಿಸಬೇಕಾಗಿದ್ದರೂ, ಯೆಹೋವನ ಮುಂದೆ ಕೆಲವೊಮ್ಮೆ ಅವನು ಅವರ ನ್ಯಾಯವಾದಿಯಾದನು, ಅವರ ಪಾಪಗಳನ್ನು ಕ್ಷಮಿಸುವಂತೆ ವಾದಿಸುತ್ತಾ, ಅವರ ಪರವಾಗಿ ತನ್ನನ್ನೇ ಯಜ್ಞವಾಗಿ ನೀಡಿಕೊಳ್ಳಲು ಸಿದ್ಧನಾಗಿದ್ದನು. (ವಿಮೋಚನಕಾಂಡ 32:11, 30-32) ಅವನು ಪದ್ಯರೂಪವಾಗಿ ಹೇಳಿದ್ದು: “ನನ್ನ ಉಪದೇಶವು ಹಸಿಹುಲ್ಲಿನ ಮೇಲೆ ಮೆಲ್ಲಗೆ ಸುರಿಯುವ ಮಳೆಯ ತುಂತುರುಗಳಂತೆ [ತಣ್ಣಗಿರುವದು;] ನನ್ನ ಬೋಧನೆಯು ಮಂಜಿನಂತೆಯೂ ಕಾಯಿಪಲ್ಯಗಳ ಮೇಲೆ ಬೀಳುವ ಹದಮಳೆಯಂತೆಯೂ [ಹಿತವಾಗಿರುವದು].” (ಧರ್ಮೋಪದೇಶಕಾಡ 32:2) ಅವನ ಸ್ವಂತ ವಿವೇಕದ ಮೇಲೆ ಆತುಕೊಂಡು ಜನರ ನ್ಯಾಯತೀರ್ಪು ಮಾಡುವ ಬದಲು, ಅವನು ಘೋಷಿಸಿದ್ದು: “ಅವರೊಳಗೆ ವ್ಯಾಜ್ಯವೇನಾದರೂ ಉಂಟಾಗಿದ್ದರೆ ನನ್ನ ಬಳಿಗೆ ಬರುತ್ತಾರೆ; ನಾನು ವಿಚಾರಣೆಮಾಡಿ ಅವರಿಗೆ ನ್ಯಾಯತೀರಿಸಿ ದೇವರ ಆಜ್ಞಾವಿಧಿಗಳನ್ನು ಬೋಧಿಸುತ್ತೇನೆ.” (ವಿಮೋಚನಕಾಂಡ 18:16) ಸಂದೇಹಗಳು ಇದ್ದಲ್ಲಿ, ವಿಷಯವನ್ನು ಯೆಹೋವನಿಗೆ ಅವನು ಒಪ್ಪಿಸುತ್ತಿದ್ದನು. (ಅರಣ್ಯಕಾಂಡ 9:6-8; 15:32-36; 27:1-11) ಇಂದು ‘ದೇವರ ಮಂದೆಯನ್ನು ಪರಿಪಾಲಿಸುವ’ ಹಿರಿಯರಿಗೆ ಮೋಶೆಯು ಒಬ್ಬ ಉತ್ತಮ ಉದಾಹರಣೆಯಾಗಿದ್ದಾನೆ. (ಅ.ಕೃತ್ಯಗಳು 20:28) ಸಹೋದರರೊಂದಿಗೆ ಅವರ ಸಂಬಂಧವು ಕೂಡ ತದ್ರೀತಿಯಲ್ಲಿ “ಹಸಿಹುಲ್ಲಿನ ಮೇಲೆ ಮೆಲ್ಲಗೆ ಸುರಿಯುವ ಮಳೆಯ ತುಂತುರುಗಳಂತೆ” ಪರಿಣಮಿಸಲಿ.
14. ಇಸ್ರಾಯೇಲಿನಲ್ಲಿ ನ್ಯಾಯಾಧಿಪತಿಗಳೋಪಾದಿ ಮೋಶೆಯಿಂದ ನೇಮಿತಗೊಂಡ ಪುರುಷರ ಆತ್ಮಿಕ ಅರ್ಹತೆಗಳು ಯಾವುವು?
14 ಸಮಯ ಕಳೆದಂತೆ, ಜನರಿಗಾಗಿ ವ್ಯಾಜ್ಯಗಳನ್ನು ನಿರ್ವಹಿಸುವ ಹೊರೆಯನ್ನು ಮೋಶೆಯು ಸ್ವತಃ ಹೊತ್ತುಕೊಳ್ಳಲು ಅಶಕ್ತನಾದನು. (ವಿಮೋಚನಕಾಂಡ 18:13, 18) ಸಹಾಯವನ್ನು ಪಡೆದುಕೊಳ್ಳುವಂತೆ ಅವನ ಮಾವನು ಕೊಟ್ಟ ಸಲಹೆಯನ್ನು ಅವನು ಸ್ವೀಕರಿಸಿದನು. ಪುನಃ ಯಾವ ವಿಧದ ಪುರುಷರು ಆರಿಸಲ್ಪಟ್ಟರು? ನಾವು ಓದುವದು: “ಆದರೆ ನೀನು ಸಮಸ್ತಜನರೊಳಗೆ ಸಮರ್ಥರೂ ದೇವಭಕ್ತರೂ ನಂಬಿಗಸ್ತರೂ ಲಂಚಮುಟ್ಟದವರೂ ಆಗಿರುವ ಪುರುಷರನ್ನು ಆರಿಸಿಕೊಂಡು . . . ಅವನು ಇಸ್ರಾಯೇಲ್ಯರೆಲ್ಲರಲ್ಲಿ ಸಮರ್ಥರಾದವರನ್ನು ಆರಿಸಿಕೊಂಡು ಸಾವಿರ ಮಂದಿಯ ಮೇಲೆಯೂ ನೂರು ಮಂದಿಯ ಮೇಲೆಯೂ ಐವತ್ತು ಮಂದಿಯ ಮೇಲೆಯೂ ಹತ್ತು ಮಂದಿಯ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಿದನು. ಇವರು ಯಾವಾಗಲೂ ಜನರಿಗೆ ನ್ಯಾಯತೀರಿಸುವವರಾಗಿ ಕಠಿನವ್ಯಾಜ್ಯಗಳನ್ನು ಮೋಶೆಯ ಬಳಿಗೆ ತರುತ್ತಾ ಸುಲಭವ್ಯಾಜ್ಯಗಳನ್ನು ತಾವೇ ತೀರಿಸುತ್ತಾ ಬಂದರು.”—ವಿಮೋಚನಕಾಂಡ 18:21-26.
15. ಇಸ್ರಾಯೇಲಿನಲ್ಲಿ ನ್ಯಾಯಾಧಿಪತಿಗಳೋಪಾದಿ ಸೇವೆ ಸಲ್ಲಿಸಿದವರ ಅರ್ಹತೆಗಳು ಯಾವುದಾಗಿದ್ದವು?
15 ನ್ಯಾಯಾಧಿಪತಿಗಳಾಗಿ ಕಾರ್ಯವೆಸಗಲು ಪುರುಷರನ್ನು ಆರಿಸುವಾಗ ವಯಸ್ಸು ಕೇವಲ ಮಾನದಂಡವಾಗಿರಲಿಲ್ಲವೆಂದು ಕಾಣಸಾಧ್ಯವಿದೆ. ಮೋಶೆಯು ಹೇಳಿದ್ದು: “ಆದದರಿಂದ ನೀವು ಪ್ರತಿಯೊಂದು ಕುಲದಿಂದ ಪ್ರಸಿದ್ಧರಾದ (ಅನುಭವಿಗಳಾದ, NW ) ಬುದ್ಧಿವಿವೇಕವುಳ್ಳ ಪುರುಷರನ್ನು ಆರಿಸಿಕೊಳ್ಳಿರಿ; ನಾನು ಅವರನ್ನು ನಿಮಗೆ ಅಧಿಪತಿಗಳನ್ನಾಗಿ ನೇಮಿಸುವೆನು.” (ಧರ್ಮೋಪದೇಶಕಾಂಡ 1:13) ಅನೇಕ ವರ್ಷಗಳ ಮುಂಚೆಯೇ ಎಳೆಯ ಎಲೀಹು ಏನನ್ನು ಹೇಳಿದ್ದನೋ, ಅದರ ಪರಿಪೂರ್ಣ ಪರಿಚಯ ಮೋಶೆಗಿತ್ತು: “ವೃದ್ಧರೇ ಜ್ಞಾನಿಗಳಲ್ಲ, ಮುದುಕರು ಮಾತ್ರ ನ್ಯಾಯ ಬಲ್ಲವರಲ್ಲ.” (ಯೋಬ 32:9) ಖಂಡಿತವಾಗಿಯೂ, ನೇಮಿತರಾದವರೆಲ್ಲರೂ “ಅನುಭವಿಗಳಾದ ಪುರುಷರಾಗಿರ”ತಕ್ಕದ್ದು. ಆದರೆ ಎಲ್ಲಕ್ಕಿಂತಲೂ ಮೇಲಾಗಿ ಅವರು ಸಮರ್ಥರೂ, ದೇವಭೀರುಗಳೂ, ಭರವಸಲರ್ಹರೂ ಆದ ಪುರುಷರಾಗಿದ್ದು, ಅನ್ಯಾಯದ ಲಾಭವನ್ನು ದ್ವೇಷಿಸುವವರೂ, ಬುದ್ಧಿವಿವೇಕವುಳ್ಳವರೂ ಆಗಿರಬೇಕು. ಆದಕಾರಣ, ಯೆಹೋಶುವ 23:2 ಮತ್ತು 24:1 ರಲ್ಲಿ ಉಲ್ಲೇಖಿಸಲ್ಪಟ್ಟ “ಪ್ರಭುಗಳು ಯಾ ಪ್ರಧಾನರು” ಮತ್ತು “ನ್ಯಾಯಾಧಿಪತಿಗಳು” ಅದೇ ವಚನಗಳಲ್ಲಿ ಹೇಳಲಾದ “ಹಿರಿಯರು” ಗಳಿಗಿಂತ ಭಿನ್ನರಲ್ಲವೆಂದೂ, ಬದಲಾಗಿ ಅವರ ನಡುವೆಯಿಂದ ಆರಿಸಲ್ಪಟ್ಟವರೆಂದೂ ಸ್ಪಷ್ಟವಾಗಿಗುತ್ತದೆ.—ನೋಡಿರಿ ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 2, ಪುಟ 549.
ನ್ಯಾಯವನ್ನು ನಿರ್ವಹಿಸುವದು
16. ಹೊಸತಾಗಿ ನೇಮಕ ಪಡೆದ ನ್ಯಾಯಾಧಿಪತಿಗಳಿಗೆ ಮೋಶೆಯು ನೀಡಿದ ಉಪದೇಶಗಳಲ್ಲಿ ನಾವು ಇಂದು ಏನನ್ನು ಗಮನಿಸತಕ್ಕದ್ದು?
16 ಈ ನೇಮಿತ ನ್ಯಾಯಾಧಿಪತಿಗಳಿಗೆ ನೀಡಲ್ಪಟ್ಟ ಆದೇಶಗಳ ಕುರಿತು, ಮೋಶೆಯು ಅಂದದ್ದು: “ಆ ನ್ಯಾಯಾಧಿಪತಿಗಳಿಗೆ ನಾನು ಆ ಕಾಲದಲ್ಲಿ ಅಪ್ಪಣೆಮಾಡಿ—ನೀವು ಸಕ್ವುಲದವರ ವ್ಯಾಜ್ಯಗಳನ್ನು ವಿಚಾರಿಸಬೇಕು; ಅವರು ಇಸ್ರಾಯೇಲ್ಯರೊಡನೆ ವ್ಯಾಜ್ಯವಾಡಿದರೂ ಅನ್ಯರೊಡನೆ ವ್ಯಾಜ್ಯವಾಡಿದರೂ ನೀವು ನ್ಯಾಯದ ಪ್ರಕಾರವೇ ತೀರ್ಪು ಮಾಡಬೇಕು. ನ್ಯಾಯವಿಚಾರಿಸುವಾಗ ಮುಖದಾಕ್ಷಿಣ್ಯಮಾಡದೆ ಅಧಿಕರನ್ನೂ ಅಲ್ಪರನ್ನೂ ಸಮನಾಗಿ ತಿಳಿಯಬೇಕು. ನೀವು ದೇವರ ಹೆಸರಿನಲ್ಲಿ ನ್ಯಾಯ ತೀರಿಸುವವರಾದ ಕಾರಣ ಮನುಷ್ಯರ ಮುಖವನ್ನು ನೋಡಿ ಹೆದರಬೇಡಿರಿ. ನೀವು ತೀರಿಸಲಿಕ್ಕಾಗದ ವ್ಯಾಜ್ಯಗಳನ್ನು ನನ್ನ [ಮೋಶೆಯ] ಬಳಿಗೆ ತರಬೇಕು; ನಾನೇ ಅವುಗಳನ್ನು ತೀರಿಸುವೆನು ಎಂದು ಹೇಳಿದೆನು.”—ಧರ್ಮೋಪದೇಶಕಾಂಡ 1:16, 17.
17. ಯಾರು ನ್ಯಾಯಾಧಿಪತಿಗಳಾಗಿ ನೇಮಿಸಲ್ಪಟ್ಟರು, ಮತ್ತು ಅರಸನಾದ ಯೆಹೋಷಾಫಾಟನು ಅವರಿಗೆ ಯಾವ ಎಚ್ಚರಿಕೆಯನ್ನು ಕೊಟ್ಟನು?
17 ನಿಶ್ಚಯವಾಗಿಯೂ, ಅವನ ಜೀವಮಾನಕಾಲದಲ್ಲಿ ಮಾತ್ರ ವ್ಯಾಜ್ಯವೊಂದನ್ನು ಅವನ ಬಳಿಗೆ ತರಸಾಧ್ಯವಿತ್ತು. ಆದುದರಿಂದ ಕಠಿಣತಮ ವ್ಯಾಜ್ಯಗಳನ್ನು ಯಾಜಕರುಗಳ, ಲೇವ್ಯರ, ಮತ್ತು ವಿಶೇಷವಾಗಿ ನೇಮಿಸಲ್ಪಟ್ಟ ನ್ಯಾಯಾಧಿಪತಿಗಳ ಬಳಿಗೆ ಕೊಂಡೊಯ್ಯುವಂತೆ ಇನ್ನಷ್ಟು ಏರ್ಪಾಡುಗಳನ್ನು ಮಾಡಲಾಯಿತು. (ಧರ್ಮೋಪದೇಶಕಾಂಡ 17:8-12; 1 ಪೂರ್ವಕಾಲವೃತ್ತಾಂತ 23:1-4; 2 ಪೂರ್ವಕಾಲವೃತ್ತಾಂತ 19:5, 8) ಯೂದಾಯದ ನಗರಗಳಲ್ಲಿ ಅವನು ನೇಮಿಸಿದ ನ್ಯಾಯಾಧಿಪತಿಗಳಿಗೆ ಅರಸನಾದ ಯೆಹೋಷಾಫಾಟನು ಹೇಳಿದ್ದು: “ನೀವು ಹೇಗೆ ಕೆಲಸನಡಿಸುತ್ತೀರಿ ಎಂಬದರ ವಿಷಯ ನೋಡಿಕೊಳ್ಳಿರಿ. ನೀವು ನ್ಯಾಯತೀರಿಸುವದು ಮನುಷ್ಯರಿಗೋಸ್ಕರವಲ್ಲ, ಯೆಹೋವನಿಗೋಸ್ಕರವೇ. . . . ನೀವು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ನಂಬಿಕೆಯಿಂದಲೂ ಯಥಾರ್ಥಮನಸ್ಸಿನಿಂದಲೂ ಮಾಡತಕ್ಕ ಕೆಲಸವು ಯಾವದೆಂದರೆ—ಯೆಹೂದದ ಪಟ್ಟಣಗಳಲ್ಲಿ ವಾಸಿಸುವ ನಿಮ್ಮ ಸಹೋದರರೊಳಗೆ . . . ವ್ಯಾಜ್ಯವುಂಟಾಗಿ ಅದು ನಿಮ್ಮ ಮುಂದೆ ಬರುವದಾದರೆ ನಿಮ್ಮ ಸಹೋದರರು ಯೆಹೋವನ ದೃಷ್ಟಿಯಲ್ಲಿ ಅಪರಾಧಿಗಳಾಗದಂತೆಯೂ ನೀವು ಅವರೊಂದಿಗೆ ದೇವಕೋಪಕ್ಕೆ ಗುರಿಯಾಗದಂತೆಯೂ ಅವರನ್ನು ಎಚ್ಚರಿಸಿರಿ. ಹೀಗೆ ಮಾಡುವದಾದರೆ ನೀವು ನಿರ್ದೋಷಿಗಳಾಗಿರುವಿರಿ.”—2 ಪೂರ್ವಕಾಲವೃತ್ತಾಂತ 19:6-10.
18. (ಎ) ಇಸ್ರಾಯೇಲಿನ ನ್ಯಾಯಾಧಿಪತಿಗಳು ಅನ್ವಯಿಸಬೇಕಾಗಿದ್ದ ಸೂತ್ರಗಳಲ್ಲಿ ಕೆಲವು ಏನಾಗಿದ್ದವು? (ಬಿ) ನ್ಯಾಯಾಧಿಪತಿಗಳು ಏನನ್ನು ಮನಸ್ಸಿನಲ್ಲಿಡಬೇಕಾಗಿತ್ತು, ಮತ್ತು ಅವರದನ್ನು ಮರೆತುಬಿಟ್ಟದ್ದರಿಂದಾದ ಫಲಿತಾಂಶಗಳನ್ನು ಯಾವ ಶಾಸ್ತ್ರವಚನಗಳು ತೋರಿಸುತ್ತವೆ?
18 ಇಸ್ರಾಯೇಲಿನ ನ್ಯಾಯಾಧಿಪತಿಗಳು ಅನ್ವಯಿಸಬೇಕಾದ ಸೂತ್ರಗಳಲ್ಲಿ ಕೆಲವು ಹೀಗಿರುತ್ತವೆ: ಶ್ರೀಮಂತರಿಗೂ ಬಡವರಿಗೂ ಸಮಾನವಾದ ನ್ಯಾಯ (ವಿಮೋಚನಕಾಂಡ 23:3, 6; ಯಾಜಕಕಾಂಡ 19:15); ಕಟ್ಟುನಿಟ್ಟಿನ ನಿಷ್ಪಕ್ಷಪಾತ (ಧರ್ಮೋಪದೇಶಕಾಂಡ 1:17); ಲಂಚವನ್ನು ಸ್ವೀಕರಿಸದೆ ಇರುವದು. (ಧರ್ಮೋಪದೇಶಕಾಂಡ 16:18-20) ಯಾರೊಂದಿಗೆ ಅವರು ವ್ಯವಹರಿಸುತ್ತಿದ್ದರೋ ಅವರು ಯೆಹೋವನ ಕುರಿಗಳು ಎಂದು ನ್ಯಾಯಾಧಿಪತಿಗಳು ಯಾವಾಗಲೂ ನೆನಪಿನಲ್ಲಿಡಬೇಕಿತ್ತು. (ಕೀರ್ತನೆ 100:3) ವಾಸ್ತವದಲ್ಲಿ, ಮಾಂಸಿಕ ಇಸ್ರಾಯೇಲನ್ನು ಯೆಹೋವನು ತ್ಯಜಿಸಿದ್ದರ ಕಾರಣಗಳಲ್ಲಿ ಒಂದು, ಅವರ ಯಾಜಕರು ಮತ್ತು ಕುರುಬರು ನೀತಿಯಿಂದ ನ್ಯಾಯತೀರಿಸುವದರಲ್ಲಿ ತಪ್ಪಿಹೋದದ್ದೇ ಮತ್ತು ಜನರನ್ನು ಕ್ರೂರತೆಯಿಂದ ಉಪಚರಿಸಿದ್ದೇ.—ಯೆರೆಮೀಯ 22:3, 5, 25; 23:1, 2; ಯೆಹೆಜ್ಕೇಲ 34:1-4; ಮಲಾಕಿಯ 2:8, 9.
19. ಸಾಮಾನ್ಯ ಶಕದ ಮೊದಲು, ನ್ಯಾಯದ ಯೆಹೋವನ ಮಟ್ಟಗಳ ಈ ಪರೀಕ್ಷಣವು ನಮಗೆ ಯಾವ ಮೂಲ್ಯತೆಯದ್ದಾಗಿದೆ, ಮತ್ತು ಮುಂದಿನ ಲೇಖನದಲ್ಲಿ ಯಾವುದನ್ನು ಪರಿಗಣಿಸಲಾಗುವುದು?
19 ಯೆಹೋವನು ಮಾರ್ಪಡುವದಿಲ್ಲ. (ಮಲಾಕಿಯ 3:6) ಇಸ್ರಾಯೇಲಿನಲ್ಲಿ ನ್ಯಾಯತೀರ್ಪನ್ನು ನಿರ್ವಹಿಸಬೇಕಾದ ವಿಧದ ಮತ್ತು ನ್ಯಾಯದ ಯಾವುದೇ ನಿರಾಕರಣೆಯನ್ನು ಯೆಹೋವನು ದೃಷ್ಟಿಸುವ ವಿಧದ ಈ ಸಂಕ್ಷಿಪ್ತ ಪರಾಮರ್ಶೆಯು, ನ್ಯಾಯ ವಿಧಾಯಕ ನಿರ್ಣಯಗಳನ್ನು ಮಾಡಲು ಇಂದು ಜವಾಬ್ದಾರರಾಗಿರುವ ಹಿರಿಯರು ನಿಂತು ಯೋಚಿಸುವಂತೆ ಮಾಡತಕ್ಕದ್ದು. ಕ್ರೈಸ್ತ ಸಭೆಯೊಳಗೆ ನ್ಯಾಯತೀರ್ಪಿನ ನಿರ್ವಹಣೆಗಾಗಿ ನಮೂನೆಯನ್ನು ಇಡಲು, ನ್ಯಾಯಾಧಿಪತಿಯೋಪಾದಿ ಯೆಹೋವನ ಮಾದರಿ, ಮತ್ತು ಅವನು ಇಸ್ರಾಯೇಲಿನಲ್ಲಿ ಸ್ಥಾಪಿಸಿದ ನ್ಯಾಯಸಂಬಂಧವಾದ ವ್ಯವಸ್ಥೆಯ ಸೂತ್ರಗಳನ್ನು ಸ್ಥಾಪಿಸಿತು. ಇದನ್ನು ನಾವು ಮುಂದಿನ ಲೇಖನದಲ್ಲಿ ನೋಡಲಿದ್ದೇವೆ.
ಪುನರ್ವಿಮರ್ಶೆಯ ಪ್ರಶ್ನೆಗಳು
▫ ಯೆಹೋವನ ನ್ಯಾಯತೀರಿಸುವ ವಿಧಾನವನ್ನು ಹೇಗೆ ಸಾರಾಂಶಿಸಬಹುದು?
▫ ಕಾಯಿನ ಮತ್ತು ಜಲಪ್ರಲಯದ ಹಿಂದಿನ ಸಂತತಿಯೊಂದಿಗೆ ಅವನ ವ್ಯವಹರಿಸುವಿಕೆಯಿಂದ ಯೆಹೋವನ ವಿಧಾನವು ಹೇಗೆ ಉದಾಹರಿಸಲ್ಪಟ್ಟಿದೆ?
▫ ಕುಲಪತಿಗಳ ಸಮಯಗಳಲ್ಲಿ ನ್ಯಾಯಾಧೀಶರಾಗಿ ಯಾರು ಕಾರ್ಯವೆಸಗಿದರು, ಮತ್ತು ಹೇಗೆ?
▫ ಇತರ ಜನಾಂಗಗಳಿಂದ ಇಸ್ರಾಯೇಲಿನ ನ್ಯಾಯವಿಧಾಯಕ ವ್ಯವಸ್ಥೆಯನ್ನು ಭಿನ್ನವಾಗಿ ಮಾಡಿದ್ದು ಯಾವುದು?
▫ ಇಸ್ರಾಯೇಲಿನಲ್ಲಿ ನ್ಯಾಯಾಧಿಪತಿಗಳೋಪಾದಿ ಯಾವ ವಿಧದ ಪುರುಷರನ್ನು ನೇಮಿಸಲಾಯಿತು, ಮತ್ತು ಅವರು ಯಾವ ಸೂತ್ರಗಳನ್ನು ಅನುಸರಿಸಬೇಕಿತ್ತು?
[ಪುಟ 10 ರಲ್ಲಿರುವ ಚಿತ್ರ]
ಕುಲಪತಿಗಳ ಸಮಯದಲ್ಲಿ ಮತ್ತು ಇಸ್ರಾಯೇಲಿನಲ್ಲಿ, ನೇಮಿತ ಹಿರೀ ಪುರುಷರು ನಗರ ಚೌಕದಲ್ಲಿ ನ್ಯಾಯದ ನಿರ್ವಹಣ ಮಾಡಿದರು